ಯುಸಿ ಬ್ರೌಸರ್‌ನಿಂದ ಬರಲಿದೆ 20GB ಸಾಮರ್ಥ್ಯದ 'ಯುಸಿ ಡ್ರೈವ್‌'..!

|

ಚೀನಾದ ಪ್ರಸಿದ್ದ ಕಂಪೆನಿ ಅಲಿಬಾಬಾ ಡಿಜಿಟಲ್ ಮೀಡಿಯಾ ಮತ್ತು ಎಂಟರ್‌ಟೈನ್‌ಮೆಂಟ್ ಗ್ರೂಪ್‌ನ ಭಾಗವಾಗಿರುವ ಯುಸಿ ಬ್ರೌಸರ್, ಯುಸಿ ಡ್ರೈವ್‌ ಅನ್ನು ಪರಿಚಯಿಸಿದೆ. ಅಲ್ಲದೆ ತನ್ನ ಆಪ್ಲಿಕೇಶನ್‌ನಲ್ಲಿನ ಕ್ಲೌಡ್ ಸ್ಟೋರೇಜ್ ಮೂಲಕ ಭಾರತದಲ್ಲಿನ ಯುಸಿ ಬ್ರೌಸರ್‌ನ ಪರ್ಸನಲ್‌ ಬಳಕೆದಾರರಿಗೆ 20GB ಉಚಿತ ಸಂಗ್ರಹಣೆಯನ್ನು ನೀಡುವುದಾಗಿ ಯುಸಿ ಬ್ರೌಸರ್‌ ಘೋಷಿಸಿದೆ.

ಚೀನಾ

ಹೌದು ಚೀನಾ ಮೂಲದ ವೆಬ್‌ಬ್ರೌಸರ್‌ ಆಗಿರುವ ಯುಸಿ ಬ್ರೌಸರ್‌ಭಾರತದಲ್ಲಿ ತನ್ನ ಯುಸಿ ಡ್ರೈವ್‌ ಅನ್ನ ಪರಿಚಯಿಸಲು ಮುಂದಾಗಿದೆ. ಈ ಡ್ರೈವ್‌ 20GB ಸ್ಟೋರೇಜ್‌ ಸಾಮರ್ಥ್ಯವನ್ನ ಹೊಂದಿರಲಿದೆ. ಪ್ರಸ್ತುತದಲ್ಲಿ ಎಲ್ಲವೂ ಡಿಜಟಲ್‌ ಆಗುತ್ತಿದ್ದು ಬಹುತೇಕ ಸ್ಮಾರ್ಟ್‌ಫೋನ್‌ ಬಳಕೆದಾರರು, ಸ್ಮಾರ್ಟ್‌ಫೋನ್‌ನಲ್ಲಿ ಸಿನಿಮಾ ನೋಡುವುದು, ಪೊಟೋ ಕ್ಲಿಕಿಸುವುದು, ಫೈಲ್‌ಗಳನ್ನು ಪರಸ್ಪರ ಹಂಚಿಕೊಳ್ಳುವುದು ಸಾಮಾನ್ಯವಾಗಿ ಬಿಟ್ಟಿದೆ. ಇಂತಹ ಸನ್ನಿವೇಶದಲ್ಲಿ ಯುಸಿ ಕ್ಲೌಡ್‌ ಸ್ಟೋರೇಜ್‌, ಸಿಂಕ್ ಸೆಲೆಕ್ಷನ್‌ಗಾಗಿ ಸ್ಕ್ರಾಂಬ್ಲಿಂಗ್ ಮಾಡುವುದಕ್ಕೆ ಉಪಯೋಗವಾಗಲಿದೆ ಅನ್ನೊ ಮಾತನ್ನ ಯುಸಿ ವೆಬ್ನ ಗ್ಲೋಬಲ್ ಬಿಸಿನೆಸ್ ವೈಸ್‌ ಪ್ರೆಸಿಡೆಂಟ್‌ ಹುವಾಯುವಾನ್ ಯಾಂಗ್(Huaiyuan Yang) ಹೇಳಿದ್ದಾರೆ.

ಬ್ರೌಸರ್‌

ಯುಸಿ ಬ್ರೌಸರ್‌ ಲಾಂಚ್‌ ಮಾಡಲಿರುವ ಯುಸಿ ಡ್ರೈವ್‌ನಿಂದ ಬಳಕೆದಾರರು ಮೊಬೈಲ್ ಡೇಟಾ ಕಡಿಮೆ ಇದ್ದಾಗಲೂ ಯಾವುದೇ ಅಡೆತಡೆಯಿಲ್ಲದ ವೆಬ್‌ ಬ್ರೌಸಿಂಗ್ ಮಾಡುವ ಅವಕಾಶ ಕಲ್ಪಿಸಲಿದೆ . ಅಲ್ಲದೆ ಯುಸಿ ಡ್ರೈವ್‌ನಲ್ಲಿನ ಸ್ಟೋರೇಜ್‌ನಿಂದ ಯಾವುದೇ ಮಾಹಿತಿ ಮಿಸ್‌ ಆಗೋದಿಲ್ಲ . ಅಲ್ಲದೆ ನಮ್ಮ ಬಿಲಿಯನ್ + ಬಳಕೆದಾರರಿಗೆ ಉತ್ತಮ ಮೊಬೈಲ್ ಇಂಟರ್ನೆಟ್ ಸೇವೆಗಳನ್ನು ಒದಗಿಸುವ ಜೊತೆಗೆ ಡಿಜಿಟಲ್ ಮಾರುಕಟ್ಟೆಯೊಂದಿಗೆ ಬೆಳೆಯುವ ನಿಟ್ಟಿನಲ್ಲಿ ಯುಸಿ ಡ್ರೈವ್ ಒಂದು ಹೆಜ್ಜೆ ಮುಂದಿದೆ ಎಂದು ಕಂಪೆನಿ ಹೇಳಿದೆ.

