Home
ಸುದ್ದಿಜಾಲ

BSNL: ಇಷ್ಟು ಕಡಿಮೆ ಬೆಲೆಗೆ 60GB ಡೇಟಾ.. ಅನ್‌ಲಿಮಿಟೆಡ್ ಕಾಲ್ಸ್.. ಬೆಲೆ, ವ್ಯಾಲಿಡಿಟಿ ಎಷ್ಟು?

ಮತ್ತೊಮ್ಮೆ ಸದ್ದು ಮಾಡುತ್ತಿದೆ ಈ ರೀಚಾರ್ಜ್ ಪ್ಲಾನ್..! ನಿತ್ಯ 2GB ಡೇಟಾ, 30 ದಿನ ಉಚಿತ ಕರೆಗಳು ಮತ್ತು 100 SMS ಫ್ರೀ.. ಬೆಲೆಯೂ ಕಡಿಮೆ! ಹೌದು, ಬಿಎಸ್‌ಎನ್‌ಎಲ್ (BSNL) ತನ್ನ ಜನಪ್ರಿಯ 199 ರೂ.ಗಳ ರೀಚಾರ್ಜ್ ಯೋಜನೆಯನ್ನು (BSNL Rs 199 Recharge Plan) ಮತ್ತೆ ಪ್ರಚಾರ ಮಾಡುತ್ತಿದೆ. ಕರೆ ಮತ್ತು ಎಸ್‌ಎಂಎಸ್‌ ಸೇವೆಗಳ ಜೊತೆಗೆ ಡೇಟಾವನ್ನು ಮಾತ್ರ ಬಳಸುವ ಗ್ರಾಹಕರಿಗೆ ಈ ಯೋಜನೆ ಉತ್ತಮ ಆಯ್ಕೆಯಾಗಿದೆ. ಈ ರೀಚಾರ್ಜ್ ಪ್ಲಾನ್ 30 ದಿನಗಳ ವ್ಯಾಲಿಡಿಟಿಯೊಂದಿಗೆ ಬರುತ್ತದೆ. ಈ ರೀಚಾರ್ಜ್ ಪ್ಯಾಕ್‌ನ ಬಗ್ಗೆ ಇಲ್ಲಿದೆ ಸಂಪೂರ್ಣ ಮಾಹಿತಿ.

ಬಿಎಸ್‌ಎನ್‌ಎಲ್‌ನ (ಭಾರತ್ ಸಂಚಾರ್ ನಿಗಮ್ ಲಿಮಿಟೆಡ್) ಈ ರೀಚಾರ್ಜ್ ಪ್ಯಾಕ್ ಕಡಿಮೆ ಬೆಲೆಗೆ ಸಾಕಷ್ಟು ಪ್ರಯೋಜನಗಳನ್ನು ನೀಡುತ್ತದೆ. ಈ ಪ್ಲಾನ್‌ನಲ್ಲಿ ನೀವು ನಿತ್ಯ 2GB ಹೈಸ್ಪೀಡ್ ಇಂಟರ್ನೆಟ್ ಸೌಲಭ್ಯ ಪಡೆಯಬಹುದು. ಅಂದರೆ, ನೀವು ಸಂಪೂರ್ಣ 30 ದಿನಗಳಲ್ಲಿ ಒಟ್ಟು 60GB ಡೇಟಾವನ್ನು ಬಳಸಬಹುದು. ಹೆಚ್ಚುವರಿಯಾಗಿ, ನೀವು ಯಾವುದೇ ಹೆಚ್ಚುವರಿ ವೆಚ್ಚವಿಲ್ಲದೆ, ಯಾವುದೇ ನೆಟ್‌ವರ್ಕ್‌ಗೆ ಅನ್‌ಲಿಮಿಟೆಡ್ ವಾಯ್ಸ್ ಕಾಲ್ ಮಾಡುವ ಸೌಲಭ್ಯವನ್ನು ಸಹ ಒದಗಿಸಲಾಗಿದೆ. ಇದಲ್ಲದೆ, ಈ ರೀಚಾರ್ಜ್ ಯೋಜನೆಯು ಪ್ರತಿದಿನ 100 ಎಸ್‌ಎಂಎಸ್ (SMS) ಸೌಲಭ್ಯವನ್ನು ಒಳಗೊಂಡಿದೆ. ನೀವು ಪ್ರತ್ಯೇಕ ಎಸ್‌ಎಂಎಸ್ ಪ್ಯಾಕ್ ಪಡೆಯುವ ಅಗತ್ಯವಿಲ್ಲ.

BSNL: 60GB ಡೇಟಾ.. ಅನ್‌ಲಿಮಿಟೆಡ್ ಕಾಲ್ಸ್.. ಕಡಿಮೆ ಬೆಲೆ, ವ್ಯಾಲಿಡಿಟಿ ಎಷ್ಟು?

ಬಿಎಸ್‌ಎನ್‌ಎಲ್‌ 199 ರೂ. ರೀಚಾರ್ಜ್ ಪ್ಯಾಕ್‌ನ ಪ್ರಯೋಜನಗಳು

ರೀಚಾರ್ಜ್ ಯೋಜನೆ ಬೆಲೆ = 199 ರೂ.
ವ್ಯಾಲಿಡಿಟಿ = 30 ದಿನಗಳು
ಡೇಟಾ ಪ್ರಯೋಜನಗಳು = ಪ್ರತಿದಿನ 2GB (ಒಟ್ಟು 60GB ಡೇಟಾ)
ವಾಯ್ಸ್ ಕಾಲ್ ಸೌಲಭ್ಯ = ಅನ್‌ಲಿಮಿಟೆಡ್ ಕಾಲ್ಸ್ (ಎಲ್ಲಾ ನೆಟ್‌ವರ್ಕ್‌)
ಎಸ್‌ಎಂಎಸ್ ಸೌಲಭ್ಯ = ನಿತ್ಯ 100 ಎಸ್‌ಎಂಎಸ್
ಡೇಟಾ ವೇಗ = ಗರಿಷ್ಠ 40Mbps

ಯಾರಿಗೆ ಈ ರೀಚಾರ್ಜ್ ಪ್ಲಾನ್ ಅನುಕೂಲ?

ಬಿಎಸ್‌ಎನ್‌ಎಲ್‌ 199 ರೂ. ರೀಚಾರ್ಜ್ ಪ್ಲಾನ್ ವಿಶೇಷವಾಗಿ ಇಂಟರ್ನೆಟ್ ಬ್ರೌಸಿಂಗ್, ಸೋಶಿಯಲ್ ಮೀಡಿಯಾ ಬಳಕೆ ಮತ್ತು ಆನ್‌ಲೈನ್ ಚಾಟಿಂಗ್‌ನಲ್ಲಿ ಸಕ್ರಿಯರಾಗಿರುವ ಗ್ರಾಹಕರಿಗಾಗಿ ಉತ್ತಮ ಆಯ್ಕೆಯಾಗಿದೆ. ನಿಮಗೆ ಪ್ರತಿದಿನ 2GB ಡೇಟಾ ಸಾಕಾಗುತ್ತದೆ. ಅಲ್ಲದೆ, ಅನ್‌ಲಿಮಿಟೆಡ್ ಕಾಲ್ಸ್ ಸೌಲಭ್ಯವು ಯಾವುದೇ ಅಡಚಣೆ ಇಲ್ಲದೆ ನೋಡಿಕೊಳ್ಳುತ್ತದೆ.

ಈ ರೀಚಾರ್ಜ್ ಪ್ಲಾನ್ ಬಳಸುವುದು ಹೇಗೆ?

ಬಿಎಸ್‌ಎನ್‌ಎಲ್‌ 199 ರೂ. ರೀಚಾರ್ಜ್ ಪ್ಯಾಕ್ ಅನ್ನು ಬಿಎಸ್‌ಎನ್‌ಎಲ್‌ನ ಅಧಿಕೃತ ವೆಬ್‌ಸೈಟ್ ಮೂಲಕ ಪಡೆಯಬಹುದು. ಇದಲ್ಲದೆ, ಬಿಎಸ್‌ಎನ್‌ಎಲ್ ಸೆಲ್ಫ್‌ಕೇರ್ ಆಪ್ ಅಥವಾ ಸಮೀಪದ ರೀಚಾರ್ಜ್ ಅಂಗಡಿಯಿಂದ ಪಡೆಯಬಹುದು. ಈ ಅಪ್ಲಿಕೇಶನ್ ಆಂಡ್ರಾಯ್ಡ್ ಮತ್ತು ಐಒಎಸ್ ಎರಡೂ ಪ್ಲಾಟ್‌ಫಾರ್ಮ್‌ಗಳಲ್ಲಿ ಲಭ್ಯವಿದೆ. ಇದು ಡಿಜಿಟಲ್ ಬಳಕೆದಾರರಿಗೆ ಹೆಚ್ಚುವರಿ ಅನುಕೂಲವನ್ನು ನೀಡುತ್ತದೆ.

