ಊಬರ್ ಬಿಡುಗಡೆ ಮಾಡಿರುವ ‘ಸ್ಕೈಪೋರ್ಟ್’ ಪರಿಕಲ್ಪನೆಯೇ ಹೊಸ ಅದ್ಬುತ!!

|

2020ರ ವೇಳೆಗೆ ಪ್ರಖ್ಯಾತ ಆಪ್ ಆಧಾರಿತ ಕ್ಯಾಬ್ ಸೇವಾ ಸಂಸ್ಥೆ ಊಬರ್ ಏರ್‌ಟ್ಯಾಕ್ಸಿಯನ್ನು ತರಲಿದೆ ಎನ್ನುವ ಸುದ್ದಿ ವೈರಲ್ ಆಗಿದ್ದು ನಿಮಗೆಲ್ಲಾ ಗೊತ್ತಿರಬಹುದು. ಎಲ್ಲರೂ ಉಬರ್ ಸಂಸ್ಥೆಯ ಏರ್‌ಟ್ಯಾಕ್ಸಿ ಬರುವುದನ್ನು ಕಾಯುತ್ತಿರುವಾಗಲೇ, ಉಬರ್ ಏರ್‌ ಸಂಸ್ಥೆಯು ಬಿಡುಗಡೆ ಮಾಡಿರುವ 'ಸ್ಕೈಪೋರ್ಟ್' ಪರಿಕಲ್ಪನೆ ಇದೀಗ ವೈರಲ್ ಆಗಿದೆ.

ಹೌದು, ಆಗಸಕ್ಕೆ ಬಿಡುವ ತಯಾರಿಯಲ್ಲಿರುವ ಊಬರ್ ಏರ್ ಸಂಸ್ಥೆಯ, ಕಾರ್ಗನ್ ಎಂಬ ವಿನ್ಯಾಸ ಸಂಸ್ಥೆ ತಯಾರಿಸಿರುವ ಸ್ಕೈಪೋರ್ಟ್ ಮಾದರಿಯನ್ನು ಬಿಡುಗಡೆ ಮಾಡಿದೆ. ಈ ಸ್ಕೈಪೋರ್ಟ್ ಮಾದರಿಯು ತಂತ್ರಜ್ಞಾನ ಲೋಕದಲ್ಲಿ ಸುಳಿದಿರುವ ಹೊಸ ಅದ್ಬುತಕ್ಕೆ ಸದ್ಯದ ಉದಾಹರಣೆ ಎಂದು ತಂತ್ರಜ್ಞಾನ ಪ್ರಪಂಚ ಮಾತನಾಡಿಕೊಳ್ಳುತ್ತಿದೆ.

ಊಬರ್ ಬಿಡುಗಡೆ ಮಾಡಿರುವ ‘ಸ್ಕೈಪೋರ್ಟ್’ ಪರಿಕಲ್ಪನೆಯೇ ಹೊಸ ಅದ್ಬುತ!!

ಹಾಗಾದರೆ, ಎಲಿವೇಟ್ 2018ರ ಸಮಾವೇಶದಲ್ಲಿ ಏರ್‌ ಟ್ಯಾಕ್ಸಿಗಳ ನಿಲ್ದಾಣ 'ಸ್ಕೈಪೋರ್ಟ್' ಮಾದರಿ ಬಿಡುಗಡೆಯಾಗಿರುವ ಉಬರ್ ಸ್ಕೈಪೋರ್ಟ್‍ನ ಆಲೋಚನೆ ಹೇಗಿದೆ? ಸ್ಕೈಪೋರ್ಟ್ ಪರಿಕಲ್ಪನೆ ಎಲ್ಲೆಡೆ ವೈರಲ್ ಆಗಿರುವುದು ಏಕೆ? ಸ್ಕೈಪೋರ್ಟ್ ಪರಿಕಲ್ಪನೆ ಏನೆಲ್ಲವನ್ನು ಒಳಗೊಂಡಿದೆ ಎಂಬುದನ್ನು ಮುಂದಿನ ಸ್ಲೈಡರ್‌ಗಳಲ್ಲಿ ತಿಳಿಯಿರಿ.

‘ಸ್ಕೈಪೋರ್ಟ್’ ಪರಿಕಲ್ಪನೆ  ಆಹ್ವಾನ!

‘ಸ್ಕೈಪೋರ್ಟ್’ ಪರಿಕಲ್ಪನೆ ಆಹ್ವಾನ!

2020ರ ಹೊತ್ತಿಗೆ ಏರ್‌ಟ್ಯಾಕ್ಸಿಗಳನ್ನು ಆಗಸಕ್ಕೆ ಬಿಡುವ ತಯಾರಿಯಲ್ಲಿರುವ ಊಬರ್ ಏರ್ ಸಂಸ್ಥೆಗೆ ಈ ಸ್ಕೈಪೋರ್ಟ್‍ನ ಆಲೋಚನೆ ಹೊಳೆಯಿತು. ಹಾಗಾಗಿ, ಕೆಲವೇ ತಿಂಗಳ ಹಿಂದೆ ಈ ಟ್ಯಾಕ್ಸಿಗಳ ನಿಲ್ದಾಣ ‘ಸ್ಕೈಪೋರ್ಟ್' ಪರಿಕಲ್ಪನೆಯಲ್ಲಿ ಪ್ರಾಜೆಕ್ಟ್‌ಗಳನ್ನು ಉಬರ್ ಆಹ್ವಾನಿಸಿತು. ಈ ಪ್ರಾಜೆಕ್ಟ್‌ನಲ್ಲಿ ಹಲವು ಹೆಸರಾಂತ ಕಂಪೆನಿಗಳು ಭಾಗವಹಿಸಿದ್ದವು.

ಕಾರ್ಗನ್ ಪರಿಕಲ್ಪನೆ ಬಿಡುಗಡೆ!!

ಕಾರ್ಗನ್ ಪರಿಕಲ್ಪನೆ ಬಿಡುಗಡೆ!!

ಊಬರ್ ಏರ್ ಸಂಸ್ಥೆ ಸ್ಕೈಪೋರ್ಟ್ ಪರಿಕಲ್ಪನೆಯಲ್ಲಿ ಆಹ್ವಾನಿಸಿದ ಪ್ರಾಜೆಕ್ಟ್‌ಗಳಲ್ಲಿ ಕಾರ್ಗನ್ ಎಂಬ ವಿನ್ಯಾಸ ಸಂಸ್ಥೆ ಆಯ್ಕೆಯಾಗಿದೆ. ಕಾರ್ಗನ್ ರೂಪಿಸಿರುವ ಸ್ಕೈಪೋರ್ಟ್‍ನ ಮಾದರಿಯನ್ನು ಉಬರ್ ಬಿಡುಗಡೆಗೊಳಿಸಿ ವಿರ್ಶವನ್ನು ಚಕಿತಗೊಳಿಸಿದೆ. ನೂತನ ವಿನ್ಯಾಸದ ಸ್ಕೈಪೋರ್ಟ್ ಭವಿಷ್ಯದ ನಿಲ್ದಾಣವಾಗುವುದರಲ್ಲಿ ಎರಡು ಮಾತಿಲ್ಲ ಎನ್ನಲಾಗುತ್ತಿದೆ.

ಹೇಗಿದೆ ‘ಸ್ಕೈಪೋರ್ಟ್’ ಪರಿಕಲ್ಪನೆ?

ಹೇಗಿದೆ ‘ಸ್ಕೈಪೋರ್ಟ್’ ಪರಿಕಲ್ಪನೆ?

