Home
ಸುದ್ದಿಜಾಲ

ತುಳುವರಿಗೆ ಖುಷಿ ಸುದ್ದಿ.. ಗೂಗಲ್ ಟ್ರಾನ್ಸ್‌ಲೇಟರ್‌ನಲ್ಲಿ ಬಂತು ತುಳು ಭಾಷೆ

ತುಳುವರಿಗೆ ಗೂಗಲ್ ಖುಷಿ ಸುದ್ದಿಯೊಂದನ್ನು ನೀಡಿದೆ. ಇದು ತುಳುವರು ಸಂಭ್ರಮಪಡುವ ಸಂಗತಿ. ಹೌದು, ಗೂಗಲ್ ಮಹತ್ವದ ಅಪ್ಡೇಟ್‌ ಘೋಷಿಸಿದ್ದು ರಾಜ್ಯದ ಕರವಾಳಿಯ ಪ್ರಮುಖ ಭಾಷೆಯಾದ ತುಳುವಿನಲ್ಲಿ (Tulu) ಗೂಗಲ್ ಟ್ರಾನ್ಸ್‌ಲೇಟ್ ಸೌಲಭ್ಯವನ್ನು ಪ್ರಾರಂಭಿಸಿದೆ. ಗೂಗಲ್ ಟ್ರಾನ್ಸ್‌ಲೇಟರ್‌ನಲ್ಲಿ (Google Translator) ತುಳು ಸೇರ್ಪಡೆಗೊಂಡಿರುವುದು ತುಳು ಭಾಷೆಗೆ ವಿಶ್ವಮಟ್ಟದಲ್ಲಿ ಸಂದ ಗೌರವವಾಗಿದೆ. ಗೂಗಲ್‌ನ ಈ ಪ್ರಯತ್ನಕ್ಕೆ ತುಳು ಭಾಷಿಕರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಇದರೊಂದಿಗೆ ಗೂಗಲ್ ಅನುವಾದವು ಈಗ ವಿಶ್ವದ ಒಟ್ಟು 243 ಭಾಷೆಗಳಲ್ಲಿ ಲಭ್ಯವಿದೆ.

ಹೌದು, ಟೆಕ್ ದೈತ ಗೂಗಲ್ ಇನ್ನು ಮುಂದೆ 110 ಹೊಸ ಭಾಷೆಗಳಲ್ಲಿ ಅನುವಾದ ಮಾಡಿಕೊಳ್ಳಲು ಅವಕಾಶ ಮಾಡಿಕೊಟ್ಟಿದೆ. ಈ ಹಿಂದೆ ದೇಶ ವಿದೇಶದ 133 ಭಾಷೆಗಳಿಗೆ ಮಾತ್ರ ಗೂಗಲ್ ಅವಕಾಶ ಮಾಡಿಕೊಟ್ಟಿತ್ತು. ಅವಕಾಶವನ್ನು ಈ ಬಾರಿ ಹೊಸ ಭಾಷೆಗಳ ಆಗಮನದಲ್ಲಿ ಅವಿಭಜಿತ ಜಿಲ್ಲೆಯಲ್ಲಿರುವ ಪ್ರಮುಖ ಭಾಷೆ ತುಳುವಿಗೂ ಮನ್ನಣೆ ಸಿಕ್ಕಿದೆ.

ತುಳುವರಿಗೆ ಖುಷಿ ಸುದ್ದಿ.. ಗೂಗಲ್ ಟ್ರಾನ್ಸ್‌ಲೇಟರ್‌ನಲ್ಲಿ ಬಂತು ತುಳು ಭಾಷೆ

ಗೂಗಲ್ ಟ್ರಾಲ್ಸ್‌ಲೇಟರ್ ವಿಶ್ವದಾದ್ಯಂತ ಬಹಳಷ್ಟು ಜನಪ್ರಿಯವಾಗಿದೆ. ಇದಕ್ಕೆ ಕಾರಣ ಅಂದ್ರೆ ಗೂಗಲ್ ಹೊಂದಿರುವ ಅತ್ಯುತ್ತಮ ಭಾಷಾ ಅನುವಾದ ಫೀಚರ್ಸ್‌ಗಳು. ಗೂಗಲ್ ಟ್ರಾನ್ಸ್‌ಲೇಟರ್‌ನಲ್ಲಿ ಈವರೆಗೆ ಕನ್ನಡ, ಹಿಂದಿ, ತೆಲುಗು ಸೇರಿದಂತೆ ದೇಶದ ಪ್ರಮುಖ ಭಾಷೆಗಳ ಅನುವಾದ ಸೌಲಭ್ಯ ಮಾತ್ರ ಲಭ್ಯವಾಗುವಂತೆ ಮಾಡಿತ್ತು. ಇದೀಗ ಗೂಗಲ್ ಟ್ರಾನ್ಸ್ ಲೇಟರ್ ಪಟ್ಟಿಗೆ ತುಳು ಭಾಷೆಯೂ ಸಹ ಸೇರ್ಪಡೆಯಾಗಿದೆ. ಈ ಮೂಲಕ ಟೆಕ್ ದೈತ ಗೂಗಲ್ ನಲ್ಲಿ ತುಳುವಿಗೂ ಗೌರವ ಸಿಕ್ಕಂತಾಗಿದೆ. ಈ ವಿಷಯ ತುಳುವರಿಗೆ ಎಲ್ಲಿಲ್ಲದ ಸಂತೋಷವನ್ನು ನೀಡಿದೆ.

ಅನ್ಯ ಭಾಷಿಗರೂ ಅರ್ಥಮಾಡಿಕೊಳ್ಳಬಹುದು

ಗೂಗಲ್ ಟ್ರಾನ್ಸ್‌ಲೇಟರ್‌ ಪಟ್ಟಿಯಲ್ಲಿ ತುಳು ಭಾಷೆಗೂ ಮಾನ್ಯತೆ ಲಭಿಸಿದ್ದು, ಇದು ತುಳು ಭಾಷಾ ಪ್ರೇಮಿಗಳಲ್ಲಿ ಸಂತಸವನ್ನು ತಂದಿದೆ. ಇನ್ಮುಂದೆ ತುಳು ಭಾಷಿಗರು ಇಂಗ್ಲಿಷ್ ಅಥವಾ ಬೇರೆ ಯಾವುದೇ ಪದಗಳನ್ನು ಗೂಗಲ್ ಅನುವಾದದಲ್ಲಿ ನೇರವಾಗಿ ತುಳಿವಿನಲ್ಲಿಯೇ ಅರ್ಥ ಮಾಡಿಕೊಳ್ಳಬಹುದು. ಇದಲ್ಲದೆ, ಇದು ಅನ್ಯ ಭಾಷಿಕರಿಗೂ ತುಳು ಪದಗಳನ್ನು (ಭಾಷೆ) ಅರ್ಥ ಮಾಡಿಕೊಳ್ಳುವುದಕ್ಕೆ ಅನುಕೂಲವಾಗಿದೆ.

