ಊಬರ್ ನಲ್ಲಿ ಸ್ವಯಂ ಚಾಲಿತ ಕಾರು ಬಿಡುಗಡೆಗೆ ನೂರೆಂಟು ತೊಡಕು

|

ಊಬರ್ ಸ್ವಯಂ ಚಾಲಿತ ಕಾರುಗಳ ಬಿಡುಗಡೆಗೆ ಯೋಜಿಸುತ್ತಿದೆ. ತನ್ನ ಹಾರ್ಡ್ ಜಾರ್ಜಿಂಗ್ ಶೈಲಿಗೆ ಪ್ರಸಿದ್ಧವಾಗಿರುವ ಊಬರ್ ತನ್ನ ಅಟೋನೋಮಸ್ ವೆಹಿಕಲ್ ಪ್ರೋಗ್ರಾಂನಿಂದಾದ ಅಪಘಾತವನ್ನು ಚೇತರಿಸಿಕೊಳ್ಳುವುದಕ್ಕೆ ಸಾಂಪ್ರದಾಯಿಕ ಶೈಲಿಯ ವಿಧಾನವನ್ನು ತೆಗೆದುಕೊಳ್ಳಲು ಚಿಂತನೆ ನಡೆಸಿದೆ.

ಊಬರ್ ನಲ್ಲಿ ಸ್ವಯಂ ಚಾಲಿತ ಕಾರು ಬಿಡುಗಡೆಗೆ ನೂರೆಂಟು ತೊಡಕು

ಪೆನ್ಸಿಲ್ವೇನಿಯಾ ರಾಜ್ಯದಿಂದ ಅನುಮೋದನೆ ಸಿಕ್ಕ ನಂತರ, ಊಬರ್ ಸಂಸ್ಥೆ ಪೀಟ್ಸ್ಬರ್ಗ್ ನಲ್ಲಿರುವ ತನ್ನ ಎರಡು ಆಫೀಸ್ ಗಳ ಮೂಲಕ ಕೆಲವೇ ಕೆಲವು ಕಾರ್ ಗಳನ್ನು ಚಾಲನೆ ಮಾಡಲು ಪ್ರಾರಂಭಿಸಲಿದೆ. ಇಲ್ಲಿಯೇ ಮೊದಲ ಬಾರಿಗೆ ಊಬರ್ ಅಟೋನೋಮಸ್ ವೆಹಿಕಲ್ ಗಳ ಬಗ್ಗೆ 2016 ರಲ್ಲಿ ಚರ್ಚೆ ನಡೆಸಿತ್ತು ಎಂದು ಕಂಪೆನಿಯ ವಕ್ತಾರೆ ಸಾರಾ ಅಬ್ಬಾದ್ ತಿಳಿಸಿದ್ದಾರೆ.

ಸುಮಾರು ಒಂಬತ್ತು ತಿಂಗಳ ಹಿಂದೆ ಅರಿಝೋನಾದಲ್ಲಿ ನಡೆದ ಅಪಘಾತದ ಹಿನ್ನೆಲೆಯಲ್ಲಿ ಊಬರ್ ನ ಮೊದಲ ಸ್ವಯಂಚಾಲನಾ ಕಾರ್ ಪರೀಕ್ಷೆಗಳನ್ನು ಸಾರ್ವಜನಿಕ ಬೀದಿಗಳಲ್ಲಿ ನಿಲ್ಲಿಸಲಾಗಿತ್ತು. ಈ ಘಟನೆಯಲ್ಲಿ ಹಲವಾರು ಪಾದಚಾರಿಗಳು ಮೃತಪಟ್ಟಿದ್ದರು.

