ಬೆಂಗಳೂರಿನಲ್ಲಿ ತಲೆ ಎತ್ತಲಿದೆ ಮತ್ತೊಂದು ಐಟಿ ಪಾರ್ಕ್‌

Posted By:

ಬೆಂಗಳೂರಿನಲ್ಲಿ ಮತ್ತೊಂದು ಐಟಿ ಹಬ್‌ ಸ್ಥಾಪನೆಯಾಗಲಿದೆ.ಈ ಸಂಬಂಧ ಕೇಂದ್ರ ಸಚಿವ ಸಂಪುಟ ರಾಜ್ಯಕ್ಕೆ ವಿಶೇಷ ಕೊಡುಗೆ ನೀಡಿದೆ. ಬೆಂಗಳೂರಿನಲ್ಲಿ ಮಾಹಿತಿ ತಂತ್ರಜ್ಞಾನ ಹೂಡಿಕೆ ಪ್ರದೇಶ(Information Technology Investment Region) ಸ್ಥಾಪಿಸಲು ಕೇಂದ್ರ ಸಚಿವ ಸಂಪುಟ ಅನುಮೋದನೆನೀಡಿದೆ.

ದೇವನಹಳ್ಳಿ ವಿಮಾನ ನಿಲ್ದಾಣಕ್ಕೆ ಸಮೀಪ ಈ ಐಟಿ ಪಾರ್ಕ್‌ ತಲೆ ಎತ್ತಲಿದ್ದು, 2010 ರಲ್ಲಿ ರಾಜ್ಯ ಸಚಿವ ಸಂಪುಟ ಈ ಯೋಜನೆಗೆ ಅನುಮೋದನೆ ನೀಡಿ, ಕೇಂದ್ರ ಸರ್ಕಾ‌ರಕ್ಕೆ ಪ್ರಸ್ತಾವನೆಯನ್ನು ಕಳುಹಿಸಿತ್ತು. ಈಗ ಈ ಪ್ರಸ್ತಾವನೆಗೆ ಕೇಂದ್ರ ಸಂಪುಟ ಅನುಮೋದನೆ ನೀಡಿದೆ. ರಾಜ್ಯ ಸರ್ಕಾರ 2010ರಲ್ಲೇ ಐಟಿಐಅರ್‌ನ ಸ್ಥಾಪನೆಗೆ ಅನುಕೂಲವಾಗುವಂತೆ ಕರ್ನಾಟಕ ಮಾಹಿತಿ ತಂತ್ರಜ್ಞಾನ ಹೂಡಿಕೆ ಪ್ರದೇಶ ಕಾಯ್ದೆಯನ್ನು ರಚಿಸಿತ್ತು.

 ಎರಡನೇ ಐಟಿ ಪಾರ್ಕ್‌ ಬೆಂಗಳೂರಿನಲ್ಲಿ ಸ್ಥಾಪನೆಯಾಗುವ ಹಿನ್ನೆಲೆಯಲ್ಲಿ ಈ ಐಟಿಐಅರ್‌ನಲ್ಲಿ ಎಷ್ಟು ಕಂಪೆನಿಗಳು ಆರಂಭಗೊಳ್ಳುತ್ತವೆ? ಎಷ್ಟು ಜನರಿಗೆ ಉದ್ಯೋಗ ಕಲ್ಪಿಸಲಾಗುತ್ತದೆ ಸೇರಿದಂತೆ ಈ ಐಟಿ ಪಾರ್ಕ್‌ಗೆ ಸೇರಿದ ಕೆಲವು ಮಾಹಿತಿಗಳು ಇಲ್ಲಿವೆ. ಒಂದೊಂದೆ ಪುಟವನ್ನು ತಿರುಗಿಸಿ ಓದಿಕೊಂಡು ಹೋಗಿ.

ಇದನ್ನೂ ಓದಿ : ಅಮೆರಿಕದ ಟಾಪ್‌- 10 ಟೆಕ್‌ ಸಿಟಿಗಳು

Click Here For New Concept Smartphones Gallery

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
ಎಲ್ಲಿ ಸ್ಥಾಪನೆಯಾಗಲಿದೆ?

ಎಲ್ಲಿ ಸ್ಥಾಪನೆಯಾಗಲಿದೆ?

ಬೆಂಗಳೂರಿನಲ್ಲಿ ತಲೆ ಎತ್ತಲಿದೆ ಮತ್ತೊಂದು ಐಟಿ ಪಾರ್ಕ್‌

ಬೆಂಗಳೂರು ನಗರದಿಂದ 44 ಕಿ.ಮೀ ದೂರ, ದೇವನಹಳ್ಳಿ ವಿಮಾನ ನಿಲ್ದಾಣದಿಂದ 14 ಕಿ.ಮೀ. ದೂರದಲ್ಲಿ ಈ ಐಟಿಐಅರ್‌ ಸ್ಥಾಪನೆಯಾಗಲಿದೆ.

