Home
ಸುದ್ದಿಜಾಲ

ತಿರುಪತಿ ತಿಮ್ಮಪ್ಪನ ಆಲಯದಲ್ಲಿ ಭಾರಿ ಬದಲಾವಣೆ! ಬರಲಿದೆ ಹೈ ಟೆಕ್‌ ಭದ್ರತಾ ವ್ಯವಸ್ಥೆ!

ಅಖಿಲಾಂಡ ಕೋಟಿ ಬ್ರಹ್ಮಾಂಡ ನಾಯಕ ಅಂತಾನೇ ಪ್ರಸಿದ್ಧಿ ಪಡೆದಿರುವ ತಿರುಪತಿ ತಿಮ್ಮಪ್ಪನ ದರ್ಶನಕ್ಕೆ ವರ್ಷಪೂರ್ತಿ ಅಸಂಖ್ಯಾತ ಭಕ್ತರು ಬೇಟಿ ನೀಡುತ್ತಲೇ ಇರುತ್ತಾರೆ. ಇನ್ನು ಭಕ್ತರ ಅನುಕೂಲಕ್ಕಾಗಿ ತಿರುಪತಿ ತಿರುಮಲ ದೇವಸ್ಥಾನ ಆಡಳಿತ ಮಂಡಳಿ ಹಲವು ಸೇವೆಗಳನ್ನು ನೀಡುತ್ತಾ ಬಂದಿದೆ. ಸದ್ಯ ಇದೀಗ TTD ಮತ್ತೊಂದು ಹೊಸ ನಿರ್ಧಾರವನ್ನು ತೆಗೆದುಕೊಂಡಿದೆ.

ಹೌದು, ತಿರುಪತಿ ತಿಮ್ಮಪ್ಪನ ದೇವಾಲಯ ಆಡಳಿತ ಮಂಡಳಿ ಹೊಸ ಭದ್ರತಾ ವ್ಯವಸ್ಥೆಯನ್ನು ತೆಗೆದುಕೊಳ್ಳಲು ಮುಂದಾಗಿದೆ. ಅದರಂತೆ ಇನ್ಮುಂದೆ ತಿರುಪತಿಯಲ್ಲಿ ಎಐ ಟೆಕ್ನಾಲಜಿ ಆಧಾರಿತ ಅತ್ಯಾಧುನಿಕ ಭದ್ರತಾ ವ್ಯವಸ್ಥೆಯನ್ನು ಜಾರಿಗೊಳಿಸಲಾಗುವುದು ಎನ್ನಲಾಗಿದೆ. ಹಾಗಾದ್ರೆ TTD ಇಂತಹದೊಂದು ನಿರ್ಧಾರಕ್ಕೆ ಬರುವುದಕ್ಕೆ ಕಾರಣ ಏನು ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತೀವಿ ಓದಿರಿ.

ತಿರುಪತಿ ತಿಮ್ಮಪ್ಪನ ಆಲಯದಲ್ಲಿ ಭಾರಿ ಬದಲಾವಣೆ! ಬರಲಿದೆ ಹೈ ಟೆಕ್‌ ವ್ಯವಸ್ಥೆ!

ತಿರುಪತಿ ದೇಗುಲದಲ್ಲಿ AI ಆಧಾರಿತ ಭದ್ರತಾ ಟೆಕ್ನಾಲಜಿ ಜಾರಿಗೊಳಿಸಲು ಟಿಟಿಡಿ ನಿರ್ಧಾರ ಮಾಡಿದೆ. ಅದರಂತೆ ಸೂಕ್ತ ಭದ್ರತೆಗಾಗಿ ಅತ್ಯಾಧುನಿಕ ಸ್ಕ್ಯಾನರ್‌ಗಳು, ಆ್ಯಂಟಿ ಡ್ರೋನ್‌ ಟೆಕ್ನಾಲಜಿಯನ್ನು ಬಲಸಲಾಗುವುದು ಎಂದು TTD ಹೇಳಿದೆ. ಇತ್ತೀಚಿಗೆ ತಿರುಪತಿಯಲ್ಲಿ ಕಮ್ಮಂನ ಭಕ್ತರೊಬ್ಬರು ದೇವಸ್ಥಾನದ ಆವರಣದಲ್ಲಿ ರಹಸ್ಯವಾಗಿ ವಿಡಿಯೊ ಚಿತ್ರೀಕರಣ ನಡೆಸಿದ್ದು ಫುಲ್‌ ವೈರಲ್‌ ಆಗಿತ್ತು. ಇದರಿಂದ ಎಚ್ಚೆತ್ತುಕೊಂಡಿರುವ TTD ತನ್ನ ಭದ್ರತಾ ವ್ಯವಸ್ಥೆಯನ್ನು ಇನ್ನಷ್ಟು ಆಧುನಿಕರಣಗೊಳಿಸಲು ಮುಂದಾಗಿದೆ.

