Home
ಸುದ್ದಿಜಾಲ

ಸಿಹಿ ಸುದ್ದಿ! ಬರುತ್ತಿದೆ ವಿಶ್ವದ ಮೊಟ್ಟ ಮೊದಲ Afib ಫೀಚರ್‌ ಸ್ಮಾರ್ಟ್ ರಿಂಗ್: ಬೆಲೆ ಎಷ್ಟು?

ಸ್ಮಾರ್ಟ್ ರಿಂಗ್‌ ಪ್ರಿಯರಿಗೆ ಸಿಹಿ ಸುದ್ದಿ ಇದೆ. ಇದು ನಿಮ್ಮ ಹೃದಯಕ್ಕೆ ಲಿಂಕ್ ಆಗಿದೆ. ಹೌದು, ಇತ್ತೀಚಿನ ದಿನಗಳಲ್ಲಿ ಸ್ಮಾರ್ಟ್‌ ರಿಂಗ್ (Smart Ring) ಖರೀದಿಸುವುದು ಟ್ರೆಂಡ್ ಆಗಿದೆ. ಪ್ರಾರಂಭದಲ್ಲಿ ಸ್ಮಾರ್ಟ್‌ವಾಚ್‌ಗಳ ಹಿಂದೆ ಬೀಳುತ್ತಿದ್ದವರು ಇದೀಗ, ಸ್ಮಾರ್ಟ್‌ ರಿಂಗ್ ಖರೀದಿಸಲು ಮುಗಿ ಬೀಳುತ್ತಿದ್ದಾರೆ. ಇದೀಗ, ಸ್ಮಾರ್ಟ್‌ ರಿಂಗ್ ತಯಾರಿಕ ಅಲ್ಟ್ರಾಹುಮನ್ ಕಂಪನಿಯು, ಪವರ್‌ಪ್ಲಗ್‌ಗಳನ್ನು ಬಿಡುಗಡೆ ಮಾಡುವುದಾಗಿ ಘೋಷಿಸಿದೆ. ಇದು ಸುಧಾರಿತ ಆರೋಗ್ಯ ತಂತ್ರಜ್ಞಾನವನ್ನು ಹೊಂದಿರಲಿದೆ. ವಿಶ್ವದ ಮೊದಲ ಸ್ಮಾರ್ಟ್ ರಿಂಗ್ ಆಗಿದೆ. ಈ ಫೀಚರ್‌ನ ವಿಶೇಷತೆಗಳೇನು? ಇದು ಹೇಗೆ ಕೆಲಸ ಮಾಡುತ್ತದೆ? ಎನ್ನುವುದನ್ನು ತಿಳಿಯೋಣ ಬನ್ನಿ.

ಆಪಲ್ ಮತ್ತು ಗೂಗಲ್‌ನಂತಹ ಟೆಕ್ ದೈತ್ಯ ಕಂಪನಿಗಳು ನೂತನ ಸ್ಮಾರ್ಟ್‌ ರಿಂಗ್‌ಗಳನ್ನು ಮಾರುಕಟ್ಟೆಗೆ ಪರಿಚಯಿಸಿವೆ. ಸ್ಯಾಮ್‌ಸಂಗ್ ತನ್ನ ಮೊದಲ ಆರೋಗ್ಯ ಟ್ರ್ಯಾಕರ್ ರಿಂಗ್‌ ಅನ್ನು ಈ ತಿಂಗಳ ಕೊನೆಯಲ್ಲಿ ಬಿಡುಗಡೆ ಮಾಡಲಿದೆ. ಸ್ಪರ್ಧೆ ಹೆಚ್ಚುತ್ತಿರುವಂತೆಯೇ, ಭಾರತೀಯ ಮೂಲದ ಅಲ್ಟ್ರಾಹ್ಯೂಮನ್‌ ಕಂಪನಿಯ ನೂತನ ಅಪ್ಡೇಟ್‌ಗಳ ರಿಂಗ್ ಭಾರೀ ಸದ್ದು ಮಾಡುತ್ತಿದೆ. ಕಾರಣ, ಅಲ್ಟ್ರಾಹ್ಯೂಮನ್‌ನ ಸ್ಮಾರ್ಟ್ ರಿಂಗ್ AFib ಪತ್ತೆ ಹಚ್ಚುವ ವೈಶಿಷ್ಟ್ಯವನ್ನು ಹೊಂದಿದೆ. ಮುಖ್ಯವಾಗಿ Ultrahuman FibriCheck ಎಂಬ ತಂತ್ರಜ್ಞಾನದೊಂದಿಗೆ ಪರಿಚಯಿಸಲಾಗುತ್ತದೆ.

