Home
ಸುದ್ದಿಜಾಲ

xiaomi : 1000ರೂ, ಒಳಗೆ ಲಭ್ಯವಾಗುವ ಶಿಯೋಮಿಯ ಉತ್ಪನ್ನಗಳು!

ಚೀನಾ ಮೂಲದ ಜನಪ್ರಿಯ ಸ್ಮಾರ್ಟ್‌ಫೋನ್‌ ಶಿಯೋಮಿ ಕಂಪೆನಿ ತನ್ನ ಆಕರ್ಷಕ ಫೀಚರ್ಸ್‌ಗಳ ಸ್ಮಾರ್ಟ್‌ಫೋನ್‌ಗಳನ್ನ ಈಗಾಗ್ಲೆ ಟೆಕ್‌ ಮಾರುಕಟ್ಟೆಗೆ ಪರಿಚಯಿಸಿದ್ದು, ಸ್ಮಾರ್ಟ್‌ಫೋನ್‌ ಪ್ರಿಯರ ನೆಚ್ಚಿನ ಆಯ್ಕೆಯ ಬ್ರ್ಯಾಂಡ್‌ಗಳಲ್ಲಿ ಒಂದಾಗುವ ಮೂಲಕ ಸೈ ಎನಿಸಿಕೊಂಡಿದೆ. ಜೊತೆಗೆ ವೈವಿದ್ಯ ಬೆಲೆಯ ಸ್ಮಾರ್ಟ್‌ಫೋನ್‌ಗಳನ್ನ ಮಾರುಕಟ್ಟೆಯಲ್ಲಿ ಬಿಡುಗಡೆ ಮಾಡುವ ಗ್ರಾಹಕ ಸ್ನೇಹಿಯಾಗಿಯೂ ಗುರ್ತಿಸಿಕೊಂಡಿದೆ. ಕೇವಲ ಸ್ಮಾರ್ಟ್‌ಫೋನ್‌ ಮಾತ್ರವಲ್ಲ ಶಿಯೋಮಿ ಕಂಪೆನಿಯ ಇತರೆ ಎಲೆಕ್ಟ್ರಾನಿಕ್ಸ್‌ ಪ್ರಾಡಕ್ಟ್‌ಗಳಲ್ಲೂ ಕೂಡ ಶಿಯೋಮಿ ವೈವಿಧ್ಯತೆಯನ್ನ ಕಾಯ್ದುಕೊಂಡಿದೆ.

ಹೌದು

ಹೌದು, ಟೆಕ್‌ ಮಾರುಕಟ್ಟೆಯಲ್ಲಿ ಆಕರ್ಷಕ ಫೀಚರ್ಸ್‌ ಹಾಗೂ ವೈವಿಧ್ಯ ಬೆಲೆಯ ಮೂಲಕ ಗುರ್ತಿಸಿಕೊಂಡಿರುವ ಶಿಯೋಮಿ ಕಂಪೆನಿ ತನ್ನ ಎಲೆಕ್ಟ್ರಾನಿಕ್‌ ಆಕ್ಸಿಸರೀಸ್‌ಗಳು ಕೂಡ ವಿವಿಧ ಮಾದರಿಯ ಬೆಲೆಗಳಲ್ಲಿ ಲಭ್ಯವಿದೆ. ಸದ್ಯ ಮಾರುಕಟ್ಟೆಯಲ್ಲಿ ಶಿಯೋಮಿ ಕಂಪೆನಿಯ ಇಯರ್‌ಫೋನ್‌ಗಳು, ಕಾಂಪ್ಯಾಕ್ಟ್ ಬ್ಲೂಟೂತ್ ಸ್ಪೀಕರ್, ಮಾರುಕಟ್ಟೆಯಲ್ಲಿ 500 ರೂ.ಗಿಂತ ಕಡಿಮೆ ಬೆಲೆಗೆ ಪಡೆಯಬಹುದಾಗಿದೆ. ಅಷ್ಟೇ ಯಾಕೆ ಶಿಯೋಮಿಯ ವೈರ್‌ಲೆಸ್ ಮೌಸ್ ಬೆಲೆ ಕೂಡ ಕೇವಲ 500 ರೂ ಆಗಿದೆ. ಹಾಗಾದ್ರೆ ಮಾರುಕಟ್ಟೆಯಲ್ಲಿ ಕಡಿಮೆ ಬೆಲೆಗೆ ಸಿಗುವ ಶಿಯೋಮಿ ಕಂಪೆನಿಯ ಇತರೆ ಉತ್ತನ್ನಗಳು ಯಾವುವು ಅನ್ನೊದರ ಬಗ್ಗೆ ಈ ಲೇಖನದಲ್ಲಿ ತಿಳಿಸಿಕೊಡ್ತೀವಿ ಓದಿ

ಮಿ ಪವರ್ ಬ್ಯಾಂಕ್ 2I

ಮಿ ಪವರ್ ಬ್ಯಾಂಕ್ 2I

ಶಿಯೋಮಿ ಕಂಪೆನಿಯಿಂದ ಕಡಿಮೆ ಬೆಲೆಯಲ್ಲಿ ಲಭ್ಯವಾಗುವ ಉತ್ತನ್ನಗಳಲ್ಲಿ ಮಿ ಪವರ್ ಬ್ಯಾಂಕ್ 2I, ಪವರ್ ಬ್ಯಾಂಕ್‌ ಕೂಡ ಸೇರಿದ್ದು, ಇದು ಕೇವಲ 899 ರೂ.ಗೆ ಲಭ್ಯವಾಗಲಿದೆ. ಇನ್ನು ಮಿ ಪವರ್ ಬ್ಯಾಂಕ್ 2i 10000mAh ಬ್ಯಾಟರಿ ಪ್ಯಾಕ್‌ಆಪ್‌ ಹೊಂದಿದ್ದು, ಮ್ಯಾಟ್ ಪೇಂಟ್ ಫಿನಿಶ್ ವಿನ್ಯಾಸವನ್ನ ಹೊಂದಿದೆ. ಅಲ್ಲದೆ ಇದು ಎರಡು ಯುಎಸ್‌ಬಿ ಪೋರ್ಟ್‌ಗಳ ಮೂಲಕ 18W ಫಾಸ್ಟ್ ಚಾರ್ಜಿಂಗ್ ಅನ್ನು ಬೆಂಬಲಿಸಲಿದ್ದು, 9 ಲೆಯರ್‌ ಸರ್ಕ್ಯೂಟ್ ಪ್ರೊಟೆಕ್ಷನ್‌ ಅನ್ನ ಒಳಗೊಂಡಿದೆ.

ಮಿ ಇಯರ್‌ಫೋನ್‌ಗಳು

ಮಿ ಇಯರ್‌ಫೋನ್‌ಗಳು

ಇನ್ನು ಶಿಯೋಮಿ ಕಂಪೆನಿಯ ಮಿ ಇಯರ್‌ಫೋನ್ ಪ್ರೀಮಿಯಂ ಬೆಲಯನ್ನ ಹೊಂದಿದ್ದು, ಇದು ಕೇವಲ 699 ರೂ ಗೆ ಮಾರುಕಟ್ಟೆಯಲ್ಲಿ ಮಲಭ್ಯವಾಗಲಿದೆ. ಇನ್ನೂ ಈ ಇಯರ್‌ಫೊನ್‌ ಮೆಟಲ್ ಬಿಲ್ಡ್ ಮತ್ತು ಕೆವ್ಲರ್ ಫೈಬರ್ ಕೇಬಲ್‌ ಹೊಂದಿದ್ದು, ಬಳಕೆದಾರರ ಕಿವಿಗಳ ವಿನ್ಯಾಸಕ್ಕೆ ತಕ್ಕಂತೆ ಹೊಂದಿಕೊಳ್ಳಲಿದೆ. ಇದರಲ್ಲಿ ಪ್ಲೇಬ್ಯಾಕ್ ಮ್ಯೂಸಿಕ್‌ ಅನ್ನು ನಿಯಂತ್ರಿಸಲು ಇನ್ಲೈನ್ ​​ರಿಮೋಟ್‌ ಅನ್ನು ಕೂಡೆ ನೀಡಲಾಗಿದ್ದು, ಇದನ್ನ ಸಿಲ್ವರ್ ಅಥವಾ ಬ್ಲ್ಯಾಕ್‌ ಕಲರ್‌ನಲ್ಲಿ ಖರೀದಿಸಬಹುದು.

