Home
ಸುದ್ದಿಜಾಲ

ಟ್ರೂ ಕಾಲರ್‌ನಿಂದ ಹೊಸ ಫೀಚರ್ಸ್‌ ಪ್ರಕಟ: ಇದರ ಉಪಯೋಗ ಕೇಳಿದ್ರೆ ಖುಷಿ ಪಡ್ತೀರಾ

ಟ್ರೂ ಕಾಲರ್‌ ಅಪ್ಲಿಕೇಶನ್‌ ಭಾರತದಲ್ಲಿ ಹೊಸ ಫೀಚರ್ಸ್‌ಗಳನ್ನು ಪರಿಚಯಿಸಿದೆ. ಈ ಮೂಲಕ ಭಾರತದಲ್ಲಿ ಟ್ರೂ ಕಾಲರ್‌ ತನ್ನ ಪ್ರಾಬಲ್ಯವನ್ನು ಇನ್ನಷ್ಟು ವಿಸ್ತರಿಸುವುದಕ್ಕೆ ಮುಂದಾಗಿದೆ. ಸದ್ಯ Truecaller ತನ್ನ ಕಾಲ್‌ ರೆಕಾರ್ಡಿಂಗ್ ಮತ್ತು ಕೃತಕ ಬುದ್ಧಿಮತ್ತೆ (AI) ಚಾಲಿತ ಪ್ರತಿಲೇಖನ ಫೀಚರ್ಸ್‌ಗಳನ್ನು ಪರಿಚಯಿಸಿದೆ.

ಹೌದು, ಟ್ರೂ ಕಾಲರ್‌ ಭಾರತದಲ್ಲಿ AI ಚಾಲಿತ ಟ್ರಾನ್ಸ್‌ಕ್ರಿಪ್ಯನ್‌ ಅನ್ನು ಪರಿಚಯಿಸಿದೆ. ಇದನ್ನು ಆಂಡ್ರಾಯ್ಡ್‌ ಮತ್ತು ಐಒಎಸ್‌ ಎರಡು ಡಿವೈಸ್‌ಗಳಲ್ಲಿಯೂ ಸಹ ಬಳಸಬಹುದಾಗಿದೆ. ಇದರಿಂದ ಬಳಕೆದಾರರು ಒಳಬರುವ ಮತ್ತು ಹೊರಹೋಗುವ ಕರೆಗಳನ್ನು ರೆಕಾರ್ಡ್ ಮಾಡಲು ಮತ್ತು AI ಸಹಾಯವನ್ನು ಬಳಸಿಕೊಂಡು ಅವುಗಳನ್ನು ಲಿಪ್ಯಂತರ ಮಾಡಬಹುದಾಗಿದೆ. ಹಾಗಾದ್ರೆ ಟ್ರೂ ಕಾಲರ್‌ ಪರಿಚಯಿಸಿರುವ ಹೊಸ ಫೀಚರ್ಸ್‌ನ ವಿಶೇಷತೆ ಏನು ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತೀವಿ ಓದಿರಿ.

ಟ್ರೂ ಕಾಲರ್‌ನಿಂದ ಹೊಸ ಫೀಚರ್ಸ್‌ ಪ್ರಕಟ: ಇದರ ಉಪಯೋಗ ಕೇಳಿದ್ರೆ ಖುಷಿ ಪಡ್ತೀರಾ

ಟ್ರೂ ಕಾಲರ್‌ ಅಪ್ಲಿಕೇಶನ್‌ ಭಾರತದಲ್ಲಿ AI ಚಾಲಿತ ಟ್ರಾನ್ಸ್‌ಕ್ರಿಪ್ಯನ್‌ ಫೀಚರ್ಸ್‌ ಪರಿಚಯಿಸಿದೆ. ಇದನ್ನು ಪ್ರೀಮಿಯಂ ಆಯ್ಕೆಯಲ್ಲಿ ಮಾತ್ರ ಪರಿಚಯಿಸಲಾಗಿದ್ದು, ಪಾವತಿಸಿದ ಬಳಕೆದಾರರಿಗೆ ಮಾತ್ರ ಲಭ್ಯವಾಗಲಿದೆ. Truecallerನ ಈ ಫೀಚರ್ಸ್‌ ಅಪ್ಲಿಕೇಶನ್‌ನಲ್ಲಿ ನೇರವಾಗಿ ಕರೆಗಳನ್ನು ರೆಕಾರ್ಡ್ ಮಾಡಲು ಬಳಕೆದಾರರಿಗೆ ಅನುಮತಿಸಲಿದೆ. ಅಲ್ಲದೆ ಕಾಲ್‌ ರೆಕಾರ್ಡಿಂಗ್‌ಗಳಿಗಾಗಿ ಥರ್ಡ್‌ ಪಾರ್ಟಿ ಅಪ್ಲಿಕೇಶನ್ಬಳಸುವ ಅಗತ್ಯವನ್ನು ತೆಗೆದುಹಾಕುತ್ತದೆ ಎಂದು ಹೇಳಿದೆ.

