ಇನ್ಮುಂದೆ ವಿದೇಶಕ್ಕೂ ರಪ್ತು ಆಗಲಿವೆ ದೇಶಿಯ Ubon ಪ್ರಾಡಕ್ಟ್‌ಗಳು!

|

ದೇಶಿಯ ಉಬಾನ್‌ ಬ್ರಾಂಡ್‌ ಟೆಕ್‌ ವಲಯದಲ್ಲಿ ಬಜೆಟ್ ವಿಭಾಗದಲ್ಲಿ ಹೆಚ್ಚಾಗಿ ವ್ಯವಹರಿಸುವ ಬ್ಯಾಂಡ್‌ ಆಗಿ ಗುರುತಿಸಿಕೊಂಡಿದೆ. ಈಗಾಗಲೇ ಗ್ಯಾಜೆಟ್ ಆಕ್ಸಿಸರೀಸ್‌ ಮತ್ತು ಕನ್ಸೂಮರ್ ಎಲೆಕ್ಟ್ರಾನಿಕ್ಸ್ ಬ್ರಾಂಡ್ ಆಗಿ ಗುರುತಿಸಿಕೊಂಡಿರುವ ಉಬಾನ್ ಈಗ ತನ್ನ ವ್ಯಾಪ್ತಿಯನ್ನು ಇತರ ದೇಶಗಳಿಗೆ ವಿಸ್ತರಿಸಲು ಯೋಜಿಸುತ್ತಿದೆ. ಅಲ್ಲದೆ, ಈ ವರ್ಷ 100ಕ್ಕೂ ಹೆಚ್ಚು ಪ್ರಾಡಕ್ಟ್‌ಗಳನ್ನು ಬಿಡುಗಡೆ ಮಾಡಲು ಕಂಪನಿ ಯೋಜಿಸುತ್ತಿದೆ. ಇದರ ಬಗ್ಗೆ ಕಂಪನಿಯ ವ್ಯವಸ್ಥಾಪಕ ನಿರ್ದೇಶಕ ಮಂದೀಪ್ ಅರೋರಾ ನಮ್ಮ ಗಿಜ್‌ಬಾಟ್‌ ತಂಡದ ಜೊತೆ ಮಾಹಿತಿ ಹಂಚಿಕೊಂಡಿದ್ದಾರೆ.

ಉಬಾನ್‌

ಹೌದು, ಉಬಾನ್‌ ಕಂಪೆನಿ ಈ ವರ್ಷ ಬಿಡುಗಡೆ ಮಾಡಲಿರುವ ಪ್ರಾಡಕ್ಟ್‌ಗಳ ಬಗ್ಗೆ ಗಿಜಾಬಾಟ್‌ ಜೊತೆಗೆ ಮಾಹಿತಿಯನ್ನು ಹಂಚಿಕೊಂಡಿದೆ. ಕಂಪನಿಯು ಈ ವರ್ಷ ತನ್ನ ವ್ಯಾಪ್ತಿಯನ್ನು ಇತರ ದೇಶಗಳಿಗೆ ವಿಸ್ತರಿಸಲು ಯೋಜಿಸುತ್ತಿದೆ ಎಂದು ಹೇಳಿದ್ದಾರೆ. ದಕ್ಷಿಣ ಆಫ್ರಿಕಾ, ಯುಎಇ ಮತ್ತು ಅಮೆರಿಕದಂತಹ ದೇಶಗಳಿಗೂ ಎಂಟ್ರಿ ನೀಡುತ್ತಿದ್ದೇವೆ ಎಂದು ಸ್ಪಷ್ಟ ಪಡಿಸಿದ್ದಾರೆ. ಅಲ್ಲದೆ "ಜನರು ಭಾರತೀಯ ಉತ್ಪನ್ನಗಳನ್ನು ಹುಡುಕುತ್ತಿದ್ದಾರೆ ಮತ್ತು ಅದಕ್ಕಾಗಿಯೇ ನಾವು ಕೆಲವು ಮಾದರಿಗಳನ್ನು ಕೆಲವು ಖರೀದಿದಾರರಿಗೆ ಕಳುಹಿಸಿದ್ದೇವೆ" ಎಂದು ಅರೋರಾ ಗಿಜಬಾಟ್‌ ಜೊತೆಗಿನ ಮಾತುಕತೆಯಲ್ಲಿ ಮಾಹಿತಿ ಹಂಚಿಕೊಂಡಿದ್ದಾರೆ. ಹಾಗಾದ್ರೆ ಉಬಾನ್‌ ಸಂಸ್ಥೆ ಗಿಜ್‌ಬಾಟ್‌ ಜೊತೆಗೆ ಹಂಚಿಕೊಂಡ ಮಾಹಿತಿ ಏನು ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತಿವಿ ಓದಿರಿ.

ಉಬಾನ್‌

ಸ್ವದೇಶಿ ಕಂಪೆನಿ ಉಬಾನ್‌ ತನ್ನ ಉತ್ಪನ್ನಗಳನ್ನು ಫಿಜಿಗೆ ರಫ್ತು ಮಾಡಲು ಪ್ರಾರಂಭಿಸಿದೆ. ಅಲ್ಲದೆ ಮುಂದಿನ ಎರಡು ಮೂರು ತಿಂಗಳಲ್ಲಿ ಅವರು ಇತರ ದೇಶಗಳಿಗೆ ಉತ್ಪನ್ನಗಳನ್ನು ಕಳುಹಿಸುವುದಕ್ಕೆ ಪ್ಲ್ಯಾನ್‌ ಕೂಡ ಹಾಕಿಕೊ0ಡಿದೆ. ಇದಲ್ಲದೆ, ಕಂಪನಿಯು ಆಫ್ರಿಕನ್ ದೇಶಗಳು, ಯುಎಇ, ನೇಪಾಳ, ಶ್ರೀಲಂಕಾ ಮತ್ತು ಬಾಂಗ್ಲಾದೇಶಗಳಿಗೆ ರಫ್ತು ಮಾಡಲು ಪ್ರಾರಂಭಿಸುತ್ತದೆ ಎಂದು ಗಿಜ್‌ಬಾಟ್‌ ಜೊತೆಗೆ ಮಾಹಿತಿ ಹಂಚಿಕೊಂಡಿದ್ದಾರೆ.

ಉಬಾನ್ ಸಂಸ್ಥೆಯ ಮುಂಬರುವ ಉತ್ಪನ್ನಗಳು

ಉಬಾನ್ ಸಂಸ್ಥೆಯ ಮುಂಬರುವ ಉತ್ಪನ್ನಗಳು

ಸ್ವದೇಶಿ ಆಡಿಯೊ ಬ್ರಾಂಡ್ ಕೈಗೆಟುಕುವ ವಿಭಾಗದಲ್ಲಿ 100 ಉತ್ಪನ್ನಗಳನ್ನು ಬಿಡುಗಡೆ ಮಾಡಲು ಯೋಜಿಸುತ್ತಿದೆ. ಕಂಪೆನಿ ವ್ಯವಸ್ಥಾಪಕ ನಿರ್ದೇಶಕ ಮಂದೀಪ್‌ ಅರೋರಾ ಪ್ರಕಾರ "ನಾವು ಪ್ರತಿ ತಿಂಗಳು 10 ರಿಂದ 15 ಉತ್ಪನ್ನಗಳನ್ನು ಮತ್ತು ಒಂದು ವರ್ಷದಲ್ಲಿ 100 ಉತ್ಪನ್ನಗಳನ್ನು 10,000 ರೂ. ಅಡಿಯಲ್ಲಿ ಬಿಡುಗಡೆ ಮಾಡುತ್ತಿದ್ದೇವೆ" ಎಂದು ಹೇಳಿದ್ದಾರೆ. ಇತರ ದೇಶಗಳಿಗೆ ಕಾಲಿಡುವುದು ಮತ್ತು 100 ಉತ್ಪನ್ನಗಳನ್ನು ಬಿಡುಗಡೆ ಮಾಡುವುದರ ಹೊರತಾಗಿ, ಉಬಾನ್ ಎಲ್ಇಡಿ ಟಿವಿಗಳು ಮತ್ತು ಸ್ಮಾರ್ಟ್ ವಾಚ್‌ಗಳತ್ತ ಗಮನ ಹರಿಸಲು ಬಯಸಿದೆ.

