ಇನ್ಮುಂದೆ COVID-19 ಲಸಿಕೆ ನೋಂದಣಿಯಲ್ಲಿ ನಡೆಯಲ್ಲ ನಕಲಿಗಳ ಆಟ! ಹೇಗೆ ಅಂತೀರಾ?

|

ದೇಶದಲ್ಲಿ ಕೊರೊನಾ ವಿರುದ್ದ ಹೋರಾಡಲು ವ್ಯಾಪಕವಾಗಿ ಕೋವಿಡ್‌-19 ವ್ಯಾಕ್ಸಿನೇಷನ್‌ ಅಭಬಿಯಾನವನ್ನು ನಡೆಸಲಾಗುತ್ತಿದೆ. ಈಗಾಗಲೇ 18-45 ವರ್ಷದೊಳಗಿನ ನಾಗರಿಕರಿಗೆ ಕೋವಿಡ್‌ ಲಸಿಕೆ ನೀಡಲಾಗುತ್ತಿದೆ. ಇನ್ನು ಈ ಲಸಿಕೆ ಪಡೆಯಲು ಮೊದಲಿಗೆ ಕೋವಿನ್‌ ಪೋರ್ಟಲ್‌ನಲ್ಲಿ ನಿಮ್ಮ ಹೆಸರನ್ನು ನೋಂದಾಯಿಸಿಕೊಳ್ಳವುದು ಅಗತ್ಯ. ಬಳಕೆದಾರರು ಈ ಪೋರ್ಟಲ್ ಮೂಲಕ ನೋಂದಾಯಿಸಬಹುದು, ತಮ್ಮ ವ್ಯಾಕ್ಸಿನ್‌ ಸ್ಲಾಟ್‌ಗಳನ್ನು ಕಾಯ್ದಿರಿಸಬಹುದು. ಅಲ್ಲದೆ ಲಸಿಕೆಗಾಗಿ ಅಪಾಯಿಂಟ್‌ಮೆಂಟ್ ಅನ್ನು ನಿಗದಿಪಡಿಸಬಹುದು.

ಪೋರ್ಟಲ್‌

ಹೌದು, ಕೋವಿನ್‌ ಪೋರ್ಟಲ್‌ ಮೂಲಕ ಕೋವಿಡ್‌-19 ವ್ಯಾಕ್ಸಿನ್‌ ಪಡೆದುಕೊಳ್ಳುವುದಕ್ಕೆ ಹೆಸರು ನೋಂದಾಯಿಸಬಹುದಾಗಿದೆ. ಆದರೆ ಈ ಪ್ಲಾಟ್‌ಫಾರ್ಮ್‌ನಲ್ಲಿ ಕೆಲವು ತಾಂತ್ರಿಕ ತೊಂದರೆಗಳು ಕಾಣಿಸಿಕೊಂಡು ಬಳಕೆದಾರರಿಗೆ ಸಾಕಷ್ಟು ಕಿರಿಕಿರಿ ಆಗಿತ್ತು. ಆದರೆ ಇದೀಗ ಲಸಿಕೆ ಸ್ಲಾಟ್ ಕಾಯ್ದಿರಿಸಲು ಕೇಂದ್ರ ಆರೋಗ್ಯ ಸಚಿವಾಲಯ ನಾಲ್ಕು ಸಂಖ್ಯೆಗಳ ಹೊಸ ಕೋಡ್ ಅನ್ನು ಹೊರತಂದಿದೆ. ಹಾಗಾದ್ರೆ ಕೋವಿನ್‌ ಪೋರ್ಟಲ್‌ನಲ್ಲಿ ನಾಲ್ಕು ಅಂಕಿಯ ಕೋಡ್‌ ವಿಶೇಷತೆ ಏನು ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತೀವಿ ಓದಿರಿ.

