Home
ಸುದ್ದಿಜಾಲ

ಬಳಕೆದಾರರಿಗೆ ಸಾಕಷ್ಟು ಉಪಯುಕ್ತ ಫೀಚರ್ಸ್‌ ಪರಿಚಯಿಸಿದ ಟ್ವಿಟರ್‌!

ಜನಪ್ರಿಯ ಮೈಕ್ರೋಬ್ಲಾಗ್ಲಿಂಗ್‌ ಸೈಟ್‌ ಟ್ವಿಟರ್‌ ತನ್ನ ಬಳಕೆದಾರರಿಗೆ ಹೊಸ ಫೀಚರ್ಸ್‌ ಅನ್ನು ಪರಿಚಯಿಸಿದೆ. ಈ ಫೀಚರ್ಸ್‌ ಮೂಲಕ ಬಳಕೆದಾರರು ಯಾವುದೇ ಗ್ರೂಪ್‌ ಕ್ರಿಯೆಟ್‌ ಮಾಡದೇ ಒಂದೇ ಸಮಯದಲ್ಲಿ ಹಲವಾರು ಖಾತೆಗಳಿಗೆ ಡೈರೆಕ್ಟ್‌ ಮೆಸೇಜ್‌ಗಳನ್ನು ಕಳುಹಿಸಬಹುದಾಗಿದೆ. ಈ ಹಿಂದೆ, ಬಳಕೆದಾರರು ನೇರ ಸಂದೇಶವನ್ನು ಕಳುಹಿಸುವ ಮೊದಲು ಹಲವಾರು ಖಾತೆಗಳನ್ನು ಆರಿಸಿದರೆ, ಟ್ವಿಟರ್ ಒಂದು ಗ್ರೂಪ್‌ ಅನ್ನು ಕ್ರಿಯೆಟ್‌ ಮಾಡುತ್ತದೆ. ಬಳಕೆದಾರರು ಪ್ರತಿ ಖಾತೆಗೆ ಪ್ರತ್ಯೇಕವಾಗಿ ಅಥವಾ ಹೊಸ ಅಪ್‌ಡೇಟ್‌ನೊಂದಿಗೆ ಗುಂಪಾಗಿ ಸಂದೇಶವನ್ನು ಕಳುಹಿಸಬೇಕೇ ಎಂಬುದನ್ನು ಆಯ್ಕೆ ಮಾಡುವ ಆಯ್ಕೆ ಇದೆ.

ಟ್ವಿಟರ್‌

ಹೌದು, ಟ್ವಿಟರ್‌ ತನ್ನ ಬಳಕೆದಾರರಿಗೆ ಏಕಕಾಲದಲ್ಲಿ ಹಲವಾರು ಖಾತೆಗಳಿಗೆ ಡೈರೆಕ್ಟ್‌ ಮೆಸೇಜ್‌ ಕಳುಹಿಸಲು ಅನುಮತಿಸುತ್ತದೆ. ಈ ಹೊಸ ಕ್ರಿಯಾತ್ಮಕತೆಯೊಂದಿಗೆ, ಟ್ವಿಟರ್‌ ಏಕಕಾಲದಲ್ಲಿ 20 ವಿಭಿನ್ನ ಚಾಟ್‌ಗಳಿಗೆ ಸಂದೇಶವನ್ನು ತಲುಪಿಸಲು ಅನುಮತಿಸುತ್ತದೆ. ಇದರಿಂದ "ನೀವು ಹೆಚ್ಚಿನ ಜನರಿಗೆ ಟ್ವೀಟ್ ಮಾಡಿದಾಗ, ಇನ್ನು ಮುಂದೆ ಗುಂಪು ಸಂಭಾಷಣೆಗಳು ಇರುವುದಿಲ್ಲ. ಹಾಗಾದ್ರೆ ಟ್ವಿಟರ್‌ನ ಈ ಹೊಸ ಫೀಚರ್ಸ್‌ ವಿಶೇಷತೆ ಏನು ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತಿವಿ ಓದಿರಿ.

ಟ್ವೀಟ್

ಟ್ವಿಟರ್‌ನಲ್ಲಿ ಬಳಕೆದಾರರು ಇದೀಗ ಒಂದೇ ಟ್ವೀಟ್ ಅನ್ನು ಏಕಕಾಲದಲ್ಲಿ 20 ವಿವಿಧ ಡಿಎಂ ಕನ್ವೊಗಳಲ್ಲಿ ಹಂಚಿಕೊಳ್ಳಬಹುದು. ಈ ಹೊಸ ವೈಶಿಷ್ಟ್ಯದ ಹೊರತಾಗಿ, ಟ್ವಿಟರ್ ನೇರ ಸಂದೇಶಗಳನ್ನು ಸುಧಾರಿಸುತ್ತಿದೆ ಮತ್ತು ವಿಸ್ತರಿಸುತ್ತಿದೆ. ಅಂದರೆ ಪ್ರತಿ ಸಂಭಾಷಣೆಯಲ್ಲಿ, ಬಳಕೆದಾರರು ಈಗ ಇತ್ತೀಚೆಗೆ ನೀಡಿದ ಸಂದೇಶಕ್ಕೆ ನ್ಯಾವಿಗೇಟ್ ಮಾಡುವ ಆಯ್ಕೆಯನ್ನು ನೋಡುತ್ತಾರೆ. ಸಂದೇಶವನ್ನು ಲಾಂಗ್‌ ಪ್ರೆಸ್‌ ಮಾಡುವ ಮೂಲಕ ಪ್ರತಿಕ್ರಿಯಿಸುವ ಸಾಮರ್ಥ್ಯವನ್ನು ಬಳಕೆದಾರರು ಗಮನಿಸುತ್ತಾರೆ. ಅಲ್ಲದೆ ದಿನಾಂಕವನ್ನು ಆಧರಿಸಿ ಚರ್ಚೆಯನ್ನು ಕಂಡುಹಿಡಿಯುವುದು ಈಗ ಸರಳವಾಗಿದೆ.

ಟ್ವಿಟರ್

ಇದಲ್ಲದೆ ನೀವು ಚಾಟ್ ಅನ್ನು ಸ್ಕ್ರಾಲ್ ಮಾಡುವಾಗ, ಹೊಸ ತ್ವರಿತ-ಸ್ಕ್ರಾಲ್ ಬಟನ್ ಕೆಳಮುಖ ಬಾಣವು ನಿಮಗೆ ಇತ್ತೀಚಿನ ಸಂದೇಶಕ್ಕೆ ಹೋಗಲು ಅವಕಾಶ ನೀಡುತ್ತದೆ ಎಂದು ಟ್ವಿಟರ್ ಹೇಳಿದೆ. ಈ ವೈಶಿಷ್ಟ್ಯವು ಆಂಡ್ರಾಯ್ಡ್ ಮತ್ತು ಐಒಎಸ್ ಬಳಕೆದಾರರಿಗೆ ಲಭ್ಯವಿದೆ. ಈ ವರ್ಷದ ಆರಂಭದಲ್ಲಿ, ಮೈಕ್ರೋಬ್ಲಾಗಿಂಗ್ ಪ್ಲಾಟ್‌ಫಾರ್ಮ್ ಭಾರತದಲ್ಲಿ 140 ಸೆಕೆಂಡುಗಳವರೆಗೆ ನೇರ ಸಂದೇಶಗಳಲ್ಲಿ (ಡಿಎಂ) ಧ್ವನಿ ಸಂದೇಶಗಳನ್ನು ಪರೀಕ್ಷಿಸುವುದಾಗಿ ಘೋಷಿಸಿತು.

ಟ್ವಿಟರ್

ಇನ್ನು ಟ್ವಿಟರ್ ಪ್ರಕಾರ, ಹೊಸ ಡಿಎಂ ಫೀಚರ್ಸ್‌ಗಳನ್ನು ಈಗ ಐಒಎಸ್ ಬಳಕೆದಾರರಿಗಾಗಿ ಆರಂಭಿಸಲಾಗಿದೆ. ಅಲ್ಲದೆ ಶೀಘ್ರದಲ್ಲೇ ಆಂಡ್ರಾಯ್ಡ್ ಬಳಕೆದಾರರಿಗೆ ಲಭ್ಯವಾಗಲಿದೆ. ಇದಲ್ಲದೆ ಟ್ವಿಟರ್‌ ಇತ್ತೀಚೆಗೆ ಭಾರತದಲ್ಲಿ ಗೌಪ್ಯತೆಗೆ ಸಂಬಂಧಿಸಿದ ಹಲವಾರು ವಿಚಾರಗಳಲ್ಲಿ ಸುದಾರಣೆಯನ್ನು ಕಾಣುತ್ತಿದೆ. ಜೊತೆಗೆ ಟ್ವಿಟರ್ ಆಗಸ್ಟ್ 19 ರಂದು ಬ್ಲಾಗ್ ಪೋಸ್ಟ್‌ನಲ್ಲಿ ಟ್ವಿಟರ್ ಬ್ಲೂ, ಟ್ವಿಟರ್ ಸ್ಪೇಸ್‌ಗಳು ಮತ್ತು ಪಾವತಿ ಸೇವೆಗಳನ್ನು ಒಳಗೊಂಡಂತೆ ತನ್ನ ಗೌಪ್ಯತೆ ನೀತಿಗಳಲ್ಲಿ ಮಾರ್ಪಾಡುಗಳನ್ನು ಗುರುತಿಸಿದೆ.

