Home
ಸುದ್ದಿಜಾಲ

U&i ಬ್ರ್ಯಾಂಡ್‌ನಿಂದ ಮೂರು ಹೊಸ ಸ್ಪೀಕರ್‌ ಬಿಡುಗಡೆ: ಬೆಲೆ ಕಡಿಮೆ, ಸಖತ್‌ ಸ್ಟೈಲಿಶ್‌ ಫೀಚರ್ಸ್‌!

ಭಾರತದ ಟೆಕ್‌ ಮಾರುಕಟ್ಟೆಯಲ್ಲಿ ಬ್ಲೂಟೂತ್‌ ಸ್ಪೀಕರ್‌ಗಳಿಗೆ ಭಾರಿ ಬೇಡಿಕೆಯಿದೆ. ವಿಭಿನ್ನ ಶೈಲಿಯ ಸ್ಪೀಕರ್‌ಗಳಿಗೆ ಹೆಸರುವಾಸಿಯಾಗಿರುವ U&i ಬ್ರ್ಯಾಂಡ್‌ ಭಾರತದಲ್ಲಿ ಹೊಸ ಶ್ರೇಣಿಯ ಸ್ಪೀಕರ್‌ಗಳನ್ನು ಪರಿಚಯಿಸಿದೆ. ಇವುಗಳನ್ನು UiBS-5580, UiBS-5166, UiBS-8613 ಎಂದು ಹೆಸರಿಸಲಾಗಿದೆ. ಇನ್ನು ಈ ಸ್ಪೀಕರ್‌ಗಳು ಕೈಗೆಟಕುವ ಬೆಲೆಯಲ್ಲಿ ಬರಲಿವೆ ಅನ್ನೋದು ವಿಶೇಷ. ಇನ್ನು U&i ಬಜೆಟ್ 18 ಸರಣಿ (UiBS-8613) ಕಾಂಪ್ಯಾಕ್ಟ್ ವಿನ್ಯಾಸವನ್ನು ಹೊಂದಿರುವ ಪೋರ್ಟಬಲ್ ಬ್ಲೂಟೂತ್ ಸ್ಪೀಕರ್ ಆಗಿದೆ.

ಹೌದು, U&i ಬ್ರ್ಯಾಂಡ್‌ ಭಾರತದಲ್ಲಿ ಮೂರು ಹೊಸ ಸ್ಪೀಕರ್‌ಗಳನ್ನು ಬಿಡುಗಡೆ ಮಾಡಿದೆ. ಈ ಸ್ಪೀಕರ್‌ಗಳು ಮಲ್ಟಿ ಮೀಡಿಯಾ ಸ್ಪೀಕರ್‌ ಸಿಸ್ಟಂ ಆಗಿದ್ದು, ಹೈ-ಫ್ರೀಕ್ವೆನ್ಸಿ ಹಾರ್ನ್ ಮತ್ತು 'ಮೆಗಾ ಬಾಸ್' ಮೋಡ್ ಅನ್ನು ಒಳಗೊಂಡಿದೆ. ಇದರಲ್ಲಿ U&i ಮಿನಿ ಟ್ವಿನ್ ಟವರ್ (UiBS-5166) ಸ್ಪೀಕರ್‌ ಕರೆಯೋಕೆ ಪ್ರಿಯರಿಗೆ ಸೂಕ್ತವಾಗಿದೆ. ಕರೆಯೋಕೆ ಪ್ರಿಯರಿಗಾಗಿಯೇ ಕಾರ್ಡ್‌ಲೆಸ್ ಮೈಕ್‌ನೊಂದಿಗೆ ಬ್ಲೂಟೂತ್ ಬುಕ್‌ಶೆಲ್ಫ್ ಸ್ಪೀಕರ್‌ಗಳನ್ನು ನೀಡಲಾಗಿದೆ. ಇನ್ನುಳಿದಂತೆ ಈ ಸ್ಪೀಕರ್‌ಗಳು ಯಾವೆಲ್ಲಾ ಫೀಚರ್ಸ್‌ ಹೊಂದಿವೆ ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತೀವಿ ಮುಂದೆ ಓದಿರಿ.

U&i ಬ್ರ್ಯಾಂಡ್‌ನಿಂದ ಮೂರು ಹೊಸ ಸ್ಪೀಕರ್‌ ಬಿಡುಗಡೆ: ಸಖತ್‌ ಸ್ಟೈಲಿಶ್‌ ಫೀಚರ್ಸ್‌

U&i ಸರೌಂಡ್ ಸರಣಿ (UiBS-5580)
U&i ಸರೌಂಡ್ ಸರಣಿ (UiBS-5580) 4.1-ಚಾನೆಲ್ ಮಲ್ಟಿಮೀಡಿಯಾ ಸ್ಪೀಕರ್ ಸಿಸ್ಟಮ್ ಆಗಿದೆ. ಇದು ಮುಂಭಾಗ ಮತ್ತು ಹಿಂಭಾಗದ ಸ್ಟಿರಿಯೊ ಚಾನೆಲ್ ಔಟ್‌ಪುಟ್‌ಗಳೊಂದಿಗೆ ಬರಲಿದೆ. ಇನ್ನು ಸ್ಪೀಕರ್‌ 60-ವ್ಯಾಟ್ ಸಿಸ್ಟಮ್ ಮತ್ತು ಸಬ್ ವೂಫರ್‌ನೊಂದಿಗೆ ಬರಲಿದ್ದು, ತಲ್ಲೀನಗೊಳಿಸುವ ಸೌಂಡ್‌ ಸಿಸ್ಟಂ ಅನ್ನು ನೀಡಲಿದೆ. ಜೊತೆಗೆ ಈ ಸ್ಪೀಕರ್‌ಗಳನ್ನು ಟಿವಿಗಳು ಮತ್ತು ಪರ್ಸನಲ್‌ ಕಂಪ್ಯೂಟರ್‌ಗಳಿಗೆ ಕೂಡ ಕನೆಕ್ಟ್‌ ಮಾಡಬಹುದಾಗಿದೆ. ಜೊತೆಗೆ FM ರೇಡಿಯೋ, AUX ಇನ್‌ಪುಟ್ ಮತ್ತು USB ಫ್ಲಾಶ್ ಡ್ರೈವ್ ಬೆಂಬಲವನ್ನು ಸಹ ನೀಡಲಿದೆ.

U&i ಮಿನಿ ಟ್ವಿನ್ ಟವರ್ (UiBS-5166)
U&i ಮಿನಿ ಟ್ವಿನ್ ಟವರ್ (UiBS-5166) ಸ್ಪೀಕರ್‌ ಕರೆಯೋಕೆ ಪ್ರಿಯರಿಗೆ ಸೂಕ್ತವಾಗಿದೆ. ಕರೆಯೋಕೆ ಪ್ರಿಯರಿಗಾಗಿಯೇ ಕಾರ್ಡ್‌ಲೆಸ್ ಮೈಕ್‌ನೊಂದಿಗೆ ಬ್ಲೂಟೂತ್ ಬುಕ್‌ಶೆಲ್ಫ್ ಸ್ಪೀಕರ್‌ಗಳನ್ನು ನೀಡಲಾಗಿದೆ. ಇದರ ಪ್ರತಿ ಸ್ಪೀಕರ್ 4 ಇಂಚಿನ ಮಿಡ್‌ ರೇಂಜ್‌ ಆಡಿಯೋ ಡ್ರೈವರ್‌ಗಳನ್ನು ಹೊಂದಿದೆ. ಜೊತೆಗೆ 8 ಇಂಚಿನ ಸೈಡ್-ಫೈರಿಂಗ್ ವೂಫರ್ ಅನ್ನು ಹೊಂದಿದೆ. ಇದಲ್ಲದೆ ಸ್ಪೀಕರ್‌ಗಳು 120 ವ್ಯಾಟ್‌ ಪವರ್‌ ಅನ್ನು ನೀಡಲಿದೆ. ಇದು ಮೊದಲೇ ಸೆಟ್‌ ಮಾಡಲಾದ ಸೌಂಡ್‌ ಪ್ರೊಫೈಲ್‌ಗಳು ಮತ್ತು ರಿಮೋಟ್ ಕಂಟ್ರೋಲ್‌ನೊಂದಿಗೆ FM, AUX-in, ಮತ್ತು USB ಕನೆಕ್ಟಿವಿಟಿಯನ್ನು ಬೆಂಬಲಿಸಲಿದೆ.

U&i ಬಜೆಟ್ 18 ಸರಣಿ (UiBS-8613)
U&i ಬಜೆಟ್ 18 ಸರಣಿ (UiBS-8613) ಕಾಂಪ್ಯಾಕ್ಟ್ ವಿನ್ಯಾಸವನ್ನು ಹೊಂದಿರುವ ಪೋರ್ಟಬಲ್ ಬ್ಲೂಟೂತ್ ಸ್ಪೀಕರ್ ಆಗಿದೆ. ಇದು 7 ವ್ಯಾಟ್ ಸ್ಪೀಕರ್, 52 ಎಂಎಂ ಆಡಿಯೋ ಡ್ರೈವರ್ಗಳನ್ನು ಹೊಂದಿದೆ. ಇದು 6 ಗಂಟೆಗಳ ಪ್ಲೇಟೈಂಗಾಗಿ 1200mAh ಸಾಮರ್ಥ್ಯದ ಬ್ಯಾಟರಿಯನ್ನು ಒಳಗೊಂಡಿದೆ. ಇದು ಮೆಮೊರಿ ಕಾರ್ಡ್ ಸ್ಲಾಟ್, ಕರೆಗಳಿಗಾಗಿ ಮೈಕ್ರೊಫೋನ್, ಹೈ-ಫ್ರೀಕ್ವೆನ್ಸಿ ಹಾರ್ನ್ ಮತ್ತು 'ಮೆಗಾ ಬಾಸ್' ಮೋಡ್ ಅನ್ನು ಸಹ ಹೊಂದಿದೆ. ಇದಲ್ಲದೆ ಕಪ್ಪು, ಕಂದು, ಹಸಿರು, ಕೆಂಪು ಮತ್ತು ನೀಲಿ ಬಣ್ಣದ ಆಯ್ಕೆಗಳಲ್ಲಿ ಖರೀದಿಗೆ ಬರಲಿದೆ.

U&i ಬ್ರ್ಯಾಂಡ್‌ನಿಂದ ಮೂರು ಹೊಸ ಸ್ಪೀಕರ್‌ ಬಿಡುಗಡೆ: ಸಖತ್‌ ಸ್ಟೈಲಿಶ್‌ ಫೀಚರ್ಸ್‌

ಬೆಲೆ ಮತ್ತು ಲಭ್ಯತೆ
ಭಾರತದಲ್ಲಿ U&i ಸರೌಂಡ್ ಸರಣಿ (UiBS-5580) ಸ್ಪೀಕರ್‌ಗಳು 5,499ರೂ ಬೆಲೆಯಲ್ಲಿ ಲಭ್ಯವಾಗಲಿದೆ. ಇನ್ನು U&i ಮಿನಿ ಟ್ವಿನ್ ಟವರ್ (UiBS-5166) ಸ್ಪೀಕರ್‌ ಭಾರತದಲ್ಲಿ 12,499ರೂ ಬೆಲೆ ಹೊಂದಿದೆ. ಜೊತೆಗೆ U&i ಬಜೆಟ್ 18 ಸರಣಿ (UiBS-8613) ಸ್ಪೀಕರ್‌ 1,299ರೂ ಬೆಲೆಯಲ್ಲಿ ಮಾರಾಟವಾಗುತ್ತಿದೆ.

Best Mobiles in India

English summary
U&i Surround, Budget 18 and Mini Twin Tower Series speakers launched in india
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+