Subscribe to Gizbot

ಭಾರತಕ್ಕೆ ಬಂದಿದೆ ಟ್ರೂವಿಶನ್ 55-ಇಂಚ್ ಸ್ಮಾರ್ಟ್ ಟಿವಿ, ಬೆಲೆ ರೂ 68,990

By: Tejaswini P G

ಯುರೋಪ್ ದೇಶದ ಗೃಹೋಪಯೋಗಿ ಇಲೆಕ್ಟ್ರಾನಿಕ್ ಸಾಧನಗಳ ತಯಾರಕರಾದ ಟ್ರೂವಿಶನ್ ಇತ್ತೀಚೆಗಷ್ಟೇ ಹೊಸದೊಂದು ದೂರದರ್ಶನವನ್ನು ಬಿಡುಗಡೆ ಮಾಡಿದೆ. ಅಸಾಧಾರಣ ಪ್ರದರ್ಶನ ನೀಡುವ ಎಂಜಿನ್, ಮಿರಾಕಾಸ್ಟ್ ಕನೆಕ್ಟಿವಿಟಿ, ಕ್ಷಿಪ್ರ ಪ್ರತಿಕ್ರಿಯೆ ನೀಡುವ ಸಾಮರ್ಥ್ಯವುಳ್ಳ 'ದಿ 4K ಪ್ಯಾನೊರಾಮಿಕ್ ಅಲ್ಟ್ರಾ HD TX55101 ಸ್ಮಾರ್ಟ್ ಟಿವಿ' ಈಗ ಭಾರತದಲ್ಲಿ ಲಭ್ಯ!

ಭಾರತಕ್ಕೆ ಬಂದಿದೆ ಟ್ರೂವಿಶನ್ 55-ಇಂಚ್ ಸ್ಮಾರ್ಟ್ ಟಿವಿ, ಬೆಲೆ ರೂ 68,990

TX55101 ಸ್ಮಾರ್ಟ್ ಟಿವಿ ಸ್ಲಿಮ್ ಲೈನ್ ಬೆಝೆಲ್ ವಿನ್ಯಾಸ ,ಅಂದರೆ ಉಳಿಯ ಅಂಚಿನಂತೆ ತೆಳುವಾದ ವಿನ್ಯಾಸ ಹೊಂದಿದ್ದು ತುಂಬಾ ಆಕರ್ಷಕ ನೋಟ ಪಡೆದಿದೆ.ಅಲ್ಲದೆ ಉತ್ತಮ ಬ್ಯಾಕ್ಲೈಟ್ ತಂತ್ರಜ್ಞಾನ ಮತ್ತು ನೂತನ ಭ್ರೈಟ್ನೆಸ್ ಹಾಗೂ ಕಲರ್ ಕಾಂಟ್ರಾಸ್ಟ್ ಸೆಟ್ಟಿಂಗ್ ಗಳೂ ದೂರದರ್ಶನ ವೀಕ್ಷಣೆಯಲ್ಲಿ ಶ್ರೇಷ್ಠ ಅನುಭವ ನೀಡಲಿದೆ.

ಟಿವಿ ಯ ನೂತನ ಪ್ಯಾನಲ್ ಬಣ್ಣಗಳಲ್ಲಿ ಒಂದು ರೀತಿಯ ಸ್ಥಿರತೆಯನ್ನು ತರುತ್ತದಲ್ಲದೆ ಚಿತ್ರಗಳ ಗುಣಮಟ್ಟದಲ್ಲೂ ಸುಧಾರಣೆಯನ್ನು ತಂದಿದೆ.ಅಲ್ಲದೆ ಟಿವಿಯ ಪರದೆಯನ್ನು ಮುಟ್ಟುವಾಗ ಚಿತ್ರದಲ್ಲಿ ಉಂಟಾಗುವ ವಿಚಲತೆ ನಗಣ್ಯ ಎನ್ನುವಷ್ಟರ ಮಟ್ಟಿಗೆ ಕಡಿಮೆಯಿದೆ.

ನೂತನ TX55101 ಸ್ಮಾರ್ಟ್ ಟಿವಿ 1GB RAM ಜೊತೆಗೆ ಆಂಡ್ರಾಯ್ಡ್ 4.4 ಓಎಸ್ ಹೊಂದಿದೆ.ಈ ಮೂಲಕ ನೀವು ಟಿವಿ ಗೆ ಸಂಬಂಧಪಟ್ಟಂತೆ ಗೂಗಲ್ ಪ್ಲೇ ಸ್ಟೋರ್ನಲ್ಲಿ ಲಭ್ಯವಿರುವ ಎಲ್ಲಾ ಆಪ್ಗಳು, ಸೇವೆಗಳು ಹಾಗೂ ಇತರ ಕಂಟೆಂಟ್ಗಳನ್ನು ಆಕ್ಸೆಸ್ ಮಾಡಬಹುದು.

