ಒನ್‌ಪ್ಲಸ್ ಸಂಸ್ಥೆಯಿಂದ ಬರಲಿದೆ ನೂತನ ನಾರ್ಡ್ ಫೋನ್..ವಿಶೇಷ ಏನಿದೆ?
ಜನಪ್ರಿಯ ಒನ್‌ಪ್ಲಸ್ ಮೊಬೈಲ್ (OnePlus) ಬ್ರ್ಯಾಂಡ್ ಈಘಾಗಲೇ ಹಲವು ಫೋನ್ ಸರಣಿಯ ಮೂಲಕ ಮಾರುಕಟ್ಟೆಯಲ್ಲಿ ಸದ್ದು ಮಾಡಿದೆ. ಇದೀಗ ಒನ್‌ಪ್ಲಸ್ ತನ್ನ ನಾರ್ಡ್ ಸರಣಿಯಿಂದ ಹೊಸ ಸ್ಮಾರ್ಟ್‌ಫೋನ್ ಪರಿಚಯಿಸಲು ಕಾರ್ಯ ನಿರ್ವಹಿಸುತ್ತಿದೆ ಎಂದು ವರದಿಯಾಗಿದೆ.
ಹೌದು, ಒನ್‌ಪ್ಲಸ್ ಸಂಸ್ಥೆಯು ನೂತನ ನಾರ್ಡ್ ಫೋನ್ ಬಿಡುಗಡೆ ಮಾಡಲು ಸಜ್ಜಾಗಿದೆ. ಆದರೆ ಬಿಡುಗಡೆಗೂ ಮುನ್ನ ಇತ್ತೀನ ರೆಂಡರ್ ಲೀಕ್ ಮಾಹಿತಿ ಮೂಲಕ ಮುಂಬರುವ ಹೊಸ ಫೋನಿನ ವಿನ್ಯಾಸವನ್ನು ಬಹಿರಂಗಪಡಿಸಿದೆ. ಬಿಡುಗಡೆ ಆಗಲಿರುವ ಫೋನ್ ಮೀಡ್ ರೇಂಜ್ ಮಾದರಿಯಲ್ಲಿ ಇರಬಹುದು ಎಂದು ಅಂದಾಜಿಸಲಾಗಿದೆ.

ಒನ್‌ಪ್ಲಸ್ ಇತ್ತೀಚೆಗೆ ತನ್ನ ಪ್ರಮುಖ ಒನ್‌ಪ್ಲಸ್ 12 ಶ್ರೇಣಿಯನ್ನು ಅನಾವರಣ ಮಾಡಿದೆ. ಬರಲಿರುವ ನೂತನ ಫೋನ್ CPH2613 ಮಾಡೆಲ್ ಸಂಖ್ಯೆಯನ್ನು ಆಗಿರಲಿದೆ 91ಮೊಬೈಲ್ಸ್ ವರದಿಯಿಂದ ತಿಳಿದು ಬಂದಿದೆ. ಆದರೆ ಲೀಕ್ ಮಾಹಿತಿಯಲ್ಲಿ ಸ್ಮಾರ್ಟ್‌ಫೋನ್‌ನ ಹೆಸರನ್ನು ಉಲ್ಲೇಖಿ ಮಾಡಿಲ್ಲ. ಆದರೆ ಅದರ ರಚನೆಯೂ ಇದು ಪಕ್ಕಾ ನಾರ್ಡ್ ಫೋನ್ ಆಗಿರಬಹುದು ಎಂದು ಸುಳಿವು ನೀಡುತ್ತದೆ.
ಈ ಫೋನ್ ಒನ್‌ಪ್ಲಸ್ ನಾರ್ಡ್ CE 3 ಅಥವಾ ಒನ್‌ಪ್ಲಸ್ ನಾರ್ಡ್ CE 3 ಲೈಟ್ ಫೋನ್‌ಗಳಿಗೆ ಉತ್ತರಾಧಿಕಾರಿ ಆಗಿರಬಹುದು ಎಂದು ಹೇಳಲಾಗಿದೆ. ರೆಂಡರ್ ಮಾಹಿತಿ ಪ್ರಕಾರ ಬರಲಿರುವ ಫೋನ್ ಕರ್ವ್ ಎಡ್ಜ್‌ಗಳ ಜೊತೆಗೆ ಸಮತಟ್ಟಾದ ಮುಂಭಾಗ ಮತ್ತು ಹಿಂಭಾಗವನ್ನು ಒಳಗೊಂಡಿರಲಿದೆ ಎನ್ನಲಾಗಿದೆ.
ಫೋನಿನ ಡಿಸ್‌ಪ್ಲೇಯು ಸೆಲ್ಫಿ ಕ್ಯಾಮೆರಾಕ್ಕಾಗಿ ಮಧ್ಯದಲ್ಲಿ ಪಂಚ್ ಹೋಲ್ ಮಾದರಿಯ ವಿನ್ಯಾಸದಲ್ಲಿ ಸೆಟ್ ಮಾಡಲಾಗಿದೆ. ಹಿಂಭಾಗದಲ್ಲಿ ಲಂಬವಾಗಿ ವಿನ್ಯಾಸ ಮಾಡಲಾದ ಡ್ಯುಯಲ್ ಕ್ಯಾಮೆರಾ ರಚನೆ ಹಾಗೂ ಮಾತ್ರೆ ಆಕಾರದ ಮಾಡ್ಯೂಲ್‌ನಲ್ಲಿ LED ಫ್ಲ್ಯಾಷ್ ನೀಡಲಾಗಿರುವುದು ಸೋರಿಕೆಯಿಂದ ತಿಳಿದು ಬಂದಿದೆ.