ಮಿ ಕಾಂಪ್ಯಾಕ್ಟ್ ಬ್ಲೂಟೂತ್ ಸ್ಪೀಕರ್ 2

ಮಿ ಕಾಂಪ್ಯಾಕ್ಟ್ ಬ್ಲೂಟೂತ್ ಸ್ಪೀಕರ್ 2

ಕಡಿಮೆ ಬೆಲೆಯಲ್ಲಿ ಒಂದು ಉತ್ತಮ ಬ್ಲೂಟೂತ್ ಸ್ಪೀಕರ್ ಬೇಕಾಗಿದ್ದರೆ, ಶೀಯೋಮಿ ಕಂಪೆನಿಯ ಮಿ ಕಾಂಪ್ಯಾಕ್ಟ್ ಬ್ಲೂಟೂತ್ ಸ್ಪೀಕರ್ 2 ಉತ್ತಮ ಆಯ್ಕೆಯಾಗಬಲ್ಲದು. ಇದರ ಬೆಲೆ ಕೇವಲ 799 ರೂ. ಮಾತ್ರ ಆಗಿದ್ದು. ಈ ಸ್ಪೀಕರ್‌ನಲ್ಲಿ ಕರೆ ಸ್ವೀಕರಿಸುವ ಮತ್ತು ಕರೆ ಕಡಿತ ಮಾಡುವ ಹಾಗೂ ಪ್ಲೇ ಬ್ಯಾಕ್‌ ಮ್ಯೂಸಿಕ್‌ ಕೇಳಲು ಅನುಕೂಲಕರವಾದ 2W ಡ್ರೈವರ್ ಅನ್ನು ನೀಡಲಾಗಿದೆ. ಇದಲ್ಲದೆ ಈ ಸ್ಪೀಕರ್‌ ಒಂದೇ ಚಾರ್ಜ್‌ನಲ್ಲಿ 6 ಗಂಟೆಗಳವರೆಗೆ ಬ್ಯಾಟರಿ ಬಾಳಿಕೆ ಬರಲಿದ್ದು, ಟ್ರಾವಲ್‌ ಮಾಡುವಾಗಲೂ ಇದನ್ನ ಸುಲಭವಾಗಿ ಕ್ಯಾರಿ ಮಾಡಬಹುದಾಗಿದೆ.

ಮಿ ಬ್ಲೂಟೂತ್ ಆಡಿಯೋ ರಿಸೀವರ್

ಮಿ ಬ್ಲೂಟೂತ್ ಆಡಿಯೋ ರಿಸೀವರ್

ಇನ್ನು ನೀವು ಕಡಿಮೆ ಬೆಲೆಯಲ್ಲಿ ಉತ್ತಮವಾದ ಜೋಡಿ ಹೆಡ್‌ಫೋನ್‌ಗಳಿಗೆ ಸರ್ಚ್‌ ಮಾಡುತ್ತಿದ್ದರೆ , ಮಿ ಬ್ಲೂಟೂತ್ ಆಡಿಯೊ ರಿಸೀವರ್ ನಿಮ್ಮಗೆ ಉತ್ತಮ ಆಯ್ಕೆಯಾಗಲಿದೆ. ಇದು ಯಾವುದೇ ಮಾದರಿಯ ಸ್ಮಾರ್ಟ್‌ಫೋನ್‌ ಜೊತೆಗೂ ಕನೆಕ್ಟ್‌ ಮಾಡಬಹುದಾಗಿದ್ದು, ನಿಮ್ಮ ಹೆಡ್‌ಫೋನ್ ಅನ್ನು ಪ್ಲಗ್ ಮಾಡಲು 3.5 ಎಂಎಂ ಪೋರ್ಟ್ ಅನ್ನು ಹೊಂದಿದೆ. ಇದರ ಬೆಲೆ ಕೇವಲ 999 ರೂ,ಗಳು ಮಾತ್ರ ಆಗಿದೆ.

