ಏನಿದು ಅಲ್ಟ್ರಾ ಎಚ್‌ಡಿ ಟಿವಿ ತಂತ್ರಜ್ಞಾನ ?
ನೀವು ಹೊಸ ಎಚ್‌ಡಿ ಟಿವಿಯನ್ನು ಖರೀದಿಸಿದ್ದೀರಾ? ಹಾಗಾದ್ರೆ ಈ ಟಿವಿ ಈಗಲೇ ಹಳೆಯದಾಗಿದೆ. ಯಾಕೆ ಗೊತ್ತೆ ಈಗ ಇದಕ್ಕಿಂತಲೂ ಉತ್ತಮ ಗುಣಮಟ್ಟದ ಟಿವಿ ಮಾರುಕಟ್ಟೆಗೆ ಬಂದಿದೆ.ಎಲ್‌ಜಿ ಮತ್ತು ಸೋನಿ ಕಂಪೆನಿಯವರು ಇತ್ತೀಚಿಗೆ ಒಂದು ಹೊಸ ಟಿವಿ. ತಂತ್ರಜ್ಞಾನವನ್ನು ಪರಿಚಯಿಸಿದ್ದಾರೆ. ಎಚ್‌ಡಿ ಟಿವಿಗಳ ಬದಲಾಗಿ ಅಲ್ಟ್ರಾ ಎಚ್‌ಡಿ ಎನ್ನುವ ಹೊಸ ತಂತ್ರಜ್ಞಾನದಿಂದ ತಯಾರಾದ ಹೊಸ ಟಿವಿ ಮಾರುಕಟ್ಟೆಗೆ ಬಂದಿದ್ದು,ಈ ವರ್ಷದ ವಿಂಬಲ್ಡ್‌ನಲ್ಲಿ ಈ ಟಿವಿಯನ್ನು ಬಳಸಲಾಗುತ್ತದೆ ಎಂದು ಹೇಳಲಾಗುತ್ತಿದೆ. ಹೀಗಾಗಿ ಈ ಟಿವಿಯಲ್ಲಿ ಅಂತ ವಿಶೇಷತೆಗಳು ಏನಿದೆ ಎನ್ನುವುದಕ್ಕೆ ಇಲ್ಲಿ ಕೆಲವು ಮಾಹಿತಿಗಳಿವೆ. ಒಂದೊಂದೆ ಪುಟವನ್ನು ತಿರುಗಿಸಿಕೊಂಡು ನೋಡಿಕೊಂಡು ಹೋಗಿ.

ಏನಿದು ಅಲ್ಟ್ರಾ ಎಚ್‌ಡಿ ಟಿವಿ ತಂತ್ರಜ್ಞಾನ ?
ಸದ್ಯದ ಎಚ್‌ಡಿ ಟಿವಿಗಳು ಎರಡು ಮಿಲಿಯನ್ ಪಿಕ್ಸೆಲ್ ಹೊಂದಿದ್ರೆ,ಈ ಅಲ್ಟ್ರಾಎಚ್‌ಡಿ ಟಿವಿ ಎಂಟು ಮಿಲಿಯನ್ ಪಿಕ್ಸೆಲ್ ಹೊಂದಿರುತ್ತದೆ. 84 ಇಂಚಿನ ಎಲ್‌ಜಿ ಟಿವಿ ಸ್ಕ್ರೀನ್ 3840 x 2160 ಪಿಕ್ಸೆಲ್ ಹೊಂದಿದೆ

ಏನಿದು ಅಲ್ಟ್ರಾ ಎಚ್‌ಡಿ ಟಿವಿ ತಂತ್ರಜ್ಞಾನ ?
ಈಗ ಹೆಚ್ಚು ಪ್ರಚಲಿತದಲ್ಲಿರುವ ಎಚ್‌ಡಿ ಟಿವಿಗಿಂತ ನಾಲ್ಕು ಪಟ್ಟುಹೆಚ್ಚಿನ ಗುಣಮಟ್ಟದಲ್ಲಿ ಈ ಟಿವಿಯಲ್ಲಿ ವೀಡಿಯೋವನ್ನು ವೀಕ್ಷಣೆ ಮಾಡಬಹುದು.

ಏನಿದು ಅಲ್ಟ್ರಾ ಎಚ್‌ಡಿ ಟಿವಿ ತಂತ್ರಜ್ಞಾನ ?
ಇಂದು ನಾವು ವೀಕ್ಷಿಸುತ್ತಿರುವ ಸಾಧಾರಣ ಚಿತ್ರವನ್ನು ಈ ಟಿವಿಯಲ್ಲಿ 3ಡಿ ಚಿತ್ರವನ್ನಾಗಿ ಪರಿವರ್ತಿಸಬಹುದಾಗಿದೆ.

ಏನಿದು ಅಲ್ಟ್ರಾ ಎಚ್‌ಡಿ ಟಿವಿ ತಂತ್ರಜ್ಞಾನ ?
ವಾಯ್ಸ್ ರೆಕಗ್ನಿಷನ್ ತಂತ್ರಜ್ಞಾನವನ್ನು ಇದು ಅಳವಡಿಸಿದ್ದು ಧ್ವನಿಯಿಂದಲೇ ಈ ಟಿವಿಯನ್ನು ನಿಯಂತ್ರಣ ಮಾಡಬಹುದಾಗಿದೆ.

ಏನಿದು ಅಲ್ಟ್ರಾ ಎಚ್‌ಡಿ ಟಿವಿ ತಂತ್ರಜ್ಞಾನ ?
ವೈಫೈ ತಂತ್ರಜ್ಞಾನದೊಂದಿಗೆ ಈ ಟಿವಿ ತಯಾರಾಗಿದ್ದು, ವೀಕ್ಷಕರು ಇಂಟರ್‌ನೆಟ್ ಸಹಾಯದ ಚಿತ್ರಗಳನ್ನು ವೀಕ್ಷಣೆ ಮಾಡಬಹುದು ಜೊತೆಗೆ ಡೌನ್‌ಲೋಡ್ ಮಾಡಬಹುದು.

ಏನಿದು ಅಲ್ಟ್ರಾ ಎಚ್‌ಡಿ ಟಿವಿ ತಂತ್ರಜ್ಞಾನ ?
84 ಇಂಚಿನ ಎಲ್‌ಜಿ ಅಲ್ಟ್ರಾಎಚ್‌ಡಿ ಟಿವಿ ಮಾರುಕಟ್ಟೆ ಬೆಲೆ 19 ಸಾವಿರ ಡಾಲರ್ (11 ಲಕ್ಷದ 73 ಸಾವಿರ ರೂಪಾಯಿ)


Click it and Unblock the Notifications