ಭಾರತಕ್ಕೆ ಬಂದಿದೆ ಟ್ರೂವಿಶನ್ 55-ಇಂಚ್ ಸ್ಮಾರ್ಟ್ ಟಿವಿ, ಬೆಲೆ ರೂ 68,990

ಟ್ರೂವಿಶನ್ ನ ಹೊಸ ಟಿವಿಯಲ್ಲಿರುವ ಮಿರಾಕಾಸ್ಟ್ ತಂತ್ರಜ್ಞಾನ ನಿಮಗೆ ನೀಡಲಿದೆ ಟಿವಿಯನ್ನು ಹಲವಾರು ವಿಭಿನ್ನ ಸಾಧನಗಳೊಡನೆ ಕ್ಷಿಪ್ರ ಮತ್ತು ತಡೆರಹಿತವಾಗಿ ಕನೆಕ್ಟ್ ಮಾಡುವ ಸಾಮರ್ಥ್ಯ. ಇದರಲ್ಲಿರುವ 2 HDMI ಪೋರ್ಟ್ ಗಳ ಸಹಾಯದಿಂದ ನೀವು ನಿಮ್ಮ ಟಿವಿಯನ್ನು ಕಂಪ್ಯೂಟರ್, ಗೇಮಿಂಗ್ ಸಾಧನಗಳು, ಡಿವಿಡಿಗಳು ಮತ್ತು ಇನ್ನಿತರ ಸಾಧನಗಳೊಂದಿಗೆ ಜೋಡಿಸಬಹುದಾಗಿದೆ.ಈ ಟಿವಿಯ ಮತ್ತೊಂದು ಮುಖ್ಯ ಸಂಗತಿಯೆಂದರೆ, ಇದರಲ್ಲಿರುವ ಡಾಲ್ಬಿ ಡಿಜಿಟಲ್ ಸೌಂಡ್ ತಂತ್ರಜ್ಞಾನ. ಈ ಮೂಲಕ TX55101 ಸ್ಮಾರ್ಟ್ ಟಿವಿ ನೀಡಲಿದೆ ಶ್ರೇಷ್ಠ ಗುಣಮಟ್ಟದ ಧ್ವನಿ.

TX55101 ಸ್ಮಾರ್ಟ್ ಟಿವಿಯೊಂದಿಗೆ ಆಂಡ್ರಾಯ್ಡ್ ಏರ್ ಫ್ಲೈ ಮೌಸ್ ಕೂಡ ಬರಲಿದ್ದು ,ನ್ಯಾವಿಗೇಶನ್ ಅನ್ನು ಸರಳವಾಗಿಸುತ್ತದೆ.ಅಲ್ಲದೆ ಈ ಮೌಸ್ ಗೇಮಿಂಗ್ ಪ್ರಿಯರಿಗೆ ವರದಾನವೇ ಸರಿ!

ದೀಪಾವಳಿಗೆ ನೋಕಿಯಾ ಧಮಾಕ: ಬರಲಿದೆ ನೋಕಿಯಾ 8 ಸ್ಮಾರ್ಟ್ ಫೋನ್.!

ಇಷ್ಟೆಲ್ಲಾ ಸೌಲಭ್ಯಗಳಿರುವ TX55101 ಸ್ಮಾರ್ಟ್ ಟಿವಿ ಯ ಬೆಲೆ ಕೇವಲ ರೂ 68,990. ದಕ್ಷಿಣ ಮತು ಪಶ್ಚಿಮ ಭಾರತದ ಎಲ್ಲಾ ದೊಡ್ಡ ಗೃಹೋಪಯೋಗಿ ಇಲೆಕ್ಟ್ರಾನಿಕ್ ಸಾಧನಗಳ ರೀಟೈಲ್ ಮಳಿಗೆಗಳಲ್ಲಿ TX55101 ಸ್ಮಾರ್ಟ್ ಟಿವಿ ದೊರೆಯಲಿದೆ. ಈ ಟಿವಿಯ ಜೊತೆಗೆ ಸಿಗುವ 1 ವರ್ಷದ ಸ್ಟ್ಯಾಂಡರ್ಡ್ ವಾರೆಂಟಿ ಜೊತೆಗೆ 2 ವರ್ಷದ ಹೆಚ್ಚಿನ ವಾರೆಂಟಿಯನ್ನೂ ಆಯ್ಕೆಮಾಡಿಕೊಳ್ಳಬಹುದು.

ಟಿವಿ ಯ ಬಿಡುಗಡೆ ಸಂದರ್ಭದಲ್ಲಿ ಮಾತನಾಡಿದ ಟ್ರೂವಿಶನ್ ನ ಬಿಸ್ನೆಸ್ ಆಪರೇಶನ್ಸ್ ಇಂಡಿಯಾ ದ ಡೈರೆಕ್ಟರ್ ಸೌರಭ್ ಕಾಬ್ರಾ "ನೂತನ ತಂತ್ರಜ್ಞಾನ ಮತ್ತು ಉತ್ತಮ ಫೀಚರ್ಗಳು ಎರಡನ್ನೂ ಮೇಳೈಸಿಕೊಂಡಿರುವ TX55101 HDಸ್ಮಾರ್ಟ್ ಟಿವಿ ಈ ಕ್ಷೇತ್ರದಲ್ಲಿ ಒಂದು ಮೈಲಿಗಲ್ಲು ಎಂದೇ ಹೇಳಬಹುದು.ಮನರಂಜನೆಯ ಈ ಹೊಸ ಮಾಧ್ಯಮವನ್ನು ನಿಮ್ಮದಾಗಿಸಿಕೊಳ್ಳಿ ಮತ್ತು ಭವಿಷ್ಯದ ಟಿವಿಯ ಅನುಭವ ಪಡೆಯಿರಿ" ಎಂದಿದ್ದಾರೆ.

Read more about:
English summary
The new TX55101 smart TV runs on Android 4.4 OS clubbed with 1GB of RAM.
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot