Subscribe to Gizbot

ಜೆಡ್‌ಪ್ಲಸ್ ಭದ್ರತೆ ಇದ್ದರೂ ಮೊಬೈಲ್ ಕದ್ದ ಚೋರರು!..ಆಶ್ಚರ್ಯ!!

Written By:

ಭಾರತದಲ್ಲಿ ಜೆಡ್‌ಪ್ಲಸ್ ಭದ್ರತೆ ಹೊಂದಿದ್ದಾರೆ ಎಂದರೆ ಯಾರು ಅವರನ್ನು ಮುಟ್ಟಲು ಸಾಧ್ಯವಿಲ್ಲ ಎನ್ನುವುದು ನಿಜವೂ ಹೌದಾದರೂ, ಜೆಡ್ ಪ್ಲಸ್ ಭದ್ರತೆ ಹೊಂದಿದ್ದ ಪಬ್ಲಿಕ್ ಪ್ರಾಸಿಕ್ಯೂಟರ್ ಒಬ್ಬರ ಎರಡು ಫೋನ್‌ಗಳನ್ನು ರೈಲಿನಲ್ಲಿ ಚೋರರು ಕದ್ದಿದ್ದಾರೆ.!!

ಹೌದು, ನೀವು ಕೇಳಿದ್ದು ನಿಜ. 2009 ರ ಮುಂಬೈ ಉಗ್ರ ದಾಳಿ ಪ್ರಕರಣಕ್ಕೆ ಸಂಬಂಧಿಸಿದಂತೆ ಪಬ್ಲಿಕ್ ಪ್ರಾಸಿಕ್ಯೂಟರ್ ಉಜ್ವಲ್ ನಿಕಂ ಎಂಬುವವರಿಗೆ ಸರ್ಕಾರದಿಂದ ಜೆಡ್ ಪ್ಲಸ್ ಭದ್ರತೆ ಒದಗಿಸಲಾಗಿತ್ತು. ಅವರು ತಮ್ಮ ಸೆಕ್ಯುರಿಟಿ ಜೊತೆ ರೈಲಿನಲ್ಲಿ ಪ್ರಯಾಣಿಸುವಾಗ ಅವರ ಮೊಬೈಲ್‌ಗಳು ಕಳ್ಳತನವಾಗಿವೆ.!!

ಜೆಡ್‌ಪ್ಲಸ್ ಭದ್ರತೆ ಇದ್ದರೂ ಮೊಬೈಲ್ ಕದ್ದ ಚೋರರು!..ಆಶ್ಚರ್ಯ!!

ದಾದರ್-ಅಮೃತಸರ ಪಠಾನ್‌ಕೋರ್ಟ್‌ ಎಕ್ಸ್‌ಪ್ರೆಸ್‌ ರೈಲಿನಲ್ಲಿ ಶುಕ್ರವಾರ ಈ ಘಟನೆ ನಡೆದಿದ್ದು, ಪ್ರಾಸಿಕ್ಯೂಟರ್ ಉಜ್ವಲ್ ನಿಕಂ ಅವರು ದಿಂಬಿನ ನಡುವೆ ಮೊಬೈಲ್ ಇಟ್ಟುಕೊಂಡು ಮಲಗಿದ್ದರು . ಇನ್ನು ಗಾರ್ಡ್‌ಗಳು ಸಹ ನಿದ್ದೆ ಮಂಪರಿನಲ್ಲಿದ್ದಾಗ ಮೊಬೈಲ್ ಕಳ್ಳತನ ನಡೆದಿದೆ ಎನ್ನಲಾಗಿದೆ!!

ಜೆಡ್‌ಪ್ಲಸ್ ಭದ್ರತೆ ಇದ್ದರೂ ಮೊಬೈಲ್ ಕದ್ದ ಚೋರರು!..ಆಶ್ಚರ್ಯ!!

ಇನ್ನು ರೈಲು ಭೋಗಿಯ ಮುಂಭಾಗಿಲಿನಲ್ಲಿ ಇಬ್ಬರು ಗಾರ್ಡ್‌ಗಳು, ಹಿಂಬಾಗದಲ್ಲಿ ಇಬ್ಬರು ಗಾರ್ಡ್‌ಗಳು ಮತ್ತು ಉಜ್ವಲ್ ನಿಕಂ ಬಳಿ ಒಬ್ಬ ಗಾರ್ಡ್ AK47 ಗನ್ ಹಿಡಿದು ನಿಂತಿದ್ದರು ಸಹ ಉಜ್ವಲ್ ನಿಕಂ ಅವರ ಮೊಬೈಲ್ ಕಳ್ಳತನ ಆಗಿರುವುದು ಅಚ್ಚರಿಯಾಗಿದೆ.!!

English summary
Ujjwal Nikam's 2 phones were stolen on Dadar-Amritsar Pathankot Express as his 5 security guards slept. to know more visit to kannada.gizbot.com
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot