Home
ಸುದ್ದಿಜಾಲ

ಬಳಕೆದಾರರಿಗೆ ಮೋಸ: ಮತ್ತೆ ತಪ್ಪು ಮಾಡುವುದಿಲ್ಲ ಕ್ಷಮಿಸಿ ಎನ್ನುತ್ತಿದೆ 'ಟ್ವಿಟರ್'!

ತಪ್ಪು ಮಾಡುವುದು ಮತ್ತು ಆ ತಪ್ಪು ತಿಳಿದುಬಂದ ನಂತರ ಕ್ಷಮೆ ಕೇಳುವುದು ಪ್ರಖ್ಯಾತ ಐಟಿ ಕಂಪೆನಿಗಳಿಗೆ ಸಾಮಾನ್ಯ ವಿಷಯವಾಗಿದೆ. ಇದೀಗ ಟ್ವಿಟ್ಟರ್ ಕೂಡ ಹೀಗೆಯೇ ಕ್ಷಮೆ ಕೇಳಿದ್ದು, ಕ್ಷಮಿಸಿ, ತಪ್ಪು ಮರುಕಳಿಸುವುದಿಲ್ಲ ಎಂದು ಹೇಳಿದೆ. ಟ್ವಿಟರ್ ಬಳಕೆದಾರರ ಇ-ಮೇಲ್‌ ಮತ್ತು ಫೋನ್‌ ನಂಬರ್‌ ಅನ್ನು ಜಾಹೀರಾತು ಉದ್ದೇಶಕ್ಕೆ ಬಳಸಲಾಗಿದೆ ಎಂಬುದು ಕಂಪನಿಯ ಗಮನಕ್ಕೆ ಬಂದಿದ್ದು, ಇದೊಂದು ಅಚಾತುರ್ಯ ಎಂದು ಹೇಳಿಕೊಂಡಿದೆ. ಇಂತಹ ತಪ್ಪು ಮರುಕಳಿಸದಂತೆ ಎಚ್ಚರಿಕೆ ವಹಿಸುವುದಾಗಿಯೂ ತಿಳಿಸಿದೆ.

ಸುರಕ್ಷತೆಯ ದೃಷ್ಟಿ

ಟ್ವಿಟರ್ ಬಳಕೆದಾರರ ಸುರಕ್ಷತೆಯ ದೃಷ್ಟಿಯಿಂದ ಬಳಕೆದಾರರು ನೀಡುವ ಮಾಹಿತಿಗಳಾದ ಇ-ಮೇಲ್‌ ವಿಳಾಸ ಮತ್ತು ಫೋನ್‌ ನಂಬರ್‌ ಅನ್ನು ಅಜಾಗರೂಕತೆಯಿಂದ/ ಪ್ರಮಾದವಶಾತ್‌ ಜಾಹೀರಾತಿನ ಉದ್ದೇಶಕ್ಕಾಗಿ ಬಳಕೆ ಮಾಡಲಾಗಿದೆ ಎಂದು ಟ್ವಿಟರ್ ಒಪ್ಪಿಕೊಂಡಿದೆ.ಇದರಿಂದಾಗಿ ಎಷ್ಟು ಮಂದಿ ಬಳಕೆದಾರರಿಗೆ ಸಮಸ್ಯೆಯಾಗಿದೆ ಎಂದು ಖಚಿತವಾಗಿ ಹೇಳಲು ಸಾಧ್ಯವಿಲ್ಲ. ಆದರೆ, ಬಳಕೆದಾರರ ಖಾಸಗಿ ಮಾಹಿತಿಯನ್ನು ನಮ್ಮ ಪಾಲುದಾರರು ಅಥವಾ ಯಾವುದೇ ಥರ್ಡ್‌ ಪಾರ್ಟಿಯೊಂದಿಗೆ ಹಂಚಿಕೊಂಡಿಲ್ಲ ಎಂದು ಸ್ಪಷ್ಟಪಡಿಸಿದೆ.