ಕೋವಿನ್‌ನಲ್ಲಿ ನಾಲ್ಕು-ಅಂಕಿಯ ಕೋಡ್

ಕೋವಿನ್‌ನಲ್ಲಿ ನಾಲ್ಕು-ಅಂಕಿಯ ಕೋಡ್

ಸದ್ಯ ಹೊಸದಾಗಿ ಪರಿಚಯಿಸಿರುವ ಹೊಸ ನಾಲ್ಕು-ಅಂಕಿಯ ಕೋಡ್ ಕೋವಿನ್ ವೆಬ್‌ಸೈಟ್‌ನಲ್ಲಿ ಸೆಕ್ಯುರಿಟಿ ಲೆಯರ್‌ ಆಗಿವೆ. ಇದು ದುರುದ್ದೇಶಪೂರಿತ ಚಟುವಟಿಕೆಗಳನ್ನು ನಿಗ್ರಹಿಸುವ ಗುರಿಯನ್ನು ಹೊಂದಿದೆ. ಇದರಲ್ಲಿ ನಕಲಿ ವ್ಯಾಕ್ಸಿನೇಷನ್ ಪ್ರಮಾಣಪತ್ರಗಳನ್ನು ಪಡೆದುಕೊಳ್ಳಲು ಸಾಧ್ಯವಾಗದ ರೀತಿ ವಿನ್ಯಾಸಗೊಳಿಸಲಾಗಿದೆ. ಇದರಿಂದ ಕೋವಿನ್ ಪ್ಲಾಟ್‌ಫಾರ್ಮ್ ಮೂಲಕ ಹಣಕಾಸಿನ ಲಾಭ ಮಾಡಲು ಹೊರಟಿರುವ ವಂಚಕರಿಗೆ ಅವಕಾಶವಿಲ್ಲದಂತಾಗಲಿದೆ.

ನೋಂದಾಯಿತ

ಇನ್ನು ಭದ್ರತೆಯ ಕಾರಣಕ್ಕಾಗಿ ಈ ಹೊಸ ನಾಲ್ಕು-ಅಂಕಿಯ ಕೋಡ್ ಪರಿಚಯಿಸಲಾಗಿದೆ. ಈ ಹೊಸ ನಾಲ್ಕು-ಅಂಕಿಯ ಕೋಡ್ ಒಟಿಪಿಯಾಗಿ ಕಾರ್ಯನಿರ್ವಹಿಸುತ್ತದೆ. ಇದು ಫಲಾನುಭವಿಯು ತಮ್ಮ ನೋಂದಾಯಿತ ಫೋನ್ ಸಂಖ್ಯೆಯಲ್ಲಿ ಪಡೆದುಕೊಳ್ಳಬಹುದಾಗಿದೆ. ಸ್ಲಾಟ್ ದೃಡಪಡಿಸಿದ ನಂತರ ಈ ಕೋಡ್ ಕಾಣಿಸಿಕೊಳ್ಳುತ್ತದೆ. ಇದು ಫಲಾನುಭವಿಗಳಿಗೆ ಸುರಕ್ಷತೆಯನ್ನು ಒದಗಿಸುತ್ತದೆ. ಅಲ್ಲದೆ ನಾಲ್ಕು ಸಂಖ್ಯೆಯ ಕೋಡ್‌ ಪಡೆದವರು ವ್ಯಾಕ್ಸಿನೇಷನ್ ಕೇಂದ್ರಕ್ಕೆ ಭೇಟಿ ನೀಡಿದಾಗ, ಪ್ರಕ್ರಿಯೆಯನ್ನು ದೃಡೀಕರಿಸಲು ಈ ನಾಲ್ಕು-ಅಂಕಿಯ ಕೋಡ್ ಅನ್ನು ಒದಗಿಸಬೇಕಾಗುತ್ತದೆ.

ಕೋವಿನ್‌ನಲ್ಲಿ COVID-19 ಲಸಿಕೆ ನೋಂದಾಯಿಸುವುದು ಹೇಗೆ?

ಕೋವಿನ್‌ನಲ್ಲಿ COVID-19 ಲಸಿಕೆ ನೋಂದಾಯಿಸುವುದು ಹೇಗೆ?

