Home
ಸುದ್ದಿಜಾಲ

ಜಿಯೋ ಪ್ರೈಮ್ ಆಫರ್ ಹಿಂದಿನ ರಹಸ್ಯವೇನು..? ಪ್ರತಿ ದಿನಕ್ಕೆ 10 ರೂ. ಲೆಕ್ಕಾಚಾರ ಹೇಗೆ..?

ತನ್ನ ಬಳಕೆದಾರರಿಗೆ ಜಿಯೋ ಹೊಸ-ಹೊಸ ಆಫರ್ ನೀಡಲು ಮುಂದಾಗಿದೆ. ಆದರೆ ಜಿಯೋ ಪ್ರೈಮ್ ಆಫರ್ ಹಿಂದಿನ ರಹಸ್ಯವೇನು ನಿಮಗೆ ತಿಳಿದಿಯೇ..?

By Srinidhi

ರಿಲಯನ್ಸ್ ಮಾಲಿಕತ್ವದ ಜಿಯೋ 100 ಮಿಲಿಯನ್ ಗ್ರಾಹಕರ ಗುರಿಯನ್ನು ಕೇವಲ 170 ದಿನಗಳಲ್ಲಿ ತಲುಪಿದ ಸಂಭ್ರಮದಲ್ಲಿ ತನ್ನ ಬಳಕೆದಾರರಿಗೆ ಜಿಯೋ ಹೊಸ-ಹೊಸ ಆಫರ್ ನೀಡಲು ಮುಂದಾಗಿದೆ. ಆದರೆ ಜಿಯೋ ಪ್ರೈಮ್ ಆಫರ್ ಹಿಂದಿನ ರಹಸ್ಯವೇನು ನಿಮಗೆ ತಿಳಿದಿಯೇ..?

ಜಿಯೋ ಪ್ರೈಮ್ ಆಫರ್ ಹಿಂದಿನ ರಹಸ್ಯವೇನು..? ಪ್ರತಿ ದಿನಕ್ಕೆ 10 ರೂ. ಲೆಕ್ಕಾಚಾರ

ಓದಿರಿ: ಜಿಯೋ ಪ್ರೈಮ್ ಆಫರ್; 2018ರ ವರೆಗೂ ಮುಂದುವರೆಯಲಿದೆ ಜಿಯೋ ಉಚಿತ ಸೇವೆ..!!!

ಜಿಯೋ ನೀಡಿರುವ ಉಚಿತ ಡೇಟಾ ಸೇವೆಯಿಂದಾಗಿ ವಿಶ್ವದಲ್ಲಿ ಭಾರತ ನಂಬರ್ 1 ಮೊಬೈಲ್ ಡೇಟಾ ಬಳಸುವ ದೇಶ ಎಂಬ ಖ್ಯಾತಿಯನ್ನು ಪಡೆದುಕೊಂಡಿದೆ. ಆದರೆ ಇದೇ ಜಿಯೋ ಉಚಿತ ಸೇವೆಯನ್ನು ನಿಲ್ಲಿಸಿದರೆ ಜನರು ಜಿಯೋ ಬಳಕೆಯನ್ನು ನಿಲ್ಲಿಸಲಿದ್ದಾರೆ. ಇದಕ್ಕಾಗಿ ಇನ್ನು ಒಂದು ವರ್ಷವಾದರು ಜಿಯೋ ಗ್ರಾಹಕರು ಜಿಯೋನೊಂದಿಗೆ ಉಳಿಯಲಿ ಎಂಬ ಕಾರಣಕ್ಕೆ ಈ ಆಫರ್ ನೀಡಲಾಗಿದೆ.

ದುಡ್ಡಿ ನೀಡಿ ಎಂದರೆ ಯಾರು ಮುಂದೆ ಬರಲ್ಲ:

ದುಡ್ಡಿ ನೀಡಿ ಎಂದರೆ ಯಾರು ಮುಂದೆ ಬರಲ್ಲ:

ಪ್ರತಿ ತಿಂಗಳೂ 303ರೂ. ನೀಡಿ ಎಂದರೆ ಯಾರ ಸಹ ಜಿಯೋ ಸೇವೆಯನ್ನು ಪಡೆಯಲು ಮುಂದೆ ಬರುವುದಿಲ್ಲ, ಇದಕ್ಕಾಗಿ ಜಿಯೋ ಪ್ರೈಮ್ ಸದಸ್ಯತ್ವ ಕಾರ್ಯಕ್ರಮವನ್ನು ಜಾರಿಗೆ ತರಲು ಮುಂದಾಗಿದ್ದು, ಮೊದಲ 100 ಮಿಲಿಯನ್ ಮಂದಿಗೆ ಜಿಯೋ ಪ್ರೈಮ್ ಸದಸ್ಯತ್ವ ನೀಡಲು ಜಿಯೋ ಮುಂದಾಗಿದೆ.

