ಭಾರತದಲ್ಲಿ ಟ್ರೂಕ್ ಬಡ್ಸ್ F1 ಅಲ್ಟ್ರಾ ಇಯರ್‌ಬಡ್ಸ್ ಲಾಂಚ್: ಬೆಲೆ ಎಷ್ಟು?
ಜನಪ್ರಿಯ ಇಯರ್‌ಬಡ್ಸ್ ತಯಾರಕ ಕಂಪೆನಿ ಟ್ರೂಕ್ ಹೊಸ ಇಯರ್‌ಬಡ್ಸ್ ಬಿಡುಗಡೆ ಮಾಡಿದೆ. ಭಾರತದ ಮಾರುಕಟ್ಟೆಗೆ ಎಂಟ್ರಿ ನೀಡಿರುವ ಇಯರ್‌ಬಡ್ಸ್ ಅನ್ನು ಟ್ರೂಕ್ ಬಡ್ಸ್ F1 ಅಲ್ಟ್ರಾ ಇಯರ್‌ಬಡ್ಸ್ ಎಂದು ಹೆಸರಿಸಲಾಗಿದೆ. ಇದು ಇನ್ ಇಯರ್ ವಿನ್ಯಾಸವನ್ನು ಹೊಂದಿದ್ದು, ಬಡ್ಸ್ F1 ನ ಉತ್ತರಾಧಿಕಾರಿಯಾಗಿದೆ.
ಹೌದು, ಟ್ರೂಕ್ ಬಡ್ಸ್ F1 ಅಲ್ಟ್ರಾ ಇಯರ್‌ಬಡ್ಸ್ ಭಾರತದಲ್ಲಿ ಅನಾವರಣಗೊಂಡಿದೆ. ಇದು 13 ಎಂಎಂ ಗ್ರ್ಯಾಫೀನ್ ಡ್ರೈವರ್‌ಗಳನ್ನು ಹೊಂದಿದೆ. ಜೊತೆಗೆ ಕ್ವಾಡ್-ಮಿಕ್ ಎನ್ವಿರಾನ್ಮೆಂಟಲ್ ನಾಯ್ಸ್ ಕ್ಯಾನ್ಸಲೇಷನ್ (ENC) ತಂತ್ರಜ್ಞಾನದಿಂದ ಚಾಲಿತವಾಗಿದ್ದು, ವರ್ಧಿತ ಕರೆ ಗುಣಮಟ್ಟವನ್ನು ನೀಡಲಿದೆ. ಅಲ್ಲದೆ ಈ ಇಯರ್‌ಬಡ್ಸ್ ಒಟ್ಟು 60 ಗಂಟೆಗಳ ಪ್ಲೇ ಬ್ಯಾಕ್ ಟೈಂ ಅನ್ನು ಒದಗಿಸುತ್ತದೆ. ಹಾಗಾದ್ರೆ ಟ್ರೂಕ್ ಬಡ್ಸ್ F1 ಅಲ್ಟ್ರಾ ಇಯರ್‌ಬಡ್ಸ್ ವಿಶೇಷತೆ ಏನು ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತಿವಿ ಓದಿರಿ.

ಟ್ರೂಕ್ ಬಡ್ಸ್ F1 ಅಲ್ಟ್ರಾ ಇಯರ್‌ಬಡ್ಸ್ ಬಳಕೆದಾರರಿಗೆ ಹೊಸ ಅನುಭವವನ್ನು ನೀಡಲಿದೆ. ಇದರಲ್ಲಿರುವ 13 ಎಂಎಂ ಗ್ರ್ಯಾಫೀನ್ ಡ್ರೈವರ್‌ಗಳು ಬಳಕೆದಾರರ ಅನುಭವವನ್ನು ಉತ್ಕೃಷ್ಟ ಮಟ್ಟಕ್ಕೆ ಕೊಂಡೊಯ್ಯಲಿದೆ. ಅಲ್ಲದೆ ತಮ್ಮ ಆಡಿಯೊ ಅನುಭವವನ್ನು ಮೂರು ಪೂರ್ವನಿಗದಿ ಸಮೀಕರಣ ವಿಧಾನಗಳೊಂದಿಗೆ ಕಸ್ಟಮೈಸ್ ಮಾಡಬಹುದಾಗಿದೆ. ಹೆಚ್ಚುವರಿಯಾಗಿ ವೇಗದ ಚಾರ್ಜಿಂಗ್, ಟಚ್ ಕಂಟ್ರೋಲ್‌ಗಳನ್ನು ನೀಡಲಿದೆ. ಜೊತೆಗೆ ಗೇಮರುಗಳಿಗಾಗಿ 40ms ಲೋ ಲೇಟೆನ್ಸಿ ಮೋಡ್ ಅನ್ನು ಬೆಂಬಲಿಸಲಿದೆ.

ಇದು ಟ್ರೂಲಿ ವಾಯರ್‌ಲೆಸ್ ಇನ್-ಇಯರ್ ಇಯರ್‌ಬಡ್ಸ್ ಆಗಿದೆ. ಇದರಲ್ಲಿ ಕ್ವಾಡ್-ಮಿಕ್ ಎನ್ವಿರಾನ್ಮೆಂಟಲ್ ನಾಯ್ಸ್ ಕ್ಯಾನ್ಸಲೇಷನ್ (ENC) ತಂತ್ರಜ್ಞಾನವನ್ನು ಅಳವಡಿಸಲಾಗಿದೆ. ಇದರಲ್ಲಿ 3EQ ಮೋಡ್‌ಗಳು ಅಂದರೆ ಡೈನಾಮಿಕ್, ಮೂವೀ ಮತ್ತು ಬಾಸ್ ಬೂಸ್ಟ್ ಮೋಡ್ ಅನ್ನು ಸಹ ನೀಡಲಾಗಿದೆ. ಜೊತೆಗೆ ಇಯರ್‌ಬಡ್ಸ್ ಡ್ಯುಯಲ್ ಕನೆಕ್ಟಿವಿಟಿಯನ್ನು ಬೆಂಬಲಿಸಲಿದ್ದು, ಬ್ಲೂಟೂತ್ v5.3 ಮೂಲಕ ತ್ವರಿತ ಜೋಡಣೆಯನ್ನು ಬೆಂಬಲಿಸಲಿದೆ.