ಇನ್ನು ಕೋವಿನ್ ಪೋರ್ಟಲ್‌ನಲ್ಲಿ COVID-19 ಲಸಿಕೆಗಾಗಿ ನೋಂದಾಯಿಸುವುದು ಹೇಗೆ ಅನ್ನೊದನ್ನ ಕೆಳಗಿನ ಹಂತಗಳಲ್ಲಿ ತಿಳಿಯಿರಿ.

ಹಂತ 1: ಕೋವಿನ್ ವೆಬ್‌ಸೈಟ್ ತೆರೆಯಿರಿ (ಲಿಂಕ್)> ವ್ಯಾಕ್ಸಿನೇಷನ್‌ಗಾಗಿ ರಿಜಿಸ್ಟರ್ / ಸೈನ್ ಅಪ್ ಆಯ್ಕೆಮಾಡಿ
ಹಂತ 2: ನಿಮ್ಮ ಫೋನ್ ಸಂಖ್ಯೆಯನ್ನು ನಮೂದಿಸಿ> ಲಾಗ್ ಇನ್ ಮಾಡಲು ಅಥವಾ ನೋಂದಾಯಿಸಲು ಒಟಿಪಿ ಒದಗಿಸಿ
ಹಂತ 3: ನೀವು ಹೊಸದಾಗಿ ನೋಂದಾಯಿಸಲು ಅಗತ್ಯವಿರುವ ಎಲ್ಲಾ ವಿವರಗಳನ್ನು ಒದಗಿಸಿ. ನಿಮ್ಮ ಐಡಿ ಪ್ರೂಫ್ ಮತ್ತು ನಿಮ್ಮ ಐಡಿ ಸಂಖ್ಯೆಯನ್ನು ನೀವು ಒದಗಿಸಬೇಕಾಗುತ್ತದೆ.
ಹಂತ 4: ಇದು ನೋಂದಣಿಯನ್ನು ಪೂರ್ಣಗೊಳಿಸುತ್ತದೆ. ಮುಂದೆ, ನೀವು ಪಿನ್ ಕೋಡ್ ನಮೂದಿಸುವ ಮೂಲಕ ನಿಮ್ಮ ಜಿಲ್ಲೆಯ ಮಾಹಿತಿ ಒದಗಿಸಬೇಕು. ನಂತರ ಲಸಿಕೆಗಳನ್ನು ನೀಡುವ ಆಸ್ಪತ್ರೆಯನ್ನು ನೀವು ಕಾಣಬಹುದು. ಸಮಯವನ್ನು ಆಯ್ಕೆಮಾಡಿ ಮತ್ತು ಸ್ಲಾಟ್ ಅನ್ನು ಕಾಯ್ದಿರಿಸಿ.
ಹಂತ 5: ದೃಡಪಡಿಸಿದ ನಂತರ, ನೀವು ನಾಲ್ಕು-ಅಂಕಿಯ ಕೋಡ್ ಅನ್ನು ಪಡೆಯುತ್ತೀರಿ, ಅದು SMS ಆಗಿ ಸಹ ಗೋಚರಿಸುತ್ತದೆ. ಈ ಕೋಡ್ ಅನ್ನು ಸೇವ್‌ ಮಾಡಿಕೊಳ್ಳಿರಿ.
ಹಂತ 6: ನಿಮ್ಮ ಬುಕ್ ಮಾಡಿದ ಸ್ಲಾಟ್‌ನಲ್ಲಿರುವ ಲಸಿಕೆ ಕೇಂದ್ರಕ್ಕೆ ಹೋಗಿ. ನಿಮ್ಮನ್ನು ದೃಡೀಕರಿಸಲು ನೀವು ಇಲ್ಲಿ ನಾಲ್ಕು-ಅಂಕಿಯ ಕೋಡ್ ಅನ್ನು ಒದಗಿಸಬೇಕಾಗುತ್ತದೆ. ನಂತರ ನೀವು ಲಸಿಕೆ ಪಡೆಯಬಹುದಾಗಿದೆ.

Most Read Articles
Best Mobiles in India

English summary
Union Health Ministry has introduced a new 4-digit security code feature in the CoWIN portal.to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X