Home
ಸುದ್ದಿಜಾಲ

ತಿರುಪತಿ ತಿಮ್ಮಪ್ಪನ ಆರ್ಜಿತ ಸೇವಾ ದರ್ಶನ ಟಿಕೆಟ್‌ ಬಿಡುಗಡೆಗೊಳಿಸಿದ TTD! ಇಂದಿನಿಂದಲೇ ಬುಕಿಂಗ್‌ ಶುರು!

ತಿರುಪತಿ ತಿಮ್ಮಪ್ಪನ ದರ್ಶನಕ್ಕೆ ಟಿಕೆಟ್‌ ಬುಕ್‌ ಮಾಡಲು ಕಾದಿರುವವರಿಗೆ ಟಿಟಿಡಿ ಗುಡ್‌ನ್ಯೂಸ್‌ ನೀಡಿದೆ. ಅಕ್ಟೋಬರ್‌ ತಿಂಗಳ ಆರ್ಜಿತ ಸೇವಾ ಟಿಕೆಟ್‌ಗಳನ್ನು ಬುಕ್‌ ಮಾಡುವುದಕ್ಕೆ ಇಂದಿನಿಂದ (ಜುಲೈ 18, 2023) ಅವಕಾಶ ನೀಡಲಿದೆ. ಈ ಮೂಲಕ ಅಕ್ಟೋಬರ್‌ ತಿಂಗಳಿನಲ್ಲಿನ ತಿರುಪತಿಗೆ ಹೋಗಲು ಬಯಸವವರಿಗೆ ಟಿಕೆಟ್‌ ಬುಕ್‌ ಮಾಡಲು ಅವಕಾಶ ಸಿಗಲಿದೆ.

ಹೌದು, ತಿರುಪತಿ ತಿಮ್ಮಪ್ಪನ ದೇವಸ್ಥಾನಕ್ಕೆ ಅಕ್ಟೋಬರ್‌ ತಿಂಗಳಿನಲ್ಲಿ ಬೇಟಿ ನೀಡಲು ಬಯಸುವವರು ಇಂದಿನಿಂದ ಟಿಕೆಟ್‌ ಬುಕ್‌ ಮಾಡಬಹುದು. ಇದಕ್ಕಾಗಿ ಅಕ್ಟೋಬರ್‌ ತಿಂಗಳ ತಿರುಮಲ ಶ್ರೀವಾರಿ ಆರ್ಜಿತ ಸೇವಾಕ್ವಾಮ್‌ ಕೋಟಾ ಸೇವಾ ಟಿಕೆಟ್‌ಗಳನ್ನು ನಾಳೆ ಬಿಡುಗಡೆ ಮಾಡಲಿದೆ. ಹಾಗಾದ್ರೆ ಅಕ್ಟೋಬರ್‌ ತಿಂಗಳಿನಲ್ಲಿ ದರ್ಶನ ಮಾಡಲು ಬಯಸುವವರಿಗೆ ಟಿಕೆಟ್‌ ಬುಕ್‌ ಮಾಡಲು ಎಲ್ಲಿಯ ತನಕ ಅವಕಾಶ ಸಿಗಲಿದೆ ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತೀವಿ ಓದಿರಿ.

ತಿರುಪತಿ ಆರ್ಜಿತ ಸೇವಾ ಟಿಕೆಟ್‌ ಬಿಡುಗಡೆಗೊಳಿಸಿದ TTD! ಇಂದಿನಿಂದಲೇ ಬುಕಿಂಗ್‌ !