'ಎಂಚ ಉಲ್ಲರ್' ಎಂದ ಗೂಗಲ್: ಪೋಸ್ಟ್ ವೈರಲ್

ಗೂಗಲ್ ಟ್ರಾನ್ಸ್‌ಲೇಟರ್‌ನಲ್ಲಿ ತುಳು ಸೇರ್ಪಡೆಯಾಗಿರುವ ಪೋಸ್ಟ್ ಒಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. @trollbogra ಎಂಬ ಇನ್ಸ್ಟಾಗ್ರಾಂ ಅಕೌಂಟ್ ನಲ್ಲಿ ಈ ಪೋಸ್ಟ್ ಹಂಚಿಕೊಳ್ಳಲಾಗಿದೆ. 'ಗೂಗಲ್ ಟ್ರಾನ್ಸ್‌ಲೇಟರ್‌ಗೂ ಬಂದ ತುಳು ಭಾಷೆ' ಎಂಬ ಟೈಟಲ್ ಅನ್ನು ನೀಡಿದೆ. ವೈರಲ್ ಆಗಿರುವ ಈ ಪೋಸ್ಟ್ ನಲ್ಲಿ ಗೂಗಲ್ ಅನುವಾದದಲ್ಲಿ How Are You (ಹೇಗಿದ್ದೀರಾ?) ಪದವನ್ನು 'ಯೀರ್ ಎಂಚ ಉಲ್ಲರ್' ಎಂದು ತುಳು ಭಾಷೆಗೆ ಅನುವಾದ ಮಾಡಿರುವುದನ್ನು ನೋಡಬಹುದಾಗಿದೆ.

ಗೂಗಲ್‌ನಲ್ಲಿ ಭಾಷೆ ಸೇರ್ಪಡೆ ಹೇಗೆ?

ನ್ಯಾಚುರಲ್‌ ಲ್ಯಾಂಗೇಜ್‌ ಪ್ರಾಸೆಸಿಂಗ್‌ ಆಧಾರದಲ್ಲಿ ಗೂಗಲ್‌ನಲ್ಲಿ ಭಾಷೆಗಳನ್ನು ಸೇರಿಸಲಾಗುತ್ತದೆ. ಇದರಲ್ಲಿ ಎರಡು ವಿಧಗಳಿವೆ. ರೂಲ್‌ ಬೇಸ್ಡ್ ಹಾಗೂ ಸ್ಟಾಟಿಸ್ಟಿಕಲ್‌ ಬೇಸ್ಡ್. ಸ್ಟಾಟಿಸ್ಟಿಕಲ್‌ ಬೇಸ್‌ ಆಗಿದ್ದರೆ ಅದಕ್ಕೆ ಅಗಾಧವಾದ ಸಾಮಗ್ರಿ(ಕಾರ್ಪಸ್‌) ಬೇಕಾಗುತ್ತದೆ. ನಾಮಪದ, ಕ್ರಿಯಾಪದ ಇತ್ಯಾದಿ ಸೇರಿಕೊಂಡು ಸುಮಾರು 20 ಲಕ್ಷದಷ್ಟು ವಾಕ್ಯಗಳ ಅನುವಾದವನ್ನು ಮೆಷಿನ್‌ ಲರ್ನಿಂಗ್‌ಗೆ ಪೂರಕವಾಗಿ ಫೀಡ್‌ ಮಾಡಲಾಗುತ್ತದೆ. ಬಳಿಕ ಇದನ್ನು ಮೆಷಿನ್‌ ಅರಿತುಕೊಂಡು ಭಾಷಾಂತರ ಮಾಡುತ್ತದೆ. ಇದನ್ನು ಬಳಕೆ ಮಾಡಿಕೊಂಡಷ್ಟೂ ಸುಧಾರಣೆಯಾಗುತ್ತಾ ಹೋಗುತ್ತದೆ.

ಗೂಗಲ್‌ನಲ್ಲಿ ಭಾಷೆ ಆಯ್ಕೆ ಹೇಗೆ ಮಾಡಬೇಕು?

ಡೆಸ್ಕ್‌ಟಾಪ್ ನಲ್ಲಿ translate.google.co.in ಗೆ ಹೋಗಿ ಭಾಷೆಯನ್ನು ಆಯ್ಕೆ ಮಾಡಬಹುದು. ಮೊಬೈಲ್ ಬಳಕೆದಾರರು ಗೂಗಲ್ ಟ್ರಾನ್ಸ್‌ಲೇಟ್ ಆಪ್ ಡೌನ್‌ಲೋಡ್ ಅಥವಾ ಡೆಸ್ಕ್‌ಟಾಪ್ ಯುಆರ್‌ಎಲ್ ಲಿಂಕ್ ಬಳಸಿ ಭಾಷಾಂತರ ಮಾಡಬಹುದು. ಹಲವು ಪದಗಳು ನಿಖರವಾಗಿ ತುಳುವಿಗೆ ಅನುವಾದವಾದರೂ ಕೆಲವೊಂದು ಪದಗಳು ಸರಿಯಾಗಿ ಅನುವಾದವಾಗೇಬೇಕಿದೆ. ಕನ್ನಡ ಭಾಷೆಯನ್ನು ಆರಂಭದಲ್ಲಿ ಟ್ರಾನ್ಸ್‌ಲೇಟ್‌ಗೆ ಸೇರಿಸಿದಾಗಲೂ ಕೆಲವೊಂದು ಪದಗಳು ಸರಿಯಾಗಿ ಅನುವಾದವಾಗುತ್ತಿರಲಿಲ್ಲ. ಹಂತ ಹಂತವಾಗಿ ಗೂಗಲ್ ಇದನ್ನು ಸರಿಪಡಿಸುತ್ತಾ ಬಂದಿದೆ.

110 ಹೊಸ ಭಾಷೆಗಳ ಸೇರ್ಪಡೆ

ಗೂಗಲ್ ಟ್ರಾನ್ಸ್​ಲೇಟ್​ಗೆ ಕ್ಯಾಂಟೊನೀಸ್, ಎನ್​ಕೊ (NKo) ಮತ್ತು ತಮಾಜೈಟ್ ಸೇರಿದಂತೆ 110 ಹೊಸ ಭಾಷೆಗಳನ್ನು ಸೇರಿಸಿರುವುದಾಗಿ ಗೂಗಲ್ ಗುರುವಾರ ಘೋಷಿಸಿದೆ. ವಿಶ್ವದಲ್ಲಿ ಈ ಭಾಷೆಗಳನ್ನು ಮಾತನಾಡುವ 614 ಮಿಲಿಯನ್ ಜನರಿದ್ದಾರೆ. ಇವರು ವಿಶ್ವದ ಒಟ್ಟಾರೆ ಜನಸಂಖ್ಯೆಯ ಶೇ 8ರಷ್ಟಿದ್ದಾರೆ. ಈ ಭಾಷೆಗಳ ಪೈಕಿ ಸುಮಾರು ಕಾಲು ಭಾಗದಷ್ಟು ಹೊಸ ಭಾಷೆಗಳು ಆಫ್ರಿಕಾ ವಲಯದ್ದಾಗಿವೆ. ಇದರಲ್ಲಿ ಫೋನ್, ಕಿಕೊಂಗೊ, ಲುವೊ, ಗಾ, ಸ್ವಾತಿ, ವೆಂಡಾ ಮತ್ತು ವೊಲೊಫ್ ಭಾಷೆಗಳಿವೆ.

