ವಾಟ್ಸಾಪ್‌ ಹೊಸ ಸೇವಾ ನಿಯಮ!..ಸಿಗ್ನಲ್‌ ಆಪ್‌ ಕಡೆಗೆ ಹೆಚ್ಚಿದ ಜನರ ಒಲವು!

|

ವಾಟ್ಸಾಪ್‌ ವಿಶ್ವದಲ್ಲಿಯೇ ಅತಿ ಹೆಚ್ಚಿನ ಸಕ್ರಿಯ ಬಳಕೆದಾರರನ್ನು ಹೊಂದಿದೆ. ಆದರೆ ಇತ್ತೀಚಿಗಷ್ಟೆ ತನ್ನ ಹೊಸ ಗೌಪ್ಯತೆ ನೀತಿ ಹಾಗೂ ಸೇವಾ ನಿಯಮವನ್ನು ಬಳಕೆದಾರರು ಒಪ್ಪಿಕೊಳ್ಳಲೇಬೇಕು ಎಂಬ ನೀತಿಯ ವಿರುದ್ದ ಆಕ್ರೋಶ ಎಲ್ಲೆಡೆ ವ್ಯಕ್ತವಾಗಿದೆ. ಹೀಗೆ ಆಕ್ರೋಶ ವ್ಯಕ್ತವಾಗುವುದರ ಜೊತೆಗೆ ವಾಟ್ಸಾಪ್‌ ತನ್ನ ಬಳಕೆದಾರರನ್ನು ಕಳೆದುಕೊಳ್ಳುವ ಬೀತಿಯನ್ನು ಎದುರಿಸುತ್ತಿದೆ. ವಿಶ್ವದ ನಂಬರ್‌ ಒನ್‌ ಶ್ರೀಮಂತ ಎನಿಸಿಕೊಂಡಿರುವ ಎಲೋನ್‌ ಮಸ್ಕ್‌ ವಾಟ್ಸಾಪ್‌ ನೀತಿಯ ಬಗ್ಗೆ ಕಳವಳ ವ್ಯಕ್ತಪಡಿಸಿದ ನಂತರ ವಾಟ್ಸಾಪ್‌ಗೆ ಪರ್ಯಾಯವಾಗಿರುವ ಸಿಗ್ನಲ್ ಅಪ್ಲಿಕೇಶನ್‌ನಲ್ಲಿ ಹೊಸ ಸೈನ್ ಅಪ್‌ಗಳಲ್ಲಿ ಗಮನಾರ್ಹ ಏರಿಕೆ ಕಂಡಿದೆ.

ವಾಟ್ಸಾಪ್‌

ಹೌದು, ವಿಶ್ವದ ನಂಬರ್‌ ಒನ್‌ ಶ್ರೀಮಂತ ಎಲೋನ್‌ ಮಸ್ಕ್‌ ಮಾಡಿದ ಒಂದೇ ಒಂದು ಟ್ವೀಟ್‌ ಇದೀಗ ವಾಟ್ಸಾಪ್‌ ಅನ್ನು ಪೇಚಿಗೆ ಸಿಲುಕಿಸಿದೆ. ಬಳಕೆದಾರರ ಮೇಲೆ ಬಲವಂತವಾಗಿ ಗೌಪ್ಯತೆಯ ನೀತಿಯನ್ನು ಏರುವ ಕ್ರಮಕ್ಕೆ ಬಳಕೆದಾರರು ಕೂಡ ಅಸಮಾಧಾನ ಹೊಂದಿದ್ದಾರೆ. ಇದೇ ಕಾರಣಕ್ಕೆ ಹೆಚ್ಚಿನ ಜನರು ವಾಟ್ಸಾಪ್‌ ಬದಲು ಸಿಗ್ನಲ್‌ ಹಾಗೂ ಟೆಲಿಗ್ರಾಮ್ ಅಪ್ಲಿಕೇಶನ್‌ ಕಡೆಗೆ ಹೊರಳುತ್ತಿದ್ದಾರೆ ಎನ್ನಲಾಗಿದೆ. ಇನ್ನುಳಿದಂತೆ ವಾಟ್ಸಾಪ್‌ನ ಸೇವಾ ನಿಯಮದಿಂದಾಗಿ ಸಿಗ್ನಲ್‌ ಹಾಗೂ ಟೆಲಿಗ್ರಾಮ್‌ ಅಪ್ಲಿಕೇಶನ್‌ ಹೇಗೆ ಬಳಕೆದಾರರನ್ನು ಸೆಳೆಯುತ್ತಿದೆ ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತೀವಿ ಓದಿರಿ.