ಟ್ವಿಟರ್

ಇದಲ್ಲದೆ ಟ್ವಿಟರ್ ಹೊಸದಾಗಿ ಅಪ್‌ವೋಟ್ ಮತ್ತು ಡೌನ್‌ವೋಟ್ ಪ್ರತಿಕ್ರಿಯೆಗಳನ್ನು ಪರೀಕ್ಷಿಸುತ್ತಿದೆ ಎನ್ನಲಾಗಿದೆ. ಈ ಫೀಚರ್ಸ್‌ ಪ್ರಸ್ತುತ ಐಒಎಸ್ ಬಳಕೆದಾರರಿಗೆ ಮಾತ್ರ ಗೋಚರಿಸುತ್ತದೆ ಎಂದು ಕಂಪನಿ ದೃಡಪಡಿಸಿದೆ. ಆದ್ದರಿಂದ, ಆಂಡ್ರಾಯ್ಡ್ ಬಳಕೆದಾರರು ಇದನ್ನು ಪರೀಕ್ಷಿಸಲು ಸ್ವಲ್ಪ ಸಮಯ ಕಾಯಬೇಕಾಗಬಹುದು. ಈ ಹೊಸ ಫೀಚಸರ್ಸ್‌ನಿಂದ ನಿಮ್ಮ "ವಾಯ್ಸ್‌ ಪಿಚ್ ಅನ್ನು ಬದಲಾಯಿಸಲು ಅಥವಾ ನಿಮ್ಮ ಆಡಿಯೊಗೆ ಬೇಸ್‌ಸೌಂಡ್‌ ಸೇರಿಸಲು" ಇದು ನಿಮಗೆ ಅವಕಾಶ ನೀಡುತ್ತದೆ ಎನ್ನಲಾಗಿದೆ.

ಟ್ವಿಟರ್‌

ಇದಲ್ಲದೆ ಡೌನ್‌ವೋಟ್‌ಗಳು ಸಾರ್ವಜನಿಕವಾಗಿರುವುದಿಲ್ಲ ಎಂದು ಟ್ವಿಟರ್‌ ಬಹಿರಂಗಪಡಿಸಿದೆ. ಇದು ಇತರರಿಗೆ ಸಾರ್ವಜನಿಕವಾಗಿ ನಾಚಿಕೆಪಡದೆ ಪ್ರತ್ಯುತ್ತರಗಳ ಬಗ್ಗೆ ತಮ್ಮ ಅಭಿಪ್ರಾಯವನ್ನು ಖಾಸಗಿಯಾಗಿ ಧ್ವನಿಸುವ ಶಕ್ತಿಯನ್ನು ನೀಡುತ್ತದೆ ಮತ್ತು ನಮಗೆ ಹೆಚ್ಚು ಸೂಕ್ಷ್ಮ ಪ್ರತಿಕ್ರಿಯೆಯನ್ನು ನೀಡುತ್ತದೆ ಎಂದು ಟ್ವಿಟ್ಟರ್‌ನ ಬಳಕೆದಾರ ಸಂಶೋಧಕ ಕೋಡಿ ಎಲಾಮ್ ಟ್ವೀಟ್‌ಗಳ ಎಳೆಯಲ್ಲಿ ಹೇಳಿದ್ದಾರೆ.

Best Mobiles in India

English summary
According to Twitter, the new DMs features are now being rolled out for iOS users initially and will be available to Android users soon.to know more visit to kannada.gizbot.com
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+