ಜಿಯೋ ನ್ಯೂ ಇಯರ್ ಆಫರ್ ಅನ್ನು ಪ್ರೈಮ್ ಸದಸ್ಯರು 2018ರ ಮಾರ್ಚ್ 31ರ ವರೆಗೂ ಪಡೆಯಬಹುದಾಗಿದ್ದು, ಇದಕ್ಕಾಗಿ 99 ರೂ. ಪಾವತಿ ಮಾಡಬೇಕಾಗಿದೆ. ಅಲ್ಲದೇ ಪ್ರತಿ ತಿಂಗಳು 303 ರೂ. ಕಟ್ಟಬೇಕಾಗಿದೆ. ಹೀಗೆ ಉಚಿತವೂ ಅಲ್ಲದ ಸೇವೆಯನ್ನು ನೀಡಲು ಮುಂದಾಗಿದೆ.

ಕಾಸು ಕೊಟ್ಟೆರೆ ಮಾತ್ರ : ಹ್ಯಾಪಿ ನ್ಯೂಯಿರ್ ಆಫರ್

ಕಾಸು ಕೊಟ್ಟೆರೆ ಮಾತ್ರ : ಹ್ಯಾಪಿ ನ್ಯೂಯಿರ್ ಆಫರ್

ಸದ್ಯ ಉಚಿತ ಸೇವೆಯಲ್ಲಿ ಸಾಕಷ್ಟು ಡೇಟಾ ಬಳಕೆ ಮಾಡಿರುವ ಗ್ರಾಹಕರು ಮತ್ತೆ ದುಬಾರಿ ಬೆಲೆಯನ್ನು ನೀಡಿ ಬೇರೆ ಕಡೆ ಡೇಟಾ ಸೇವೆ ಪಡೆಯಲು ಮುಂದಾಗುವುದಿಲ್ಲ. ಇದನ್ನು ಅರಿತು ಜಿಯೋ ಪ್ರತಿ ತಿಂಗಳಿಗೆ 303 ರೂ. ದರ ವಿಧಿಸುತ್ತಿದೆ.

ಜಿಯೋ ಹ್ಯಾಪಿ ನ್ಯೂಯಿರ್ ಆಫರ್ ನಂತೆ ಪ್ರತಿ ದಿನ 1 GB 4G ಡೇಟಾವನ್ನು ನೀಡಲಿದ್ದು, ಅಲ್ಲದೇ ಕೇವಲ 50 ರೂ.ಗೆ ನೀಡಲಿದ್ದು, ಕೇಲವ 301 ರೂ.ಗೆ 6 GB ಡೇಟಾವನ್ನು 28 ದಿನಗಳ ಕಾಲವಾಧಿಗೆ ನೀಡಲಿದೆ. ಇದಲ್ಲದೇ ಇಡೀ ಭಾರತದಲ್ಲಿ ಎಲ್ಲಿ ಬೇಕಾದರು ಉಚಿತವಾಗಿ ಕರೆ ಮಾಡಬಹುದಾಗಿದೆ.

ಲೈಫ್‌ಟೈಮ್ ಉಚಿತ ಕರೆ ಮಾಡುವ ಕೊಡುಗೆ:

ಲೈಫ್‌ಟೈಮ್ ಉಚಿತ ಕರೆ ಮಾಡುವ ಕೊಡುಗೆ:

ಜಿಯೋ ತನ್ನ ಬಳಕೆದಾರರಿಗೆ ಲೈಪ್‌ಟೈಮ್ ಉಚಿತ ಕರೆ ಮಾಡುವ ಸೇವೆಯನ್ನು ನೀಡಲು ಮುಂದಾಗಿದೆ. ಎಲ್ಲಾ ಟೆಲಿಕಾಮ್‌ ಅಪರೇಟರ್‌ಗಳಿಗೆ ಮಾಡುವ ಕರೆಯನ್ನು ಉಚಿತವಾಗಿ ನೀಡುವ ಕ್ರಮಕ್ಕೆ ಜಿಯೋ ಸಿದ್ಧವಾಗಿದೆ. ಜಿಯೋ ಸಿಮ್‌ನಿಂದ ಎಲ್ಲಿಗೆ ಬೇಕಾದರು ಉಚಿತವಾಗಿ ಕರೆ ಮಾಡಬಹುದಾಗಿದೆ.