1,000 ಭಾಷೆ ಬೆಂಬಲಿಸುವ ಎಐ ಮಾದರಿ

ಈ ಬಗ್ಗೆ ಗೂಗಲ್ ಕಂಪನಿ ಪ್ರತಿಕ್ರಿಯೆ ನೀಡಿದೆ. ನಾವು 1,000 ಭಾಷೆಗಳ ಉಪಕ್ರಮವನ್ನು ಘೋಷಿಸಿದ್ದೇವೆ. ಇದು ವಿಶ್ವದಾದ್ಯಂತ ಹೆಚ್ಚು ಮಾತನಾಡುವ 1,000 ಭಾಷೆಗಳನ್ನು ಬೆಂಬಲಿಸುವ ಎಐ ಮಾದರಿಗಳನ್ನು ನಿರ್ಮಿಸುವ ಬದ್ಧತೆಯನ್ನು ಪ್ರತಿಬಿಂಬಿಸುತ್ತದೆ ಎಂದು ತಿಳಿಸಿದೆ. ಈಗ ಸೇರ್ಪಡೆಯಾದ ಹೊಸ ಭಾಷೆಗಳಲ್ಲಿ ಪಂಜಾಬಿ (ಶಹಮುಖಿ) ಕೂಡ ಸೇರಿದೆ. ಇದು ಪರ್ಸೊ-ಅರೇಬಿಕ್ ಲಿಪಿಯಲ್ಲಿ ಬರೆಯಲಾಗುವ ಪಂಜಾಬಿ ಭಾಷೆಯ ವೈವಿಧ್ಯವಾಗಿದೆ ಮತ್ತು ಪಾಕಿಸ್ತಾನದಲ್ಲಿ ಹೆಚ್ಚು ಮಾತನಾಡುವ ಭಾಷೆಯಾಗಿದೆ.

ಉಚಿತ ಭಾಷಾ ಅನುವಾದ ಸಾಧನ

ಗೂಗಲ್ ಟ್ರಾನ್ಸ್​ಲೇಟ್ ಅಥವಾ ಗೂಗಲ್ ಭಾಷಾಂತರ​ ಇದು ಗೂಗಲ್​ನ ಉಚಿತ ಭಾಷಾ ಅನುವಾದ ಸಾಧನವಾಗಿದೆ. ಇದು ಬಳಕೆದಾರರಿಗೆ ಪದಗಳು, ನುಡಿಗಟ್ಟುಗಳು, ಪಠ್ಯಗಳು ಮತ್ತು ಸಂಪೂರ್ಣ ವೆಬ್ ಪುಟಗಳನ್ನು ವಿವಿಧ ಭಾಷೆಗಳ ನಡುವೆ ಭಾಷಾಂತರಿಸಲು ಅನುವು ಮಾಡಿಕೊಡುತ್ತದೆ.

ಒಟ್ನಲ್ಲಿ, ಕ್ಷಣಾರ್ಧದಲ್ಲಿ ಯಾವುದೇ ಭಾಷೆಯ ಪದಗಳನ್ನು ಭಾಷಾಂತರಿಸಬಲ್ಲ ಗೂಗಲ್‌ ಟ್ರಾನ್ಸ್‌ಲೇಟರ್‌ಗೆ ಇದೀಗ ತುಳು ಭಾಷೆ ಕೂಡ ಸೇಪರ್ಡೆಯಾಗಿದೆ. ಈಗ ಗೂಗಲ್‌ ಅನುವಾದದಲ್ಲಿ ಕನ್ನಡ, ಇಂಗ್ಲೀಷ್‌ ಸೇರಿದಂತೆ ಯಾವುದೇ ಭಾಷೆಯ ಪದಗಳನ್ನು ತುಳುವಿಗೆ ಭಾಷಾಂತರಿಸಿಕೊಳ್ಳಬಹುದಾದ ಆಯ್ಕೆ ದೊರಕಿದೆ. ಈ ಒಂದು ಖುಷಿಯ ವಿಚಾರ ತುಳುವರಿಗೆ ಸಂತಸ ತಂದಿದೆ. ಇಂದು ಮುಂಜಾನೆ ಹಂಚಿಕೊಳ್ಳಲಾದ ಈ ಪೋಸ್ಟ್‌ 3 ಸಾವಿರಕ್ಕೂ ಅಧಿಕ ವೀಕ್ಷಣೆಗಳನ್ನು ಪಡೆದುಕೊಂಡಿದ್ದು, ಈ ಒಂದು ವಿಚಾರ ತುಳುವರಿಗೆ ಖುಷಿ ಕೊಟ್ಟಿರುವುದಂತೂ ಸುಳ್ಳಲ್ಲ.

Best Mobiles in India

English summary
Tulu in Google Translator: Tuluvas in coast overjoyed as Tulu is included in Google Translate
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+