Home
ಸುದ್ದಿಜಾಲ

Union Budget App: ಈ ಸರ್ಕಾರಿ ಆಪ್‌ನಲ್ಲಿ ಬಜೆಟ್‌ನ ಸಂಪೂರ್ಣ ಮಾಹಿತಿ ಲಭ್ಯ: ಈಗಲೇ ಡೌನ್‌ಲೋಡ್ ಮಾಡಿ!

Union Budget 2024: ಇಂದು ಮೋದಿ 3.0 (Narendra Modi) ಸರ್ಕಾರದ ಬಜೆಟ್‌ (Union Budget 2024) ಮಂಡನೆಯಾಗಲಿದೆ. ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್‌ (Nirmala Sitharaman) ದಾಖಲೆ 7ನೇ ಬಾರಿಗೆ ಬಜೆಟ್‌ ಮಂಡನೆ ಮಾಡಲಿದ್ದಾರೆ. ಈ ಬಜೆಟ್ ನತ್ತ ಎಲ್ಲರ ಚಿತ್ತ ನೆಟ್ಟಿದೆ. ಮುಂಬರುವ ಬಜೆಟ್‌ಗೆ ಸಂಬಂಧಿಸಿದ ಎಲ್ಲಾ ಮಾಹಿತಿಯನ್ನು ನೀವು ಪಡೆಯಲು ಬಯಸಿದರೆ, ಸರ್ಕಾರದ ಅಧಿಕೃತ ಬಜೆಟ್ ಅಪ್ಲಿಕೇಶನ್ 'ಯೂನಿಯನ್ ಬಜೆಟ್ ಅಪ್ಲಿಕೇಶನ್' ನಿಮಗೆ ತುಂಬಾ ಉಪಯುಕ್ತವಾಗಲಿದೆ. ಈ ಆ್ಯಪ್ ಯಾವುದು? ಡೌನ್‌ಲೋಡ್ ಮಾಡುವುದು ಹೇಗೆ? ಎನ್ನುವುದನ್ನು ತಿಳಿಯೋಣ ಬನ್ನಿ.

ಲೋಕಸಭಾ ಚುನಾವಣೆ ಬಳಿಕ ಕೇಂದ್ರ ಸರ್ಕಾರದ ಮೊದಲ ಪೂರ್ಣ ಪ್ರಮಾಣದ ಬಜೆಟ್ ಮಂಡನೆಯಾಗಲಿದೆ. ನೀವು ಬಜೆಟ್ ಭಾಷಣದಿಂದ ಮುಖ್ಯಾಂಶಗಳವರೆಗೆ, ಈ ಸರ್ಕಾರಿ ಅಪ್ಲಿಕೇಶನ್‌ನಲ್ಲಿ ಎಲ್ಲಾ ಮಾಹಿತಿಗಳನ್ನು ಪಡೆಯಬಹುದು. ಹೌದು, 'ಯೂನಿಯನ್ ಬಜೆಟ್ ಅಪ್ಲಿಕೇಶನ್' ಅನ್ನು ಗೂಗಲ್ ಪ್ಲೇ ಸ್ಟೋರ್‌ನಿಂದ ಡೌನ್‌ಲೋಡ್ ಮಾಡಬಹುದು. ಈ ಅಪ್ಲಿಕೇಶನ್ ಅನ್ನು ನ್ಯಾಷನಲ್ ಇನ್ಫರ್ಮ್ಯಾಟಿಕ್ಸ್ ಸೆಂಟರ್ (NIC - ರಾಷ್ಟ್ರೀಯ ಮಾಹಿತಿ ಕೇಂದ್ರ) ಅಭಿವೃದ್ಧಿಪಡಿಸಿದೆ. ಇಲ್ಲಿಯವರೆಗೆ ಈ ಆ್ಯಪ್ 1 ಲಕ್ಷಕ್ಕೂ ಹೆಚ್ಚು ಡೌನ್‌ಲೋಡ್ ಆಗಿದೆ.

Union Budget App: ಈ ಆಪ್‌ನಲ್ಲಿ ಬಜೆಟ್‌ನ ಪೂರ್ಣ ಮಾಹಿತಿ ಲಭ್ಯ: ಯಾವುದು?

'ಯೂನಿಯನ್ ಬಜೆಟ್ ಆಪ್' ಬಗ್ಗೆ ಮಾಹಿತಿ

ಇಂದು (ಜುಲೈ 23) ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಸಂಸತ್ತಿನಲ್ಲಿ ಬಜೆಟ್ ಮಂಡಿಸಲಿದ್ದಾರೆ. ಇನ್ನೇನು ಕೆಲವೇ ಕ್ಷಣಗಳಲ್ಲಿ ಮಂಡನೆಯಾಗಲಿರುವ ಈ ಬಜೆಟ್ ದೇಶದ ಪ್ರತಿಯೊಂದು ವರ್ಗದ ಜನರಿಗೆ ವಿಶೇಷವಾಗಲಿದೆ. ಬಜೆಟ್‌ಗೆ ಸಂಬಂಧಿಸಿದಂತೆ ಪ್ರತಿಯೊಂದು ಕ್ಷೇತ್ರವೂ ವಿಭಿನ್ನ ನಿರೀಕ್ಷೆಗಳನ್ನು ಹೊಂದಿದೆ. ಮುಂಬರುವ ಬಜೆಟ್‌ಗೆ ಸಂಬಂಧಿಸಿದ ಎಲ್ಲಾ ಮಾಹಿತಿಯನ್ನು ನೀವು ಪಡೆಯಲು ಬಯಸಿದರೆ, ಸರ್ಕಾರದ ಅಧಿಕೃತ ಬಜೆಟ್ ಅಪ್ಲಿಕೇಶನ್, 'ಯೂನಿಯನ್ ಬಜೆಟ್ ಅಪ್ಲಿಕೇಶನ್' ನಿಮಗೆ ಉಪಯುಕ್ತವಾಗಿರುತ್ತದೆ. ಹಾಗಿದ್ರೆ, 'ಯೂನಿಯನ್ ಬಜೆಟ್ ಆಪ್'ಗೆ ಸಂಬಂಧಿಸಿದ ಎಲ್ಲಾ ವಿವರಗಳನ್ನು ಈ ಲೇಖನದಲ್ಲಿ ನೋಡೋಣ ಬನ್ನಿ.

ಕೇಂದ್ರ ಬಜೆಟ್ ಅಪ್ಲಿಕೇಶನ್ ಹೇಗೆ ಉಪಯುಕ್ತವಾಗಿದೆ?

ಯೂನಿಯನ್ ಬಜೆಟ್ ಅಪ್ಲಿಕೇಶನ್ ಲಿಖಿತ ರೂಪದಲ್ಲಿ ಬಜೆಟ್ ಸಂಬಂಧಿತ ಮಾಹಿತಿಯನ್ನು ಒಂದೇ ಸ್ಥಳದಲ್ಲಿ ಪ್ರಸ್ತುತಪಡಿಸುತ್ತದೆ. ಜುಲೈ 23 ರಂದು ಮಂಡಿಸಲಿರುವ ಬಜೆಟ್‌ಗೂ ಮುನ್ನ ನಿಮ್ಮ ಫೋನ್‌ನಲ್ಲಿ ಈ ಆಪ್ ಡೌನ್‌ಲೋಡ್ ಮಾಡಿಕೊಂಡರೆ, ಫೆಬ್ರವರಿ 1 ರಂದು ಮಂಡಿಸಲಾದ ಮಧ್ಯಂತರ ಬಜೆಟ್‌ಗೆ ಸಂಬಂಧಿಸಿದ ಎಲ್ಲಾ ಮಾಹಿತಿಯನ್ನು ನೀವು ತಿಳಿಯಬಹುದು (ಓದಬಹುದು). ಬಜೆಟ್ ಸಂಬಂಧಿತ ಮಾಹಿತಿಯು ಅಪ್ಲಿಕೇಶನ್‌ನಲ್ಲಿ PDF ಸ್ವರೂಪದಲ್ಲಿ ಲಭ್ಯವಿದೆ.

Union Budget App: ಈ ಆಪ್‌ನಲ್ಲಿ ಬಜೆಟ್‌ನ ಪೂರ್ಣ ಮಾಹಿತಿ ಲಭ್ಯ: ಯಾವುದು?

ಆಪ್ ಅನ್ನು ಎಷ್ಟು ಭಾಷೆಗಳಲ್ಲಿ ಬಳಸಬಹುದು?

ಯೂನಿಯನ್ ಬಜೆಟ್ ಆಪ್ ಅನ್ನು ಇಂಗ್ಲಿಷ್ ಮತ್ತು ಹಿಂದಿಯಲ್ಲಿ ಬಳಸುವ ಸೌಲಭ್ಯವಿದೆ. ಅಪ್ಲಿಕೇಶನ್ ಡೌನ್‌ಲೋಡ್ ಮಾಡಿದ ನಂತರ, ನೀವು ಭಾಷೆಯನ್ನು ಆಯ್ಕೆ ಮಾಡಬಹುದು ಮತ್ತು ನಿಮ್ಮ ಅನುಕೂಲಕ್ಕೆ ಅನುಗುಣವಾಗಿ ಎಲ್ಲಾ ದಾಖಲೆಗಳನ್ನು ಓದಬಹುದು.

ನೀವು ಡಾಕ್ಯುಮೆಂಟ್ ಡೌನ್‌ಲೋಡ್ ಮಾಡಬಹುದು

ಈ ಅಪ್ಲಿಕೇಶನ್‌ನಲ್ಲಿ ನಿಮಗೆ ದಾಖಲೆಗಳನ್ನು ಡೌನ್‌ಲೋಡ್ ಮಾಡುವ ಅವಕಾಶವನ್ನು (ಸೌಲಭ್ಯ) ಸಹ ಕಲ್ಪಿಸಲಾಗಿದೆ. ಬಜೆಟ್‌ಗೆ ಸಂಬಂಧಿಸಿದ ಯಾವುದೇ ಡಾಕ್ಯುಮೆಂಟ್ ಅನ್ನು ನೀವು ಓದಿದಾಗ, ಅದನ್ನು ಡೌನ್‌ಲೋಡ್ ಮಾಡುವ ಆಯ್ಕೆಯು ಅದರ ಮೇಲೆಯೇ ಗೋಚರಿಸುತ್ತದೆ. ಕೆಳಗೆ ಬಾಣದ ಐಕಾನ್ ಕ್ಲಿಕ್ ಮಾಡುವ ಮೂಲಕ, ಬಜೆಟ್ ಡಾಕ್ಯುಮೆಂಟ್ ಅನ್ನು PDF ರೂಪದಲ್ಲಿ ಫೋನ್‌ಗೆ ಡೌನ್‌ಲೋಡ್ ಮಾಡಲಾಗುತ್ತದೆ.

ಯೂನಿಯನ್ ಬಜೆಟ್ ಆಪ್ ಡೌನ್‌ಲೋಡ್ ಮಾಡುವುದು ಹೇಗೆ?

ಯೂನಿಯನ್ ಬಜೆಟ್ ಅಪ್ಲಿಕೇಶನ್ ಅನ್ನು ಗೂಗಲ್ ಪ್ಲೇ ಸ್ಟೋರ್‌ನಿಂದ ಡೌನ್‌ಲೋಡ್ ಮಾಡಬಹುದು. ಈ ಅಪ್ಲಿಕೇಶನ್ ಅನ್ನು ನ್ಯಾಷನಲ್ ಇನ್ಫರ್ಮ್ಯಾಟಿಕ್ಸ್ ಸೆಂಟರ್ ಅಭಿವೃದ್ಧಿಪಡಿಸಿದೆ. ಇಲ್ಲಿಯವರೆಗೆ ಈ ಆ್ಯಪ್ 1 ಲಕ್ಷಕ್ಕೂ ಹೆಚ್ಚು ಡೌನ್‌ಲೋಡ್ ಆಗಿದೆ. ರೇಟಿಂಗ್ ಬಗ್ಗೆ ಹೇಳುವುದಾದರೆ, ಈ ಅಪ್ಲಿಕೇಶನ್ ಪ್ಲೇ ಸ್ಟೋರ್‌ನಲ್ಲಿ 3+ ರೇಟಿಂಗ್ ಅನ್ನು ಪಡೆದುಕೊಂಡಿದೆ.

Union Budget App: ಈ ಆಪ್‌ನಲ್ಲಿ ಬಜೆಟ್‌ನ ಪೂರ್ಣ ಮಾಹಿತಿ ಲಭ್ಯ: ಯಾವುದು?

ಬಜೆಟ್ ಡಾಕ್ಯುಮೆಂಟ್‌ ಡೌನ್‌ಲೋಡ್ ಮಾಡುವ ಸರಳ ವಿಧಾನ

  • ನೀವು Google Play Storeನಿಂದ ಯೂನಿಯನ್ ಬಜೆಟ್ ಅಪ್ಲಿಕೇಶನ್ ಅನ್ನು ಡೌನ್‌ಲೋಡ್ ಮಾಡಬಹುದು.
  • ಈ ಅಪ್ಲಿಕೇಶನ್ ಅನ್ನು ಡೌನ್‌ಲೋಡ್ ಮಾಡಿದ ನಂತರ, ಅದಕ್ಕೆ ಲಾಗಿನ್ ಮಾಡಿ.
  • ನಂತರ ನೀವು ಬಜೆಟ್ ಡಾಕ್ಯುಮೆಂಟ್‌ಗಳನ್ನು ಡೌನ್‌ಲೋಡ್ ಮಾಡುವ ಆಯ್ಕೆಯನ್ನು ನೋಡುತ್ತೀರಿ.
  • ಇದಲ್ಲದೆ, ಡೌನ್‌ಲೋಡ್ ಬಾಣದ ಚಿಹ್ನೆಯ ಮೇಲೆ ಕ್ಲಿಕ್ ಮಾಡುವ ಮೂಲಕ, ನೀವು ನಿಮ್ಮ ಮೊಬೈಲ್‌ನಲ್ಲಿ ಸಂಪೂರ್ಣ ಬಜೆಟ್ ಡಾಕ್ಯುಮೆಂಟ್ ಅನ್ನು ಡೌನ್‌ಲೋಡ್ ಮಾಡಬಹುದು ಮತ್ತು ಓದಬಹುದು.
Best Mobiles in India

English summary
Union Budget App: all information is available in this government app. download budget documents from union budget app.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+