ತಿರುಪತಿ ತಿಮ್ಮಪ್ಪನ ದರ್ಶನಕ್ಕಾಗಿ ಭಕ್ತಾಧಿಗಳು ವರ್ಷಪೂರ್ತಿ ಬೇಟಿ ನೀಡುತ್ತಲೇ ಇರುತ್ತಾರೆ. ಆದರೆ ತಿಮ್ಮಪ್ಪನ ದರ್ಶನಕ್ಕಾಗಿ ಟಿಕೆಟ್‌ ಬುಕಿಂಗ್‌ ಮಾಡುವುದು ಕಡ್ಡಾಯವಾಗಿದೆ. ಸದ್ಯ ಇಷ್ಟು ದಿನ ಟಿಕೆಟ್‌ ಸಿಗದೆ ನಿರಾಶೆಯಾದವರಿಗೆ ನಾಳೆಯಿಂದ ಟಿಕೆಟ್‌ ಬುಕ್‌ ಮಾಡಲು ಸಾಧ್ಯವಿದೆ. ಏಕೆಂದರೆ ಈಗಾಗಲೇ ಟಿಕೆಟ್‌ ಬುಕ್‌ ಮಾಡಲಿ ತಯಾರಿ ನಡೆಸಿರುವವರಿಗೆ ಇಂದಿನಿಂದ ಟಿಕೆಟ್‌ ಬುಕ್‌ ಮಾಡಲು ಅವಕಾಶ ಸಿಗಲಿದೆ.

ಸದ್ಯ ತಿರುಮಲ ತಿರುಪತಿ ದೇವಸ್ಥಾನಗಳು (ಟಿಟಿಡಿ) ಅಕ್ಟೋಬರ್ ತಿಂಗಳ ದರ್ಶನಕ್ಕಾಗಿ ತಿರುಮಲ ಶ್ರೀವಾರಿ ಆರ್ಜಿತ ಸೇವಾಕ್ವಾಮ್ ಕೋಟಾ ಸೇವಾ ಟಿಕೆಟ್‌ಗಳನ್ನು ಬಿಡುಗಡೆ ಮಾಡಲು ಸಿದ್ಧವಾಗಿದೆ. ಇದರಿಂದ ತಿರುಪತಿ ತಿಮ್ಮಪ್ಪನ ಆಲಯದಲ್ಲಿ ವಿಶೇಷ ದರ್ಶನವನ್ನು ಹೊಂದಲು ಆಸಕ್ತಿ ಹೊಂದಿರುವ ಭಕ್ತರು ಅಧಿಕೃತ ವೆಬ್‌ಸೈಟ್ ಮೂಲಕ ಟಿಕೆಟ್‌ ಬುಕ್‌ ಮಾಡಬಹುದಾಗಿದೆ. ಇನ್ನು ಅಕ್ಟೋಬರ್‌ ತಿಂಗಳ ಟಿಕೆಟ್‌ ಬುಕ್‌ ಮಾಡಲು ಅವಕಾಶ ನೀಡಿದ್ದು, ಇದಕ್ಕಾಗಿ ಜುಲೈ 18, 2023 ರಿಂದ ಜುಲೈ 20, 2023ರ ತನಕ ಸಮಯ ನಿಗದಿಪಡಿಸಲಾಗಿದೆ.

ಅಕ್ಟೋಬರ್‌ ತಿಂಗಳ ಟಿಕೆಟ್‌ ಬಿಡುಗಡೆಯ ಬಗ್ಗೆ ಪತ್ರಿಕಾ ಪ್ರಕಟಣೆ ನೀಡಿರುವ ಟಿಟಿಡಿ ಅಕ್ಟೋಬರ್ ತಿಂಗಳ ಸುಪ್ರಭಾತಂ, ತೋಮಾಲ, ಅರ್ಚನ, ಅಷ್ಟದಳ ಪದ್ಮಾರಾಧನೆ ಮತ್ತು ಎಲೆಕ್ಟ್ರಾನಿಕ್ ಡಿಪ್ ಟಿಕೆಟ್‌ಗಳು ಟಿಟಿಡಿಯ ಅಧಿಕೃತ ವೆಬ್‌ಸೈಟ್‌ನಲ್ಲಿ ಲಭ್ಯವಿರುತ್ತವೆ ಎನ್ನಲಾಗಿದೆ. ಇನ್ನು ಟಿಕೆಟ್‌ ಬುಕಿಂಗ್‌ ಮಾಡಲು ಟಿಟಿಡಿ ಆನ್‌ಲೈನ್ ಪೋರ್ಟಲ್ ನಲ್ಲಿ ಅವಕಾಶ ಸಿಗಲಿದೆ. ಇದಲ್ಲದೆ ಲಕ್ಕಿ ಡಿಪ್‌ಗಾಗಿ ಟಿಕೆಟ್‌ಗಳನ್ನು ಪಡೆಯುವ ಭಕ್ತರು, ಸಾಧ್ಯವಾದಷ್ಟು ಬೇಗ ಹಣವನ್ನು ಪಾವತಿಸುವ ಮೂಲಕ ಪಡೆದುಕೊಳ್ಳಬಹುದಾಗಿದೆ.