ಉಬಾನ್

ಈಗಾಗಲೇ ಉಬಾನ್ ಕೈಗೆಟುಕುವ ಪ್ರಾಡಕ್ಟ್‌ಗಳಿಗೆ ಹೆಸರುವಾಸಿಯಾಗಿದೆ. ಮಧ್ಯ ಮತ್ತು ಉನ್ನತ-ಮಟ್ಟದ ವಿಭಾಗದಲ್ಲಿ ಉತ್ಪನ್ನಗಳನ್ನು ತರುವ ಕಂಪನಿಯ ಯೋಜನೆಗಳ ಬಗ್ಗೆ ನಾವು ಕೇಳಿದಾಗ, ಅವರು ಶ್ರೇಣಿ- II ಮತ್ತು ಶ್ರೇಣಿ -3 ನಗರಗಳತ್ತ ಗಮನ ಹರಿಸುತ್ತಿದ್ದಾರೆ ಎಂದು ಅರೋರಾ ಉತ್ತರಿಸಿದರು. ಅಂದರೆ ಅವರು ಉತ್ಪನ್ನಗಳನ್ನು ರೂ. 10,000 ಅಡಿಯಲ್ಲಿ ನೀಡಲು ಸಿದ್ದವಾಗಿದ್ದಾರೆ. ಇದಲ್ಲದೆ, ಹೆಡ್‌ಫೋನ್‌ಗಳು ಮತ್ತು ನೆಕ್‌ಬ್ಯಾಂಡ್‌ಗಳು ಉತ್ತಮವಾಗಿ ಕಾರ್ಯನಿರ್ವಹಿಸುತ್ತಿವೆ ಎಂದು ಮಾಹಿತಿ ನೀಡಿದ್ದಾರೆ.

ಉಬನ್ ನ್ಯೂ ಬ್ರಾಂಡ್ ಅಂಬಾಸಿಡರ್

ಉಬನ್ ನ್ಯೂ ಬ್ರಾಂಡ್ ಅಂಬಾಸಿಡರ್

ಇನ್ನು ಬಾಲಿವುಡ್ ನಟ ಟೈಗರ್ ಶ್ರಾಫ್ ಅವರನ್ನು ತನ್ನ ಬ್ರಾಂಡ್‌ ಅಂಬಾಸಿಡರ್‌ ಆಗಿ ನೇಮಿಸಿದೆ. ಇತ್ತೀಚೆಗೆ ದೇಶದಲ್ಲಿ ತನ್ನ ಬ್ರಾಂಡ್ ಅನ್ನು ಉತ್ತೇಜಿಸಲು ಮತ್ತು ಜಿಮ್-ಹೋಗುವವರನ್ನು ಆಕರ್ಷಿಸಲು ಸಂಗ್ರಾಮ್ ಚೌಗುಲೆ ಜೊತೆಗಿನ ಪಾಲುದಾರಿಕೆಯನ್ನು ಪ್ರಕಟಿಸಿದೆ. ಜನರು ಉನ್ನತ-ಮಟ್ಟದ ಉತ್ಪನ್ನಗಳಿಗೆ ಕಡಿಮೆ ಖರ್ಚು ಮಾಡುತ್ತಿದ್ದಾರೆ ಎಂದು ನಮೂದಿಸುವುದು ಯೋಗ್ಯವಾಗಿದೆ, ಅದಕ್ಕಾಗಿಯೇ ಸ್ಮಾರ್ಟ್ಫೋನ್ ಮತ್ತು ಆಡಿಯೊ ಕಂಪನಿಗಳು ಕೈಗೆಟುಕುವ ವಿಭಾಗದತ್ತ ಗಮನ ಹರಿಸುತ್ತಿದ್ದೆವೆ ಎನ್ನುವ ಮಾತನ್ನು ಸಹ ಸ್ಪಷ್ಟಪಡಿಸಿದ್ದಾರೆ.

Best Mobiles in India

English summary
Ubon, the gadget accessory and consumer electronics brand, which largely deals in the budget segment, is now planning to expand its reach to other countries.to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X