ಕೇಂದ್ರ ಸರ್ಕಾರದಿಂದ ಯೂನಿಯನ್ ಬಜೆಟ್‌ ಅಪ್ಲಿಕೇಶನ್‌ ಲಾಂಚ್‌!..ವಿಶೇಷತೆ ಏನು?

|

ಕೇಂದ್ರ ಸರ್ಕಾರದ ಬಜೆಟ್‌ ಅಂದರೆ ಇಡೀ ದೇಶವೇ ಆಸೆ ಕಂಗಳಿಂದ ನೊಡುತ್ತದೆ. ಪ್ರತಿ ರಾಜ್ಯವೂ ಈ ಭಾರಿ ನಮ್ಮ ರಾಜ್ಯಕ್ಕೆ ಸಿಗಬಹುದಾದ ಅನುಧಾನವೆಷ್ಟು, ಯೋಜನೆಗಳೇನು ಎಂಬ ಲೆಕ್ಕಾಚರಾದಲ್ಲಿರುತ್ತವೆ. ಇದೇ ಕಾರಣಕ್ಕೆ ಕೇಂದ್ರ ಹಣಕಾಸು ಬಜೆಟ್‌ಗೆ ಸಾಕಷ್ಟು ಪ್ರಾಮುಖ್ಯತೆ ಇದೆ. ಇನ್ನು ಇದೇ ಫೆಬ್ರವರಿ 1ಕ್ಕೆ 2021-22 ಸಾಲಿನ ಕೇಂದ್ರ ಬಜೆಟ್‌ ಮಂಡನೆ ಆಗಲಿದೆ. ಸದ್ಯ ಬಜೆಟ್‌ ಮಂಡನೆಯ ಸಿದ್ದತೆ ನಡೆಸಿರುವ ಕೇಮದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್‌ ಯೂನಿಯನ್‌ ಬಜೆಟ್‌ ಮೊಬೈಲ್‌ ಆಪ್‌ (ಕೇಂದ್ರ ಬಜೆಟ್‌ ಮೊಬೈಲ್‌ ಆಪ್‌) ಅನ್ನು ಪ್ರಾರಂಭಿಸಿದ್ದಾರೆ. ಈ ಅಪ್ಲಿಕೇಶನ್ ಮೂಲಕ ಸಾರ್ವಜನಿಕರು ಬಜೆಟ್ ದಾಖಲೆಗಳ ಬಗ್ಗೆ ತಿಳಿಯಬಹುದಾಗಿದೆ.

ಬಜೆಟ್‌

ಹೌದು, ಕೇಂದ್ರ ಬಜೆಟ್‌ನ ದಾಖಲೆಗಳನ್ನ ಸಾರ್ವಜನಿಕರೂ ಸಹ ವೀಕ್ಷಿಸುವುದಕ್ಕೆ ಯೂನಿಯನ್‌ ಬಜೆಟ್‌ ಆಪ್‌ ಅನ್ನು ಪರಿಚಯಿಸಿದೆ. ಈ ಅಪ್ಲಿಕೇಶನ್‌ ಮೂಲಕ ಕೇಂದ್ರ ಬಜೆಟ್‌ನ ಸಂಪೂರ್ಣ ವಿವರಗಳನ್ನು ಮೊಬೈಲ್‌ನಲ್ಲಿಯೇ ತಿಳಿದುಕೊಳ್ಳಬಹುದಾಗಿದೆ. DEA (ಆರ್ಥಿಕ ವ್ಯವಹಾರಗಳ ಇಲಾಖೆ) ಮಾರ್ಗದರ್ಶನದಲ್ಲಿ ಕೇಂದ್ರ ಬಜೆಟ್ ಅಪ್ಲಿಕೇಶನ್ ಅನ್ನು NIC (ರಾಷ್ಟ್ರೀಯ ಮಾಹಿತಿ ಕೇಂದ್ರ) ಅಭಿವೃದ್ಧಿಪಡಿಸಿದೆ. ಸಂಸತ್ತಿನಲ್ಲಿ ಕೇಂದ್ರ ಬಜೆಟ್ 2021 ರ ಪ್ರಸ್ತುತಿಯನ್ನು ಹಣಕಾಸು ಸಚಿವರು ಮುಗಿಸಿದ ನಂತರ, ಎಲ್ಲಾ ಬಜೆಟ್ ದಾಖಲೆಗಳು ಈ ಅಪ್ಲಿಕೇಶನ್‌ನಲ್ಲಿ ಲಭ್ಯವಿರುತ್ತವೆ. ಈ ಅಪ್ಲಿಕೇಶನ್‌ ವಿಶೇಷತೆ ಏನು ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತೀವಿ ಓದಿರಿ.

