Home
ಸುದ್ದಿಜಾಲ

ಉಕ್ರೇನ್-ರಷ್ಯಾ ಬಿಕ್ಕಟ್ಟು: ಟೆಕ್‌ ವಲಯದ ಮೇಲಾಗುವ ಪರಿಣಾಮ ಏನು!

ಉಕ್ರೇನ್-ರಷ್ಯಾ ನಡುವಿನ ಬಿಕ್ಕಟ್ಟು ತಾರಕಕ್ಕೇರಿದ್ದು ಉಕ್ರೇನ್‌ ಮೇಲೆ ರಷ್ಯಾ ಯುದ್ದವನ್ನು ಘೋಷಿಸಿದೆ. ರಷ್ಯಾ ಉಕ್ರೇನ್‌ ಮೇಲೆ ಯುದ್ದ ಘೋಷಣೆಯಾಗ್ತಿದ್ದ ಹಾಗೇ ಜಾಗತಿಕವಾಗಿ ಸಾಕಷ್ಟು ಪರಿಣಾಮ ಬೀರಿದೆ. ಜಾಗತಿಕ ತೈಲ ಮಾರುಕಟ್ಟೆಯಲ್ಲಿ ಬೆಲೆ ಏರಿಕೆಯ ಬಿಸಿ ತಟ್ಟಿದೆ. ಇದರ ನಡುವೆ ಟೆಕ್‌ ಮಾರುಕಟ್ಟೆಯ ಮೇಲೂ ಸಾಕಷ್ಟು ಪ್ರಭಾವ ಬೀರಿದ್ದು, ಭವಿಷ್ಯದಲ್ಲಿ ಇದರ ಪರಿಣಾಮ ಇನ್ನಷ್ಟು ಹೆಚ್ಚಿನ ಬಿಕ್ಕಟ್ಟನ್ನು ಸೃಷ್ಟಿಸುವ ಸಾದ್ಯತೆಯಿದೆ. ಅದರಲ್ಲೂ ಟೆಕ್‌ ವಲಯದಲ್ಲಿ ಪ್ರಮುಖವಾಗಿರುವ ಚಿಪ್‌ ಕಂಪೆನಿಗಳಿಗೆ ಇದರಿಂದ ಸಾಕಷ್ಟು ಪರಿಣಾಮ ಎದುರಾಗಲಿದೆ ಎನ್ನಲಾಗಿದೆ.

ಉಕ್ರೇನ್ ರಷ್ಯಾ

ಹೌದು, ಉಕ್ರೇನ್ ರಷ್ಯಾ ನಡುವಿನ ಯುದ್ದದ ಪರಿಣಾಮ ಟೆಕ್‌ ವಲಯದ ಮೇಲೆ ಅನೇಕ ಪರಿಣಾಮ ಬೀರಲಿದೆ. ಈ ಯುದ್ದ ಬಿಕ್ಕಟ್ಟಿನಿಂದಾಗಿ ದೊಡ್ಡ ದೊಡ್ಡ ಚಿಪ್‌ ಕಂಪೆನಿಗಳು ಸಾಖಷ್ಟು ನಷ್ಟ ಅನುಭವಿಸಲಿವೆ ಎನ್ನಲಾಗಿದೆ. ರಷ್ಯಾ-ಉಕ್ರೇನ್ ಬಿಕ್ಕಟ್ಟಿನಿಂದ ಸೀಮಿತ ಪೂರೈಕೆ ಸರಪಳಿಯಲ್ಲಿ ಸಾಕಷ್ಟು ಅಡಚಣೆಯನ್ನು ಎದುರಿಸಲಿವೆ. ಚಿಪ್‌ ತಯಾರಿಕೆ ಬೇಕಾದ ಕಚ್ಚಾ ವಸ್ತುಗಳ ಅಭಾವ ಎದುರಾಗುವ ಸಾದ್ಯತೆಯಿದೆ. ಹಾಗಾದ್ರೆ ಉಕ್ರೇನ್-ರಷ್ಯಾ ನಡುವಿನ ಯುದ್ಧದಿಂದ ಟೆಕ್‌ ವಲಯದ ಮೇಲೆ ಉಂಟಾಗುವ ಪರಿಣಾಮ ಎಂತಹದ್ದು ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತಿವಿ ಓದಿರಿ.

ಉಕ್ರೇನ್‌ ಮತ್ತು ರಷ್ಯಾ

ಉಕ್ರೇನ್‌ ಮತ್ತು ರಷ್ಯಾ ನಡುವೇ ಯುದ್ದ ಅಧಿಕೃತವಾಗಿ ಪ್ರಾರಂಭವಾಗ್ತಿದ್ದ ಹಾಗೇ ಜಾಗತಿಕವಾಗಿ ಅನೇಕ ವಲಯಗಳಲ್ಲಿ ಸಾಖಷ್ಟು ವ್ಯತ್ಯಾಸ ಕಾಣಿಸಿಕೊಂಡಿದೆ. ಟೆಕ್‌ ವಲಯದ ಮೇಲೂ ಇದರ ಪರಿಣಾಮ ಬಿರಿದ್ದು, ಭವಿಷ್ಯದಲ್ಲಿ ಚಿಪ್‌ ಉತ್ಪಾದನೆಯಲ್ಲಿ ಸಾಕಷ್ಟು ತೊಂದರೆ ಸೃಷ್ಟಿಯಾಗಲಿದೆ ಎಂದು ಹೇಳಲಾಗ್ತಿದೆ. ಅರೆವಾಹಕ ಚಿಪ್‌ಗಳ ಕೊರತೆಯನ್ನು ವರ್ಷಪೂರ್ತಿ ಅನುಭವಿಸಬೇಕಾದ ಅನಿವಾರ್ಯತೆ ಎದುರಿಸಬೇಕಾಗಬಹುದು. ಅನೇಕ ಅಡೆತಡೆಗಳ ಕಾರಣದಿಂದ ಜಾಗತಿಕವಾಗಿ ಮೂಲ ಅಥವಾ ಮಾರಾಟ ಮಾಡುವ ಟೆಕ್ ಕಂಪನಿಗಳ ಷೇರುಗಳು ಈಗಾಗಲೇ ಕುಸಿತವನ್ನು ಅನುಭವಿಸಿವೆ.

ಚಿಪ್‌

ಟೆಕ್‌ ವಲಯದಲ್ಲಿ ಪ್ರಮುಖವಾಗಿ ಚಿಪ್‌ ಉತ್ಫಾದನೆಯಲ್ಲಿ ಅಭಾವ ಎದುರಿಸುವ ಸಾದ್ಯತೆಯಿದೆ. ಏಕೆಂದರೆ ಚಿಪ್‌ಮೇಕಿಂಗ್‌ನಲ್ಲಿ ಬಳಸುವ ಲೇಸರ್‌ಗಳಿಗೆ ನಿರ್ಣಾಯಕವಾದ US ಸೆಮಿಕಂಡಕ್ಟರ್-ಗ್ರೇಡ್ ನಿಯಾನ್‌ನ 90%ಗಿಂತ ಹೆಚ್ಚಿನದನ್ನು ಉಕ್ರೇನ್ ಪೂರೈಸುತ್ತದೆ. ಹಾಗೆಯೇ ಸೆನ್ಸಾರ್‌ಗಳು ಮತ್ತು ಮೆಮೊರಿಯಲ್ಲಿ ಬಳಸಲಾಗುವ US ಪಲ್ಲಾಡಿಯಮ್‌ನ 35% ರಷ್ಟನ್ನು ರಷ್ಯಾ ಪೂರೈಸುತ್ತದೆ. ಆದರೆ ಸದ್ಯದ ಪರಿಸ್ಥುತಿಯಲ್ಲಿ ಯುದ್ದ ನಡೆಯುತ್ತಿರುವುದರಿಂದ ಪೂರೈಕೆಯಲ್ಲಿ ಸಾಕಷ್ಟು ವ್ಯತ್ಯಾಸ ಎದುರಾಗಲಿದೆ. ಇದರಿಂದ ಭವಿಷ್ಯದಲ್ಲಿ ಚಿಪ್‌ ಕಂಪೆನಿಗಳು ನಷ್ಟ ಅನುಭವಿಸಲಿವೆ.

ಪರಿಣಾಮವನ್ನು

ಸದ್ಯದ ಮಟ್ಟಿಗೆ ಚಿಪ್‌ಗಳನ್ನು ಉತ್ಪಾಧಿಸುವ ಕಂಪೆನಿಗಳು ಉಕ್ರೇನ್‌ ರಷ್ಯಾ ನಡುವಿನ ಯುದ್ದದಿಂದ ಯಾವುದೇ ನೇರ ಪರಿಣಾಮವನ್ನು ಅನುಭವಿಸುತ್ತಿಲ್ಲ. ಆದರೆ ಅರೆವಾಹಕ ತಯಾರಿಕೆಗೆ ವಸ್ತುಗಳನ್ನು ಪೂರೈಸುವ ಕಂಪನಿಗಳು ರಷ್ಯಾ ಮತ್ತು ಉಕ್ರೇನ್‌ನಿಂದ ನಿಯಾನ್ ಮತ್ತು ಪಲ್ಲಾಡಿಯಮ್ ಗ್ಯಾಸ್‌ ಅನ್ನು ಖರೀದಿಸುತ್ತವೆ. ಇವುಗಳ ಸರಬರಾಜುಗಳ ಮೇಲಿನ ಅಡೆತಡೆಗಳಿಂದ ಚಿಪ್‌ಗಳ ಬೆಲೆ ಹೆಚ್ಚಳವಾದರೂ ಅಚ್ಚರಿಯಿಲ್ಲ. ಇದಲ್ಲದೆ ರಷ್ಯ ನಡೆಯ ವಿರುದ್ದ ಪ್ರಮುಖ ವಸ್ತುಗಳಿಗೆ ಪ್ರವೇಶವನ್ನು ನಿರ್ಬಂಧಿಸುವ ಬೆದರಿಕೆಯನ್ನು US ಹಾಕಿದೆ. ಇದರಿಂದ ಜಾಗತಿಕವಾಗಿ ಟೆಕ್‌ ವಲಯದ ಮೇಲೆ ಬೆಲೆ ಏರಿಕೆಯ ಬಿಸಿ ತಟ್ಟಲಿದೆ ಎನ್ನಲಾಗಿದೆ.