ಸಿಹಿ ಸುದ್ದಿ! ಬರುತ್ತಿದೆ ವಿಶ್ವದ ಮೊದಲ Afib ಫೀಚರ್‌: ಯಾವ ಸ್ಮಾರ್ಟ್ ರಿಂಗ್?

Afib ಫೀಚರ್‌ಗೆ 400 ರೂ. ಶುಲ್ಕ ಫಿಕ್ಸ್!

ಅಫಿಬ್‌ ಪತ್ತೆ ಫೀಚರ್ ಪ್ರೀಮಿಯಂ ಆಯ್ಕೆಯಾಗಿದೆ. ಇದರ ಪ್ರಯೋಜನಗಳನ್ನು ಪಡೆಯಲು $4.90 (ಅಂದಾಜು 400 ರೂ.) ಮಾಸಿಕ ಚಂದಾದಾರಿಕೆ ಶುಲ್ಕವನ್ನು ನೀಡಬೇಕಾಗುತ್ತದೆ. FibriCheck ಅನ್ನು FDA ಮತ್ತು ಯುರೋಪಿಯನ್ ವೈದ್ಯಕೀಯ ಸಾಧನ ನಿಯಂತ್ರಕರು ಅನುಮೋದಿಸಿದ್ದಾರೆ. ಈ ವೈಶಿಷ್ಟ್ಯವು ಫೈಬ್ರಿಚೆಕ್‌ನಿಂದ ಚಾಲಿತವಾಗಿದೆ. ಇದು ಫೋಟೊಪ್ಲೆಥಿಸ್ಮೋಗ್ರಫಿ (PPG) ಆಧಾರಿತ ತಂತ್ರವಾಗಿದ್ದು, ಚರ್ಮಕ್ಕೆ ಬೆಳಕಿನ ಮೂಲವನ್ನು ಅನ್ವಯಿಸುವ ಆಧಾರದ ಮೇಲೆ ಹೃದಯದ ಲಯದ ಅಳತೆಯನ್ನು ತೆಗೆದುಕೊಳ್ಳುತ್ತದೆ. ಮತ್ತು ಹೃದಯವು ದೇಹದಾದ್ಯಂತ ದ್ರವವನ್ನು ಪಂಪ್ ಮಾಡುವಾಗ ರಕ್ತದ ಪರಿಮಾಣದಲ್ಲಿನ ಬದಲಾವಣೆಗಳನ್ನು ಅಳೆಯುತ್ತದೆ.

ಮೂರು ತಿಂಗಳೊಳಗೆ ಭಾರತದಲ್ಲಿ ಲಭ್ಯ

Ultrahumanನ AFib ಪತ್ತೆ ವೈಶಿಷ್ಟ್ಯವು ಪ್ರಸ್ತುತ ಆಸ್ಟ್ರೇಲಿಯಾ, EU, ಸೌದಿ ಅರೇಬಿಯಾ, ಸಿಂಗಾಪುರ್, ಯುನೈಟೆಡ್ ಕಿಂಗ್‌ಡಮ್ ಮತ್ತು ಯುನೈಟೆಡ್ ಅರಬ್ ಎಮಿರೇಟ್ಸ್‌ನಲ್ಲಿ ಲಭ್ಯವಿರಲಿದೆ. ಇಲ್ಲಿ ಈ ಫೀಚರ್‌ ನಿಯಂತ್ರಕ ಅನುಮೋದನೆಗಳನ್ನು ಪಡೆದುಕೊಂಡಿದೆ. ಮುಂದಿನ ಎರಡು ಅಥವಾ ಮೂರು ತಿಂಗಳುಗಳಲ್ಲಿ ಯುಎಸ್ ಮತ್ತು ಭಾರತೀಯ ಮಾರುಕಟ್ಟೆಗಳಲ್ಲಿ ಲಭ್ಯವಾಗುವಂತೆ ನಾವು ಕೆಲಸ ಮಾಡುತ್ತಿದ್ದೇವೆ ಎಂದು ಅಲ್ಟ್ರಾಹುಮನ್‌ನ ಸಿಇಒ ಮತ್ತು ಸಹ ಸಂಸ್ಥಾಪಕ ಮೋಹಿತ್ ಕುಮಾರ್ ಟೆಕ್ಕ್ರಂಚ್‌ಗೆ ತಿಳಿಸಿದ್ದಾರೆ.

ಈ ಫೀಚರ್‌ ಅನ್ನು ಹೇಗೆ? ಯಾರು ಬಳಸಬಹುದು?

ಪವರ್‌ಪ್ಲಗ್ಸ್ ಪ್ಲಾಟ್‌ಫಾರ್ಮ್ ಅನ್ನು ಅಲ್ಟ್ರಾಹ್ಯೂಮನ್ ಅಪ್ಲಿಕೇಶನ್ ಮೂಲಕ ಪ್ರವೇಶಿಸಬಹುದು. ಇದನ್ನು ಮ್ಯಾಕ್ ಆಪ್ ಸ್ಟೋರ್ ಮತ್ತು ಗೂಗಲ್ ಪ್ಲೇನಿಂದ ಡೌನ್‌ಲೋಡ್ ಮಾಡಬಹುದು. ಅಫಿಬ್‌ನಲ್ಲಿ ಮಾಡಿದ ಪರೀಕ್ಷೆಗಳು ಸಾಕಷ್ಟು ನಿಖರವಾಗಿದೆ. ಆದರೆ, ಈ ವೈಶಿಷ್ಟ್ಯದ ಗಂಭೀರತೆ ದೃಷ್ಟಿಯಿಂದಾಗಿ, ವೈಶಿಷ್ಟ್ಯವನ್ನು ಹೇಗೆ ಮತ್ತು ಯಾರು ಬಳಸಬಹುದು ಎಂಬುದರ ಕುರಿತು ಎಚ್ಚರಿಕೆಯಿಂದ ಹೆಜ್ಜೆ ಇಡುತ್ತಿದೆ. ಮತ್ತು ಇದನ್ನು ನಿಯಂತ್ರಕ ಅನುಮೋದನೆಗಳನ್ನು ಪಡೆದ ಬಳಿಕವೇ ಮಾರುಕಟ್ಟೆಗೆ ಪರಿಚಯಿಸಲಾಗುತ್ತದೆ ಎಂದು ಅಲ್ಟ್ರಾಹುಮನ್ ಹೇಳಿದೆ. ಇದು ಕೆಫೀನ್ ಸೇವನೆಯಿಂದ ಜೆಟ್ ಲ್ಯಾಗ್‌ನಿಂದ ಅಂಡೋತ್ಪತ್ತಿಯವರೆಗೆ ಎಲ್ಲವನ್ನೂ ಟ್ರ್ಯಾಕ್ ಮಾಡುತ್ತದೆ.

ಸಿಹಿ ಸುದ್ದಿ! ಬರುತ್ತಿದೆ ವಿಶ್ವದ ಮೊದಲ Afib ಫೀಚರ್‌: ಯಾವ ಸ್ಮಾರ್ಟ್ ರಿಂಗ್?

