ಟುಟನ್ಖಮುನ್ ಮಮ್ಮಿ ಪತ್ತೆ ಮಾಡಿದವನ ಡೂಡಲ್

By Varun
|

ಟುಟನ್ಖಮುನ್ ಮಮ್ಮಿ ಪತ್ತೆ ಮಾಡಿದವನ ಡೂಡಲ್
ಪ್ರಾಚೀನ ಜಗತ್ತಿನ 7 ಅದ್ಭುತಗಳಲ್ಲಿ, ನಾಶವಾಗದೆ ಇವತ್ತಿಗೂ ಉಳಿದುಕೊಂಡಿರುವ ಏಕೈಕ ಅದ್ಭುತವೆಂದರೆ ಅದು ಈಜಿಪ್ಟಿನ ಪಿರಮಿಡ್ಡುಗಳು. ಹಲವಾರು ಸಾವಿರ ವರುಷಗಳ ಹಿಂದೆ ಈಜಿಪ್ಟ್ ದೇಶವನ್ನು ಆಳಿದ ಫಾರೋಗಳ ಮಮ್ಮಿಗಳನ್ನು ಈ ಪಿರಮಿಡ್ಡುಗಳ ಒಳಗೆ ಸುರಕ್ಷಿತವಾಗಿ ಇಡಲಾಗುತ್ತಿತ್ತು. ಈ ರಾಜರು ಸತ್ತ ನಂತರವೂ ಅವನಿಗೆ ಯಾವ ತೊಂದರೆಯೂ ಆಗಬಾರದೆಂದು ಆ ಮಮ್ಮಿಗಳ ಜೊತೆ ಅಪಾರ ಪ್ರಮಾಣದ ನಿಧಿಯನ್ನೂ ಇಡಲಾಗುತ್ತಿತ್ತು.

ಅಂತಹ ನಿಧಿ ಇರುವುದರಿಂದಲೇ ಹಲವಾರು ಕಳ್ಳಕಾಕರು, ನಿಧಿ ಸಂಶೋಧಕರು ಹಾಗು ಪುರಾತತ್ವಶಾಸ್ತ್ರಜ್ಞರನ್ನು ಈ ಪಿರಮಿಡ್ಡುಗಳನ್ನು ಸೆಳೆದವು. ಅದರಲ್ಲೂ ಈಜಿಪ್ಟಿನ ಅತ್ಯಂತ ಕಿರಿಯ ದೊರೆಯಾಗಿ ಪಟ್ಟಾಭಿಷೇಕಗೊಂಡಿದ್ದ ಟುಟನ್ಖಮುನ್ ದೊರೆಯ ಸಮಾಧಿಯಂತೂ ಹಲವಾರು ನಿಧಿಶೋಧಕರಿಗೆ ಹಾಗು ಪುರಾತತ್ವಶಾಸ್ತ್ರಜ್ಞರಿಗೆ ಸಾಕಷ್ಟು ಕುತೂಹಲ ಕೆರಳಿಸಿತ್ತು.

ಇಂತಹ ಅತ್ಯಂತ ಫೇಮಸ್ ರಾಜನ ಸಮಾಧಿಯನ್ನು ಪತ್ತೆ ಹಚ್ಚಿದ ಪುರಾತತ್ವಶಾಸ್ತ್ರಜ್ಞ ಹೊವಾರ್ಡ್ ಕಾರ್ಟರ್ ನ 138 ನೇ ಜನ್ಮದಿನವಾದ ಇಂದು, ಗೂಗಲ್ ಈತನ ಡೂಡಲ್ ಒಂದನ್ನು ಪ್ರಕಟಿಸಿದೆ. ಜಾನ್ ಹವಾರ್ಡ್, ಟುಟನ್ಖಮುನ್ ನ ಮಮ್ಮಿಯನ್ನು ಪತ್ತೆ ಹಚ್ಚಿದ್ದು 1922 ರಲ್ಲಿ. ಪತ್ತೆ ಮಾಡಿದ್ದೇ ಮಾಡಿದ್ದು, ಈತ ವಿಶ್ವಖ್ಯಾತಿಯಾದ. ಈತನ ಸಾಹಸ ಹಾಗು ಜೀವನಗಾಥೆಯನ್ನು ಆಧರಿಸಿ ಹಲವಾರು ಚಲನಚಿತ್ರಗಳು ಬಂದಿವೆ.

ಟುಟನ್ಖಮುನ್ ನ ಗೋರಿಯ ಮುಂದೆ ನಿಂತಿರುವ ಹೊವಾರ್ಡ್ ಕಾರ್ಟರ್ ಡೂಡಲ್ ಅನ್ನು ನೋಡಲು ಈಗಲೇ ಗೂಗಲ್ ಗೆ ಹೋಗಿ.

Best Mobiles in India

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X