2 ಲಕ್ಷ ಕೋಟಿ

2 ಲಕ್ಷ ಕೋಟಿ

ಬೆಂಗಳೂರಿನಲ್ಲಿ ತಲೆ ಎತ್ತಲಿದೆ ಮತ್ತೊಂದು ಐಟಿ ಪಾರ್ಕ್‌

ಈ ಯೋಜನೆಗೆ ತಗಲುವ ಅಂದಾಜು ವೆಚ್ಛ

12 ಲಕ್ಷ

12 ಲಕ್ಷ

ಬೆಂಗಳೂರಿನಲ್ಲಿ ತಲೆ ಎತ್ತಲಿದೆ ಮತ್ತೊಂದು ಐಟಿ ಪಾರ್ಕ್‌

ಜನರಿಗೆ ನೇರವಾಗಿ ಈ ಯೋಜನೆಯಿಂದ ಉದ್ಯೋಗ ಸಿಗುವ ಸಾಧ್ಯತೆ

28 ಲಕ್ಷ

28 ಲಕ್ಷ

ಬೆಂಗಳೂರಿನಲ್ಲಿ ತಲೆ ಎತ್ತಲಿದೆ ಮತ್ತೊಂದು ಐಟಿ ಪಾರ್ಕ್‌

ಜನರಿಗೆ ಪರೋಕ್ಷವಾಗಿ ಈ ಐಟಿಐಅರ್‌ ಯೋಜನೆಯಿಂದ ಉದ್ಯೋಗ ಸಿಗುವ ಸಾಧ್ಯತೆ

2082 ಎಕ್ರೆ

2082 ಎಕ್ರೆ

ಬೆಂಗಳೂರಿನಲ್ಲಿ ತಲೆ ಎತ್ತಲಿದೆ ಮತ್ತೊಂದು ಐಟಿ ಪಾರ್ಕ್‌

ಜಾಗದಲ್ಲಿ ಈ ಐಟಿಐಅರ್‌ ನಿರ್ಮಾ‌ಣವಾಗಲಿದೆ.

ಬೆಂಗಳೂರಿನಲ್ಲಿ ತಲೆ ಎತ್ತಲಿದೆ ಮತ್ತೊಂದು ಐಟಿ ಪಾರ್ಕ್‌

ಬೆಂಗಳೂರಿನಲ್ಲಿ ತಲೆ ಎತ್ತಲಿದೆ ಮತ್ತೊಂದು ಐಟಿ ಪಾರ್ಕ್‌

ಕೇಂದ್ರ -ರಾಜ್ಯ ಮತ್ತು ಖಾಸಗಿ ಪಾಲುದಾರಿಕೆಯಲ್ಲಿ ಈ ನೂತನ ಐಟಿಐಅರ್‌ ನಿರ್ಮಾ‌‌ಣವಾಗಲಿದೆ.

ಬೆಂಗಳೂರಿನಲ್ಲಿ ತಲೆ ಎತ್ತಲಿದೆ ಮತ್ತೊಂದು ಐಟಿ ಪಾರ್ಕ್‌

ಬೆಂಗಳೂರಿನಲ್ಲಿ ತಲೆ ಎತ್ತಲಿದೆ ಮತ್ತೊಂದು ಐಟಿ ಪಾರ್ಕ್‌

ರಾಜ್ಯ ಸರ್ಕಾರ ವಿದ್ಯುತ್, ನೀರು, ಒಳಚರಂಡಿ ಆರ್ಥಿಕ ಸಹಾಯ ಒದಗಿಸಲಿದೆ.

ಬೆಂಗಳೂರಿನಲ್ಲಿ ತಲೆ ಎತ್ತಲಿದೆ ಮತ್ತೊಂದು ಐಟಿ ಪಾರ್ಕ್‌

ಬೆಂಗಳೂರಿನಲ್ಲಿ ತಲೆ ಎತ್ತಲಿದೆ ಮತ್ತೊಂದು ಐಟಿ ಪಾರ್ಕ್‌

ಕೇಂದ್ರ ಸರ್ಕಾರ ರಸ್ತೆ, ರೈಲು ಮತ್ತು ದೂರಸಂಪರ್ಕನಿರ್ಮಿಸಲು ಆರ್ಥಿಕ ಸಹಾಯ ನೀಡಲಿದೆ.

ಬೆಂಗಳೂರಿನಲ್ಲಿ ತಲೆ ಎತ್ತಲಿದೆ ಮತ್ತೊಂದು ಐಟಿ ಪಾರ್ಕ್‌

ಬೆಂಗಳೂರಿನಲ್ಲಿ ತಲೆ ಎತ್ತಲಿದೆ ಮತ್ತೊಂದು ಐಟಿ ಪಾರ್ಕ್‌

ಟಿಸಿಎಸ್‌,ಇನ್ಫೋಸಿಸ್‌,ವಿಪ್ರೋ,ಕಾಗ್ನಿಜೆಂಟ್‌ ಸೇರಿ 55 ಮಲ್ಟಿ ನ್ಯಾಷನಲ್‌ ಕಂಪೆನಿಗಳು ಇಲ್ಲಿ ಕಂಪೆನಿ ತೆರೆಯಲು ಆಸಕ್ತಿ ತೋರಿಸಿವೆ.

ಬೆಂಗಳೂರಿನಲ್ಲಿ ತಲೆ ಎತ್ತಲಿದೆ ಮತ್ತೊಂದು ಐಟಿ ಪಾರ್ಕ್‌

ಬೆಂಗಳೂರಿನಲ್ಲಿ ತಲೆ ಎತ್ತಲಿದೆ ಮತ್ತೊಂದು ಐಟಿ ಪಾರ್ಕ್‌

ಈ ಪ್ರದೇಶದಲ್ಲಿ ಐಟಿ ಪಾರ್ಕ್‌, ಸಂಶೋಧನೆ ಮತ್ತು ಅಭಿವೃದ್ಧಿ ಕೇಂದ್ರಗಳು, ಎಲೆಕ್ಟ್ರಾನಿಕ್‌ ಹಾರ್ಡ್‌ವೇರ್‌ ತಯಾರಿಕ ಘಟಕಗಳು ಸೇರಿದಂತೆ, ಶಿಕ್ಷಣ, ವಸತಿ, ಅಸ್ಪತ್ರೆ, ಪಾರ್ಕ್‌ಗಳ ನಿರ್ಮಾಣಕ್ಕೂ ಈ ಯೋಜನೆಯಲ್ಲಿ ಅವಕಾಶವಿದೆ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
Please Wait while comments are loading...
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot