Home
ಸುದ್ದಿಜಾಲ

ಟ್ರಂಪ್ ಸುಂಕ ವಿನಾಯಿತಿ: ಮುಂದೆ ಆಪಲ್ ಐಫೋನ್‌ಗಳ ಬೆಲೆ ಏನಾಗಬಹುದು?

ಅಮೆರಿಕದ ಶ್ವೇತಭವನವು ಇತ್ತೀಚೆಗೆ ಮಹತ್ವದ ನಿರ್ಧಾರವೊಂದನ್ನು ಕೈಗೊಂಡಿದ್ದು, ಚೀನಾದಿಂದ ಆಮದಾಗುವ ಕೆಲವು ನಿರ್ದಿಷ್ಟ ತಾಂತ್ರಿಕ ಉತ್ಪನ್ನಗಳ ಮೇಲೆ ವಿಧಿಸಲಾಗುವ ಹೊಸ ಸುಂಕಗಳಿಂದ ವಿನಾಯಿತಿ ನೀಡಿದೆ. ಅಮೆರಿಕದ ಕಸ್ಟಮ್ಸ್ ಮತ್ತು ಗಡಿ ರಕ್ಷಣಾ ಸಂಸ್ಥೆಯು ಈ ಕುರಿತು ಅಧಿಕೃತ ಪ್ರಕಟಣೆಯನ್ನು ಹೊರಡಿಸಿದ್ದು, ಸ್ಮಾರ್ಟ್‌ಫೋನ್‌ಗಳು, ಲ್ಯಾಪ್‌ಟಾಪ್‌ಗಳು ಮತ್ತು ಇತರ ಕೆಲವು ಜನಪ್ರಿಯ ತಾಂತ್ರಿಕ ಗ್ಯಾಜೆಟ್‌ಗಳು ಶೀಘ್ರದಲ್ಲೇ ಜಾರಿಗೆ ಬರಲಿರುವ ಶೇ.125ರಷ್ಟು ಹೊಸ ಸುಂಕದಿಂದ ಅಥವಾ ಇತರ ದೇಶಗಳ ಸರಕುಗಳ ಮೇಲಿನ ಸಾಮಾನ್ಯ ಶೇ.10ರಷ್ಟು ಸುಂಕದಿಂದ ಸಮಸ್ಯೆ ಹೊಂದಿಲ್ಲ ಎಂದು ಸ್ಪಷ್ಟಪಡಿಸಿದೆ.

ಈ ನಿರ್ಧಾರವು ವಿಶೇಷವಾಗಿ ಟೆಕ್ ದೈತ್ಯ ಆಪಲ್ ಕಂಪನಿಯ ಅಭಿಮಾನಿಗಳಿಗೆ ಮತ್ತು ಒಟ್ಟಾರೆಯಾಗಿ ತಾಂತ್ರಿಕ ಉತ್ಪನ್ನಗಳನ್ನು ಬಳಸುವ ಗ್ರಾಹಕರಿಗೆ ಒಂದು ದೊಡ್ಡ ನಿರಾಳೆಯನ್ನು ತಂದಿದೆ ಎನ್ನಬಹುದು. ವಾಸ್ತವವಾಗಿ, ಅಮೆರಿಕ ಸರ್ಕಾರವು ಚೀನಾದಿಂದ ಆಮದು ಮಾಡಿಕೊಳ್ಳುವ ಸರಕುಗಳ ಮೇಲೆ ಹೊಸ ತೆರಿಗೆಗಳನ್ನು ವಿಧಿಸುವ ಸಾಧ್ಯತೆಯಿದೆ ಎಂಬ ಸುದ್ದಿ ಹರಡಿದಾಗಿನಿಂದ, ಐಫೋನ್‌ಗಳು ಮತ್ತು ಇತರ ಆಪಲ್ ಉತ್ಪನ್ನಗಳ ಬೆಲೆ ಗಣನೀಯವಾಗಿ ಏರುವ ಆತಂಕ ಮನೆ ಮಾಡಿತ್ತು. ಒಂದು ವೇಳೆ ಈ ತೆರಿಗೆಗಳು ಜಾರಿಗೆ ಬಂದಿದ್ದರೆ, ಆಪಲ್ ಸಂಸ್ಥೆಯು ಶೇ 145ರಷ್ಟು ಬೃಹತ್ ಆಮದು ಶುಲ್ಕವನ್ನು ಭರಿಸಬೇಕಾಗುತ್ತಿತ್ತು.

ಇಂತಹ ಪರಿಸ್ಥಿತಿಯಲ್ಲಿ, ಆಪಲ್ ಸಹಜವಾಗಿಯೇ ತನ್ನ ಉತ್ಪನ್ನಗಳ ಬೆಲೆಗಳನ್ನು ಹೆಚ್ಚಿಸುವ ಮೂಲಕ ಆ ಹೆಚ್ಚುವರಿ ಹೊರೆಯನು ಗ್ರಾಹಕರ ಮೇಲೆ ವರ್ಗಾಯಿಸುವ ಸಾಧ್ಯತೆಗಳಿದ್ದವು. ಆದರೆ ಈಗ ಬ್ಲೂಮ್‌ಬರ್ಗ್‌ನ ವರದಿಯ ಪ್ರಕಾರ, ಶ್ವೇತಭವನದ ಪ್ರಕಟಿಸಿರುವ ಈ ವಿನಾಯತಿ ನಿರ್ಧಾರವು ಅಂತಹ ಯಾವುದೇ ಬೆಲೆ ಏರಿಕೆಯನ್ನು ತಡೆದಿದೆ ಎಂದು ಹೇಳಿದೆ. ಇದು ಕೇವಲ ಆಪಲ್ ಕಂಪನಿಗೆ ಮಾತ್ರವಲ್ಲದೆ, ಗುಣಮಟ್ಟದ ತಾಂತ್ರಿಕ ಗ್ಯಾಜೆಟ್‌ಗಳನ್ನು ಕೈಗೆಟುಕುವ ದರದಲ್ಲಿ ಖರೀದಿಸಲು ಬಯಸುವ ಪ್ರತಿಯೊಬ್ಬರಿಗೂ ಸಂತಸದ ಸುದ್ದಿಯಾಗಿದೆ ಎಂದು ಹೇಳಲಾಗಿದೆ.

ಟ್ರಂಪ್ ಸುಂಕ ವಿನಾಯಿತಿ: ಮುಂದೆ ಆಪಲ್ ಐಫೋನ್‌ಗಳ ಬೆಲೆ ಏನಾಗಬಹುದು?

ಸಾಮಾನ್ಯವಾಗಿ ಸ್ಮಾರ್ಟ್‌ಫೋನ್‌ಗಳು, ಲ್ಯಾಪ್‌ಟಾಪ್‌ಗಳು, ಕಂಪ್ಯೂಟರ್‌ನ ಬಿಡಿ ಭಾಗಗಳು ಮತ್ತು ಮೆಮೊರಿ ಚಿಪ್‌ಗಳಂತಹ ಪ್ರಮುಖ ತಾಂತ್ರಿಕ ಉತ್ಪನ್ನಗಳನ್ನು ಅಮೆರಿಕದಲ್ಲಿ ವ್ಯಾಪಕವಾಗಿ ಉತ್ಪಾದಿಸಲಾಗುವುದಿಲ್ಲ. ಈ ಉತ್ಪನ್ನಗಳಿಗಾಗಿ ದೇಶದಲ್ಲಿಯೇ ಉತ್ಪಾದನಾ ಘಟಕಗಳನ್ನು ಸ್ಥಾಪಿಸುವುದು ಅಲ್ಪಾವಧಿಯಲ್ಲಿ ಸಾಧ್ಯವಾಗದ ಮತ್ತು ಹೆಚ್ಚಿನ ವೆಚ್ಚವನ್ನು ಒಳಗೊಂಡಿರುವ ಪ್ರಕ್ರಿಯೆಯಾಗಿದೆ. ಹೀಗಾಗಿ, ಒಂದು ವೇಳೆ ಹೊಸ ಸುಂಕಗಳನ್ನು ವಿಧಿಸಲಾಗಿದ್ದರೆ, ಅದು ಅನಿವಾರ್ಯವಾಗಿ ಟೆಕ್ ಕಂಪನಿಗಳು ಮತ್ತು ಅಂತಿಮವಾಗಿ ಗ್ರಾಹಕರಿಗೆ ದುಬಾರಿಯಾಗುವ ಸಾಧ್ಯತೆಗಳಿದ್ದವು.

ಇದಲ್ಲದೆ, ಸೆಮಿಕಂಡೆಕ್ಟರ್ ಚಿಪ್ ಉದ್ಯಮಕ್ಕೂ ಸಹ ಈ ನಿರ್ಧಾರವು ಸಮಾಧಾನ ತಂದಿದೆ. ಸೆಮಿಕಂಡಕ್ಟರ್‌ಗಳನ್ನು ತಯಾರಿಸಲು ಬಳಸುವ ಅತ್ಯಾಧುನಿಕ ಯಂತ್ರೋಪಕರಣಗಳನ್ನು ಸಹ ಹೊಸ ಸುಂಕಗಳ ವ್ಯಾಪ್ತಿಯಿಂದ ಹೊರಗಿಡಲಾಗಿದೆ. ಇದು ತೈವಾನ್ ಸೆಮಿಕಂಡಕ್ಟರ್ ಮ್ಯಾನುಫ್ಯಾಕ್ಚರಿಂಗ್ ಕಂಪನಿ (TSMC) ನಂತಹ ಜಾಗತಿಕ ಮಟ್ಟದ ಚಿಪ್ ತಯಾರಿಕಾ ಸಂಸ್ಥೆಗಳಿಗೆ ಬಹಳಷ್ಟು ಅನುಕೂಲವಾಗಲಿದೆ. ಏಕೆಂದರೆ ಈ ಕಂಪನಿಗಳು ಅಮೆರಿಕಕ್ಕೆ ಅಗತ್ಯವಾದ ಬಹುಪಾಲು ಚಿಪ್‌ಗಳನ್ನು ಪೂರೈಸುತ್ತವೆ.

ಆದಾಗ್ಯೂ, ಮುಂಬರುವ ದಿನಗಳಲ್ಲಿ ನಿರ್ದಿಷ್ಟ ರೀತಿಯ ತಾಂತ್ರಿಕ ಉತ್ಪನ್ನಗಳ ಮೇಲೆ ಬೇರೆ ರೀತಿಯ ಸುಂಕಗಳನ್ನು ವಿಧಿಸುವ ಬಗ್ಗೆ ಸರ್ಕಾರವು ಚಿಂತನೆ ನಡೆಸುವ ಸಾಧ್ಯತೆಗಳನ್ನು ಅಲ್ಲಗಳೆಯುವಂತಿಲ್ಲ. ಒಟ್ಟಾರೆಯಾಗಿ, ಸದ್ಯಕ್ಕೆ ಸ್ಮಾರ್ಟ್‌ಫೋನ್‌ಗಳು ಮತ್ತು ಲ್ಯಾಪ್‌ಟಾಪ್‌ಗಳ ಮೇಲಿನ ಸುಂಕ ವಿನಾಯತಿಯು ಗ್ರಾಹಕರಿಗೆ ಮತ್ತು ತಂತ್ರಜ್ಞಾನ ಉದ್ಯಮಕ್ಕೆ ಒಂದು ಸಕಾರಾತ್ಮಕ ಬೆಳವಣಿಗೆಯಾಗಿದೆ ಎಂಬುದರಲ್ಲಿ ಯಾವುದೇ ಸಂದೇಹವಿಲ್ಲ. ಈ ಬಗ್ಗೆ ನಿಮ್ಮ ಅಭಿಪ್ರಾಯ ಏನು ಎಂಬುದನ್ನು ಈ ಕೆಳಗೆ ಕಾಮೆಂಟ್ ಮಾಡಿ ತಿಳಿಸಿ.

Best Mobiles in India

English summary
The US Customs and Border Protection has announced that smartphones, laptops, and certain other tech devices will be exempt from the new 125% tariff on goods from China.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+