'ಟ್ರೂ ಕಾಲರ್' ಆಪ್ ಬಳಸುತ್ತಿದ್ದರೆ ಈಗಲೇ ಡಿಲೀಟ್ ಮಾಡಿ!!.ಏಕೆ ಗೊತ್ತಾ?
ಟ್ರೂ ಕಾಲರ್ ಆಪ್ ಬಳಕೆ ಏಕೆ ಒಳ್ಳೆಯದಲ್ಲ?
ನಿಮ್ಮ ಸ್ಮಾರ್ಟ್‌ಫೋನ್‌ನಲ್ಲಿ ಟ್ರೂ ಕಾಲರ್ ಆಪ್ ಬಳಸುತ್ತಿದ್ದರೆ ಈಗಲೇ ಡಿಲೀಟ್ ಮಾಡಿ. ಹೌದು, ಸ್ಮಾರ್ಟ್‌ಫೋನ್ ಬಳಸುತ್ತಿರುವ ಹೆಚ್ಚಿನವರಿಗೆ ಟ್ರೂ ಕಾಲರ್ ಆಪ್ ಹೆಚ್ಚು ಉಪಯೋಗ ಎಂದು ಅನಿಸಬಹುದು. ಆದರೆ, ಟ್ರೂ ಕಾಲರ್ ಆಪ್ ಬಳಕೆ ನಮಗೆ ತೊಂದರೆ ಎಂದರೆ ನೀವು ನಂಬುತ್ತೀರಾ?
ಯಾವುದೇ ಫೋನ್‌ನಿಂದ ಕರೆ ಬಂದರೂ, ಅವರ ಹೆಸರು ಮತ್ತು ಊರು ನಮ್ಮ ಮೊಬೈಲ್ ಫೋನ್‌ನ ಸ್ಕ್ರೀನ್ ಮೇಲೆ ಕಾಣಿಸುತ್ತದೆ ಎಂಬ ಒಂದೇ ಕಾರಣಕ್ಕೆ ಟ್ರೂ ಕಾಲರ್ ಬಳಸುವವರ ಸಂಖ್ಯೆ ಹೆಚ್ಚಾಗಿದೆ. ಆದರೆ, ಈ ಸಣ್ಣ ಉಪಯೋಗಕ್ಕೆ ನೀವೆ ಬಲಿಯಾಗುತ್ತಿದ್ದೀರಾ ಎಂದರೆ ನೀವು ನಂಬಲೇಬೇಕು.
ಹಾಗಾದರೆ, ಟ್ರೂ ಕಾಲರ್ ಆಪ್ ಬಳಕೆ ಏಕೆ ಒಳ್ಳೆಯದಲ್ಲ? ಟ್ರೂ ಕಾಲರ್ ಆಪ್ ಬಳಸಿದರೆ ಆಗಬುಹುದಾದ ತೊಂದರೆಗಳು ಏನೇನು ಎಂಬ ಎಲ್ಲಾ ವಿಚಾರಗಳನ್ನು ಇಂದಿನ ಲೇಖನದಲ್ಲಿ ತಿಳಿಯಿರಿ. ಕೆಳಗಿನ ಸ್ಲೈಡರ್‌ಗಳಲ್ಲಿ ಮಾಹಿತಿ ತಿಳಿಯಿರಿ.

ಎಲ್ಲರನ್ನು ದಡ್ಡರನ್ನಾಗಿಸುತ್ತಿದೆ ಟ್ರೂ ಕಾಲರ್.!!
ನಿಮ್ಮ ಅತ್ಯಂತ ವ್ಯಕ್ತಿಗತವಾಗಿರುವ ಫೋನ್‌ಗೆ ಅಪರಿಚಿತರ ಕರೆ ಬರುವುದರಿಂದ ನಿಮ್ಮನ್ನು ನೀವು ರಕ್ಷಿಸಿಕೊಳ್ಳಿ ಎನ್ನುತ್ತಎಲ್ಲರನ್ನು ದಡ್ಡರನ್ನಾಗಿಸುತ್ತಿದೆ ಟ್ರೂ ಕಾಲರ್. ಇನ್ನು ಈ ಆಪ್ ಬಗ್ಗೆ ಸರಿಯಾಗಿ ತಿಳಿಯದ ಬಳಕೆದಾರರ ಸಂಖ್ಯೆಯೂ ಕೂಡ ಹೆಚ್ಚಿದೆ.!!

ಟ್ರೂ ಕಾಲರ್ ಆಪ್ ಕಾರ್ಯವೇ ಸರಿಯಾಗಿಲ್ಲ.!!
ನಿಜವಾಗಿಯೂ ಟ್ರೂ ಕಾಲರ್ ಆಪ್ ಸರಿಯಾಗಿ ಕಾರ್ಯನಿರ್ವಹಣೆ ನೀಡುವುದಿಲ್ಲ. ಕೆಲವೊಂದು ಸರಿಯಾದ ಕಾಂಟಾಕ್ಟ್ಸ್ ಹೆಸರನ್ನು ತೋರಿಸಿದರೆ, ಹಲವು ಬಾರಿ ತಪ್ಪು ತಪ್ಪು ಮಾಹಿತಿಯನ್ನೇ ನೀಡುತ್ತದೆ. ಯಾವ ಟ್ರೂ ಕಾಲರ್ ಬಳಕೆದಾರನು ಸರಿಯಾದ ಮಾಹಿತಿ ಪಡೆಯಲು ಅಸಾಧ್ಯ.!!

ನಿಮ್ಮ ಕಾಂಟ್ಯಾಕ್ಟ್ ಬಾಚಿಕೊಳ್ಳುತ್ತಿದೆ ಟ್ರೂ ಕಾಲರ್!!
ಟ್ರೂ ಕಾಲರ್ ಆಪ್ ಇನ್‌ಸ್ಟಾಲ್ ಮಾಡಿದ ನಮ್ಮ ಮೊಬೈಲ್‌ನಲ್ಲಿ ಸಂಗ್ರಹವಾಗಿರುವ ಸಂಪರ್ಕ ಸಂಖ್ಯೆಗಳ (ಕಾಂಟಾಕ್ಟ್ಸ್) ಒಳಪ್ರವೇಶಿಸಿಬಿಡುತ್ತದೆ ಮತ್ತು ಯಾವೆಲ್ಲಾ ಸಂಖ್ಯೆಗಳಿವೆಯೋ, ಅವನ್ನೆಲ್ಲಾ ಅನಾಮತ್ತಾಗಿ ಎತ್ತಿಕೊಂಡು, ತನ್ನ ಮೆಮೊರಿಗೆ ಅವುಗಳನ್ನು ಕಾಪಿ ಮಾಡಿಕೊಂಡುಬಿಟ್ಟಿರುತ್ತದೆ.!!

ಕಾಗೆ ಅಂತನೂ ಹೆಸರು ತೋರಿಸುತ್ತೆ.!!
ನಿಮ್ಮ ಗೆಳೆಯರೇನಾದರೂ ನಿಮ್ಮ ಮೊಬೈಲ್ ಸಂಖ್ಯೆಯನ್ನು ಕಾಗೆ ಎಂದು ಸೇವ್ ಮಾಡಿಕೊಂಡಿದ್ದರೆ, ನಿಮ್ಮ ಮೊಬೈಲ್‌ನಿಂದ ಬೇರೆಯವರಿಗೆ ಫೋನ್ ಮಾಡಿದರೆ ಅವರಿಗೆ ಕಾಗೆ ಎಂದು ತೋರಿಸುತ್ತದೆ.!! ಹಾಗಾಗಿ, ಟ್ರೂ ಕಾಲರ್ ಬಳಕೆ ಅಪಯಕಾರಿ ಎನ್ನಬಹುದು.!!

ಪ್ರೈವೆಸಿಗೆ ಅರ್ಥವೇ ಇಲ್ಲಾ!!
ಯಾರು ಬೇಕಾದರೂ ಟ್ರೂಕಾಲರ್ ಡೇಟಾಬೇಸ್‌ಗೆ ನಿಮ್ಮ ಸಂಖ್ಯೆ, ಹೆಸರನ್ನು ಸೇರಿಸಬಹುದಾಗಿದೆ. ಮತ್ತು ಯಾರು ಸೇರಿಸದಿದ್ದರೂ ಟ್ರೂಕಾಲರ್ ನಿಮ್ಮ ಮಾಹಿತಿಯನ್ನು ನಿಮ್ಮ ಪರ್ಮಿಷನ್ ಇಲ್ಲದೆಯೇ ಸೇರಿಸಿಕೊಳ್ಳುತ್ತದೆ.!! ಇನ್ನು ನಿಮ್ಮ ನಂಬರ್ ಟ್ರೂಕಾಲರ್‌ನಿಂದ ತೆರೆಯಲು ನೀವೆ ಆಪ್ ಡೌನ್‌ಲೋಡ್ ಮಾಡಿ ಸೆಟ್ಟಿಂಗ್ಸ್ ಮಾಡಿಕೊಳ್ಳಬೇಕಾಗುತ್ತದೆ.! ಹೇಗಿದೆ ನೋಡಿ!!

ಯುನೈಟೆಡ್ ಕಿಂಗ್‌ಡಂನಲ್ಲಿ ನಿಷೇಧ
ಟ್ರೂಕಾಲರ್‌ನಲ್ಲಿ ನಮ್ಮ ಹೆಸರನ್ನು ಸೇರಿಸಿಕೊಳ್ಳದಂತೆ ಮಾಡುವುದು ನಮ್ಮ ಕೈಯಲ್ಲಿರುವುದಿಲ್ಲವಾದುದರಿಂದ, ಪ್ರೈವೆಸಿಗೆ ಧಕ್ಕೆ ಎಂಬ ಕಾರಣಕ್ಕೆ ಟ್ರೂ ಕಾಲರ್ ಅನ್ನು ಯುನೈಟೆಡ್ ಕಿಂಗ್‌ಡಂನಲ್ಲಿ ನಿಷೇಧ ಮಾಡಲಾಗಿತ್ತು. ಆದರೆ, ಇಂಡಿಯಾದಲ್ಲಿ ಇದಿನ್ನು ಚೆನ್ನಾಗಿಯೇ ಬೆಳೆಯುತ್ತಿದೆ.!!

ಸುಮ್ನೆ ಒಂದು ಉದಾಹರಣೆ
ಟಿಫಿನ್ ಮಾಡ್ತಾ ಇದ್ದೆ..
ಪಕ್ಕದಲ್ಲೇ ಫೋನ್ ಕೂಡ ಇತ್ತು.
ಫೋನ್ ರಿಂಗಾಯ್ತು,
ಪೂಜಾ ಅಂತ ಟ್ರೂ ಕಾಲರ್ ಹೇಳ್ತಾ ಇತ್ತು.
ಪಟ್ಟನೆ ರಿಸೀವ್ ಮಾಡ್ದೆ,
"ನಾನು ದತ್ತು ಮಾವ ಮಾತಾಡೋದು" ಅಂತು ಆ ಕಡೆ ಪಾರ್ಟಿ..ಇದೇನಪ್ಪ ಹೊಸ ಮಾವ ಹುಟ್ಕಂಡ ಅಂತ ಅಂದ್ಕೊಂಡು,ಹೇಳಿ ಅಂದೆ..
ನಿನ್ನತ್ತೆಗೆ ನೀನು ಕೊಟ್ಟಿದ್ದ ಕೊಲೆಸ್ಟರಾಲ್ ಚೀಟಿ ಕಳೆದು ಹೋಗಿದೆ,ಬೇರೆ ಕೊಡೊಕಾಗತ್ತಾ ಅಂತ ಕೇಳಿದ್ರು.
wrong number ಅಂತ ಕಟ್ ಮಾಡ್ದೆ..
ಟ್ರೂ ಕಾಲರ್ ಕೂಡ ಸುಳ್ಳು ಹೇಳ್ತು ಮುಂಡೇದು




Click it and Unblock the Notifications