‘ಸ್ಕೈಪೋರ್ಟ್' ಮೂರು ಹಂತದಲ್ಲಿ ನಿರ್ಮಾಣವಾಗಲಿದ್ದು, ಮೊದಲನೆ ಹಂತದಲ್ಲಿ ಪ್ರಯಾಣಿಕರಿಗೆ ನೆರವಾಗುವ ಕನೆಕ್ಷನ್ ಪ್ಲಾಜಾ. ಹೈಪೊಥೆಟಿಕಲ್ ಸ್ಟೇಷನ್ ಇರಲಿವೆ. ರೆಸ್ಟೊರೆಂಟ್, ಶಾಪಿಂಗ್ ಇನ್ನಿತರ ಸೌಲಭ್ಯಗಳನ್ನು ಇಲ್ಲಿ ನೀಡಲಾಗಿರುತ್ತದೆ. ಬ್ರಿಜ್' ಎಂಬ ಹಂತ ಮೂರನೆಯದಾಗಿದ್ದು, ಟ್ಯಾಕ್ಸಿ ಲ್ಯಾಂಡಿಂಗ್, ಟೇಕಾಫ್‍ಗಳ ಸಂಖ್ಯೆ ಮೇಲೆ ಎಲ್ಲಾ ಹಂತವೂ ನಿಯಂತ್ರಿತವಾಗುತ್ತದೆ.

‘ಸ್ಕೈಪೋರ್ಟ್’ ಸಾಮರ್ಥ್ಯ ಎಷ್ಟು?

‘ಸ್ಕೈಪೋರ್ಟ್’ ಸಾಮರ್ಥ್ಯ ಎಷ್ಟು?

ಜನನಿಬಿಡ ನಗರ ಪ್ರದೇಶಗಳಲ್ಲಿನ ಸ್ಥಳಾಭಾವವನ್ನು ಗಮನದಲ್ಲಿಟ್ಟುಕೊಂಡು ಎತ್ತರದಲ್ಲಿ ಸ್ಕೈಪೋರ್ಟ್ ರೂಪಿಸಲಾಗುತ್ತದೆ. ಒಂದು ಗಂಟೆಗೆ 4000 ಪ್ರಯಾಣಿಕರನ್ನು ಸಾಗಿಸಲು ಈ ನಿಲ್ದಾಣ ಅನುವು ಮಾಡಿಕೊಡಲಿದೆ. ಗಂಟೆಗೆ 180 ಹೆಲಿಕಾಪ್ಟರ್‌ಗಳ ಲ್ಯಾಂಡಿಂಗ್ ಸಾಧ್ಯವಾಗುವಂತೆ ವಿನ್ಯಾಸಗೊಳಿಸಲಾಗುತ್ತದೆ ಎಂದು ತಿಳಿದುಬಂದಿದೆ.

ಮೊಬೈಲ್‌ನಲ್ಲಿಯೇ 'PF' ಬ್ಯಾಲೆನ್ಸ್ ಚೆಕ್ ಮಾಡುವುದು ಹೇಗೆ?
ಭವಿಷ್ಯದ ಪ್ರಪಂಚ!!

ಭವಿಷ್ಯದ ಪ್ರಪಂಚ!!

ನಗರ ಪ್ರದೇಶದಲ್ಲಿ ಟ್ಯಾಕ್ಸಿಗಳನ್ನು ಲ್ಯಾಂಡ್ ಮಾಡುವುದಾದರೂ ಎಲ್ಲಿ ಎಂಬ ಪ್ರಶ್ನೆ ಎದುರಾಗಿತ್ತು. ಏರ್‌ಟ್ಯಾಕ್ಸಿ ಪರಿಕಲ್ಪನೆಯ ಹಿನ್ನಡೆಗೂ ಕಾರಣವಾಗಬಹುದು ಎಂಬ ತಜ್ಞರ ಅಂದಾಜಿಸಿದ್ದರು. ಆದರೆ, ಈಗ ಏರ್‌ಟ್ಯಾಕ್ಸಿ ಮತ್ತು ಸ್ಕೈಪೋರ್ಟ್ ವಿಚಾರ ಎಲ್ಲೆಲ್ಲೂ ಸುದ್ದಿಯಾಗಿದೆ. ಭವಿಷ್ಯದ ಪ್ರಪಂಚವನ್ನು ತಂತ್ರಜ್ಞಾನ ತಜ್ಞರು ಈಗಲೇ ನೋಡುತ್ತಿದ್ದಾರೆ.

Most Read Articles
Best Mobiles in India

Read more about:
English summary
Uber partners with architecture firms to reveal first uberAIR Skyport designs. to know more visit to kannada.gizbt.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X