ಉಕ್ರೇನ್‌ ರಷ್ಯಾ

ಉಕ್ರೇನ್‌ ರಷ್ಯಾ ನಡುವಿನ ಯುದ್ದದಿಂದಾಗಿ ಮುಂದಿನ ದಿನಗಳಲ್ಲಿಯೂ ಕೂಡ ಟೆಕ್‌ ವಲಯದಲ್ಲಿ ಸ್ಮಾರ್ಟ್‌ಫೋನ್‌ಗಳು ಸೇರಿದಂತೆ ಅನೇಕ ಗ್ಯಾಜೆಟ್ಸ್‌ಗಳ ಬೆಲೆ ಏರಿಕೆಯಾಗಲಿದೆ. ಸದ್ಯ ಹೆಚ್ಚಿನ ಚಿಪ್‌ಮೇಕರ್‌ಗಳು ವೇಟ್-ಅಂಡ್-ವಾಚ್ ಮೋಡ್‌ನಲ್ಲಿದ್ದಾರೆ. ಯುದ್ದ ನಡುವೆಯೂ ತಮ್ಮ ಪೂರೈಕೆ ಸರಪಳಿಗಳಿಗೆ ಯಾವುದೇ ತೊಂದರೆಯಾಗುವುದಿಲ್ಲ ಎನ್ಜುವುದರ ಬಗ್ಗೆ ವಿಶ್ವಾಸವನ್ನು ವ್ಯಕ್ತಪಡಿಸಿದ್ದಾರೆ. ಚಿಪ್‌ಮೇಕರ್‌ಗಳಲ್ಲಿ ಒಂದಾದ ಇಂಟೆಲ್ ಇದರಿಂದ ಯಾವುದೇ ಪರಿಣಾಮವನ್ನು ನಿರೀಕ್ಷಿಸುವುದಿಲ್ಲ ಎಂದು ಹೇಳಿದೆ. ಆದರೆ ಹೆಚ್ಚಿನ ಕಂಪೆನಿಗಳು ರಷ್ಯಾ ಅಥವಾ ಉಕ್ರೇನ್‌ನ ಹೊರಗಿನ ಮೂಲಗಳನ್ನು ಹುಡುಕುವುದಕ್ಕೆ ಮುಂದಾಗಿದೆ.

ಆಪಲ್

ಇನ್ನು ಆಪಲ್ ಅನ್ನು ಒಳಗೊಂಡಿರುವ ಮಲೇಷಿಯಾದ ಚಿಪ್‌ಮೇಕರ್ ಯುನಿಸೆಮ್ ಕಚ್ಚಾ ವಸ್ತುಗಳ ದೃಷ್ಟಿಕೋನದಿಂದ ಚಿಪ್ ಉತ್ಪಾದನೆಯ ಮೇಲೆ ಯಾವುದೇ ಪರಿಣಾಮವನ್ನು ನಿರೀಕ್ಷಿಸುವುದಿಲ್ಲ ಎಂದಿದೆ. ಏಕೆಂದರೆ ಯುನಿಸೆಮ್‌ ಚಿಪ್‌ಗೆ ಅಗತ್ಯವಿರುವ ವಸ್ತುಗಳು ರಷ್ಯಾದಿಂದ ಬರುವುದಿಲ್ಲ. ಬದಲಿಗೆ ಯುನೈಟೆಡ್ ಸ್ಟೇಟ್ಸ್, ಜಪಾನ್, ಕೊರಿಯಾ, ಸಿಂಗಾಪುರ್ ಮತ್ತು ಸ್ಥಳೀಯವಾಗಿ ಲಭ್ಯವಾಗಲಿವೆ ಎನ್ನಲಾಗಿದೆ. ಆದರೂ ಕೂಡ ಈ ಸದ್ಯದ ಬಿಕ್ಕಟ್ಟು ಟೆಕ್‌ ವಲಯದಲ್ಲಿ ಸಾಕಷ್ಟು ಪರಿಣಾಮ ಬೀರುವ ಸಾಧ್ಯತೆಯಿದೆ.

Best Mobiles in India

English summary
Ukraine Russia Crisis Might Impact Future Chip Availability
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+