ಮಧ್ಯರಾತ್ರಿ ಮಾನವೀಯತೆ ಮೆರೆದ 'ಕ್ಯಾಬ್ ಡ್ರೈವರ್‌'!..ವೈರಲ್ ಆಯ್ತು ಸ್ಟೋರಿ!!

|

ಉಬರ್ ಮತ್ತು ಓಲ್ ಚಾಲಕರ ವಿರುದ್ದ ದೈಹಿಕ ಹಾಗೂ ಮಾನಸಿಕ ಕಿರುಕುಳ ಕೊಟ್ಟಂತಹ ಹಲವು ದೂರುಗಳನ್ನು ನಾವು ಕೇಳಿದ್ದೇವೆ. ಆದರೆ, ಮಾನವೀಯತೆಯುಳ್ಳ ಉಬರ್ ಡ್ರೈವರ್ ಓರ್ವ ತನ್ನ ಕ್ಯಾಬ್‌ನಲ್ಲಿ ಪ್ರಯಾಣಿಸಿದ ಯುವತಿಯೋರ್ವಳಿಂದ ಪ್ರಶಂಸೆಗೆ ಪಾತ್ರರಾಗಿದ್ದಾರೆ. ಈ ಚಾಲಕನ ಉತ್ತಮ ಮನಸ್ಸು ಈಗ ಸಾಮಾಜಿಕ ಜಾಲತಾಣಗಳಲ್ಲಿ ಟ್ರೆಂಡ್ ಆಗಿ ಬದಲಾಗಿದೆ.

ಹೌದು, ಉಬರ್ ಕ್ಯಾಬ್ ಅನ್ನು ಚಾಲನೆ ಮಾಡುತ್ತಿರುವ ಸಂತೋಷ್ ಎಂಬ ಡ್ರೈವರ್ ಓರ್ವ ಕೇವಲ ಹಣ ಸಂಪಾದನೆಗಾಗಿ ಮಾತ್ರವಲ್ಲ ಅದರಲ್ಲಿ ಮಾನವೀಯತೆ ಕೂಡ ಇದೆ ಎಂಬುದನ್ನು ತೋರಿಸಿಕೊಟ್ಟಿದ್ದಾರೆ. ಪ್ರಸ್ತುತ ಸುದ್ದು, ಸಾಮಾಜಿಕ ಮಾಧ್ಯಮದಲ್ಲಿ ಮಿಂಚುತ್ತಿರುವ ಸಂತೋಷ್ ಎಂಬುವವರು ಕ್ಯಾಬ್ ಡ್ರೈವರ್‌ಗಳ ಬಗ್ಗೆ ಒಳ್ಳೆಯ ಅಭಿಪ್ರಾಯ ಮೂಡುವಂತೆ ಮಾಡಿದ್ದಾರೆ.

ಮಧ್ಯರಾತ್ರಿ ಮಾನವೀಯತೆ ಮೆರೆದ 'ಕ್ಯಾಬ್ ಡ್ರೈವರ್‌'!..ವೈರಲ್ ಆಯ್ತು ಸ್ಟೋರಿ!!

ರಾತ್ರಿ ವೇಳೆಯಲ್ಲಿ ಮಹಿಳೆಯರ ಮೇಲೆ ಮೃಗಗಳಂತೆ ಎರಗುವ ಕಾಮುಕರಿರುವಾಗ ಕೋಲ್ಕತ್ತಾದ ಉಬರ್ ಡ್ರೈವರ್ ಸಂತೋಷ್ ಅವರು ಮಹಿಳೆಯ ರಕ್ಷಣೆಗಾಗಿ ತನ್ನ ಕೆಲಸದ ಅವಧಿ ಮುಗಿದ ನಂತರವೂ ತಮ್ಮ ಅಮೂಲ್ಯ ಸಮಯವನ್ನು ವ್ಯಯಿಸಿದ್ದಾರೆ. ಹಾಗಾದರೆ, ಏನಿದು ಮಾನವೀಯತೆಯುಳ್ಳ ಉಬರ್ ಡ್ರೈವರ್ ಓರ್ವನ ಸ್ಟೋರಿ ಎಂಬುದನ್ನು ಮುಂದೆ ಓದಿ ತಿಳಿಯಿರಿ.

ಏನಿದು ಘಟನೆ?

ಏನಿದು ಘಟನೆ?

ಈ ಘಟನೆಯು 1 ಗಂಟೆಗೆ ಸಂಭವಿಸಿದ್ದು, ಪ್ರಿಯಾಶ್ಮಿತ ಗುಹಾ ಎಂಬುವವರು ಉಬರ್ ಕ್ಯಾಬ್ ಬುಕ್ ಮಾಡಿಕೊಂಡು ಅವರು ಉಳಿದುಕೊಂಡಿದ್ದ ಸ್ಥಳಕ್ಕೆ ತೆರಳಿದರು. ಕ್ಯಾಬ್ ಮನೆಗೆ ಬಂದಾಗ ಗೇಟ್ ಲಾಕ್ ಆಗಿತ್ತು. ಈ ವೇಳೆ ಪ್ರಿಯಾಶ್ಮಿತ ಗುಹಾ ಮತ್ತು ಅವರ ತಾಯಿಯನ್ನು ಅವರನ್ನು ಡ್ರಾಪ್ ಮಾಡಿದ ಸಂತೋಷ್ ಅವರು ಸುರಕ್ಷಿತ ಎಂದು ದೃಢವಾದ ನಂತರ ಮಾತ್ರ ಅಲ್ಲಿಂದ ಹೊರಟಿದ್ದರು.

ಕಾದದ್ದು ಎಷ್ಟು ಸಮಯ?

ಕಾದದ್ದು ಎಷ್ಟು ಸಮಯ?

ಪ್ರಿಯಾಶ್ಮಿತ ಗುಹಾ ಮತ್ತು ಅವರ ತಾಯಿ ಅವರು ಸುರಕ್ಷಿತ ಎಂದು ದೃಢವಾಗಲು ಸಂತೋಷ್ ಅವರು ಮಧ್ಯರಾತ್ರಿ 1 ಗಂಟೆಯ ಸಮಯದಲ್ಲಿ ಒಂದುವರೆ ಗಂಟೆಗಳ ಕಾಲ ಕಾದುನಿಂತಿದ್ದರು. ಸ್ವತಃ ಪ್ರಿಯಾಶ್ಮಿತ ಗುಹಾ ಅವರೇ ಸಂತೋಷ್ ಅವರನ್ನು ತೆರಳಿ ಎಂದರೂ ಅವರ ಸುರಕ್ಷತೆಗಾಗಿ ಸಂತೋಷ್ ಕಾದುನಿಂತಿದ್ದರೂ. ಈ ಬಗ್ಗೆ ಗುಹಾ ಅವರು ಟ್ವಿಟ್ ಮೂಲಕ ಉಬರ್ ಗಮನಸೆಳೆದಿದ್ದರು.

ಗುಹಾ ಟ್ವಿಟ್ ಹೀಗಿತ್ತು.

ಗುಹಾ ಟ್ವಿಟ್ ಹೀಗಿತ್ತು.

ಹೇ @UberIndia, ನಾನು ನಿಮ್ಮ ಕ್ಯಾಬ್ ಡ್ರೈವರ್ ಸಂತೋಷ್ ಅವರ ಬಗ್ಗೆ ಹೇಳಬೇಕು. ಕೊನೆಯ ಮಧ್ಯರಾತ್ರಿ ನಾವು ವಾಸಿಸುತ್ತಿದ್ದ ಸ್ಥಳವು ಗೇಟ್ ಮುಚ್ಚಲ್ಪಟ್ಟಿತು. ಗೇಟ್ ತೆರೆಯುವವರೆಗೂ ಕಾಯುತ್ತೇವೆ ಎಂದು ನಾವೇ ಹೇಳಿದರೂ ಅವರು ನಿರಾಕರಿಸಿದರು. ಸುಮಾರು ಒಂದುವರೆ ಗಂಟೆಗಳ ಕಾಲ ಅವರು ನಮಗಾಗಿ ಮಧ್ಯರಾತ್ರಿ ಕಾದಿದ್ದರು. ಅವರಿಗೆ ತಾಯಿ ಮತ್ತು ನಾನು ಶಾಶ್ವತವಾಗಿ ಕೃತಜ್ಞರಾಗಿರುತ್ತೇವೆ ಎಂದು ಟ್ವಿಟ್ ಮಾಡಿದ್ದರು.

ವೈರಲ್ ಆಯ್ತು ಟ್ವಿಟ್!

ವೈರಲ್ ಆಯ್ತು ಟ್ವಿಟ್!

ಕ್ಯಾಬ್ ಡ್ರೈವರ್ ಸಂತೋಷ್ ಅವರ ಮಾನವೀಯತೆ ಬಗ್ಗೆ ಪ್ರಿಯಾಶ್ಮಿತ ಗುಹಾ ಅವರು ಮಾಡಿದ ಒಂದು ಟ್ವಿಟ್ ವೈರಲ್ ಆಗಿತ್ತು. 1600ಕ್ಕೂ ಹೆಚ್ಚು ರೀ ಟ್ವಿಟ್ ಹಾಗೂ 5,300ಕ್ಕಿಂತ ಹೆಚ್ಚು ಲೈಕ್ ಕಂಡ ಟ್ವಿಟ್ ಉಬರ್ ಕಂಪೆನಿಯ ಗಮನವನ್ನು ಸಹ ಸೆಳೆಯಿತು. ಗುಹಾ ಅವರ ಟ್ವಿಟ್ ಅನ್ನು ರೀ ಟ್ವಿಟ್ ಮಾಡಿದ ಹಲವರು ಸಂಪೋಷ್ ಅವರ ಮಾನವೀಯತೆಯನ್ನು ಮೆಚ್ಚಿದರು.

ಸಂತೋಷ್ ಅವರಿಗೆ ಸನ್ಮಾನ!

ಸಂತೋಷ್ ಅವರಿಗೆ ಸನ್ಮಾನ!

ಈ ಘಟನೆ ವೈರಲ್ ಆದ ನಂತರ, ರಾಷ್ಟ್ರದ ಸುತ್ತಲೂ ಹೃದಯಗಳನ್ನು ಗೆದ್ದ ತನ್ನ ಬದ್ಧತೆ ಮತ್ತು ಮೌಲ್ಯಗಳಿಗೆ ಅವನಿಗೆ ಧನ್ಯವಾದ ಸಲ್ಲಿಸುವಂತೆ ನಾವು ಇಂದು ಸಂತೋಷ್ ಅವರನ್ನು ಆಹ್ವಾನಿಸಿದ್ದೇವೆ. ಸಂತೋಷ್‌ಗೆ ಲೆಕ್ಕವಿಲ್ಲದಷ್ಟು ಉತ್ತಮ ಶುಭಾಶಯಗಳ ಕಳೆದ ಎರಡು ದಿನಗಳು ನಮಗೆ ನಿಜವಾಗಿಯೂ ಲಾಭದಾಯಕವಾಗಿದ್ದವು ಎಂದು ಉಬರ್ ಸಂಸ್ಥೆ ತಿಳಿಸಿದೆ.

Best Mobiles in India

English summary
a recent story about a taxi driver and his two female passengers has earned him praise on social media. to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X