ಇನ್ನು ಇದೇ ವಿಚಾರವಾಗಿ ಆಂದ್ರಪ್ರದೇಶದ ರಾಜ್ಯ ಗೃಹ ಕಾರ್ಯದರ್ಶಿ ಹರೀಶ್ ಕುಮಾರ್ ಗುಪ್ತಾ ಮಾತನಾಡಿದ್ದಾರೆ. ತಿರುಪತಿಯಲ್ಲಿ ಸಿಸಿಟಿವಿ ಕಂಟ್ರೋಲ್ ರೂಂನಲ್ಲಿ ಕೃತಕ ಬುದ್ಧಿಮತ್ತೆಯನ್ನು ಹೇಗೆ ಬಳಸಬೇಕು, ಯಾವ ರೀತಿಯ ಸಾಫ್ಟ್ ವೇರ್ ಬಳಸಬೇಕು ಎಂಬುದರ ಕುರಿತು ಅಧ್ಯಯನ ನಡೆಸಲಾಗುವುದು ಎಂದು ತಿಳಿಸಿದ್ದಾರೆ. ಜೊತೆಗೆ ಆ್ಯಂಟಿ ಡ್ರೋನ್ ತಂತ್ರಜ್ಞಾನ ಮತ್ತು ಬಾಡಿ ಸ್ಕ್ಯಾನರ್ ಬಳಕೆ ಬಗ್ಗೆ ಪ್ರಸ್ತಾವನೆಗಳನ್ನು ಸಿದ್ಧಪಡಿಸಲು ಕ್ರಮವಹಿಸಲಾಗುವುದು ಎಂದು ಹೇಳಿದ್ದಾರೆ.

ತಿರುಪತಿ ತಿಮ್ಮಪ್ಪನ ಆಲಯದಲ್ಲಿ ಭಾರಿ ಬದಲಾವಣೆ! ಬರಲಿದೆ ಹೈ ಟೆಕ್‌ ವ್ಯವಸ್ಥೆ!

ಏನಿದು ಆ್ಯಂಟಿ ಡ್ರೋನ್‌ ಟೆಕ್ನಾಲಜಿ: ಹೆಸರೇ ಸೂಚಿಸುವಂತೆ ನಿರ್ಧಿಷ್ಟವಾದ ಪ್ರದೇಶದಲ್ಲಿ ಯಾವುದೇ ಡ್ರೋನ್‌ಗಳು ಹಾರಾಡದಂತೆ ತಡೆಯುವ ಕೆಲಸವನ್ನು ಮಾಡಲಿದೆ. ಇದು ಡ್ರೋನ್‌ಗಳು ತಮ್ಮ ಆಪರೇಟರ್‌ನೊಂದಿಗೆ ಸಂವಹನ ನಡೆಸಲು ಸಾಧ್ಯವಾಗದಂತೆ ಮಾಡಲಿವೆ. ಆದರಿಂದ ಭದ್ರತಾ ಕಾಳಜಿ ಉಲ್ಲಂಘನೆಯಾಗದಂತೆ ತಡೆಗಟ್ಟುವಲ್ಲಿ ಈ ಟೆಕ್ನಾಲಜಿ ಸಾಕಷ್ಟು ಉಪಯುಕ್ತವಾಗಲಿದೆ.

ಬಾಡಿಸ್ಕ್ಯಾನರ್‌ ವ್ಯವಸ್ಥೆ ಯಾಕೆ: ತಿರುಪತಿಯಲ್ಲಿ ದೇವಸ್ಥಾನದ ಒಳಗೆ ಮೊಬೈಲ್‌ ತೆಗೆದುಕೊಂಡು ಹೋಗುವುದು ನಿಷಿದ್ದ. ಆದರೂ ಕೂಡ ದೇಗುಲದೊಳಗೆ ವೀಡಿಯೊ ಚಿತ್ರಿಕರಣ ನಡೆಸಿರೋದು ಟಿಟಿಡಿಗೆ ಆತಂಕವನ್ನುಂಟು ಮಾಡಿದೆ. ಇದೇ ಕಾರಣಕ್ಕೆ ಭಕ್ತರು ಸರದಿ ಸಾಲಿನಿಂದ ದೇಗುಲದ ಆವರಣ ಪ್ರವೇಶಿಸುವಾಗ ಅವರನ್ನು ಸಂಪೂರ್ಣವಾಗಿ ತಪಾಸಣೆ ಮಾಡುವುದಕ್ಕಾಗಿ ಈ ಟೆಕ್ನಾಲಜಿಯನ್ನು ಬಳಸಲು ಟಿಟಿಡಿ ಮುಂದಾಗಿದೆ. ಇದರಿಂದ ಯಾರು ಕೂಡ ಮೊಬೈಲ್‌ ಸೇರಿದಂತೆ ಇತರೆ ನಿಷಿದ್ದ ವಸ್ತುಗಳನ್ನು ತೆಗೆದುಕೊಂಡು ಹೋಗುವುದನ್ನು ತಡೆಗಟ್ಟಬಹುದಾಗಿದೆ.

ತಿರುಪತಿ ತಿಮ್ಮಪ್ಪನ ಆಲಯದಲ್ಲಿ ಭಾರಿ ಬದಲಾವಣೆ! ಬರಲಿದೆ ಹೈ ಟೆಕ್‌ ವ್ಯವಸ್ಥೆ!

ಇದಲ್ಲದೆ ತಿರುಪತಿ ತಿಮ್ಮಪ್ಪನ ದರ್ಶನಕ್ಕಾಗಿ ಕೆಲವು ನಿಯಮಗಳಲ್ಲಿ ಬದಲಾವಣೆಗಳನ್ನು ಟಿಟಿಡಿ ಪ್ರಕಟಿಸಿದೆ. ಈ ನಿಯಮ ಬದಲಾವಣೆಗಳು ಜೂನ್ 30 ರವರೆಗೆ ಜಾರಿಯಲ್ಲಿರುತ್ತವೆ ಎಂದು ಹೇಳಲಾಗಿದೆ. ಸದ್ಯ ಬೇಸಿಗೆ ಕಾಲವಾಗಿರುವುದರಿಂದ ಟೋಕನ್ ರಹಿತ ಭಕ್ತರ ದರ್ಶನಕ್ಕೆ ಸುಮಾರು 30-40 ಗಂಟೆಗಳ ಕಾಲಾವಕಾಶ ತೆಗೆದುಕೊಳ್ಳುತ್ತಿದೆ ಎಂದು ಟಿಟಿಡಿ ತಿಳಿಸಿದೆ. ಹಾಗಾಗಿ ವಿಐಪಿ ಬ್ರೇಕ್ ದರ್ಶನ ಮತ್ತು ಆರ್ಜಿತ ಸೇವೆಗಳಲ್ಲಿ ಕೆಲವು ಬದಲಾವಣೆಗಳನ್ನು ಪರಿಚಯಿಸಿದೆ.

ಅದರಂತೆ, ಶುಕ್ರವಾರ, ಶನಿವಾರ ಮತ್ತು ಭಾನುವಾರದಂದು ಸುಪ್ರಭಾತ ಸೇವೆಯಲ್ಲಿನ ವಿವೇಚನಾ ಕೋಟಾವನ್ನು ಟಿಟಿಡಿ ಹಿಂಪಡೆದಿದೆ. ಇದರಿಂದ ಸಾಮಾನ್ಯ ಭಕ್ತರಿಗೆ 20 ನಿಮಿಷಗಳ ಉಳಿತಾಯವಾಗಲಿದೆ. ಅಲ್ಲದೆ ಗುರುವಾರದಂದು ಏಕಾಂತಂನಲ್ಲಿ ತಿರುಪ್ಪವಾಡ ಸೇವೆ ಮಾಡಲು ಟಿಟಿಡಿ ನಿರ್ಧರಿಸಿದೆ. ಇದರಿಂದಾಗಿ ಭಕ್ತರಿಗೆ 30 ನಿಮಿಷಗಳ ಉಳಿತಾಯವಾಗುತ್ತದೆ. ಇನ್ನು "ಶುಕ್ರವಾರ, ಶನಿವಾರ ಮತ್ತು ಭಾನುವಾರದಂದು ವಿಐಪಿ ಶಿಫಾರಸು ಪತ್ರಗಳನ್ನು ಸ್ವೀಕರಿಸದಿರಲು ನಿರ್ಧರಿಸಲಾಗಿದೆ.

Best Mobiles in India

English summary
TTD has decided to set up Hi-tech security in tirumala with the latest AI-power technology
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+