ಕಳೆದ ಬಾರಿಯ ಘಟನೆಯಲ್ಲಿ ಊಬರ್ ಹಲವು ತಪ್ಪುಗಳನ್ನು ಮಾಡಿತ್ತು ನಿಜ. ರಾತ್ರಿಯ ವೇಳೆಯಲ್ಲಿ, ಪಾದಚಾರಿಗಳು ಅತಿಯಾಗಿ ಓಡಾಡುತ್ತಿದ್ದ ಸಮಯದಲ್ಲಿ ಮತ್ತು ಒಬ್ಬನೇ ಒಬ್ಬ ಮುಂಭಾಗದ ಸೀಟ್ ನಲ್ಲಿ ಬ್ಯಾಕ್ ಅಪ್ ಡ್ರೈವರ್ ಇದ್ದಾಗ ಅಟೋನೊಮಸ್ ಮೋಡ್ ಗಾಗಿ ಊಬರ್ ಪರೀಕ್ಷೆ ಮಾಡಿತ್ತು. ಇದು ದೊಡ್ಡ ಸಮಸ್ಯೆಗೆ ಕಾರಣವಾಯ್ತು.

ಈ ಬಾರಿ ಕಾರ್ ಗಳನ್ನು ರಾತ್ರಿಯ ವೇಳೆ ಆಪರೇಟ್ ಮಾಡುವುದಿಲ್ಲ. ಕಾರಿನ ವೇಗ 25 ಮೈಲ್ಸ್ ಪ್ರತಿ ಘಂಟೆಗೆ ಮೀರುವುದಿಲ್ಲ ಎಂದು ಅಬ್ಬಾದ್ ತಿಳಿಸಿದ್ದಾರೆ.ಇಬ್ಬರು ನೌಕರರು ಕಾರಿನ ಮುಂಭಾಗದ ಸೀಟ್ ನಲ್ಲಿ ಕುಳಿತಿರುತ್ತಾರೆ. ರೊಬೋಟ್ ಗಳು ಪ್ರಯಾಣಿಕರನ್ನು ಎತ್ತಿಕೊಳ್ಳುವ ಬಗ್ಗೆ ಯಾವುದೇ ಯೋಜನೆಯನ್ನೂ ಊಬರ್ ಹೊಂದಿಲ್ಲ. 2016 ರಲ್ಲಿ ಊಬರ್ ಬಿಡುಗಡೆಯಾಯಿತು. ಊಬರ್ ನ ಹೊಸ ಪ್ಲಾನ್ ಗಳು ಏನು ಎಂಬ ಬಗ್ಗೆ ನ್ಯೂಯಾರ್ಕ್ ಟೈಮ್ಸ್ ಮೊದಲ ಬಾರಿಗೆ ಬುಧವಾರ ಪ್ರಕಟಿಸಿದೆ.

ಪೆನ್ಸಿಲ್ವೇನಿಯಾದ ಸಾರಿಗೆ ಇಲಾಖೆಯಿಂದ ಊಬರ್ ಅನುಮೋದನೆಗಾಗಿ ಕಾಯುತ್ತಿದೆ ಮತ್ತು ಅದಕ್ಕಿಂತ ಮುನ್ನ ಟೆಸ್ಟಿಂಗ್ ಕೂಡ ನಡೆಸುವುದಿಲ್ಲ ಎಂದು ಹೇಳಿದೆ. ಹಾಗಾಗಿ ಯಾವುದೇ ಪ್ರಾರಂಭಿಕ ದಿನಾಂಕವನ್ನು ಸೂಚಿಸುವುದಕ್ಕೆ ಊಬರ್ ಹಿಂದೇಟು ಹಾಕಿದೆ.

ಮಾರ್ಚ್ ನಲ್ಲಿ ಅರಿಝೋನಾದ ಅಧಿಕಾರಿಗಳು ಊಬರ್ ನ ಸ್ವಯಂ ಚಾಲನಾ ಕಾರ್ ಗಳನ್ನು ಪರೀಕ್ಷಿಸುವ ಸಾಮರ್ಥ್ಯವನ್ನು ಅಮಾನತುಗೊಳಿಸಿದರು. ಊಬರ್ ನ ದೊಡ್ಡ ಟೆಸ್ಟಿಂಗ್ ಹಬ್ ಆಗಿದ್ದ ಟೆಂಪೆನ ಫೀನಿಕ್ಸ್ ಉಪನಗರದಲ್ಲಿ ರಾತ್ರಿಯ ವೇಳೆ ಬೀದಿ ದಾಟುತ್ತಿದ್ದಾಗ ಕಾರಿ ಅಪಘಾತ ನಡೆದು ಆ ಮಹಿಳೆ ಮೃತ ಪಟ್ಟಿದ್ದಳು. ಆದಾದ ನಂತರ ಊಬರ್ ಸ್ವಯಂಪ್ರೇರಿತವಾಗಿ ಪರೀಕ್ಷಾ ಕೇಂದ್ರವನ್ನು ಸ್ಥಗಿತಗೊಳಿಸಿತ್ತು.

ಆಟೋನಮಸ್ ಡ್ರೈವಿಂಗ್ ಕಾರ್ಯಕ್ರಮವನ್ನು ಆರಂಭಿಸುವುದು ಅಷ್ಟು ಸುಲಭವಲ್ಲ. ಊಬರ್ 24,000 ಕಾರುಗಳ ಖರೀದಿಗಾಗಿ ವೋಲ್ವೋ ಜೊತೆಗೆ ಒಪ್ಪಂದ ಮಾಡಿದೆ ಮತ್ತು ಟಯೋಟಾ ಸಂಸ್ಥೆ 500 ಮಿಲಿಯನ್ ಊಬರ್ ನ ಸ್ವಯಂ ಚಾಲಿತ ಕಾರ್ ಗಳ ಅಭಿವೃದ್ಧಿಗಾಗಿ ಹೂಡಿಕೆ ಮಾಡಿದೆ.

ಈ ವರ್ಷದ ಬೇಸಿಗೆಯಲ್ಲೇ ಪೀಟ್ಸ್ಬರ್ಗ್ ನಲ್ಲಿ ಊಬರ್ ಸಂಸ್ಥೆ ಸ್ವಯಂ ಚಾಲಿತ ಕಾರ್ ಗಳ ಬಿಡುಗಡೆಯ ಭರವಸೆಯನ್ನು ನೀಡಿತ್ತು. ಆದರೆ ನಿಯಂತ್ರಕರು, ಫೆಡರರ್ ತನಿಖೆಗಾರರು ಮತ್ತು ಆಂತರಿಕ ಸುರಕ್ಷತೆಯ ಅಭ್ಯಾಸಗಾರರಿಂದ ಒತ್ತಡ ಎದುರಿಸಿತು. ಕಳೆದ ತಿಂಗಳು ಸ್ವಯಂಚಾಲಿತ ಬ್ರೇಕ್ ಸಿಸ್ಟಮ್ ನ್ನು ಸಕ್ರಿಯಗೊಳಿಸುವ ಮತ್ತು ರೋಡಿನಲ್ಲಿರುವ ವಸ್ತುವನ್ನು ವೇಗವಾಗಿ ಗುರುತಿಸಿ ಅದಕ್ಕೆ ಪ್ರತಿಕ್ರಿಯಿಸುವ ಸಾಮರ್ಥ್ಯವನ್ನು ಸುಧಾರಿಸಿಕೊಳ್ಳುವ ಹಲವಾರು ಬದಲಾವಣೆಯನ್ನು ತರುವ ಬಗೆಗಿನ ಸುರಕ್ಷತಾ ವರದಿಯನ್ನು ಬಿಡುಗಡೆ ಮಾಡಿದೆ.

ಅರಿಝೋನಾ ಕ್ರ್ಯಾಷ್ ಬಗ್ಗೆ ನ್ಯಾಷನಲ್ ಟ್ರಾನ್ಸ್ ಪೋರ್ಟ್ ಸೇಫ್ಟಿ ಬೋರ್ಡ್ (ರಾಷ್ಟ್ರೀಯ ಸಾರಿಗೆ ಸುರಕ್ಷತಾ ಮಂಡಳಿ)ಯಿಂದ ನಿರಂತರ ತನಿಖೆ ನಡೆಯುತ್ತಿದೆ. ಅದು ತನ್ನ ಪ್ರಮುಖ ವರದಿಯನ್ನು ಮುಂದಿನ ವರ್ಷ ಸಲ್ಲಿಸಲಿದೆ.ಅಲ್ಲಿಯವರೆಗೂ ಎಲ್ಲದಕ್ಕೂ ಕಾಯುವಿಕೆಯೇ ಉತ್ತರ.

Best Mobiles in India

Read more about:
English summary
Uber plans smaller, more cautious self-driving car launch

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X