ನಿಮಗೆ ಬೇಕಾದ ಅಪ್ಲಿಕೇಶನ್‌ ಆಯ್ಕೆ ಮಾಡಿಕೊಳ್ಳಿ

ಅಫಿಬ್‌ ಪತ್ತೆ ಹಚ್ಚುವಿಕೆ ಫೀಚರ್ ಈಗಾಗಲೇ ಪರಿಚಿತವಾಗಿರಬಹುದು. ಇದು ಬಳಕೆದಾರರಿಗೆ ತಮಗೆ ಬೇಕಾದ ಅಪ್ಲಿಕೇಶನ್‌ಗಳನ್ನು ಆಯ್ಕೆ ಮಾಡಲು ಅನುವು ಮಾಡಿಕೊಡುತ್ತದೆ. ಇದು ಹಲವಾರು ವರ್ಷಗಳಿಂದ Appleನ ಸ್ಮಾರ್ಟ್‌ವಾಚ್‌ನ ಪ್ರಮುಖ ಸಾಮರ್ಥ್ಯವಾಗಿದೆ. ಆದಾಗ್ಯೂ, ಆಪಲ್‌ನ ಸ್ಮಾರ್ಟ್‌ ರಿಂಗ್‌ ವಿಭಿನ್ನವಾದ ಪತ್ತೆ ಹಚ್ಚುವ ವಿಧಾನವನ್ನು ECG (ಎಲೆಕ್ಟ್ರೋಕಾರ್ಡಿಯೋಗ್ರಾಮ್) ಆಧರಿಸಿದೆ. ಈ ರಿಂಗ್‌ ಅನ್ನು ಖರೀದಿಸಲು ಆಸಕ್ತಿ ಹೊಂದಿರುವ ಗ್ರಾಹಕರು, ಸ್ಮಾರ್ಟ್‌ವಾಚ್ ಅಥವಾ ಸ್ಮಾರ್ಟ್ ರಿಂಗ್ ಅನ್ನು ಖರೀದಿಸುವಾಗ ಈ ಫೀಚರ್ ಆಯ್ಕೆ ಮಾಡಿಕೊಳ್ಳಬಹುದು.

ಅಫಿಬ್ ಫೀಚರ್‌ ಹೇಗೆ ಕಾರ್ಯನಿರ್ವಹಿಸುತ್ತದೆ?

ಕಂಪನಿಯು Ultrahuman FibriCheck ಎಂಬ ತಂತ್ರಜ್ಞಾನವನ್ನು ಬಳಸುತ್ತಿದೆ. ಅಫಿಬ್ ಪತ್ತೆಯನ್ನು ಸ್ಮಾರ್ಟ್ ರಿಂಗ್‌ಗೆ ತಂದ ಮೊದಲನೆ ಕಂಪನಿ ಎಂಬ ಶ್ರೇಯಕ್ಕೆ ಪಾತ್ರವಾಗಲಿದೆ. ಇದು ಸಹ ಸಣ್ಣ ಸಾಧನೆಯಲ್ಲ. ಇದು ಮೂಲಭೂತವಾಗಿ ಚರ್ಮಕ್ಕೆ ಬೆಳಕನ್ನು ಅನ್ವಯಿಸುತ್ತದೆ. ದೇಹದ ಮೂಲಕ ಹೃದಯದಿಂದ ಪಂಪ್ ಮಾಡಲ್ಪಡುವ ರಕ್ತದ ಪ್ರಮಾಣವನ್ನು ಮೇಲ್ವಿಚಾರಣೆ ಮಾಡುವ ಮೂಲಕ ವೈಜ್ಞಾನಿಕ ಪ್ರಕ್ರಿಯೆಯನ್ನು ಬಳಸಲಾಗುತ್ತಿದೆ.

Best Mobiles in India

English summary
Ultrahuman is an India based company that offers its smart ring in the market. ultrahumans smart ring gets fda approved afib detection.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+