ಯೂನಿಯನ್‌ ಬಜೆಟ್‌ ಅಪ್ಲಿಕೇಶನ್

ಯೂನಿಯನ್‌ ಬಜೆಟ್‌ ಅಪ್ಲಿಕೇಶನ್

ನೀವು ಬಜೆಟ್ ವಿಶೇಷತೆ ಏನು, ಈ ಭಾರಿಯ ಬಜೆಟ್‌ನಲ್ಲಿ ಏನೇನಿದೆ ಅನ್ನೊದನ್ನ ತಿಳಿಯುವ ಆಸಕ್ತಿ ಹೊಂದಿದ್ದರೆ, ಅಪ್ಲಿಕೇಶನ್‌ ಮೂಲಕ ತಿಳಿದುಕೊಳ್ಳುವ ಅವಕಾಶ ಸಹ ಇದೆ. ಇದಕ್ಕಾಗಿ ನಿವು ನಿಮ್ಮ ಸ್ಮಾರ್ಟ್‌ಫೋನ್‌ನಲ್ಲಿ ಯೂನಿಯನ್ ಬಜೆಟ್ ಅಪ್ಲಿಕೇಶನ್ ಅನ್ನು ಡೌನ್‌ಲೋಡ್ ಮಾಡಬಹುದು. ಇದು ಆಂಡ್ರಾಯ್ಡ್ ಮತ್ತು ಐಒಎಸ್ ಪ್ಲಾಟ್‌ಫಾರ್ಮ್‌ಗಳೊಂದಿಗೆ ಹೊಂದಿಕೊಳ್ಳುತ್ತದೆ. ಅಲ್ಲದೆ ಈ ಅಪ್ಲಿಕೇಶನ್ ಅನ್ನು ಗೂಗಲ್ ಪ್ಲೇ ಸ್ಟೋರ್ ಅಥವಾ ಆಪಲ್ ಆಪ್ ಸ್ಟೋರ್‌ನಿಂದ ಡೌನ್‌ಲೋಡ್ ಮಾಡಬಹುದು. ಕೇಂದ್ರ ಬಜೆಟ್ ವೆಬ್ ಪೋರ್ಟಲ್‌ನಿಂದ ಅಪ್ಲಿಕೇಶನ್ ಡೌನ್‌ಲೋಡ್ ಮಾಡಲು ಸಹ ಸಾಧ್ಯವಿದೆ.

ಬಜೆಟ್

ಯೂನಿಯನ್ ಬಜೆಟ್ ಅಪ್ಲಿಕೇಶನ್ ಬಳಕೆದಾರರಿಗೆ ಎಲ್ಲಾ 14 ಕೇಂದ್ರ ಬಜೆಟ್ ದಾಖಲೆಗಳಿಗೆ ಸಂಪೂರ್ಣ ಪ್ರವೇಶವನ್ನು ಪಡೆಯಲು ಅನುಮತಿಸುತ್ತದೆ. ಇವುಗಳಲ್ಲಿ ಡಿಮ್ಯಾಂಡ್ ಫಾರ್ ಗ್ರ್ಯಾಂಟ್ಸ್ (DG), ಬಜೆಟ್ ಎಂದು ಕರೆಯಲ್ಪಡುವ ವಾರ್ಷಿಕ ಹಣಕಾಸು ಹೇಳಿಕೆ, ಹಣಕಾಸು ಮಸೂದೆ ಇತ್ಯಾದಿಗಳನ್ನು ಸೂಚಿಸುತ್ತವೆ. ಹೆಚ್ಚು ಆಸಕ್ತಿದಾಯಕ ಸಂಗತಿಯೆಂದರೆ, ಅಪ್ಲಿಕೇಶನ್‌ನ ಇಂಟರ್ಫೇಸ್ ಇಂಗ್ಲಿಷ್ ಮತ್ತು ಹಿಂದಿಯನ್ನು ಬೆಂಬಲಿಸುತ್ತದೆ. ಅಲ್ಲದೆ, ಇದು ಬಳಕೆದಾರ ಸ್ನೇಹಿಯಾಗಿದೆ ಮತ್ತು ಬಳಕೆದಾರರಿಗೆ ಈ ಡಾಕ್ಯುಮೆಂಟ್‌ಗಳನ್ನು ಡೌನ್‌ಲೋಡ್ ಮಾಡಲು ಮಾತ್ರವಲ್ಲದೆ ಮುದ್ರಿಸಲು, ಜೂಮ್ ಇನ್ ಮಾಡಲು ಮತ್ತು ಜೂಮ್ ಆಂಡ್‌ ಔಟ್ ಮಾಡಲು ಮತ್ತು ವಿವರಗಳಿಗಾಗಿ ಸರ್ಚ್‌ ಮಾಡಲು ಅನುಮತಿಸುತ್ತದೆ.

ಪೇಪರ್‌ಲೆಸ್‌ ಬಜೆಟ್‌

ಪೇಪರ್‌ಲೆಸ್‌ ಬಜೆಟ್‌

ಇದು ಹಣಕಾಸು ಸಚಿವಾಲಯ ತೆಗೆದುಕೊಂಡಿರುವ ಪ್ರಮುಖ ಕ್ರಮವಾಗಿದ್ದು, ಸ್ವಾತಂತ್ರ್ಯದ ನಂತರ ಇದೇ ಮೊದಲ ಬಾರಿಗೆ ಕೇಂದ್ರ ಬಜೆಟ್ ಪೇಪರ್‌ಲೆಸ್‌ ಆಗಿರಲಿದೆ ಎನ್ನಲಾಗಿದೆ. ಕೊರೊನಾ ಬಿಕ್ಕಟ್ಟಿನಿಂದಾಗಿ, ಈ ಬಾರಿ ಬಜೆಟ್ ಪತ್ರಿಕೆಗಳನ್ನು ಮುದ್ರಿಸಲಾಗುವುದಿಲ್ಲ. ಅಲ್ಲದೆ ಮುದ್ರಣ ಪ್ರಕ್ರಿಯೆಗೆ ಹದಿನೈದು ದಿನಗಳ ಕಾಲ ಮುದ್ರಣಾಲಯದಲ್ಲಿ ಕೆಲಸ ಮಾಡುವ 100 ಜನರು ಬೇಕಾಗುವುದರಿಂದ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ. ಅಲ್ಲದೆ, ಸಂಸತ್ತಿನ ಉಭಯ ಸದನಗಳು ಈ ಪೇಪರ್‌ಲೆಸ್‌ ಕ್ರಮಕ್ಕೆ ಕೇಂದ್ರ ಸರ್ಕಾರಕ್ಕೆ ಒಪ್ಪಿಗೆ ನೀಡಿವೆ.

Best Mobiles in India

English summary
Union Budget Mobile App: Multiple Language Option And Other Features.to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X