U&i ನಿಂದ ಹೊಸ ನೆಕ್‌ಬ್ಯಾಂಡ್ ಇಯರ್ ಫೋನ್ ಲಾಂಚ್:100 ಗಂಟೆಗಳ ಪ್ಲೇ ಬ್ಯಾಕ್ ಟೈಂ
U&i ಕಂಪೆನಿಯ ನೆಕ್‌ಬ್ಯಾಂಡ್ ಶೈಲಿಯ ಇಯರ್‌ಫೋನ್‌ಗಳಿಗೆ ಭಾರಿ ಬೇಡಿಕೆಯಿದೆ. ತನ್ನ ವಿಭಿನ್ನ ಶೈಲಿಯ ವಾಯರ್‌ಲೆಸ್ ಬ್ಲೂಟೂತ್ ನೆಕ್‌ಬ್ಯಾಂಡ್‌ಗಳ ಮೂಲಕ ಸೈ ಎನಿಸಿಕೊಂಡಿದೆ. ಇದೀಗ ಭಾರತದಲ್ಲಿ ಹೊಸದಾಗಿ ಎರಡು ಹೊಸ ಪ್ರಾಡಕ್ಟ್‌ಗಳನ್ನು ಪರಿಚಯಿಸಿದೆ. ಇವುಗಳನ್ನು ಫೈರ್‌ಸ್ಟಾರ್ಮ್ ಸೀರೀಸ್ ವೈರ್‌ಲೆಸ್ ಬ್ಲೂಟೂತ್ ನೆಕ್‌ಬ್ಯಾಂಡ್ ಮತ್ತು ಬಾಕ್ಸ್ ಸೀರೀಸ್ ಟ್ರಾವೆಲ್ ಡೇಟಾ ಕೇಬಲ್ ಕಿಟ್ ಎಂದು ಹೆಸರಿಸಲಾಗಿದೆ.
ಹೌದು, U&i ಬ್ರ್ಯಾಂಡ್ ಹೊಸ ಬ್ಲೂಟೂತ್ ನೆಕ್‌ಬ್ಯಾಂಡ್ ನೊಂದಿಗೆ ಮತ್ತೊಂದು ಹೊಸ ಪ್ರಾಡಕ್ಟ್ ಬಿಡುಗಡೆ ಮಾಡಿದೆ. ಮ್ಯೂಸಿಕ್ ಪ್ಲೇ ಬ್ಯಾಕ್ ಮತ್ತು ಕರೆಗಳು ಎರಡಕ್ಕೂ 100ಗಂಟೆಗಳ ಬ್ಯಾಟರಿ ಬಾಳಿಕೆಯನ್ನು ನೀಡಲಿದೆ. ಇನ್ನು ನೆಕ್‌ಬ್ಯಾಂಡ್ ಅನ್ನು ಟೈಪ್-ಸಿ ಚಾರ್ಜಿಂಗ್ ಮೂಲಕ ಕೇವಲ 2 ಗಂಟೆಗಳಲ್ಲಿ ಸಂಪೂರ್ಣವಾಗಿ ಚಾರ್ಜ್ ಮಾಡಬಹುದು, ಅನುಕೂಲಕರ ಪೋರ್ಟಬಿಲಿಟಿ ನೀಡುತ್ತದೆ. ಹಾಗಾದ್ರೆ U&i ಇಯರ್‌ಪೋನ್‌ಗಳ ವಿಶೇಷತೆ ಏನು ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತೀವಿ ಓದಿರಿ.

U&i ಫೈರ್‌ಸ್ಟಾರ್ಮ್ ಸರಣಿ ವೈರ್‌ಲೆಸ್ ಬ್ಲೂಟೂತ್ ನೆಕ್‌ಬ್ಯಾಂಡ್
U&i ಫೈರ್‌ಸ್ಟಾರ್ಮ್ ಸರಣಿ ವೈರ್‌ಲೆಸ್ ಬ್ಲೂಟೂತ್ ನೆಕ್‌ಬ್ಯಾಂಡ್ ನ್ಯೂ ಡಿಸೈನ್ ಮೂಲಕ ಗಮನಸೆಳೆದಿದೆ. ಮ್ಯೂಸಿಕ್ ಉತ್ಸಾಹಿಗಳಿಗೆ ಸೂಕ್ತವಾದ ಫೀಚರ್ಸ್ ಪಡೆಯುವ ಮೂಲಕ ಟೆಕ್ ವಲಯದಲ್ಲಿ ಹೊಸ ಸಂಚಲನ ಸೃಷ್ಟಿಸಿದೆ. ಇದು ಬ್ಲೂಟೂತ್ ಆವೃತ್ತಿ 5.3ಯನ್ನು ಹೊಂದಿದ್ದು, ತಡೆರಹಿತ ಸಂಪರ್ಕ ಮತ್ತು ಉತ್ತಮ ಗುಣಮಟ್ಟದ ಆಡಿಯೊ ಔಟ್‌ಪುಟ್ ಅನ್ನು ನೀಡಲಿದೆ.
ಇದು 100 ಗಂಟೆಗಳ ಮ್ಯೂಸಿಕ್ ಪ್ಲೇಬ್ಯಾಕ್ ಟೈಂ ನೀಡಲಿದೆ. ಜೊತೆಗೆ 800 ಗಂಟೆಗಳ ಸ್ಟ್ಯಾಂಡ್‌ಬೈ ಟೈಂ ಕೂಡ ನೀಡಲಿದೆ. ಬಳಕೆದಾರರು ವಿಸ್ತೃತ ಅವಧಿಗಳವರೆಗೆ ತಡೆರಹಿತ ಮನರಂಜನೆಯನ್ನು ಆನಂದಿಸಬಹುದು. ಈ ನೆಕ್‌ಬ್ಯಾಂಡ್ 300mAh ಸಾಮರ್ಥ್ಯದ ಬ್ಯಾಟರಿಯನ್ನು ಹೊಂದಿದೆ. ಇದನ್ನು ಟೈಪ್-ಸಿ ಚಾರ್ಜಿಂಗ್ ಮೂಲಕ ಕೇವಲ 2 ಗಂಟೆಗಳಲ್ಲಿ ಸಂಪೂರ್ಣವಾಗಿ ಚಾರ್ಜ್ ಮಾಡಬಹುದಾಗಿದೆ. ಇದರ ಇನ್ಪುಟ್ ಪವರ್ 1.0A ಆಗಿದ್ದು, 42 ಡಿಬಿ ಮತ್ತು 2200 ಓಮ್ ಮೈಕ್ ಸೆನ್ಸಿಟಿವಿಟಿ ಮತ್ತು ಇಂಪೆಡೆನ್ಸ್ ಹೊಂದಿದೆ.
U&i ಬಾಕ್ಸ್ ಸಿರೀಸ್ ಟ್ರಾವಲ್ ಡೇಟಾ ಕೇಬಲ್ ಕಿಟ್
U&i ಬಾಕ್ಸ್ ಸಿರೀಸ್ ಟ್ರಾವಲ್ ಡೇಟಾ ಕೇಬಲ್ ಕಿಟ್ ಆಧುನಿಕ ಸಾಧನಗಳ ಚಾರ್ಜಿಂಗ್ ಅಗತ್ಯಗಳನ್ನು ಪೂರೈಸಲಿದೆ. ಈ ಕಿಟ್ C ಯಿಂದ ಮೈಕ್ರೋ, C ನಿಂದ IPH, ಮತ್ತು C ನಿಂದ USB ಸಂಪರ್ಕಗಳಿಗೆ ಕೇಬಲ್‌ಗಳನ್ನು ಒಳಗೊಂಡಿದೆ. ಇದು 65 ವ್ಯಾಟ್‌ಗಳ ಪವರ್ ಔಟ್‌ಪುಟ್ ಮತ್ತು ವೇಗದ ಚಾರ್ಜಿಂಗ್ ಸಾಮರ್ಥ್ಯಗಳೊಂದಿಗೆ, ಈ ಪ್ರಯಾಣ-ಸ್ನೇಹಿ ಕಿಟ್ ವಿವಿಧ ಸಾಧನಗಳಿಗೆ ತ್ವರಿತ ಚಾರ್ಜಿಂಗ್ ಅನ್ನು ಖಚಿತಪಡಿಸುತ್ತದೆ.

ಬೆಲೆ ಮತ್ತು ಲಭ್ಯತೆ
U&i ಫೈರ್‌ಸ್ಟಾರ್ಮ್ ಸರಣಿಯ ವೈರ್‌ಲೆಸ್ ಬ್ಲೂಟೂತ್ ನೆಕ್‌ಬ್ಯಾಂಡ್ ಭಾರತದಲ್ಲಿ 2,699ರೂ ಬೆಲೆಯನ್ನು ಹೊಂದಿದೆ. ಇದು ಕಪ್ಪು ಮತ್ತು ನೀಲಿ ಬಣ್ಣದ ಆಯ್ಕೆಗಳಲ್ಲಿ ಲಭ್ಯವಿದೆ. ಇನ್ನು U&i ಬಾಕ್ಸ್ ಸರಣಿ ಟ್ರಾವೆಲ್ ಡೇಟಾ ಕೇಬಲ್ ಕಿಟ್ ಭಾರತದಲ್ಲಿ 1,499ರೂ ಬೆಲೆಗೆ ದೊರೆಯಲಿದೆ. ಈ ಎರಡೂ ಪ್ರಾಡಕ್ಟ್‌ಗಳು ಭಾರತದಾದ್ಯಂತ U&i ಔಟ್‌ಲೆಟ್‌ಗಳು ಮತ್ತು ಇತರ ಪ್ರಮುಖ ಚಿಲ್ಲರೆ ಅಂಗಡಿಗಳಲ್ಲಿ ಖರೀದಿಗೆ ಲಭ್ಯವಿವೆ.
ಇದಲ್ಲದೆ ಇತ್ತೀಚಿಗೆ U&i ಕಂಪೆನಿ ಇತ್ತೀಚಿಗೆ ವಿಭಿನ್ನ ಶೈಲಿಯ ಸ್ಪೀಕರ್‌ಗಳಿಗೆ ಹೆಸರುವಾಸಿಯಾಗಿರುವ U&i ಬ್ರ್ಯಾಂಡ್ ಭಾರತದಲ್ಲಿ ಹೊಸ ಶ್ರೇಣಿಯ ಸ್ಪೀಕರ್‌ಗಳನ್ನು ಪರಿಚಯಿಸಿದೆ. ಇವುಗಳನ್ನು UiBS-5580, UiBS-5166, UiBS-8613 ಎಂದು ಹೆಸರಿಸಲಾಗಿದೆ. ಈ ಸ್ಪೀಕರ್‌ಗಳು ಮಲ್ಟಿ ಮೀಡಿಯಾ ಸ್ಪೀಕರ್ ಸಿಸ್ಟಂ ಆಗಿದ್ದು, ಹೈ-ಫ್ರೀಕ್ವೆನ್ಸಿ ಹಾರ್ನ್ ಮತ್ತು 'ಮೆಗಾ ಬಾಸ್' ಮೋಡ್ ಅನ್ನು ಒಳಗೊಂಡಿದೆ.


Click it and Unblock the Notifications








