Home
ಸುದ್ದಿಜಾಲ

ಊಬರ್‌ನಿಂದ ಭಾರತದಲ್ಲಿ ಹೊಸ ಸೇವೆ..! ಇನ್ಮುಂದೆ ಸಿಗಲಿದೆ ಗಿಫ್ಟ್ ಕಾರ್ಡ್..!

ಭಾರತೀಯ ಮಾರುಕಟ್ಟೆಯಲ್ಲಿ ಆಪ್ ಆಧಾರಿತ ಕ್ಯಾಬ್ ಸೇವೆ ನೀಡುವ ಮೂಲಕ ಕಾಣಿಸಿಕೊಂಡ ಅಮೇರಿಕಾ ಮೂಲದ ಉಬರ್ ಸಂಸ್ಥೆ, ಭಾರತದಲ್ಲಿ ಹೊಸ ಮಾದರಿಯ ಸೇವೆ ಒಂದರ ಹಿಂದೆ ಒಂದರಂತೆ ಆರಂಭ ಮಾಡುತ್ತಿದೆ. ಇದೇ ಮಾದರಿಯಲ್ಲಿ ಕೆಲವು ದಿನಗಳ ಹಿಂದೆ ಊಬರ್ ಇಟ್ಸ್ ಎನ್ನುವ ಫುಡ್ ಡೆಲಿವರಿ ಸೇವೆಯನ್ನು ಮಾರುಕಟ್ಟೆಯಲ್ಲಿ ಲಾಂಚ್ ಮಾಡಿತ್ತು. ಈಗ ಇದರೊಂದಿಗೆ ಹೊಸ ಮಾದರಿಯ ಮತ್ತೊಂದು ಸೇವೆಯನ್ನು ನೀಡಲು ಮುಂದಾಗಿದೆ.

ಊಬರ್‌ನಿಂದ ಭಾರತದಲ್ಲಿ ಹೊಸ ಸೇವೆ..! ಇನ್ಮುಂದೆ ಸಿಗಲಿದೆ ಗಿಫ್ಟ್ ಕಾರ್ಡ್..!

ದಿನೇ ದಿನೇ ಮಾರುಕಟ್ಟೆಯಲ್ಲಿ ಉಬರ್ ಬಳಕೆ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ತನ್ನ ಬಳಕೆದಾರರಿಗೆ ಗಿಫ್ಟ್ ಕಾರ್ಡ್ ಸೇವೆ ನೀಡಲು ಮುಂದಾಗಿದೆ. ಈ ಕಾರ್ಡ್ ಸೇವೆಯಲ್ಲಿ ಬಳಕೆದಾರರು ಉಬರ್ ಕ್ಯಾಬ್ಸ್ ಮತ್ತು ಉಬರ್ ಈಟ್ಸ್ ಎರಡು ಸೇವೆಯ ಲಾಭವನ್ನು ಪಡೆದುಕೊಳ್ಳಬಹುದಾಗಿದೆ. ಉಬರ್ ಗಿಫ್ಟ್ ಕಾರ್ಡ್ ನಿಂದ ಬಳಕೆದಾರರಿಗೆ ಹೆಚ್ಚಿನ ಲಾಭವಾಗಲಿದೆ.

ಕ್ವಿಕ್ ಕ್ಲಿನರ್ ಜತೆ ಒಪ್ಪಂದ

ಕ್ವಿಕ್ ಕ್ಲಿನರ್ ಜತೆ ಒಪ್ಪಂದ

ಉಬರ್ ಇದಕ್ಕಾಗಿ ಕ್ವಿಕ್ ಕ್ಲಿನರ್ ಎನ್ನುವ ಎಂಬ ಸಂಸ್ಥೆಗೆ ಒಪ್ಪಂದ ಮಾಡಿಕೊಂಡಿದ್ದು ಇದು ಅಫಿಶಿಯಲ್ ಆಗಿ ಉಬರ್ ಗಿಫ್ಟ್ ಕಾರ್ಡನ ಬಳಕೆಗೆ ನೀಡಲಿದೆ. ಒಮ್ಮೆ ಉಬರ್ ಗಿಫ್ಟ್ ಕಾರ್ಡ್ ಅನ್ನು ರಿಚಾರ್ಜ್ ಮಾಡಿಸಿಕೊಟ್ಟಲ್ಲಿ ಇದು 36 ತಿಂಗಳ ಕಾಲ ಚಾಲ್ತಿಯಲ್ಲಿ ಇರಲಿದೆ.

ಹೆಚ್ಚಿನ ಲಾಭ

ಹೆಚ್ಚಿನ ಲಾಭ

ಇದು ಬಳಕೆದಾರರಿಗೆ ಹೆಚ್ಚಿನ ಲಾಭವನ್ನು ಮಾಡಿಕೊಡಲಿದೆ. ಸ್ನೇಹಿತರಿಗೆ ಗಿಫ್ಟ್ ನೀಡುವ ಸಂದರ್ಭದಲ್ಲಿ ಏನನ್ನು ನೀಡಬೇಕು ಎಂಡು ತಿಳಿಯದೆ ಇದ್ದ ಸಂದರ್ಭದಲ್ಲಿ ಈ ಮಾದರಿಯ ಗಿಪ್ಟ್ ಕಾರ್ಡ್ ಅನ್ನು ನೀಡಬಹುದಾಗಿದೆ.

10,000 ರೂ.ವರೆಗೂ ಗಿಫ್ಟ್‌ ಕಾರ್ಡ್‌

10,000 ರೂ.ವರೆಗೂ ಗಿಫ್ಟ್‌ ಕಾರ್ಡ್‌

ಉಬರ್ ನೀಡುತ್ತಿರುವ ಗಿಫ್ಟ್ ಕಾರ್ಡನ್ನು ರೂ.10,000ದ ವರೆಗೆ ನೀಡಬಹುದಾಗಿದೆ. ಇದರಲ್ಲಿ ಉಬರ್ ಕ್ಯಾಬ್ ಮತ್ತು ಉಬರ್ ಇಟ್ಸ್ ಸೇವೆಯನ್ನು ಪಡೆದುಕೊಳ್ಳಬಹುದಾಗಿದೆ. ಇದರಿಂದಾಗಿ ಒಂದೇ ಕಾರ್ಡ್ ನಲ್ಲಿ ಹೆಚ್ಚಿನ ಲಾಭವನ್ನು ಮಾಡಿಕೊಡಲಿದೆ. ಈಗಾಗಲೇ ವಿದೇಶಗಳಲ್ಲಿ ಉಬರ್ ಗಿಫ್ಟ್ ಕಾರ್ಡ್ ಸೇವೆಯನ್ನು ಕಾಣಬಹುದಾಗಿದ್ದು, ಭಾರತಕ್ಕೆ ಇದು ಹೊಸದು ಎನ್ನಲಾಗಿದೆ. ಪೇಟಿಎಂ ನಲ್ಲಿ ನೀವು ಗಿಫ್ಟ್ ಕಾರ್ಡ್ ಖರೀದಿಸಬಹುದಾಗಿದೆ.

ಉಬರ್ ಗಿಫ್ಟ್ ಕಾರ್ಡ್ ಪಡೆಯುವುದು ಹೇಗೆ..?

ಉಬರ್ ಗಿಫ್ಟ್ ಕಾರ್ಡ್ ಪಡೆಯುವುದು ಹೇಗೆ..?

1 ಉಬರ್ ಆಪ್ ಒಪನ್ ಮಾಡಿ

2 ಪೇಮೆಂಟ್ ಸೆಕ್ಷನ್ ಗೆ ಹೋಗಿ

3 ಗಿಫ್ಟ್ ಕಾರ್ಡ್ ಅನ್ನು ಪೇಮೆಂಟ್ ಮೆತೆಡ್ ನಲ್ಲಿ ಆಯ್ಕೆ ಮಾಡಿಕೊಳ್ಳಿ

4 ಗಿಫ್ಟ್ ಕಾರ್ಡ್ ಕೋಡ್ ಎಂಟ್ರಿ ಮಾಡಿ

5 ನಂತರದಲ್ಲಿ ನೀವು ಇದರ ಲಾಭ ಪಡೆದುಕೊಳ್ಳಬಹುದಾಗಿದೆ.

Best Mobiles in India

English summary
Uber Gift Cards launched in India: All you need to know. To know more this visit kannada.gizbot.com
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+