Home
ಸುದ್ದಿಜಾಲ

ಟ್ವಿಟರ್‌ನಲ್ಲಿ 'X' ವೀಡಿಯೊ ಟ್ರೆಂಡ್‌! ಟ್ವಿಟರ್‌ನ ನೀಲಿ ಹಕ್ಕಿ ಹೋಗಿ X ಬಂದಿದ್ದು ಯಾಕೆ?

ಟೆಸ್ಲಾ ಕಂಪೆನಿಯ ಸಂಸ್ಥಾಪಕ ಎಲೋನ್ ಮಸ್ಕ್ ಟ್ವಿಟರ್‌ ಅನ್ನು ಖರೀದಿಸಿದ ನಂತರ ಟ್ವಿಟರ್‌ನಲ್ಲಿ ಒಂದಿಲ್ಲೊಂದು ಬದಲಾವಣೆ ನಡೆಯುತ್ತಲೇ ಇದೆ. ಇದೀಗ ಟ್ವಿಟರ್‌ ಬಳಕೆದಾರರು ಊಹೆ ಮಾಡದ ರೀತಿಯಲ್ಲಿ ಟ್ವಿಟರ್‌ ಲೋಗೋವನ್ನು ಬದಲಾಯಿಸಲಾಗಿದೆ. ಇಷ್ಟು ದಿನ ನೀಲಿ ಹಕ್ಕಿ ಮೂಲಕ ಗುರುತಿಸಿಕೊಳ್ಳುತ್ತಿದ್ದ ಟ್ವಿಟರ್‌ ಇನ್ಮುಂದೆ "X" ಲೋಗೋದಿಂದ ಕಾಣಿಸಲಿದೆ.

ಹೌದು, ಟ್ವಿಟರ್‌ ಇದೀಗ "X" ಆಗಿ ಬದಲಾಗಿದೆ. ನೀಲಿ ಹಕ್ಕಿಯಿಂದ ಬ್ಲ್ಯಾಕ್‌ ಬ್ಯಾಕ್‌ಗ್ರೌಂಡ್‌ನಲ್ಲಿ ಬಿಳಿ ಬಣ್ಣದ "X" ಲೋಗೋ ಆಗಿ ಬದಲಾಗಿದೆ. ಈ ಮೂಲಕ ಟ್ವಿಟರ್‌ನಲ್ಲಿಯೇ ಟ್ವಿಟರ್‌ ಲೋಗೋ ಕುರಿತ ಸುದ್ದಿ ಭಾರಿ ಟ್ರೆಂಡ್‌ ಆಗಿದೆ. ಹಾಗಾದ್ರೆ ಎಲೋನ್‌ ಮಸ್ಕ್‌ ಟ್ವಿಟರ್‌ ಲೋಗೋ ಬದಲಾಯಿಸಿದ್ದರೆ ಹಿನ್ನಲೆ ಏನು? ಇದರ ವಿಶೇಷತೆ ಏನು ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತೀವಿ ಓದಿರಿ.

ಟ್ವಿಟರ್‌ನಲ್ಲಿ 'X' ವೀಡಿಯೊ ಟ್ರೆಂಡ್‌! ನೀಲಿ ಹಕ್ಕಿ ಹೋಗಿ X ಬಂದಿದ್ದು ಯಾಕೆ?

ಟ್ವಿಟರ್‌ ಅನ್ನು ನೀವು ಇದೀಗ ತೆರೆದರೆ ನಿಮಗೆ ಒಂದು ಕ್ಷಣ ಶಾಕ್‌ ಆದರೂ ಅಚ್ಚರಿಯಿಲ್ಲ. ಏಕೆಂದರೆ ಟ್ವಿಟರ್‌ ಲೋಗೋ ಇದೀಗ ಸಂಪೂರ್ಣ ಬದಲಾಗಿ ಹೋಗಿದೆ. ಇಷ್ಟು ದಿನ ನೀಲಿ ಹಕ್ಕಿಯಾಗಿ ಕಂಗೊಳಿಸುತ್ತಿದ್ದ ಟ್ವಿಟರ್‌ ಇದೀಗ "X" ರೂಪದಲ್ಲಿ ಕಾಣಿಸುತ್ತಿದೆ. ಈ ಲೋಗೋ ಬದಲಾವಣೆಯ ಬಗ್ಗೆ ಎಲೋನ್‌ ಮಸ್ಕ್‌ ತಮ್ಮ ಟ್ವಿಟರ್‌ ಅಕೌಂಟ್‌ನಲ್ಲಿ "X" ನ ಶಾರ್ಟ್‌ ವೀಡಿಯೊವನ್ನು ಪೋಸ್ಟ್‌ ಮಾಡಿದ್ದಾರೆ. ಅಲ್ಲದೆ ಟ್ವಿಟರ್ ಸ್ಪೇಸ್‌ಗಳ ಆಡಿಯೊ ಚಾಟ್‌ನಲ್ಲಿ, ಲೋಗೋ ಬದಲಾಗುತ್ತದೆಯೇ ಎಂದು ಕೇಳಿದಾಗ ಅವರು "ಹೌದು" ಎಂದು ರಿಟ್ವೀಟ್‌ ಮಾಡಿದ್ದಾರೆ.

ಇದರ ನಡುವೆ ಟ್ವಿಟರ್‌ನಲ್ಲಿ "#GoodbyeTwitter", X. ವಿಡಿಯೋ ಡೌನ್‌ಲೋಡ್‌, X ವಿಡಿಯೋ ಎನ್ನುವ ಹ್ಯಾಶ್‌ಟ್ಯಾಗ್‌ ಭಾರಿ ಟ್ರೆಂಡಿಂಗ್‌ನಲ್ಲಿದೆ. ಅಲ್ಲದೆ ಟ್ವಿಟರ್‌ನ X ಲೋಗೋದ ಮೇಲೆ ಭಾರಿ ಮಿಮ್ಸ್‌ಗಳನ್ನು ಹರಿಬಿಡಲಾಗ್ತಿದೆ. ಇದಲ್ಲದೆ ಹಲವು ಟ್ವಿಟರ್‌ ಬಳಕೆದಾರರು X ಲೋಗೋ ಬಗ್ಗೆ ಟ್ವಿಟ್‌ ಮಾಡಿದ್ದಾರೆ. ಇದರಲ್ಲಿ ಅನೇಖ ಬಳಕೆದಾರರು ಹೊಸ ಲೋಗೋವನ್ನು ಟೀಕಿಸಿದ್ದಾರೆ. ಇದರ ನಡುವೆ ಕೆಲವು ಬಳಕೆದಾರರು X ಲೋಗೋ ಬಗ್ಗೆ ಚೆಂದದ ಮಾತುಗಳನ್ನು ಕೂಡ ಆಡಿದ್ದಾರೆ.

ಇನ್ನು X ಲೋಗೋ ಬಗ್ಗೆ ಚರ್ಚೆ ಜೋರಾಗಿದೆ, ಅದರಂತೆ "X" ಅಡಿಯಲ್ಲಿ ಟ್ವೀಟ್‌ಗಳನ್ನು ಏನು ಕರೆಯಲಾಗುತ್ತದೆ ಎಂದು ಕೇಳುವ ಟ್ವೀಟ್‌ಗೆ ಪ್ರತಿಕ್ರಿಯೆಯಾಗಿ, ಮಸ್ಕ್ "x" ಎಂದು ಉತ್ತರಿಸಿದ್ದಾರೆ. ಈ ಮೂಲಕ ಟ್ವಿಟರ್‌ ಅನ್ನು X ಎಂದು ಕರೆಯುವ ಪ್ರವೃತ್ತಿಗೆ ಬದಲಾಗಲಿದೆ ಎಂದು ಸೂಚ್ಯವಾಗಿ ತಿಳಿಸಲಾಗಿದೆ. ಇದೇ ಕಾರಣಕ್ಕೆ ಟ್ವಿಟರ್‌ ವೀಡಿಯೊಗಳನ್ನು ಇನ್ಮುಂದೆ X ವೀಡಿಯೊ ಎಂದು ಕರೆಯಬಹುದು, X ವಿಡಿಯೋ ಡೌನ್‌ಲೋಡ್‌ ಮಾಡಬಹುದು ಎಂದೆಲ್ಲಾ ಬಗೆ ಬಗೆಯ ರೀತಿಯಲ್ಲಿ ವ್ಯಾಖ್ಯಾನ ಮಾಡಲಾಗುತ್ತಿದೆ.