ಜೊತೆಗೆ ಟಿಟಿಡಿಯು ಕಲ್ಯಾಣೋತ್ಸವ, ಆರ್ಜಿತ ಬ್ರಹ್ಮೋತ್ಸವ, ಊಂಜಲ್ ಸೇವೆ, ಸಹಸ್ರದೀಪಾಲಂಕರ ಸೇವೆಯ ಟಿಕೆಟ್‌ಗಳನ್ನು ಜುಲೈ 21, 2023 ರ ಬೆಳಿಗ್ಗೆ 10:00 ಗಂಟೆಗೆ ಬಿಡುಗಡೆ ಮಾಡಲಿದೆ ಎನ್ನಲಾಗಿದೆ. ಹಾಗೆಯೇ ಅಕ್ಟೋಬರ್‌ ತಿಂಗಳ ಅಂಗಪ್ರದಕ್ಷಿಣಂ ಕೋಟಾವನ್ನು ಜುಲೈ 24, 2023ರ ಬೆಳಿಗ್ಗೆ 10:00 ಗಂಟೆಗೆ ಬಿಡುಗಡೆ ಮಾಡಲಿದೆ. ಸದ್ಯ ನೀವು ಕೂಡ ತಿರುಪತಿ ತಿಮ್ಮಪ್ಪನ ದರ್ಶನ ಪಡೆಯಲು ಅಕ್ಟೋಬರ್‌ ತಿಂಗಳ ಟಿಕೆಟ್‌ ಬುಕ್‌ ಮಾಡಲು ಬಯಸಿದರೆ ಈ ಕೆಳಗಿನ ಹಂತಗಳನ್ನು ಅನುಸರಿಸಬೇಕಾಗುತ್ತದೆ.

ತಿರುಪತಿ ಆರ್ಜಿತ ಸೇವಾ ಟಿಕೆಟ್‌ ಬಿಡುಗಡೆಗೊಳಿಸಿದ TTD! ಇಂದಿನಿಂದಲೇ ಬುಕಿಂಗ್‌ !

