ಟಿಪ್ಸ್‌ನಿಂದ ಊಬರ್ ಚಾಲಕರು ಪಡೆದಿದ್ದಾರೆ 4068 ಕೋಟಿ ರೂ!!!
ಟಿಪ್ಸ್‌ನಿಂದ ಯಾರಾದರೂ ಇಷ್ಟೊಂದು ದೊಡ್ಡ ಮೊತ್ತದ ಹಣವನ್ನು ಪಡೆಯುತ್ತಾರೆಯೇ ಎಂಬ ಪ್ರಶ್ನೆ ನಿಮ್ಮ ತಲೆಯಲ್ಲಿ ಓಡುತ್ತಿರಬಹುದು. ಆದರೆ, ಇದು ಒಬ್ಬರು ಪಡೆದ ಟಿಪ್ಸ್ ಅಲ್ಲ ಬದಲಾಗಿ ಊಬರ್ ಚಾಲಕರು ಪಡೆದಿರುವ ಟಿಪ್ಸ್ ಮೌಲ್ಯ ಎಂದರೇ ನಂಬಲೇಬೇಕು.
ಹೌದು, ಕಳೆದ ವರ್ಷ ಊಬರ್ ತನ್ನ ಚಾಲಕರಿಗೆ ಟಿಪ್ಸ್ ನೀಡಲು ಆಪ್‌ನಲ್ಲಿ ಸೌಲಭ್ಯ ಕಲ್ಪಿಸಿತ್ತು. ಊಬರ ಕಲ್ಪಿಸಿದ ಈ ಸೌಲಭ್ಯದಿಂದ ಸುಮಾರು 4000 ಕೋಟಿ ರೂ.ಗೂ ಹೆಚ್ಚು ಮೌಲ್ಯದ ಹಣ ಟಿಪ್ಸ್ ರೂಪದಲ್ಲಿ ಚಾಲಕರ ಜೇಬು ಸೇರಿದೆ. 2017ರ ಆಗಸ್ಟ್‌ನಲ್ಲಿ ಇದು 339 ಕೋಟಿ ರೂ. ತಲುಪಿತ್ತು.

ಮೇನಲ್ಲಿ ಮಿಡ್‌ಟ್ರಿಪ್ ರೇಟಿಂಗ್ ಮತ್ತು ಟಿಪ್ಸ್ ಫೀಚರ್ಸ್‌ನಿಂದ ಶೇ.30ರಷ್ಟು ಟಿಪ್ಸ್ ಪ್ರಮಾಣ ಹೆಚ್ಚಳವಾಗಿದೆ ಎಂದು ಊಬರ್ ಪ್ರೋಡಕ್ಟ್ ಮ್ಯಾನೇಜರ್ ಧೃವ ತ್ಯಾಗಿ ತಮ್ಮ ಬ್ಲಾಗ್‌ನಲ್ಲಿ ಬರೆದುಕೊಂಡಿದ್ದಾರೆ. ಏಪ್ರೀಲ್‌ನಲ್ಲಿ ಲಿಪ್ಟ್ ಕ್ಯಾಬ್ ಸಂಸ್ಥೆ ಘೋಷಿಸಿದಂತೆ ತನ್ನ ಚಾಲಕರು 3390 ಕೋಟಿ ರೂ.ಗಳನ್ನು ಟಿಪ್ಸ್ ರೂಪದಲ್ಲಿ ಪಡೆದಿದ್ದಾರೆ. ಟಿಪ್ಸ್ ಪ್ರಮಾಣ 2016ಕ್ಕೆ ಹೋಲಿಸಿದರೆ 2017ಕ್ಕೆ ಶೇ.8 ರಷ್ಟು ಏರಿಕೆ ಕಂಡಿದೆ ಎಂದು ಹೇಳಿಕೊಂಡಿದೆ.
ಊಬರ್‌ನಂತೆ ಲಿಫ್ಟ್ ಎಲ್ಲಾ ಮಾರುಕಟ್ಟೆಗಳಲ್ಲಿ ಲಭ್ಯವಿಲ್ಲ. ಲಿಫ್ಟ್ ಸಂಸ್ಥೆ ಕೇವಲ ಯುಎಸ್ ಮತ್ತು ಕೆನಡಾದಲ್ಲಿ ಮಾತ್ರ ಕಾರ್ಯನಿರ್ವಹಿಸುತ್ತಿದೆ. ಆದರೆ, ಊಬರ್ ಯುಎಸ್, ಕೆನಡಾ, ಮಧ್ಯ ಮತ್ತು ದಕ್ಷಿಣ ಅಮೆರಿಕಾ, ಯುರೋಪ್, ಮಧ್ಯಪ್ರಾಚ್ಯ, ಆಫ್ರಿಕಾ, ಪೂರ್ವ ಏಷ್ಯಾ, ದಕ್ಷಿಣ ಏಷ್ಯಾ, ಆಗ್ನೇಯ ಏಷ್ಯಾ, ಆಸ್ಟ್ರೇಲಿಯಾ ಮತ್ತು ನ್ಯೂಜಿಲೆಂಡ್‌ಗಳಲ್ಲಿ ಕಾರ್ಯನಿರ್ವಹಿಸುತ್ತದೆ. ಆದ್ದರಿಂದ ಟಿಪ್ಸ್ ಹೆಚ್ಚು ಬರಲು ಅವಕಾಶವಿದೆ.

ಊಬರ್ ಚಾಲಕರು ಸಾಲ್ಟ್‌ಲೇಕ್ ಸಿಟಿ, ಉಥಾಃ, ಸ್ಯಾನ್ ಆಂಟೋನಿಯೊ, ಟೆಕ್ಸಾಸ್, ಕನ್ಸಾಸ್ ಸಿಟಿ, ಮೊ, ನ್ಯೂ ಓರ್ಲಿಯನ್ಸ್, ಲಾ. ಮತ್ತು ನ್ಯಾಶ್ವಿಲ್ಲೆ, ಟೆನ್ನ್‌ಗಳಲ್ಲಿ ಹೆಚ್ಚಿನ ಟಿಪ್ಸ್ ಪಡೆಯುತ್ತಾರೆ. ಲಿಫ್ಟ್ ಸಂಸ್ಥೆ ಅಧಿಕೃತವಾಗಿ ಟಿಪ್ಸ್ ಪ್ರಮಾಣವನ್ನು ಘೋಷಿಸಿದಾಗ ಕಂಡುಬಂದಿದ್ದು ಏನೆಂದರೆ, ನ್ಯೂಯಾರ್ಕ್, ಅಟ್ಲಾಂಟಾ, ಡೆಟ್ರಾಯಿಟ್, ಡಲ್ಲಾಸ್, ಸ್ಯಾನ್‌ಜೋಸ್, ಮಿನ್ನಿಯಾಪೋಲಿಸ್ ಮತ್ತು ವೆಸ್ಟ್‌ಚೆಸ್ಟರ್ ಕೌಂಟಿ ನಗರಗಳ ಜನರು ಬಹಳ ಉದಾರಿಗಳು ಎಂಬುದು.
ಟಿಪ್ಸ್ ನೀಡಲು ಬಹಳಷ್ಟು ಜನ ಹೆಚ್ಚು ಆಯ್ಕೆ ಮಾಡಿಕೊಂಡಿದ್ದು, ಗುರುವಾರ, ಶುಕ್ರವಾರ, ಶನಿವಾರ. ಅದಲ್ಲದೇ ಗುರುವಾರ ರಾತ್ರಿ 8.12ಕ್ಕೆ, ಶನಿವಾರ ರಾತ್ರಿ 10.33ಕ್ಕೆ ಮತ್ತು ಭಾನುವಾರ ಬೆಳಿಗ್ಗೆ 5.17ಕ್ಕೆ ಹೆಚ್ಚು ಟಿಪ್ಸ್ ನೀಡಿರುವ ಆಸಕ್ತಿಕರ ಅಂಶ ಬಯಲಾಗಿದೆ.


Click it and Unblock the Notifications