ಸದ್ಯ ಟ್ವಿಟರ್‌ನ ಅಧಿಕೃತ ಪೇಜ್‌ ಅನ್ನು "X" ಎಂದು ಮರುಹೆಸರಿಸಲಾಗಿದೆ. ಆದರೆ ಇದರ ಡೊಮೇನ್ x.com ಇನ್ನು ಕೂಡ ಸಕ್ರಿಯವಾಗಿಲ್ಲ. ಇದರಿಂದ ಜಾಗತಿಕವಾಗಿ ಎಷ್ಟೋ ಟ್ವಿಟರ್‌ ಬಳಕೆದಾರರಿಗೆ X ಲೋಗೋ ಇನ್ನು ಕೂಡ ಕಾಣಿಸಿಲ್ಲ ಎಂದು ಹೇಳಲಾಗಿದೆ. ಇನ್ನು ಟ್ವಿಟರ್ ಇತ್ತೀಚಿಗೆ ಮೆಟಾ ಕಂಪೆನಿಯ ಥ್ರೆಡ್‌ ಅಪ್ಲಿಕೇಶನ್‌ನಿಂದ ಸಾಕಷ್ಟು ಕಠಿಣ ಸ್ಪರ್ಧೆಯನ್ನು ಎದುರಿಸುತ್ತಿದೆ. ಇದೇ ಸಂದರ್ಭದಲ್ಲಿ ಟ್ವಿಟರ್‌ X ಆಗಿ ಬದಲಾಗಿರೋದು ಯಾವ ರೀತಿ ಪರಿಣಾಮ ಬೀರಲಿದೆ ಅನ್ನೊದನ್ನ ಮುಂದಿನ ದಿನಗಳಲ್ಲಿ ಕಾದು ನೋಡಬೇಕಿದೆ.

ಹಾಗೇ ನೋಡುವುದಾದರೆ ಎಲೋನ್‌ ಮಸ್ಕ್‌ ಟ್ವಿಟರ್‌ ಅನ್ನು ಸ್ವಾಧೀನ ಪಡಿಸಿಕೊಂಡ ನಂತರ ಟ್ವಿಟರ್‌ ಹಲವು ಕಾರಣಗಳಿಗೆ ಸುದ್ದಿ ಆಗುತ್ತಲೇ ಇದೆ. ದಿನನಿತ್ಯ ಒಂದಿಲ್ಲೊಂದು ಕಾರಣಕ್ಕೆ ಟ್ವಿಟರ್‌ ಪ್ಲಾಟ್‌ಫಾರ್ಮ್‌ನಲ್ಲಿ ಟ್ವಿಟರ್‌ನ ನಿರ್ಧಾರಗಳೇ ಟ್ರೆಂಡ್‌ ಆಗುತ್ತಿರುವ ಘಟನೆಗಳು ನಡೆಯುತ್ತಿವೆ. ಇದು ಯಾವ ರೀತಿಯಲ್ಲಿ ಟ್ವಿಟರ್‌ನ ಜನಪ್ರಿಯತೆಯನ್ನು ಹೆಚ್ಚಿಸಲಿದೆ? ಇಲ್ಲವೆ ಕಸಿದುಕೊಳ್ಳಲಿದೆ ಅನ್ನೊದು ಮುಂದಿನ ದಿನಗಳಲ್ಲಿ ತಿಳಿಯಲಿದೆ.

Best Mobiles in India

English summary
Twitter’s logo has changed to “X” from its Blue bird symbol
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+