ಉಬರ್ ಕಂಪೆನಿ ಮುಖ್ಯಕೇಂದ್ರವಾಗಿ ಬೆಂಗಳೂರು ಆಯ್ಕೆ!!

Written By:

ಪ್ರಪಂಚದಾದ್ಯಂತ ಕ್ಯಾಬ್‌ ಸೇವೆಗೆ ಹೆಸರಾಗಿರುವ ಸ್ಯಾನ್‌- ಫ್ರಾನ್‌ಸಿಸ್ಕೊ ಮೂಲದ ಉಬರ್ ಕಂಪೆನಿ ಇದೀಗ ದಕ್ಷಿಣ ಭಾರತದಲ್ಲಿ ತನ್ನ ಮುಖ್ಯಕೇಂದ್ರವಾಗಿ ಸಿಲಿಕಾನ್‌ ಸಿಟಿ ಬೆಂಗಳೂರನ್ನು ಆಯ್ದುಕೊಂಡಿದೆ. ಭಾರತದಲ್ಲಿ ಅತಿ ವೇಗವಾಗಿ ಬೆಂಗಳೂರು ನಗರ ಬೆಳೆಯುತ್ತಿದ್ದು, ದಕ್ಷಿಣ ಭಾರತದಲ್ಲಿ ತನ್ನ ಉದ್ಯಮಕ್ಕೆ ಬೆಂಗಳೂರು ಸರಿಯಾದ ಸ್ಥಳವೆಂದು ಉಬರ್‌ ಗುರುತಿಸಿದೆ.

ಎಂಜಿನಿಯರಿಂಗ್ ಹಬ್‌ ಆಗಿ ನಾವು ಬೆಂಗಳೂರನ್ನು ಗುರುತಿಸಿದ್ದು, ಹೊಸ ಕೇಂದ್ರದಿಂದ ಗ್ರಾಹಕ ಮತ್ತು ಡ್ರೈವರ್‌ಗಳಿಗೆ ಹೆಚ್ಚು ಉಪಯೋಗ ಆಗಲಿದೆ, ಅತ್ಯಾಧುಕ ತಂತ್ರಜ್ಞಾನಗಳನ್ನು ಹೊಂದಿರುವ ಉಬರ್‌ ಸಂಸ್ಥೆಯ ಮೂಲಕ ಕ್ಯಾಬ್‌ ಸೇವೆಯಲ್ಲಿ ಗ್ರಾಹಕರು ಅತ್ಯುತ್ತಮ ಅನುಭವವನ್ನು ಪಡೆಯಲಿದ್ದಾರೆ ಎಂದು ಉಬರ್‌ ಕಂಪೆನಿ ಹೇಳಿದೆ.

 ಉಬರ್ ಕಂಪೆನಿ ಮುಖ್ಯಕೇಂದ್ರವಾಗಿ ಬೆಂಗಳೂರು ಆಯ್ಕೆ!!

ಸರ್ಕಾರದ ಈ 5 ಯೋಜನೆಗಳಿಗೆ ಆಧಾರ್ ಕಾರ್ಡ್ ಲಿಂಕ್ ಮಾಡಿಸಲೇಬೇಕು!! ಯಾವುವು?

ಈ ಬಗ್ಗೆ ಭಾರತ ಮತ್ತು ದಕ್ಷಣ ಏಷ್ಯಾದ ಉಬರ್ ಅಧ್ಯಕ್ಷ ಅಮಿತ್ ಜೈನ್ ಮಾತನಾಡಿ ನಾವು ಕಂಪೆನಿ ಉದ್ಯಮದ ಎಲ್ಲಾ ಕ್ಷೇಗಳಲ್ಲಿಯೂ ಬಂಡವಾಳ ಹೂಡುತ್ತಿದ್ದೇವೆ. ಭಾರತದಲ್ಲಿ ತಂತ್ರಜ್ಞಾನ ಮತ್ತು ಉತ್ಪನ್ನಗಳ ಬೆಳವಣಿಗೆಯ ಗುರಿಯನ್ನು ಹೊಂದಿದ್ದೇವೆ ಎಂದು ಹೇಳಿದರು.

 ಉಬರ್ ಕಂಪೆನಿ ಮುಖ್ಯಕೇಂದ್ರವಾಗಿ ಬೆಂಗಳೂರು ಆಯ್ಕೆ!!

2016 ರಲ್ಲಿ ಹೈದ್ರಬಾದ್‌ನಲ್ಲಿ ನಾವು ಕೇಂದ್ರನ್ನು ತೆರೆದಿದ್ದು, 50 ಬಿಲಿಯನ್‌ ಹಣವನ್ನು ಹೂಡಿದ್ದೇವೆ. ಇದೀಗ ಬೆಂಗಳೂರಿನಲ್ಲಿ ಹೆಚ್ಚು ಬಂಡವಾಳವನ್ನು ಹೂಡಲು ತಯಾರಿದ್ದೇವೆ ಎಂದು ಉಬರ್‌ ತಿಳಿಸಿದೆ. ಗ್ರಾಹಕ ಮತ್ತು ಚಾಲಕರಿಗೆ ಉತ್ತಮ ಸೌಲಭ್ಯವನ್ನು ನೀಡುವುದೇ ಉಬರ್‌ನ ಮುಖ್ಯಗುರಿ ಎಂದು ಉಬರ್ ಕಂಪೆನಿ ಹೇಳಿದೆ.

English summary
uber new centre could be used for providing both rider and driver support. to know more visit to kannada.gizbot.com
Please Wait while comments are loading...
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot