Home
ಸುದ್ದಿಜಾಲ

ಮಿತ್ರಾನ್‌ ಆಪ್‌ ಬಗ್ಗೆ ನೀವು ತಿಳಿದುಕೊಳ್ಳಲೇಬೇಕಾದ ಸಂಗತಿಗಳು!

ಕಳೆದ ಕೆಲವು ದಿನಗಳಿಂದ ಭಾರತದಲ್ಲಿ ಚೀನಾದ ಟಿಕ್‌ಟಾಕ್‌ ಆಪ್‌ಗೆ ಪರ್ಯಾಯವಾದ ಆಪ್‌ ಬಗ್ಗೆ ಸುದ್ದಿ ಆಗುತ್ತಲೇ ಇದೆ. ಚೀನಾದ ಟಿಕ್‌ಟಾಕ್‌ ಆಪ್‌ ಬದಲಿಗೆ ಭಾರತೀಯ ಆಪ್‌ ಅನ್ನು ಬಳಸಿ ಎಂಬ ಸುದ್ದದಿ ಎಲ್ಲೆಡೆ ವರದಿ ಆಗ್ತಿದೆ. ಸದ್ಯ ಟಿಕ್‌ಟಾಕ್‌ಗೆ ಬದಲಿಯಾಗಿ ಮಿತ್ರಾನ್‌ ಆಪ್‌ ಅನ್ನು ಪರಿಚಯಿಸಲಾಗಿದ್ದು, ಕಳೆದ ಎರಡು ದಿನಗಳಿಂದ ಸುದ್ದಿಯಲ್ಲಿದೆ.

ಹೌದು, ಟಿಕ್‌ಟಾಕ್‌ ಆಪ್‌ ಬದಲಿಗೆ ಭಾರತೀಯ ಆಪ್‌ ಮಿತ್ರಾನ್‌ ಅನ್ನು ಪರಿಚಯಿಸಲಾಗಿದೆ. ಸದ್ಯ ಬಿಡುಗಡೆ ಆದ ಕೆಲವೇ ದಿನಗಳಲ್ಲಿ 4.7 ರೇಟಿಂಗ್ ಮತ್ತು 5 ಮಿಲಿಯನ್‌ಗಿಂತಲೂ ಹೆಚ್ಚು ಡೌನ್‌ಲೋಡ್‌ಗಳನ್ನು ಗಳಿಸುವ ಮೂಲಕ ಪ್ಲೇ ಸ್ಟೋರ್‌ನಲ್ಲಿ ಅಪ್ಲಿಕೇಶನ್ ಸಾಕಷ್ಟು ಜನಪ್ರಿಯವಾಗಿದೆ. ಆದರೆ ಈ ಆಪ್‌ ಬಗ್ಗೆ ನೀವು ತಿಳಿದುಕೊಳ್ಳಲೇಬೇಕಾದ ಕೆಲವು ಪ್ರಮುಖ ಮಾಹಿತಿಗಳನ್ನ ಈ ಲೇಖನದಲ್ಲಿ ತಿಳಿಸಿಕೊಡ್ತೀವಿ ಓದಿರಿ.

ಮಿತ್ರಾನ್

ಇನ್ನು ನಾವು ನೀವೆಲ್ಲಾ ಅಂದುಕೊಂಡಂತೆ ಮಿತ್ರಾನ್ ಆಪ್‌ ಭಾರತೀಯರ ಆಪ್‌ ಎಂದು ಹೇಳಲಾಗ್ತಿದೆ. ಆದರೆ ಮೆಲ್ನೋಟಕ್ಕೆ ತಿಳಿದು ಬಂದಿರುವ ವಿಚಾರವೆಂದರೆ ಮಿತ್ರಾನ್‌ ಆಪ್‌ ಪಾಕಿಸ್ತಾನದ ಸಾಫ್ಟ್‌ವೇರ್ ಡೆವಲಪರ್ ಕ್ಯೂಬಾಕ್ಸಸ್‌ನಿಂದ ಖರೀದಿಸಿದ ಮೂಲ ಕೋಡ್ ಅನ್ನು ಆಧರಿಸಿದೆ ಎನ್ನಲಾಗ್ತಿದೆ. ಅಲ್ಲದೆ ಈ ಆಪ್‌ ಅನ್ನು ಐಐಟಿ-ರೂರ್ಕಿಯ ಮಾಜಿ ವಿದ್ಯಾರ್ಥಿಗಳ ಗುಂಪಿನಿಂದ ಮಿತ್ರಾನ್ ಅನ್ನು ರಚಿಸಲಾಗಿದೆ.

ಮಿತ್ರಾನ್

ಇನ್ನು ಪಾಕಿಸ್ತಾನದ ಸಾಫ್ಟ್‌ವೇರ್ ಸಂಸ್ಥೆ ಕ್ಯೂಬಾಕ್ಸಸ್‌ನ ಸ್ಥಾಪಕ ಮತ್ತು ಸಿಇಒ ಇರ್ಫಾನ್ ಶೇಖ್ ಹೇಳಿರುವಂತೆ ಮಿತ್ರಾನ್‌ನ ಕ್ರಿಯೆಟರ್‌ ಅವರಿಂದ ಮೂಲ ಕೋಡ್ ಅನ್ನು $ 34 (6 2,600 ಅಂದಾಜು) ಗೆ ಖರೀದಿಸಿದ್ದಾರೆ ಎಂದು ಹೇಳಿದ್ದಾರೆ. ಇದೇ ಕಾರಣಕ್ಕೆ ಮಿತ್ರಾನ್‌ ಇಂಟರ್ಫೇಸ್ ಮತ್ತು ಕ್ಯೂಬಾಕ್ಸಸ್ ಟಿಕ್ಟಿಕ್ ಇಂಟರ್ಫೇಸ್ ಒಂದೇ ಆಗಿರುವುದರಿಂದ ಮಿತ್ರಾನ್‌ ಅನ್ನು ‘ಭಾರತೀಯ ನಿರ್ಮಿತ' ಆಪ್ ಎಂದು ಕರೆಯುವುದನ್ನು ಶೇಖ್ ವಿರೋದಿಸಿದ್ದಾರೆ.

ಮಿತ್ರಾನ್‌

ಸದ್ಯ ಇದೀಗ ಮಿತ್ರಾನ್‌ ಆಪ್‌ ಭಾರತದಲ್ಲಿ ಸಂಚಲನ ಸೃಷ್ಟಿಸಿದೆ. ಟಿಕ್‌ಟಾಕ್‌ ಆಪ್‌ ಬದಲಿಗೆ ಮಿತ್ರಾನ್‌ ಬಳಸಿ ಎಂದು ಸೊಶೀಯಲ್‌ ಮಿಡಿಯಾಗಳಲ್ಲಿ ಸುದ್ದಿ ಮಾಡಲಾಗ್ತಿದೆ. ಆದರೆ ಮಿತ್ರಾನ್‌ ಮೂಲತಃ ಭಾರತದಲ್ಲಿ ಎಂಬ ಸುದ್ದಿ ಕೂಡ ಸಂಚಲನ ಸೃಷ್ಟಿ ಮಾಡಿದೆ. ಸದ್ಯ ಮಾಹಿತಿ ಪ್ರಕಾರ ಮಿತ್ರಾನ್‌ ಯಾವುದೇ ಗೌಪ್ಯತೆ ನೀತಿಯನ್ನು ಪಟ್ಟಿ ಮಾಡಿಲ್ಲ ಅಥವಾ ಅದರ ಡೇಟಾವನ್ನು ಎಲ್ಲಿ ಹೋಸ್ಟ್ ಮಾಡುತ್ತದೆ ಎಂಬುದರ ಕುರಿತು ಯಾವುದೇ ಮಾಹಿತಿ ಇಲ್ಲ. ತಮ್ಮ ಸರ್ವರ್‌ನಲ್ಲಿ ಡೇಟಾವನ್ನು ಹೋಸ್ಟ್ ಮಾಡುವ ಆಯ್ಕೆಯನ್ನು ಅವರು ಹೊಂದಿದೆ.

Best Mobiles in India

English summary
The app is quite popular on the Google Play Store and has more than 5 million downloads. But there's a story behind all this.to know more visit to kannada.gizbot.com
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+