ಇಮೇಲ್‌ ವಿಳಾಸ

ಸುರಕ್ಷತೆಯ ದೃಷ್ಟಿಯಿಂದ ನೀವು ನೀಡುವ ಇಮೇಲ್‌ ವಿಳಾಸ ಅಥವಾ ಫೋನ್‌ ನಂಬರ್‌ ನಮ್ಮ ಜಾಹೀರಾತು ವ್ಯವಸ್ಥೆಗಳಾದ Tailored Audiences and Partner Audiences ಗಳಲ್ಲಿ ಅಜಾಗರೂಕತೆಯಿಂದಾಗಿ ಬಳಕೆಯಾಗಿದೆ. ಇದರಿಂದಾಗಿ ಎಷ್ಟು ಮಂದಿ ಬಳಕೆದಾರರಿಗೆ ಸಮಸ್ಯೆಯಾಗಿದೆ ಎಂದು ಖಚಿತವಾಗಿ ಹೇಳಲು ಸಾಧ್ಯವಿಲ್ಲ. ಆದರೆ, ಬಳಕೆದಾರರ ಖಾಸಗಿ ಮಾಹಿತಿಯನ್ನು ನಮ್ಮ ಪಾಲುದಾರರು ಅಥವಾ ಯಾವುದೇ ಥರ್ಡ್‌ ಪಾರ್ಟಿಯೊಂದಿಗೆ ಹಂಚಿಕೊಂಡಿಲ್ಲ ಎಂದು ಪ್ರಕಟಣೆಯಲ್ಲಿ ತಿಳಿಸಿದೆ.

ಮಾರುಕಟ್ಟೆ ಪಟ್ಟಿ

ಜಾಹೀರಾತು ನೀಡುವವರು ತಮ್ಮ ಮಾರುಕಟ್ಟೆ ಪಟ್ಟಿಯನ್ನು ಅಪ್‌ಲೋಡ್‌ ಮಾಡಿದಾಗ ಟ್ವಿಟರ್ ಖಾತೆ ಹೊಂದಿರುವವರ ಫೋನ್‌ ನಂಬರ್‌ ಅಥವಾ ಇ-ಮೇಲ್‌ ಜತೆ ಅದು ಹೊಂದಾಣಿಕೆ ಆಗಿ ಈ ರೀತಿ ಆಗಿರಬಹುದು. ಈ ಸಮಸ್ಯೆಯನ್ನು ಈಗಾಗಲೇ ಬಗೆಹರಿಸಲಾಗಿದೆ. ಇನ್ನು ಮುಂದೆ ಇಂತಹ ತಪ್ಪು ಮರುಕಳಿಸದಂತೆ ಎಚ್ಚರಿಕೆಯಿಂದ ಹೆಜ್ಜೆ ಇಡುತ್ತೇವೆ ಎಂದು ಬಳಕೆದಾರರಲ್ಲಿ ಮನವಿ ಮಾಡಿಕೊಂಡಿದೆ. ಭಾರತದಲ್ಲಿನ ಬಳಕೆದಾರರ ಮೇಲೆ ಆಗಿರುವ ಪರಿಣಾಮಗಳ ಬಗ್ಗೆ ಪ್ರತಿಕ್ರಿಯೆ ನೀಡಲು ಟ್ವಿಟ್ಟರ್ ನಿರಾಕರಿಸಿದೆ.

ಪ್ರೇಕ್ಷಕರು

ಟ್ವಿಟ್ಟರ್‌ನ ಅನುಗುಣವಾದ ಪ್ರೇಕ್ಷಕರು ಫೋನ್ ಸಂಖ್ಯೆಗಳು ಮತ್ತು ಇಮೇಲ್ ವಿಳಾಸಗಳಂತಹ ಮಾಹಿತಿಯ ಆಧಾರದ ಮೇಲೆ ತಮ್ಮ ಮಾರ್ಕೆಟಿಂಗ್ ಪಟ್ಟಿಗಳಲ್ಲಿರುವ ಗ್ರಾಹಕರಿಗೆ ಉದ್ದೇಶಿತ ಜಾಹೀರಾತುಗಳನ್ನು ಕಳುಹಿಸಲು ಪ್ರಪಂಚದಾದ್ಯಂತದ ಜಾಹೀರಾತುದಾರರಿಗೆ ಅವಕಾಶ ನೀಡುವಂತೆ ವಿನ್ಯಾಸಗೊಳಿಸಲಾಗಿತ್ತು. ಪಾಲುದಾರ ಪ್ರೇಕ್ಷಕರ ಜಾಹೀರಾತು ವ್ಯವಸ್ಥೆಯು ಜಾಹೀರಾತುದಾರರಿಗೆ ಮೂರನೇ ವ್ಯಕ್ತಿಯ ಪಾಲುದಾರರು ಒದಗಿಸಿದ ಪಟ್ಟಿಗಳಿಂದ ಬಳಕೆದಾರರನ್ನು ಗುರಿಯಾಗಿಸಲು ಸಾಧ್ಯವಾಗಿಸುತ್ತಿತ್ತು.

Best Mobiles in India

English summary
Twitter Says Sorry For Using Users Phone Number For Advertising. to know more visit to kannada.gizbot.com
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+