Home
ಸುದ್ದಿಜಾಲ

ಸ್ಯಾಮ್ ಸಂಗ್ ನಿಂದ ಬಜೆಟ್ ಬೆಲೆಯಲ್ಲಿ ಎರಡು ಸ್ಮಾರ್ಟ್ ಫೋನ್ ಲಾಂಚ್ ಶೀಘ್ರವೇ.!

By Lekhaka

ಭಾರತೀಯ ಮಾರುಕಟ್ಟೆಯಲ್ಲಿ ಎಂಟ್ರಿ ಲೆವೆಲ್ ಸ್ಮಾರ್ಟ್ ಫೋನ್ ಮಾರಾಟವು ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದ್ದು, ಈ ಹಿನ್ನಲೆಯಲ್ಲಿ ಸ್ಯಾಮ್ ಸಂಗ್ ಸಹ ಎರಡು ಎಂಟ್ರಿ ಲೆವೆಲ್ ಸ್ಮಾರ್ಟ್ ಫೋನ್ ಬಿಡುಗಡೆ ಮಾಡಲು ಸಿದ್ಧತೆ ನಡೆಸಿದೆ ಎನ್ನಲಾಗಿದೆ. ಈ ಸ್ಮಾರ್ಟ್ ಫೋನ್ ಗಳು ಮುಂದಿನ ವರ್ಷದ ಆರಂಭದಲ್ಲಿ ಲಾಂಚ್ ಆಗಲಿದೆ.

ಸ್ಯಾಮ್ ಸಂಗ್ ನಿಂದ ಬಜೆಟ್ ಬೆಲೆಯಲ್ಲಿ ಎರಡು ಸ್ಮಾರ್ಟ್ ಫೋನ್ ಲಾಂಚ್ ಶೀಘ್ರವೇ.!

ಈ ಸ್ಮಾರ್ಟ್ ಫೋನ್ ಗಳು ಸ್ಯಾಮ್ ಸಂಗ್ A ಸರಣಿಯ ಸ್ಮಾರ್ಟ್ ಫೋನ್ ಗಳಾಗಿದೆ ಎನ್ನಲಾಗಿದೆ. ಈಗಾಗಲೇ ಸ್ಯಾಮ್ ಸಂಗ್ ಟಾಪ್ ಎಂಡ್ ಫೋನ್ S9 ಬಗ್ಗೆಯೂ ಟಾಕ್ ಶುರುವಾಗಿದ್ದು, ಅದಕ್ಕಿಂತ ಮೊದಲು ಎರಡು ಎಂಟ್ರಿ ಲೆವೆಲ್ ಸ್ಮಾರ್ಟ್ ಫೋನ್ ಲಾಂಚ್ ಆಗಲಿದೆ ಎನ್ನುವ ಮಾಹಿತಿಯೂ ದೊರತಿದೆ.

ಈ ಸ್ಮಾರ್ಟ್ ಫೋನ್ ಗಳಲ್ಲಿ ಕ್ವಾಡ್ ಕೋರ್ ಸ್ನಾಪ್ ಡ್ರಾಗನ್ 430 ಪ್ರೋಸೆಸರ್ ಹಾಗೂ 1.4GHz ವೇಗವನ್ನು ಕಾಣಬಹುದಾಗಿದೆ. ಅಲ್ಲದೇ 2GB RAM ಅನ್ನು ಈ ಸ್ಮಾರ್ಟ್ ಫೋನ್ ಗಳಲ್ಲಿ ಅಳವಡಿಸಿರುವ ಸಾಧ್ಯತೆ ಇದೆ ಎನ್ನಲಾಗಿದೆ. ಆಂಡ್ರಾಯ್ಡ್ ನ್ಯಾಗದಲ್ಲಿ ಈ ಫೋನ್ ಕಾರ್ಯನಿರ್ವಹಿಸಲಿದೆ.

ಅಲ್ಲದೇ ಈ ಸ್ಮಾರ್ಟ್ ಫೋನ್ ಗಳು 4.8 ಇಂಚಿನ ಡಿಸ್ ಪ್ಲೇಯನ್ನು ಹೊಂದಿದ್ದು, HD ಗುಣಮಟ್ಟದಿಂದ ಕೂಡಿರಲಿದೆ ಎನ್ನಲಾಗಿದೆ. ಅಲ್ಲದೇ 3GB RAM ಮತ್ತು 32GB ಇಂಟರ್ನಲ್ ಮೆಮೊರಿಯ ಮತ್ತೊಂದು ಫೋನ್ ಸಹ ಕಾಣಿಸಿಕೊಂಡಿದೆ. ಎರಡು ಬೇರೆ ಬೇರೆ ಫೋನ್ ಗಳಾಗಿದೆ.

ಈ ಫೋನ್ ಗಳಲ್ಲಿ 12MP ಹಿಂಭಾಗದ ಕ್ಯಾಮೆರಾವನ್ನು ಹಾಗೂ ಮುಂಭಾಗದಲ್ಲಿ 8MP ಕ್ಯಾಮೆರಾವನ್ನು ನೀಡಲಾಗಿದ್ದು, ಈ ಎರಡು ಕ್ಯಾಮೆರಾಗಳು ಉತ್ತಮ ವಿಡಿಯೋವನ್ನು ಸೆರೆಹಿಡಿಯುವ ಸಾಮರ್ಥ್ಯವನ್ನು ಹೊಂದಿವೆ ಎನ್ನಲಾಗಿದೆ.

Best Mobiles in India

English summary
One of the smartphones is believed to be the Samsung Galaxy J2 Pro (2018).
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+