ಇದಲ್ಲದೆ, ಕಾಲ್‌ ಎಂಡ್‌ ಆದ ನಂತರ ರೆಕಾರ್ಡ್ ಮಾಡಿದ ಕರೆಗಳ ಸಂಪೂರ್ಣ ಪ್ರತಿಲೇಖನವನ್ನು ಒದಗಿಸಲಿದೆ. ಇನ್ನು ಟ್ರೂಕಾಲರ್ ಬಳಕೆದಾರರು ಸರ್ಚ್‌ ಪೇಜ್‌ಗೆ ಹೋಗಿ ಕಾಲ್‌ ರೆಕಾರ್ಡ್ ಟ್ಯಾಪ್ ಮಾಡಬೇಕಾಗುತ್ತದೆ, ಇದು ರೆಕಾರ್ಡಿಂಗ್ ಲೈನ್‌ಗೆ ಕಾಲ್‌ ಮಾಡಲು ಅಪ್ಲಿಕೇಶನ್ ಅನ್ನು ಪ್ರೇರೇಪಿಸಲಿದೆ. ಇದಾದ ನಂತರ, ಬಳಕೆದಾರರು ಕರೆಯನ್ನು ರೆಕಾರ್ಡ್ ಮಾಡಲು ಬಯಸುವ ವ್ಯಕ್ತಿಗೆ ಕರೆ ಮಾಡಬಹುದು. ಅಲ್ಲದೆ ಎರಡೂ ಕರೆಗಳನ್ನು ವಿಲೀನಗೊಳಿಸುವ ಆಯ್ಕೆಯನ್ನು ಕ್ಲಿಕ್ ಮಾಡುವ ಮೂಲಕ ಕಾಲ್‌ ರೆಕಾರ್ಡಿಂಗ್ ಪ್ರಾರಂಭವಾಗಲಿದೆ.

ಟ್ರೂಕಾಲರ್‌ನಲ್ಲಿ ಕಾಲ್‌ ರೆಕಾರ್ಡಿಂಗ್‌ ಪ್ರಾರಂಭವಾದಾಗ ಬಳಕೆದಾರರು ಪುಶ್ ಅಧಿಸೂಚನೆಯನ್ನು ಪಡೆಯುತ್ತಾರೆ. ಎಲ್ಲಾ ರೆಕಾರ್ಡ್ ಮಾಡಿದ ಕರೆಗಳನ್ನು ಡಿವೈಸ್‌ನ ಲೋಕಲ್‌ ಸ್ಟೋರೇಜ್‌ನಲ್ಲಿ ಸ್ಟೋರ್‌ ಮಾಡಲಾಗಿದೆ ಎಂದು ಅಪ್ಲಿಕೇಶನ್‌ ಮೇಕರ್ಸ್‌ ಹೇಳಿದ್ದಾರೆ. ಆದಾಗ್ಯೂ, ಬಳಕೆದಾರರು iCloud ನಲ್ಲಿ ಬ್ಯಾಕಪ್ ಅನ್ನು ಕ್ರಿಯೆಟ್‌ ಮಾಡಬಹುದಾಗಿದೆ. ಇನ್ನು ಆಂಡ್ರಾಯ್ಡ್‌ನಲ್ಲಿ ಈ ಆಯ್ಕೆ ಪ್ರಕ್ರಿಯೆಯು ತುಂಬಾ ಸರಳವಾಗಿದೆ.

