Home
ಸುದ್ದಿಜಾಲ

ನಿಮ್ಮ ಬಳಿ ಆಧಾರ್‌ ಕಾರ್ಡ್‌ ಇದಿಯಾ? ಹಾಗಾದ್ರೆ ಈ ವಿಚಾರದ ಬಗ್ಗೆ ನೀವು ತಿಳಿಯಲೇಬೇಕು?

ದೇಶವಾಸಿಗಳ ಆಧಾರ್‌ ಕಾರ್ಡ್‌ ಡೇಟಾ ಮಾಹಿತಿ ರಕ್ಷಣೆ ಮಾಡುವುದಕ್ಕಾಗಿ UIDAI ಅನೇಕ ವಿಧಾನಗಳನ್ನು ಅನುಸರಿಸುಕೊಂಡು ಬರುತ್ತಿದೆ. ಈ ನಿಟ್ಟಿನಲ್ಲಿ ಹೊಸ ಹೊಸ ಆಯ್ಕೆಗಳನ್ನು ಕೂಡ ಪರಿಚಯಿಸುತ್ತಿದೆ. ಸದ್ಯ ಇದೀಗ ಆಧಾರ್‌ ಆಧಾರಿತ ಫಿಂಗರ್‌ಪ್ರಿಂಟ್‌ ದೃಢೀಕರಣಕ್ಕಾಗಿ ಹೊಸ ಭದ್ರತಾ ಕಾರ್ಯವಿಧಾನವನ್ನು ಪರಿಚಯಿಸಿದೆ.

ಹೌದು, UIDAI ಆಧಾರ್‌ ಕಾರ್ಡ್‌ ಡೇಟಾ ರಕ್ಷಣೆಗಾಗಿ ಹೊಸ ಕಾರ್ಯವಿಧಾನವನ್ನು ಪರಿಚಯಿಸಿರುವುದಾಗಿ ಘೋಷಣೆ ಮಾಡಿದೆ. ಇದಕ್ಕಾಗಿ AI ಆಧಾರಿತ ಫಿಂಗರ್‌ಪ್ರಿಂಟ್ ದೃಢೀಕರಣವನ್ನು ಜಾರಿಗೆ ತಂದಿದೆ. ಇದು ನಿಮ್ಮ ಆಧಾರ್‌ ಕಾರ್ಡ್‌ ದುರುಪಯೋಗದಂತೆ ತಡೆಯಲಿದೆ. ಹಾಗಾದ್ರೆ AI ಆಧಾರಿತ ಫಿಂಗರ್‌ಪ್ರಿಂಟ್ ದೃಢೀಕರಣ ಹೇಗೆ ಕಾರ್ಯನಿರ್ವಹಿಸಲಿದೆ ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತಿವಿ ಓದಿರಿ.

ನಿಮ್ಮ ಬಳಿ ಆಧಾರ್‌ ಕಾರ್ಡ್‌ ಇದಿಯಾ? ಹಾಗಾದ್ರೆ ಈ ವಿಚಾರದ ಬಗ್ಗೆ ತಿಳಿಯಲೇಬೇಕು?

ಆಧಾರ್‌ ಕಾರ್ಡ್‌ ವಂಚನೆಯ ಪ್ರಯತ್ನಗಳನ್ನು ತಡೆಯುವ ನಿಟ್ಟಿನಲ್ಲಿ UIDAI ಎಐ ಆಧಾರಿತ ಫಿಂಗರ್‌ಪ್ರಿಂಟ್‌ ದೃಡೀಕರಣವನ್ನು ಜಾರಿಗೆ ತಂದಿದೆ. ಈ ಹೊಸ ಭದ್ರತಾ ಕಾರ್ಯವಿಧಾನದಿಂದ ಆಧಾರ್‌ ಕಾರ್ಡ್‌ ದುರುಪಯೋಗವನ್ನು ತಡೆಗಟ್ಟಬಹುದು ಎಂದು ಹೇಳಿದೆ. ಇನ್ನು UIDAI ಪರಿಚಯಿಸುತ್ತಿರುವ ಕೃತಕ ಬುದ್ಧಿಮತ್ತೆ ಮತ್ತು ಯಂತ್ರ ಕಲಿಕೆ (AI/ML) ಆಧಾರಿತ ಭದ್ರತಾ ಕಾರ್ಯವಿಧಾನವು ಆಂತರಿಕವಾಗಿ ಅಭಿವೃದ್ಧಿಪಡಿಸಲಾಗಿದೆ. ಇದು ಸೆರೆಹಿಡಿದಿರುವ ಫಿಂಗರ್‌ಪ್ರಿಂಟ್‌ನ ಜೀವಂತತೆಯನ್ನು ಪರಿಶೀಲಿಸಲಿದೆ.

ಎಐ ಆಧಾರಿತ ಫಿಂಗರ್‌ಪ್ರಿಂಟ್‌ ದೃಡೀಕರಣವು "ಬೆರಳಿನ ಸೂಕ್ಷ್ಮ ಮತ್ತು ಫಿಂಗರ್ ಇಮೇಜ್ ಎರಡರ ಸಂಯೋಜನೆಯನ್ನು" ಬಳಸಲಿದೆ. ಇದರಿಂದ ಆಧಾರ್ ದೃಢೀಕರಣ ವಹಿವಾಟುಗಳು ಇನ್ನಷ್ಟು ಸುರಕ್ಷಿತವಾಗಿರಲಿದೆ ಎಂದು UIDAI ಹೇಳಿದೆ. ಇದಲ್ಲದೆ ಟು ಲೇಯರ್‌ ದೃಢೀಕರಣದಲ್ಲಿ ಫಿಂಗರ್‌ಪ್ರಿಂಟ್‌ನ ನೈಜತೆಯನ್ನು (ಲೈವ್‌ನೆಸ್) ಮೌಲ್ಯೀಕರಿಸಲು ಆಡ್-ಆನ್ ಚೆಕ್‌ಗಳನ್ನು ಸೇರಿಸಲಾಗಿದೆ. ಇದರಿಂದಾಗಿ ವಂಚನೆಯ ಪ್ರಯತ್ನಗಳ ಸಾಧ್ಯತೆ ಕಡಿಮೆಯಾಗಲಿದೆ ಎನ್ನಲಾಗಿದೆ.

ನಿಮ್ಮ ಬಳಿ ಆಧಾರ್‌ ಕಾರ್ಡ್‌ ಇದಿಯಾ? ಹಾಗಾದ್ರೆ ಈ ವಿಚಾರದ ಬಗ್ಗೆ ತಿಳಿಯಲೇಬೇಕು?

ಈ ಹೊಸ ಆಧಾರ್‌ ಆಧಾರಿತ ಫಿಂಗರ್‌ ಪ್ರಿಂಟ್‌ ದೃಡೀಕರಣದ ಅಭಿವೃದ್ದಿಯಿಂದ ಬ್ಯಾಂಕಿಂಗ್ ಮತ್ತು ಹಣಕಾಸು, ಟೆಲಿಕಾಂ ಮತ್ತು ಸರ್ಕಾರಿ ವಲಯಗಳಲ್ಲಿ ಉಪಯೋಗಕ್ಕೆ ಬರಲಿದೆ. ಅಲ್ಲದೆ ಆಧಾರ್-ಸಕ್ರಿಯಗೊಳಿಸಿದ ಪಾವತಿ ವ್ಯವಸ್ಥೆಯನ್ನು ಬಲಪಡಿಸುತ್ತದೆ ಎಂದು ವರದಿಯಾಗಿದೆ. ಒಂದು ವರದಿಯ ಪ್ರಕಾರ ಡಿಸೆಂಬರ್ 2022 ರ ಅಂತ್ಯದ ವೇಳೆಗೆ, ಆಧಾರ್ ದೃಢೀಕರಣ ವಹಿವಾಟುಗಳ ಸಂಚಿತ ಸಂಖ್ಯೆಯು 88.29 ಶತಕೋಟಿಯನ್ನು ದಾಟಿದೆ. ಆದರಿಂದ ಆಧಾರ್‌ ಕಾರ್ಡ್‌ನ ಭದ್ರತೆ ಕಾಪಾಡುವುದು ಅತಿ ಅಗತ್ಯವಾಗಿದೆ. ಈ ನಿಟ್ಟಿನಲ್ಲಿ UIDAI ಹೊಸ ಹೊಸ ಆಯ್ಕೆಗಳನ್ನು ಸೇರ್ಪಡೆ ಮಾಡುತ್ತಾ ಬಂದಿದೆ.

ನಿಮ್ಮ ಬಳಿ ಆಧಾರ್‌ ಕಾರ್ಡ್‌ ಇದಿಯಾ? ಹಾಗಾದ್ರೆ ಈ ವಿಚಾರದ ಬಗ್ಗೆ ತಿಳಿಯಲೇಬೇಕು?

ಇದಲ್ಲದೆ UIDAI ಇತ್ತೀಚಿಗೆ ಆಧಾರ್‌ ಕಾರ್ಡ್‌ ಪಡೆದುಕೊಂಡು 10 ವರ್ಷ ಆಗಿರುವವರು ಮತ್ತೊಮ್ಮೆ ಆಧಾರ್‌ ಅಪ್ಡೇಟ್‌ ಮಾಡುವಂತೆ ಸೂಚಕಿಸಿದೆ. ಯಾಕೆಂದರೆ ಇತ್ತೀಚಿಗೆ ಎಲೆಕ್ಟ್ರಾನಿಕ್ಸ್ ಮತ್ತು ಐಟಿ ಸಚಿವಾಲಯವು ಕಳೆದ 10 ವರ್ಷಗಳಲ್ಲಿ ತಮ್ಮ ಆಧಾರ್ ಕಾರ್ಡ್ ಅನ್ನು ಅಪ್ಡೇಟ್‌ ಮಾಡಬೇಕು, ಭಾರತೀಯ ನಿವಾಸಿಗಳು ಸರ್ಕಾರಿ ಡೇಟಾಬೇಸ್‌ನಲ್ಲಿ ಮಾಹಿತಿಯ ನಿಖರತೆಯನ್ನು ಮುಂದುವರೆಸುವುದಕ್ಕೆ ಇದು ಅತ್ಯಗತ್ಯ ಎಂದು ಹೇಳಿದೆ.ಇನ್ನು ನಿಮ್ಮ ಆಧಾರ್‌ ವಿವರಗಳನ್ನು ಆನ್‌ಲೈನ್‌ ಮೂಲಕ ಅಪ್ಡೇಟ್‌ ಮಾಡಿದರೆ 25ರೂ.ಶುಲ್ಕ ಪಾವತಿಸಬೇಕಾಗುತ್ತದೆ. ಹಾಗೆಯೇ ಆಫ್‌ಲೈನ್ ಮೂಲಕ ಮಾಹಿತಿ ಅಪ್ಡೇಟ್‌ ಮಾಡಿದರೆ 50ರೂ. ಶುಲ್ಕ ಪಾವತಿಸಬೇಕಾಗುತ್ತದೆ.

ನಿಮ್ಮ ಬಳಿ ಆಧಾರ್‌ ಕಾರ್ಡ್‌ ಇದಿಯಾ? ಹಾಗಾದ್ರೆ ಈ ವಿಚಾರದ ಬಗ್ಗೆ ತಿಳಿಯಲೇಬೇಕು?

ಆಧಾರ್‌ನಲ್ಲಿ ಯಾವೆಲ್ಲಾ ವಿವರಗಳನ್ನು ಅಪ್ಡೇಟ್‌ ಮಾಡಬೇಕು?

UIDAI ಹೇಳಿರುವಂತೆ ನಿಮ್ಮ ಆಧಾರ್‌ ವಿವರಗಳನ್ನು ಆನ್‌ಲೈನ್‌ನಲ್ಲಿ ಮೈ ಆಧಾರ್‌ ಪೋರ್ಟಲ್‌ ಮೂಲಕ ಅಪ್ಡೇಟ್‌ ಮಾಡಬಹುದು. ಇದರಲ್ಲಿ ನೀವು ಜನಸಂಖ್ಯಾ ವಿವರಗಳು ಅಂದರೆ ನಿಮ್ಮ ಹೆಸರು, ವಿಳಾಸ, ಜನ್ಮ ದಿನಾಂಕ, ಲಿಂಗ, ಮೊಬೈಲ್ ಸಂಖ್ಯೆ, ಇಮೇಲ್ ವಿವರಗಳನ್ನು ಅಪ್ಡೇಟ್‌ ಮಾಡಬೇಕು. ಅಲ್ಲದೆ ನಿಮ್ಮ ಬಯೋಮೆಟ್ರಿಕ್ಸ್ ಅಂದರೆ ಬೆರಳಚ್ಚುಗಳು, ಐರಿಸ್ ಮತ್ತು ಫೋಟೋಗ್ರಾಫ್ ವಿವರಗಳನ್ನು ಕೂಡ ನೀವು ಅಪ್ಡೇಟ್‌ ಮಾಡಬಯಸಿದರೆ ಅದನ್ನು ನಿಮ್ಮ ಹತ್ತಿರದ ಆಧಾರ್‌ ನೋಂದಣಿ ಕೇಂದ್ರಕ್ಕೆ ಭೇಟಿ ನೀಡುವ ಮೂಲಕ ಅಪ್ಡೇಟ್‌ ಮಾಡಬೇಕಾಗುತ್ತದೆ.

Best Mobiles in India

English summary
UIDAI in a statement announced the new security mechanism for robust fingerprint-based Aadhaar authentication
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+