ಅಕ್ಟೋಬರ್‌ ತಿಂಗಳಲ್ಲಿ ತಿರುಪತಿ ತಿಮ್ಮಪ್ಪನ ದರ್ಶನ ಪಡೆಯುವುದಕ್ಕೆ ಟಿಕೆಟ್‌ ಬುಕ್‌ ಮಾಡುವುದು ಹೇಗೆ?
ಜುಲೈ 18, 2023 ರಿಂದ ಜುಲೈ 20, 2023ರ ನಡುವೆ ಮಾತ್ರ ಈ ಟಿಕೆಟ್‌ ಬುಕ್‌ ಮಾಡಲು ಅವಕಾಶ ನೀಡಿರುವುದರಿಂದ, ಟಿಕೆಟ್‌ ಬುಕ್‌ ಮಾಡಲು ಬಯಸುವವರು ಕೂಡಲೇ ಟಿಕೆಟ್‌ ಬುಕ್‌ ಮಾಡಿಕೊಳ್ಳಿರಿ. ಇದಕ್ಕಾಗಿ ಈ ನಿಯಮಗಳನ್ನು ಅನುಸರಿಸಿ.
ಹಂತ:1 ಮೊದಲಿಗೆ TTD ಅಧಿಕೃತ ವೆಬ್‌ಸೈಟ್‌ tirupatibalaji.ap.gov.in ತೆರೆಯಿರಿ
ಹಂತ:2 ನಂತರ ವೆಬ್‌ಸೈಟ್‌ನ ಹೋಮ್‌ಪೇಜ್‌ನಲ್ಲಿ "ಆನ್‌ಲೈನ್ ಬುಕಿಂಗ್" ಆಯ್ಕೆಯನ್ನು ಟ್ಯಾಪ್‌ ಮಾಡಿರಿ
ಹಂತ:3 ನಂತರ TTD ದರ್ಶನ್ ಬುಕಿಂಗ್ ಆನ್‌ಲೈನ್ ಆಯ್ಕೆಯನ್ನು ಕ್ಲಿಕ್‌ ಮಾಡಿರಿ
ಹಂತ:4 ಇದೀಗ ನೀವು ನಿಮ್ಮ ಲಾಗಿನ್‌ ಐಡಿ ಕ್ರಿಯೆಟ್‌ ಮಾಡಿಕೊಳ್ಳಬೇಕು.
ಹಂತ:5 ನಂತರ ನೀವು ಇಮೇಲ್ ಐಡಿ ಮತ್ತು ಪಾಸ್‌ವರ್ಡ್ ಅನ್ನು ನಮೂದಿಸುವ ಮೂಲಕ ಅಕೌಂಟ್‌ ಕ್ರಿಯೆಟ್‌ ಮಾಡಿರಿ
ಹಂತ:6 ಇದೀಗ ಲಾಗಿನ್‌ ಆಗಿ ಟಿಟಿಡಿ ಟಿಕೆಟ್‌ಗಾಗಿ ಆನ್‌ಲೈನ್ ಬುಕಿಂಗ್ ಫಾರ್ಮ್ ನಲ್ಲಿ ಅಗತ್ಯ ವಿವರಗಳನ್ನು ಭರ್ತಿ ಮಾಡಿರಿ
ಹಂತ:7 ಇದರಲ್ಲಿ ನಿಮಗೆ ದರ್ಶನಕ್ಕೆ ಟಿಕೆಟ್‌ ಲಭ್ಯವಿರುವ ದಿನಾಂಕದ ವಿವರಗಳನ್ನು ತೋರಿಸಲಾಗುತ್ತದೆ
ಹಂತ:8 ಇದರಲ್ಲಿ ನೀವು ದರ್ಶನ ಪಡೆಯಲು ಬಯಸುವ ದಿನಾಂಕವನ್ನು ಆಯ್ಕೆ ಮಾಡಿರಿ ಹಾಗೂ ಟಿಕೆಟ್‌ ಬುಕ್‌ ಮಾಡಿ
ಹಂತ:9 ನಿಮ್ಮ ಟಿಕೆಟ್‌ ಸ್ಲಾಟ್‌ ಬುಕ್‌ ಮಾಡಿದ ನಂತರ ಶುಲ್ಕವನ್ನು ಕ್ರೆಡಿಟ್ ಕಾರ್ಡ್, ಡೆಬಿಟ್ ಕಾರ್ಡ್ ಅಥವಾ ನೆಟ್ ಬ್ಯಾಂಕಿಂಗ್‌ ಮೂಲಕ ಪಾವತಿಸಬಹುದು
ಹಂತ:10 ನೀವು ಟಿಕೆಟ್‌ ಶುಲ್ಕ 300ರೂ. ಅನ್ನು ಪಾವತಿಸಿದ ತಕ್ಷಣವೇ TTD ಟಿಕೆಟ್ ಅನ್ನು ಇಮೇಲ್ ಮೂಲಕ ಅಥವಾ ಟಿಟಿಡಿ ವೆಬ್‌ಸೈಟ್‌ನಿಂದ ಡೌನ್‌ಲೋಡ್ ಮಾಡಿಕೊಳ್ಳಹುದು.

Best Mobiles in India

English summary
TTD is all set to release the Tirumala Srivari Arjita Sevakwam Seva Tickets for October month’s Darshan
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+