ಅಪ್ಲಿಕೇಶನ್‌

ಜಗತ್ತಿನ ನಂಬರ್‌ ಒನ್‌ ಶ್ರೀಮಂತ ಎಲೋನ್‌ ಮಸ್ಕ್‌ ಸಿಗ್ನಲ್‌ ಅಪ್ಲಿಕೇಶನ್‌ ಬಳಸಿ ಎಂಬ ಟ್ವೀಟ್‌ ಸಿಗ್ನಲ್‌ ಅಪ್ಲಿಕೇಶನ್‌ ಕಡೆಗೆ ಹೆಚ್ಚಿನ ಮಂದಿ ಆಸಕ್ತಿ ತೋರುವಂತೆ ಮಾಡಿದೆ. ಈಗಾಗಲೇ ಬಳಕೆಯಲ್ಲಿದ್ದರೂ ಕೂಡ ಹೆಚ್ಚಿನ ಜನರಿಗೆ ತಿಳಿದೆ ಇಲ್ಲದ ಸಿಗ್ನಲ್‌ ಅಪ್ಲಿಕೇಶನ್‌ ಇದೀಗ ತನ್ನ ಹೊಸ ಸೈನ್ ಅಪ್‌ಗಳಲ್ಲಿ ಸಾಕಷ್ಟು ಏರಿಕೆ ಕಂಡಿದೆ. ಕೆಲವು ನೆಟ್‌ವರ್ಕ್ ಪೂರೈಕೆದಾರರೊಂದಿಗಿನ ಪರಿಶೀಲನಾ ಸಂಕೇತಗಳು ಸ್ವಲ್ಪ ವಿಳಂಬವಾಗುತ್ತಿವೆ ಎನ್ನಲಾಗಿದೆ. ಏಕಾಏಕಿ ಹೆಚ್ಚಿನ ಜನರು ಸಿಗ್ನಲ್‌ ಅಪ್ಲಿಕೇಶನ್‌ ಬಳಸಲು ಮುಂದಾದ ಪರಿಣಾಮ ಸಿಗ್ನಲ್‌ನ ಸರ್ವರ್‌ಗಳು ಹೊಸ ಸೈನ್-ಇನ್‌ಗಳೊಂದಿಗೆ ಓವರ್‌ಲೋಡ್ ಆಗಿದೆ.

ವಾಟ್ಸಾಪ್

ಇನ್ನು ಹೊಸ ನಿಯಮಗಳು ಮತ್ತು ನೀತಿಗಳನ್ನು ಒಪ್ಪಿಕೊಳ್ಳಲು ಬಳಕೆದಾರರಿಗೆ ತಿಳಿಸಲು ವಾಟ್ಸಾಪ್ ಪ್ರಾರಂಭಿಸಿದ ನಂತರ ಈ ರೀತಿಯ ಬೆಳವಣಿಗೆಳು ನಡೆದಿವೆ. ಆದರೆ ವಾಟ್ಸಾಪ್ ಈಗ ಗ್ರಾಹಕರಿಗೆ ಗೌಪ್ಯತೆ ನೀತಿಗಳು ಬದಲಾಗದೆ ಉಳಿದಿದೆ ಎಂದು ಸ್ಪಷ್ಟಪಡಿಸಿದೆ. ಹೊಸ ಗೌಪ್ಯತೆ ನೀತಿ ಬದಲಾವಣೆಯನ್ನು ವ್ಯವಹಾರ ಖಾತೆಗಳಿಗೆ ಮಾತ್ರ ತಿಳಿಸಲಾಗುತ್ತದೆ ಎನ್ನಲಾಗಿದೆ. ಸದ್ಯ ಸಿಗ್ನಲ್ ಓಪನ್-ಸೋರ್ಸ್ ಮೆಸೇಜಿಂಗ್ ಅಪ್ಲಿಕೇಶನ್‌ ಆಗಿದ್ದು ಅದು ಗೌಪ್ಯತೆಯನ್ನು ಕೇಂದ್ರೀಕರಿಸಿದೆ ಮತ್ತು ಇದನ್ನು ಜಗತ್ತಿನಾದ್ಯಂತ ಪತ್ರಕರ್ತರು, ಭದ್ರತಾ ತಜ್ಞರು ಮತ್ತು ಶಿಕ್ಷಣ ತಜ್ಞರು ವ್ಯಾಪಕವಾಗಿ ಬಳಸುತ್ತಾರೆ. ಅಲ್ಲದೆ ಸಿಗ್ನಲ್ ಪ್ರೋಟೋಕಾಲ್ ವಾಟ್ಸಾಪ್‌ನ ಎಂಡ್-ಟು-ಎಂಡ್ ಎನ್‌ಕ್ರಿಪ್ಶನ್‌ಗೆ ಸಹ ಆಧಾರವಾಗಿದೆ.

ಸಿಗ್ನಲ್‌

ಸಿಗ್ನಲ್‌ನ ಹೊರತಾಗಿ, ವಾಟ್ಸಪ್‌ನಿಂದ ದೂರ ಸರಿಯುವ ಬಳಕೆದಾರರಿಗೆ ಟೆಲಿಗ್ರಾಮ್‌ ಕೂಡ ಮತ್ತೊಂದು ಆಯ್ಕೆಯಾಗಿದೆ. ಸಿಗ್ನಲ್‌ನಂತೆ, ಟೆಲಿಗ್ರಾಮ್ ಬಳಕೆದಾರರು ತಮ್ಮ ಸಂಪರ್ಕಗಳು ಪ್ಲಾಟ್‌ಫಾರ್ಮ್‌ಗೆ ಸೇರಿದಾಗ ಅಧಿಸೂಚನೆಯನ್ನು ಕಳುಹಿಸುತ್ತದೆ. ಜೊತೆಗೆ ವಾಟ್ಸಾಪ್‌ ಮಾದರಿಯ ಅನೇಕ ಫೀಚರ್ಸ್‌ಗಳನ್ನ ಸಹ ಟೆಲಿಗ್ರಾಮ್‌ ಈಗಾಗಲೇ ಪರಿಚಯಿಸಿದೆ.

Best Mobiles in India

English summary
Unhappy users are now switching from whatsapp to signal or telegram.to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X