ಟ್ರೂಕ್ ಬಡ್ಸ್ F1 ಅಲ್ಟ್ರಾ ಇಯರ್‌ಬಡ್ಸ್ 60ಗಂಟೆಗಳ ಪ್ಲೇಬ್ಯಾಕ್ ಟೈಂ ಅನ್ನು ನೀಡಲಿದೆ. ಸಿಂಗಲ್ ಟೈಂನಲ್ಲಿ 10 ಗಂಟೆಗಳ ಗೇಮ್ ಟೈಂ ಅನ್ನು ಸಹ ನೀಡಲಿದೆ. ಇದು ಟೈಪ್-ಸಿ, ಫಾಸ್ಟ್ ಚಾರ್ಜಿಂಗ್ ಅನ್ನು ಬೆಂಬಲಿಸಲಿದೆ. ಒಂದು ವರ್ಷದ ವಾರೆಂಟಿಯನ್ನು ಸಹ ನೀಡಲಾಗುವುದು ಎಂದು ಟ್ರೂಕ್ ಕಂಪೆನಿ ಹೇಳಿಕೊಂಡಿದೆ.
ಬೆಲೆ ಮತ್ತು ಲಭ್ಯತೆ
ಟ್ರೂಕ್ ಬಡ್ಸ್ F1 ಅಲ್ಟ್ರಾ ಇಯರ್‌ಬಡ್ಸ್ ಭಾರತದಲ್ಲಿ 1,099ರೂ ಬೆಲೆಯನ್ನು ಹೊಂದಿದೆ. ಇದು ಲಾಂಚ್ ಆಫರ್‌ನಲ್ಲಿ ಕೇವಲ 999ರೂ ಬೆಲೆಯನ್ನು ಹೊಂದಿದೆ. ಜೊತೆಗೆ ಅಮೆಜಾನ್.ಇನ್, ಫ್ಲಿಪ್‌ಕಾರ್ಟ್ ಮತ್ತು ಟ್ರೂಕ್ ವೆಬ್‌ಸೈಟ್ ಮೂಲಕ ಖರೀದಿಸಬಹುದಾಗಿದೆ. ಇದನ್ನು ನೀವು ಫೆಬ್ರವರಿ 13, 2024 ರಿಂದ ಮಾರುಕಟ್ಟೆಯಲ್ಲಿ ಸೇಲ್ ಪ್ರಾರಂಭವಾಗಲಿದೆ.
ಇದಲ್ಲದೆ ಟ್ರೂಕ್ ಕಂಪೆನಿ ಕಳೆದ ವರ್ಷ ಭಾರತದಲ್ಲಿ ಹೊಸದಾಗಿ ಟ್ರೂಕ್ ಬಿಟಿಜಿ ಬೀಟಾ (TWS) ಇಯರ್‌ಬಡ್ಸ್ ಅನಾವರಣ ಮಾಡಿತ್ತು. ಇನ್ನು ಈ ಟ್ರೂಕ್ ಬಿಟಿಜಿ ಬೀಟಾ ಗೇಮರುಗಳಿಗಾಗಿ ಮತ್ತು ಸಂಗೀತ ಪ್ರಿಯರಿಗಾಗಿ ತಯಾರಿ ಮಾಡಲಾಗಿದೆ. ಇದು 13 ಎಂಎಂ ಟೈಟಾನಿಯಂ ಡ್ರೈವರ್‌ನೊಂದಿಗೆ ಟ್ರೂಕ್‌ನ ಸಿಗ್ನೇಚರ್ ಸೌಂಡ್ ಮತ್ತು 40 ಎಂಎಸ್ ಕಡಿಮೆ ಲೇಟೆನ್ಸಿಯೊಂದಿಗೆ ಗೇಮಿಂಗ್ ಮೋಡ್ ಆಯ್ಕೆ ಪಡೆದುಕೊಂಡಿದೆ.
ಟ್ರೂಕ್ ಬಿಟಿಜಿ ಬ್ಲೂಟೂತ್ ಆವೃತ್ತಿ 5.3 ಅನ್ನು ಬೆಂಬಲಿಸಲಿದ್ದು, ಈ ಇಯರ್‌ಬಡ್‌ಗಳು ಡ್ಯುಯಲ್-ಮೈಕ್ ಎನ್ವಿರಾನ್ಮೆಂಟಲ್ ನಾಯ್ಸ್ ಕ್ಯಾನ್ಸಲೇಶನ್ (ENC), SBC+AAC ಆಡಿಯೊ ಡಿಕೋಡಿಂಗ್ ಅನ್ನು ಬೆಂಬಲಿಸುತ್ತದೆ. ಪ್ರತಿ ಇಯರ್‌ಬಡ್‌ನಲ್ಲಿ ಒಂದೇ ಮೈಕ್ ಅನ್ನು ಹೊಂದಿರುವುದು ವಿಶೇಷವಾಗಿದ್ದು, ಬಳಕೆದಾರರ ಗಮನಸೆಳೆದಿದೆ.


Click it and Unblock the Notifications