ಕಾಸು ಮಾಡಲು ಕಾಂಬೋ ಆಫರ್:

ಕಾಸು ಮಾಡಲು ಕಾಂಬೋ ಆಫರ್:

ಇಂಟರ್‌ನ್ಯಾಷಿನಲ್ ಕರೆಗಳನ್ನು ಮಾಡಲು ಕಾಂಬೋ ಆಫರ್ ನೀಡಲು ಮುಂದಾಗಿದೆ. ಇದಕ್ಕಾಗಿ 501 ರೂ, ಪ್ಯಾಕ್‌ನಲ್ಲಿ 435 ರೂ ಇಂಟರ್ನ್ಯಾಷಿನಲ್ ಕರೆ ಮಾಡಲು ಬ್ಯಾಲೆನ್ಸ್ ಬರಲಿದ್ದು, ಇದರೊಂದಿಗೆ 100 ಮೇಸೆಜ್ ಉಚಿತವಾಗಿ ದೊರೆಯಲಿದೆ. ಅಲ್ಲದೇ ಇದರೊಂದಿಗೆ 20 ರೂ ಪಾವತಿ ಮಾಡಿದರೆ 175 ರೂ. ಮೇಸೆಜ್ ಬ್ಯಾಲೆನ್ಸ್ ಲಭ್ಯವಿರಲಿದ್ದು, ಇದರ ಮೂಲಕ ಬೇರೆ ದೇಶದ ನಂಬರ್‌ಗಳಿಗೂ ಮೇಸೆಜ್ ಕಳುಹಿಸಬಹುದಾಗಿದೆ.

ಜಿಯೋಗೆ ಪೋರ್ಟ್‌ಆಗಿ, ಪ್ರೈಮ್ ಆಫರ್ ಗೆ ಬನ್ನಿ:

ಜಿಯೋಗೆ ಪೋರ್ಟ್‌ಆಗಿ, ಪ್ರೈಮ್ ಆಫರ್ ಗೆ ಬನ್ನಿ:

ನೀವು ಜಿಯೋಗೆ ಪೋರ್ಟ್‌ ಮಾಡಿಕೊಂಡು ಪ್ರೈಮ್‌ ಆಫರ್‌ ಲಾಭವನ್ನು ಪಡೆಯಬಹುದಾಗಿದೆ. ಇದಕ್ಕಾಗಿ 'PORT' ಎಂದು ಟೈಪ್‌ ಮಾಡಿ ನಿಮ್ಮ ನಂಬರ್ ಟೈಪ್ ಮಾಡಿರಿ. ಆ ಮೇಸೆಜ್ ಅನ್ನು 1900ಕ್ಕೆ ಸೆಂಡ್ ಮಾಡಿರಿ. ನಂತರ ಬರುವ ರೆಫರೆನ್ಸ್ ನಂಬರ್ ಅನ್ನು ಜಿಯೋ ಸ್ಟೋರಿಗೆ ಹೋಗಿ ನೀಡುವ ಮೂಲಕ ಜಿಯೋ ಕುಟುಂಬವನ್ನು ಸೇರಬಹುದಾಗಿದೆ,

 ಲಾಭದ ಮೊದಲ ಹೆಜ್ಜೆ:

ಲಾಭದ ಮೊದಲ ಹೆಜ್ಜೆ:

ಜಿಯೋ 1.5 ಲಕ್ಷ ಕೋಟಿ ಹೂಡಿಕೆಯೊಂದಿಗೆ ಆರಂಭವಾಗಿರುವ ಕಂಪನಿಯಾಗಿದ್ದು, ಜಿಯೋ ಪ್ರೈಮ್ ಸದಸ್ಯತ್ವವನ್ನು ಮಾಡಿಸಿಕೊಳ್ಳಿ ಎನ್ನುವ ಮೂಲಕ 1000 ಕೋಟಿ ಆದಾಯವನ್ನು ಒಂದೇ ತಿಂಗಳಿನಲ್ಲಿ ಪಡೆಯುವ ಪ್ರಯತ್ನ ನಡೆಸಿದೆ. ಅಲ್ಲದೇ ಪ್ರತಿ ತಿಂಗಳು 30000 ಕೋಟಿ ಆದಾಯವನ್ನು ತನ್ನ ಜೊಳಿಗೆಗೆ ತುಂಬಿಸಿ ಕೊಳ್ಳಲು ಜಿಯೋ ಸಿದ್ಧವಾಗಿದೆ. ಉಚಿತ ಕೊಡುಗೆ ಆಸೆ ತೋರಿಸಿ, ತನ್ನ ಜೋಳಿಗೆ ತುಂಬಿಸಿಕೊಳ್ಳುತ್ತಿದೆ ಜಿಯೋ

Best Mobiles in India

English summary
Reliance Industries has crossed a subscriber base of 100 mn in record 170 days time. to know more visit kannada.gizbot.com
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+