ಟ್ರೂಕಾಲರ್ ಡಯಲರ್ ಮೀಸಲಾದ ರೆಕಾರ್ಡಿಂಗ್ ಬಟನ್ ಅನ್ನು ಒಳಗೊಂಡಿರಲಿದ್ದು, ರೆಕಾರ್ಡಿಂಗ್ ಅನ್ನು ಪ್ರಾರಂಭಿಸಬಹುದು ಮತ್ತು ನಿಲ್ಲಿಸಬಹುದು. ಬಳಕೆದಾರರು ಅಪ್ಲಿಕೇಶನ್‌ನ ಡಯಲರ್ ಅನ್ನು ಬಳಸದಿದ್ದರೆ, ರೆಕಾರ್ಡ್ ಮಾಡಲು ಅವರು ತೇಲುವ ಬಟನ್ ಅನ್ನು ಕಾಣಬಹುದು. ಇನ್ನು ಈ ಎರಡೂ ಪ್ಲಾಟ್‌ಫಾರ್ಮ್‌ಗಳಲ್ಲಿಯೂ, ಒಮ್ಮೆ ಕರೆ ಮುಗಿದ ನಂತರ, ಪ್ರತಿಲೇಖನ ಸಿದ್ಧವಾದಾಗ ಪುಶ್ ಅಧಿಸೂಚನೆಯನ್ನು ಕಾಣಬಹುದು. ಅಲ್ಲದೆ ಪ್ರತಿಲೇಖನಗಳು ಇಂಗ್ಲಿಷ್ ಮತ್ತು ಹಿಂದಿ ಭಾಷೆಗಳಲ್ಲಿ ಲಭ್ಯವಾಗಲಿದೆ.

ಬಳಕೆದಾರರು ರೆಕಾರ್ಡಿಂಗ್‌ಗಳನ್ನು ಆಲಿಸಬಹುದು, ಅವುಗಳನ್ನು ಮರುಹೆಸರಿಸಬಹುದು, ಅನಗತ್ಯವಾದವುಗಳನ್ನು ಡಿಲೀಟ್‌ ಮಾಡಬಹುದಾಗಿದೆ. ಗೂಗಲ್‌ ಪಿಕ್ಸೆಲ್‌ 8 ಸರಣಿ ಮತ್ತು Galaxy AI ಅನ್ನು ಬೆಂಬಲಿಸುವ Samsung ಸ್ಮಾರ್ಟ್‌ಫೋನ್‌ಗಳಲ್ಲಿ ಈ ಆಯ್ಕೆಯನ್ನು ನೀಡಲಾಗಿದೆ. ಈಗಾಗಲೇ ಲಭ್ಯವಿರುವ ಈ ಆಯ್ಕೆಯಿಂದಾಗಿ ನೈಜ ಸಮಯದಲ್ಲಿ ಕರೆಗಳನ್ನು ಲಿಪ್ಯಂತರ ಮಾಡಲು ಈಗಾಗಲೇ ಅಂತರ್ಗತ ವೈಶಿಷ್ಟ್ಯವನ್ನು ಹೊಂದಿವೆ ಎಂಬುದನ್ನು ಗಮನಿಸಬೇಕು.

ಸದ್ಯ ಈ ಆಯ್ಕೆಯನ್ನು ಬಳಸಬೇಕಾದರೆ ಬಳಕೆದಾರರು ಟ್ರೂ ಕಾಲರ್‌ನ ಪ್ರೀಮಿಯಂ ಯೋಜನೆಗೆ ಚಂದಾದಾರರಾಗಬೇಕಾಗುತ್ತದೆ. ಭಾರತದಲ್ಲಿ, ಪಾವತಿಸಿದ ಶ್ರೇಣಿಗಳು 75ರೂ ಮಾಸಿಕ ವೆಚ್ಚದಲ್ಲಿ ಪ್ರಾರಂಭವಾಗುತ್ತವೆ. ಅಲ್ಲದೆ ವಾರ್ಷಿಕ ಬೆಲೆ 529ರೂ ಗಳಿಂದ ಶುರುವಾಗಲಿದೆ.

Best Mobiles in India

English summary
Truecaller Has Launched Call Recordings, AI-Powered Transcription features in India: Details in kannada
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+