ಮಿ ಪೋರ್ಟಬಲ್ ವೈರ್‌ಲೆಸ್ ಮೌಸ್

ಮಿ ಪೋರ್ಟಬಲ್ ವೈರ್‌ಲೆಸ್ ಮೌಸ್

ನಿಮ್ಮ ಕಂಪ್ಯೂಟರ್‌ಗೆ ಉತ್ತಮವಾದ ವೈರ್‌ಲೆಸ್‌ ಮೌಸ್‌ ಅನ್ನು ನೀವು ಹುಡುಕುತ್ತಿದ್ದರೆ ಶಿಯೋಮಿ ಕಂಪೆನಿಯ ಮಿ ಪೋರ್ಟಬಲ್ ವೈರ್‌ಲೆಸ್ ಮೌಸ್ ಉತ್ತಮ ಆಯ್ಕೆಯಾಗಲಿದೆ. ಇದು ನಿಮ್ಮ ಡೆಸ್ಕ್ ಅನ್ನು ಉತ್ತಮ ರೀತಿಯಲ್ಲಿ ಕಾರ್ಯನಿರ್ವಹಿಸಲು ಅನುವು ಮಾಡಿಕೊಡುತ್ತದೆ. ಇದರ ಬೆಲೆ ಕೇವಲ 500 ರೂ,ಆಗಿದ್ದು ಸುಲಭವಾಗಿ ಕ್ಯಾರಿ ಮಾಡಬಹುದಾದ ಸ್ಲಿಮ್ ಮೌಸ್ ಇದಾಗಿದ್ದು, 12 ತಿಂಗಳವರೆಗಿನ ಬ್ಯಾಟರಿ ಅವಧಿಯ ವಾರೆಂಟಿಯನ್ನ ಸಹ ಶಿಯೋಮಿ ಕಂಪೆನಿ ನೀಡುತ್ತದೆ.

ಮಿ ರೂಟರ್ 4 ಸಿ

ಮಿ ರೂಟರ್ 4 ಸಿ

ಇನ್ನು ಕಡಿಮೆ ಬೆಲೆಯಲ್ಲಿ ದೊರೆಯುವ ಶಿಯೋಮಿಯ ಎಲೆಕ್ಟ್ರಾನಿಕ್ಸ್‌ ಉತ್ತನ್ನಗಳಲ್ಲಿ ಶಿಯೋಮಿ ವೈರ್‌ಲೆಸ್ ರೂಟರ್ ಕೂಡ ಒಂದಾಗಿದ್ದು, ಅದರಲ್ಲೂ ಹೊಸ ಆವೃತ್ತಿಯಾದ ಮಿ ರೂಟರ್ 4c ಕೇವಲ 999 ರೂ,ಗಳಿಗೆ ದೊರೆಯಲಿದ್ದು. ಇದು ಸೊಗಸಾದ ವಿನ್ಯಾಸವನ್ನು ಹೊಂದಿದೆ ಮತ್ತು ವಿಶಾಲ ವ್ಯಾಪ್ತಿಯನ್ನ ಒಳಗೊಂಡಿರುವ ನಾಲ್ಕು ಆಂಟೆನಾಗಳೊಂದಿಗೆ ಬರುತ್ತದೆ. ಅಲ್ಲದೆ ಇದು 2.4GHz ಬ್ಯಾಂಡ್ ಮತ್ತು 300Mbps ವರೆಗಿನ ನೆಟ್‌ವರ್ಕ್ ವೇಗವನ್ನು ಬೆಂಬಲಿಸುತ್ತದೆ.

Best Mobiles in India

English summary
Xiaomi has an extensive list of accessories in India that you can buy from its website. You can find some of the most unique stuff for less than Rs 1,000.to know more visit to kannada.gizbot.com
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+