ಮೂಲದ

ಇನ್ನು ಚೀನಾ ಮೂಲದ ಯುಸಿ ಬ್ರೌಸರ್‌ಗೆ ಜಾಗತಿಕ ಮಾರುಕಟ್ಟೆಯಲ್ಲಿ ಭಾರತವು ತನ್ನ ಅತಿದೊಡ್ಡ ಮಾರುಕಟ್ಟೆಗಳಲ್ಲಿ ಒಂದಾಗಿದೆ. ಅಲ್ಲದೆ ಯುಸಿ ಬ್ರೌಸರ್‌ ಆಪ್ಲಿಕೇಶನ್‌ ಡೌನ್‌ಲೋಡ್‌ನ ಶೇಖಡ 50% ಬಳಕೆದಾರರು ಭಾರತದಲ್ಲಿಯೇ ಇದ್ದಾರೆ. ಸದ್ಯ ಯುಸಿ ಬ್ರೌಸರ್ ಯುಸಿವೆಬ್‌ನ ಪ್ರಮುಖ ಆಪ್ಲಿಕೇಶನ್‌ ಆಗಿದ್ದು, ಕಳೆದ ಒಂದೆರಡು ವರ್ಷಗಳ ಹಿಂದೆಯಷ್ಟೇ ಕಂಟೆಂಟ್‌ ಪ್ಲಾಟ್‌ಫಾರ್ಮ್ ಅನ್ನು ಪ್ರಾರಂಭಿಸಿತ್ತು. ಇದೀಗ ಆಡ್-ಆನ್ ಕ್ಲೌಡ್‌ ಸ್ಟೋರೇಜ್‌ ಫಿಚರ್ಸ್‌ ಅನ್ನ ಪರಿಚಯಿಸಿದೆ.

ಕ್ಲೌಡ್‌

ಯುಸಿ ಬ್ರೌಸರ್‌ನ ಕ್ಲೌಡ್‌ ಸ್ಟೋರೇಜ್‌ನಲ್ಲಿ ಯಾವುದೇ ಫೈಲ್‌ ಅನ್ನ ವಿನಿಮಯ ಮಾಡಬಹುದಾಗಿದ್ದು, ಮೊಬೈಲ್‌ ಸ್ಟೋರೇಜ್‌ನ ಸ್ಪೇಸ್‌ ಉಳಿಸುತ್ತದೆ. ಅಲ್ಲದೆ ಕ್ಲೌಡ್‌ ಸ್ಟೋರೇಜ್‌ ನೊಂದಿಗೆ ಸಿಂಕ್‌ ಆದ ಇತರೆ ಫೋಲ್ಡರ್‌ಗೆ ಫೈಲ್‌ ರವಾನಿಸುವ ಸಾಮರ್ಥ್ಯವನ್ನು ಹೊಂದಿದೆ. ಸದ್ಯ ಯುಸಿ ಬ್ರೌಸರ್ ತನ್ನ ವೈಯಕ್ತಿಕ ಬಳಕೆದಾರರಿಗಾಗಿ ತನ್ನ ಅಪ್ಲಿಕೇಶನ್‌ನಲ್ಲಿನ ಕ್ಲೌಡ್ ಸ್ಟೋರೇಜ್ ಸೇವೆಯ ಮೂಲಕ 20 ಜಿಬಿ ಉಚಿತ ಸಂಗ್ರಹಣೆಯನ್ನು ನೀಡುವುದಾಗಿ ಘೋಷಿಸಿದ್ದು, ಮೊಬೈಲ್ನ ಇಂಟರ್‌ ಸ್ಟೋರೇಜ್‌ ಬಳಸದೆ ಬ್ರೌಸ್ ಮಾಡುವಾಗ ಮೊಬೈಲ್ ಫೋನ್‌ನಲ್ಲಿ ಚಿತ್ರಗಳು, ಹಾಡುಗಳು, ವೀಡಿಯೊಗಳು ಮತ್ತು ಇತರ ಡೌನ್‌ಲೋಡ್ ಮಾಡಬಹುದಾದ ವಿಷಯವನ್ನು ಸಂಗ್ರಹಿಸಬಹುದಾಗಿದೆ.

Best Mobiles in India

English summary
UC Browser, part of the Alibaba Digital Media and Entertainment Group, has announced it is offering 20GB free storage via its in-app Cloud storage service for Indian individual users, UC Drive. “In a mobile-first market like India, almost all digital activities are shifting to mobile devices – from watching movies and clicking pictures to sharing files. In a scenario like this, users are left scrambling for cloud storage and syncing options,” Huaiyuan Yang, Vice President, UCWeb Global Business, said in a statement.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X