ಒಟ್ಟಾರೆಯಾಗಿ,ಬಿಎಸ್‌ಎನ್‌ಎಲ್‌ ಕಂಪನಿಯು ಜಿಯೋ ಮತ್ತು ಏರ್‌ಟೆಲ್‌ ಸೇರಿದಂತೆ ಇನ್ನಿತರ ಖಾಸಗಿ ಕಂಪನಿಗಳಿಗೆ ಸ್ಪರ್ಧೆ ನೀಡುತ್ತಿದೆ. ಇದು ತನ್ನ ಹಿಡಿತವನ್ನು ಉಳಿಸಿಕೊಳ್ಳಲು ಮಾಡುತ್ತಿರುವ ಕಾರ್ಯತಂತ್ರದ ಒಂದು ಭಾಗವೇ, ಈ 199 ರೂ. ರೀಚಾರ್ಜ್ ಪ್ಯಾಕ್‌ಗೆ ಮತ್ತೊಮ್ಮೆ ಪ್ರಾಮುಖ್ಯತೆ ನೀಡಿರುವುದು. 199 ರೂ. ಬೆಲೆಯಲ್ಲಿ ಈ ರೀತಿಯ ಸಮತೋಲನ ಹೊಂದಿರುವ ಪ್ಲಾನ್ ಮಾರುಕಟ್ಟೆಯಲ್ಲಿ ಅಪರೂಪ. ಇದು ವಿಶೇಷವಾಗಿ ಸೀಮಿತ ಬಜೆಟ್‌ನಲ್ಲಿ ಹಲವು ಸೌಲಭ್ಯ ಬಯಸುವ ಬಳಕೆದಾರರಿಗೆ ಉತ್ತಮ ಆಯ್ಕೆಯಾಗಿದೆ.

BSNL: 60GB ಡೇಟಾ.. ಅನ್‌ಲಿಮಿಟೆಡ್ ಕಾಲ್ಸ್.. ಕಡಿಮೆ ಬೆಲೆ, ವ್ಯಾಲಿಡಿಟಿ ಎಷ್ಟು?

ಬಿಎಸ್‌ಎನ್‌ಎಲ್‌ 251 ರೂ. ಯೋಜನೆ

ಐಪಿಎಲ್‌ ಪ್ರಿಯರಿಗೆ ಬಿಎಸ್‌ಎನ್‌ಎಲ್ ಕೇವಲ 251 ರೂ.ಗೆ ಹೊಸ ಹೊಸ ಪ್ರಿಪೇಯ್ಡ್ ರೀಚಾರ್ಜ್ ಪ್ಲಾನ್ ಬಿಡುಗಡೆ ಮಾಡಿದೆ. 251 ರೂ.ಗಳ ಈ ರೀಚಾರ್ಜ್ ವೋಚರ್‌ ಒಟ್ಟು 251GB ಹೈ ಸ್ಪೀಡ್ ಡೇಟಾವನ್ನು ನೀಡುತ್ತದೆ. ಇದು 60 ದಿನಗಳ ವ್ಯಾಲಿಡಿಟಿಯೊಂದಿಗೆ ಬರುತ್ತದೆ. ಅಂದರೆ, ಪ್ರತಿದಿನ ಸರಾಸರಿ 4GB ಡೇಟಾವನ್ನು ಬಳಸಬಹುದು. 251GB ಮಿತಿಯನ್ನು ತಲುಪಿದ ಬಳಿಕ, ಇಂಟರ್ನೆಟ್ ವೇಗವು 40 Kbps ಗೆ ಕಡಿಮೆಯಾಗುತ್ತದೆ. ಇದು ಸಾಮಾನ್ಯ ಬ್ರೌಸಿಂಗ್ ಅನ್ನು ಅನುಮತಿಸುತ್ತದೆ. ಆದರೆ, ವಿಡಿಯೊ ಸ್ಟ್ರೀಮಿಂಗ್ ಅಥವಾ ಹೆಚ್ಚು ಡೇಟಾ ಬಯಸುವ ಡೌನ್‌ಲೋಡ್‌ ಕಷ್ಟಕರ. ರೀಚಾರ್ಜ್ ವೋಚರ್‌ ಡೇಟಾಗೆ ಮಾತ್ರ ಸೀಮಿತವಾಗಿದೆ. ಇದರಲ್ಲಿ ವಾಯ್ಸ್ ಕಾಲ್ ಅಥವಾ ಎಸ್‌ಎಂಎಸ್ ಸೇವೆ ಇರಲ್ಲ. ಇದಕ್ಕೆ ಯಾವುದೇ ವ್ಯಾಲಿಡಿಟಿ ಇರುವುದಿಲ್ಲ.

Best Mobiles in India

English summary
under Rs 200 BSNL Recharge Plan get 2gb daily data free unlimited calling for 30 days: know details
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+