ಹಾಗೆಯೇ ಲೀಕ್ ಮಾಹಿತಿಯಂತೆ ಈ ಫೋನ್ ಡಿಸ್‌ಪ್ಲೇ ಕೆಳಗೆ ಇನ್-ಡಿಸ್ಪ್ಲೇ ಫಿಂಗರ್ಪ್ರಿಂಟ್ ಸ್ಕ್ಯಾನರ್ ಅನ್ನು ಹೊಂದಿದೆ ಎಂದು ವರದಿ ಇದೆ. ಹಾಗೆಯೇ AMOLED ಸ್ಕ್ರೀನ್ ನಿರೀಕ್ಷಿಸಬಹುದಾಗಿದೆ. ಅಲ್ಲದೇ ಮೈಕ್ರೊಫೋನ್, USB ಟೈಪ್ C ಪೋರ್ಟ್, ಸ್ಪೀಕರ್ ಗ್ರಿಲ್ ಮತ್ತು ಕೆಳಭಾಗದಲ್ಲಿ SIM ಟ್ರೇ ಸೇರಿವೆ ನೀಡಲಾಗಿದೆ ಎನ್ನಲಾಗಿದೆ.
ಈ ಫೋನ್ 3.5mm ಹೆಡ್‌ಫೋನ್ ಜ್ಯಾಕ್ ಅನ್ನು ಪಡೆದಿರಲಿದ್ದು, ಹಿಂಭಾಗದಲ್ಲಿ 50 ಮೆಗಾ ಪಿಕ್ಸೆಲ್ ಪ್ರಾಥಮಿಕ ಕ್ಯಾಮರಾ ಪಡೆದಿರುವುದು ಪಕ್ಕಾ ಎನ್ನಲಾಗಿದೆ. ಇನ್ನು ಕ್ಯಾಮೆರಾವು OIS ಮತ್ತು EIS ಬೆಂಬಲವನ್ನು ನೀಡುತ್ತದೆ ಹಾಗೂ f/1.8 ದ್ಯುತಿರಂಧ್ರವನ್ನು ನೀಡುತ್ತದೆ. ಅದೇ ರೀತಿ ಸೆಲ್ಫಿ ಕ್ಯಾಮೆರಾವು 16 ಮೆಗಾಪಿಕ್ಸೆಲ್ ಸೆನ್ಸಾರ್‌ನ EIS ಮತ್ತು f/2.4 ಅಪರ್ಚರ್ ಹೊಂದಿದೆ.
ಒನ್‌ಪ್ಲಸ್ 12R ನೆಕ್ಸ್ಟ್ ಸೇಲ್ ಮಾಹಿತಿ
ಹೊಸ ಒನ್‌ಪ್ಲಸ್ 12R ಮೊಬೈಲ್ ಮುಂದಿನ ಸೇಲ್ ಇದೇ ಫೆಬ್ರವರಿ 13 ರಂದು ನಡೆಯಲಿದೆ ಎಂದು ಹೇಳಲಾಗಿದೆ. ಇನ್ನು ಈ ಫೋನ್ 6.78 ಇಂಚಿನ BOE X1 OLED ಡಿಸ್‌ಪ್ಲೇ ಅನ್ನು ಪಡೆದಿದ್ದು, ಈ ಡಿಸ್‌ಪ್ಲೇಯು 1,264x2,780 ಪಿಕ್ಸೆಲ್ ಸ್ಕ್ರೀನ್ ರೆಸಲ್ಯೂಶನ್ ಸಾಮರ್ಥ್ಯವನ್ನು ಹೊಂದಿದೆ. ಸ್ನಾಪ್‌ಡ್ರಾಗನ್ 8 ಜೆನ್ 2 SoC ಪ್ರೊಸೆಸರ್ ವೇಗವನ್ನು ಹೊಂದಿದೆ.
ಹಾಗೆಯೇ ಈ ಫೋನ್ ಆಂಡ್ರಾಯ್ಡ್ 14-ಆಧಾರಿತ OxygenOS 14 ಔಟ್-ಆಫ್-ದಿ-ಬಾಕ್ಸ್‌ನಲ್ಲಿ ಕಾರ್ಯನಿರ್ವಹಿಸುತ್ತದೆ. ಟ್ರಿಪಲ್ ರಿಯರ್ ಕ್ಯಾಮೆರಾವನ್ನು ಹೊಂದಿದೆ. ಇದರಲ್ಲಿ ಮುಖ್ಯ ಕ್ಯಾಮೆರಾ 50 ಮೆಗಾಪಿಕ್ಸೆಲ್ ಸೆನ್ಸಾರ್ ಕ್ಯಾಮೆರಾ 112-ಡಿಗ್ರಿ ಫೀಲ್ಡ್-ಆಫ್-ವ್ಯೂ ಅನ್ನು ಒಳಗೊಂಡಿದೆ.
ಇದಲ್ಲದೆ ಸ್ಮಾರ್ಟ್‌ಫೋನ್ 16 ಮೆಗಾಪಿಕ್ಸೆಲ್ ಸೆನ್ಸಾರ್ ಸಾಮರ್ಥ್ಯದ ಸೆಲ್ಫಿ ಕ್ಯಾಮೆರಾವನ್ನು ಸಹ ಒಳಗೊಂಡಿದೆ. ಈ ಸ್ಮಾರ್ಟ್‌ಫೋನ್ 5,000mAh ಸಾಮರ್ಥ್ಯದ ಬ್ಯಾಟರಿ ಬ್ಯಾಕ್‌ಅಪ್ ಅನ್ನು ಒಳಗೊಂಡಿದೆ. ಇದು 100W SuperVOOC ವೈರ್ಡ್ ಚಾರ್ಜಿಂಗ್ ಅನ್ನು ಬೆಂಬಲಿಸಲಿದೆ.


Click it and Unblock the Notifications








