ಊಬರ್‌ ಚಾಲಕರಿಗಾಗಿ ಬಂತೂ ಉಚಿತ ಇನ್ಶುರೆನ್ಸ್‌..!

By Gizbot Bureau
|

ರೈಡ್‌ ಶೇರಿಂಗ್‌ ಪ್ಲಾಟ್‌ಫಾರ್ಮ್‌ ಆಗಿರುವ ಊಬರ್ ಭಾರತದಲ್ಲಿ ಪ್ರಯಾಣಿಕ ವಿಮೆಯನ್ನು ಜಾರಿಗೆ ತಂದಿದೆ. ಭಾರತಿ AXA ಮತ್ತು ಟಾಟಾ AIG ಪಾಲುದಾರಿಕೆಯಲ್ಲಿ ಯಾವುದೇ ವೆಚ್ಚವಿಲ್ಲದೇ ರೈಡರ್‌ ವಿಮೆಯನ್ನು ಜಾರಿಗೆ ತಂದಿದೆ. ಕಾರು, ಆಟೋ, ಬೈಕ್‌ಗಳಲ್ಲಿ ಹೋಗುವಾಗ ಅಪಘಾತ ಸಂಭವಿಸಿದರೆ ಗರಿಷ್ಠ 5 ಲಕ್ಷ ರೂ.ವರೆಗೂ ವಿಮಾ ಪಾವತಿಯನ್ನು ನೀಡಲಿವೆ. ಊಬರ್‌ನಲ್ಲಿ ಪ್ರಯಾಣಿಸುವಾಗ ಅಪಘಾತದಿಂದ ಗಾಯಾಳುವಾದರೂ ವಿಮೆಗೆ ಒಳಪಡಲಿದೆ.

ಪ್ರಯಾಣಿಕರಿಗೆ ಉಪಯೋಗ

ಪ್ರಯಾಣಿಕರಿಗೆ ಉಪಯೋಗ

ಊಬರ್ ಜೊತೆ ಪಾಲುದಾರಿಕೆ ಹೊಂದಿರುವುದು ಖುಷಿಯಾಗಿದೆ. ಭಾರತದಲ್ಲಿ ಊಬರ್‌ನ ಲಕ್ಷಾಂತರ ಪ್ರಯಾಣಿಕರಿಗೆ ಸಮಗ್ರ ಆಕಸ್ಮಿಕ ವಿಮಾ ಯೋಜನೆಯನ್ನು ಒದಗಿಸುತ್ತೇವೆ. ಊಬರ್ ಡ್ರೈವರ್ ಪಾಲುದಾರರಿಗೆ ರಕ್ಷಣೆ ನೀಡುವುದರಿಂದ ಊಬರ್‌ನೊಂದಿಗಿನ ನಮ್ಮ ನಿರಂತರ ಒಡನಾಟ ಇನ್ನಷ್ಟು ವಿಸ್ತರಣೆಯಾಗಲಿದೆ. ಈ ಸಹಭಾಗಿತ್ವದ ಮೂಲಕ ಪ್ರಯಾಣದ ಸಮಯದಲ್ಲಿ ಯಾವುದೇ ಅಪಘಾತವಾದರೆ ಊಬರ್ ಸವಾರರನ್ನು ಸುರಕ್ಷಿತಗೊಳಿಸುತ್ತೇವೆ ಎಂದು ಭಾರತಿ AXA ಜನರಲ್ ಇನ್ಶೂರೆನ್ಸ್‌ನ ಮುಖ್ಯ ವಿತರಣಾ ಅಧಿಕಾರಿ ಸೌರವ್ ಜೈಸ್ವಾಲ್ ಹೇಳಿದ್ದಾರೆ.

ಸ್ಯಾಟ್‌ಚೆಟ್‌ ವಿಮೆಗೆ ಸೇರ್ಪಡೆ

ಸ್ಯಾಟ್‌ಚೆಟ್‌ ವಿಮೆಗೆ ಸೇರ್ಪಡೆ

ಊಬರ್‌ನ ಹೊಸ ವಿಮಾ ಯೋಜನೆಯು ಭಾರತಿ AXAದ ಸ್ಯಾಟ್‌ಚೆಟ್‌ನ ವಿಮಾ ಕಾರ್ಯಕ್ರಮಗಳಿಗೆ ಸೇರ್ಪಡೆಯಾಗಲಿದ್ದು, ಗ್ರಾಹಕರಿಗೆ ಅವರ ಅಗತ್ಯಗಳನ್ನು ಆಧರಿಸಿ ವಿಮೆ ವ್ಯಾಪ್ತಿಯನ್ನು ನಿರ್ಧರಿಸುತ್ತದೆ. ಇನ್ನು, ಈ ಸಹಯೋಗ ಒಂದು ವರ್ಷ ಹಳೆಯದ್ದು ಎಂದು ಟಾಟಾ AIGಯ ಸಾಮಾನ್ಯ ವಿಮೆ ಕಾರ್ಯನಿರ್ವಾಹಕ ಉಪಾಧ್ಯಕ್ಷ ಮತ್ತು ಪರ್ಸನಲ್ ಲೈನ್ಸ್ ಮುಖ್ಯಸ್ಥರಾಗಿರುವ ಪರಾಗ್ ವೇದ್ ಹೇಳುತ್ತಾರೆ.

ಊಬರ್‌ ಈಟ್ಸ್‌ನಲ್ಲಿ ಪ್ರಾರಂಭ

ಊಬರ್‌ ಈಟ್ಸ್‌ನಲ್ಲಿ ಪ್ರಾರಂಭ

ಮೊದಲಿಗೆ ಈ ಯೋಜನೆ ಊಬರ್ ಈಟ್ಸ್ ವಿತರಣಾ ಪಾಲುದಾರರ ವೈಯಕ್ತಿಕ ಅಪಘಾತ ವಿಮೆಯೊಂದಿಗೆ ಪ್ರಾರಂಭವಾಯಿತು. ಊಬರ್‌ ಈಟ್ಸ್‌ ಉಪಕ್ರಮದ ಯಶಸ್ಸಿನಿಂದಾಗಿ, ನಾವು ಈಗ ನಮ್ಮ ಕಾರ್ಯಕ್ರಮವನ್ನು ಚಾಲಕ ಪಾಲುದಾರರಿಗೆ ಮತ್ತು ಉಬರ್ ಆಟೋ ಮತ್ತು ಉಬರ್ ಮೋಟೋ ಸವಾರರಿಗೂ ವಿಸ್ತರಿಸಿದ್ದೇವೆ. ಅಂತಿಮ ಬಳಕೆದಾರರಿಗೆ ವಿಮಾ ಸೇವೆಗಳ ವಿತರಣೆಯಲ್ಲಿ ಸುಧಾರಣೆ ತರಲು ನಾವು ನಿರಂತರವಾಗಿ ಹೊಸತನ ಹುಡುಕುತ್ತಿದ್ದೇವೆ. ಮತ್ತು ಊಬರ್ ಪರಿಸರ ವ್ಯವಸ್ಥೆಯೊಳಗೆ ನಮ್ಮ ವ್ಯಾಪ್ತಿಯನ್ನು ವಿಸ್ತರಿಸುವ ಆಶಾವಾದಿಗಳಾಗಿದ್ದೇವೆ ಎಂದು ಪರಾಗ್‌ ವೇದ್‌ ಹೇಳಿದ್ದಾರೆ.

ಉತ್ತಮ ಪ್ರತಿಕ್ರಿಯೆ ನಿರೀಕ್ಷೆ

ಉತ್ತಮ ಪ್ರತಿಕ್ರಿಯೆ ನಿರೀಕ್ಷೆ

ಈ ಉಪಕ್ರಮಕ್ಕೆ ಚಾಲಕ ಸಮುದಾಯ ಮತ್ತು ಅವರ ಕುಟುಂಬಗಳಿಂದ ಉತ್ತಮ ಪ್ರತಿಕ್ರಿಯೆ ಸಿಗುತ್ತದೆ. ಊಬರ್ ಸವಾರಿ ಮಾಡುವಾಗ ಹೆಚ್ಚಿನ ಸುರಕ್ಷತೆ ಮತ್ತು ಭರವಸೆ ನೀಡುತ್ತದೆ ಎಂದು ಭಾರತ ಮತ್ತು ದಕ್ಷಿಣ ಏಷ್ಯಾದ ಕೇಂದ್ರ ಕಾರ್ಯಾಚರಣೆಗಳ (ರೈಡ್‌) ಮುಖ್ಯಸ್ಥ ಪವನ್ ವೈಶ್ ಹೇಳಿದರು.

Best Mobiles in India

Read more about:
English summary
Uber Rider Insurance Goes Live For Free Of Cost

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X