Home
ಸುದ್ದಿಜಾಲ

Upcoming Smartphones: ಮುಂದಿನ ವಾರ ಟೆಕ್‌ ವಲಯದಲ್ಲಿ ಸಂಚಲನ ಗ್ಯಾರಂಟಿ! ಎಂಟ್ರಿ ಕೊಡಲಿವೆ ಜಬರ್ದಸ್ತ್‌ ಫೋನ್‌ಗಳು!

ಹೊಸ ವರ್ಷಕ್ಕೆ ಕಾಲಿಡುತ್ತಿದ್ದ ಹಾಗೇ ಹಲವು ಜನಪ್ರಿಯ ಸ್ಮಾರ್ಟ್‌ಫೋನ್‌ಗಳು ಮಾರುಕಟ್ಟೆಯಲ್ಲಿ ರಾರಾಜಿಸುತ್ತಿವೆ. ಇದೀಗ ಇನ್ನಷ್ಟು ಹೊಸ ಸ್ಮಾರ್ಟ್‌ಫೋನ್‌ಗಳು ಬಿಡುಗಡೆಗೆ ಕಾದು ಕುಳಿತಿವೆ. ಇವುಗಳಲ್ಲಿ ಹಲವು ಸ್ಮಾರ್ಟ್‌ಫೋನ್‌ಗಳ ಬಿಡುಗಡೆ ದಿನಾಂಕ ಕೂಡ ಬಹಿರಂಗವಾಗಿದ್ದು, ಮೊಬೈಲ್‌ ಪ್ರಿಯರ ಎದೆ ಬಡಿತ ಹೆಚ್ಚಾಗುವಂತೆ ಮಾಡಿದೆ.

ಹೌದು, ಸ್ಮಾರ್ಟ್‌ಫೋನ್‌ (smartphones) ಮಾರುಕಟ್ಟೆಯಲ್ಲಿ ಹೊಸ ಸ್ಮಾರ್ಟ್‌ಫೋನ್‌ಗಳ ಭರಾಟೆ ಜೋರಾಗಿದೆ. ಜನಪ್ರಿಯ ಬ್ರ್ಯಾಂಡ್‌ಗಳ ಹೊಸ ಫೋನ್‌ಗಳು ಭರ್ಜರಿಯಾಗಿಯೇ ಸದ್ದು ಮಾಡುತ್ತಿವೆ. 2024 ರ ಮೊದಲ ತಿಂಗಳು ಮುಗಿಯುವ ವೇಳೆ ಬಂದಿದೆಯಾರೂ ಇನ್ನು ಕೆಲವು ಹೊಸ ಸ್ಮಾರ್ಟ್‌ಫೋನ್‌ಗಳು ಜನವರಿ ಕೊನೆಯ ವಾರದಲ್ಲಿ ಬಿಡುಗಡೆ ಆಗುವ ಸೂಚನೆ ನೀಡಿವೆ. ಹಾಗಾದ್ರೆ ಸದ್ಯದಲ್ಲೇ ಮಾರುಕಟ್ಟೆಗೆ ಎಂಟ್ರಿ ನೀಡಲಿರುವ ಹೊಸ ಫೋನ್‌ಗಳ ಬಗ್ಗೆ ಈ ಲೇಖನದಲ್ಲಿ ತಿಳಿಸಿಕೊಡ್ತೀವಿ ಓದಿರಿ.

ಮುಂದಿನ ವಾರ ಟೆಕ್‌ ವಲಯದಲ್ಲಿ ಸಂಚಲನ ಗ್ಯಾರಂಟಿ! ಎಂಟ್ರಿ ಕೊಡಲಿವೆ ಈ ಫೋನ್‌ಗಳು!

ಐಕ್ಯೂ ನಿಯೋ 9 ಪ್ರೊ ಸ್ಮಾರ್ಟ್‌ಫೋನ್‌

ಐಕ್ಯೂ ನಿಯೋ 9 ಪ್ರೊ ಸ್ಮಾರ್ಟ್‌ಫೋನ್‌ 6.78 ಇಂಚಿನ LTPO AMOLED ಡಿಸ್‌ಪ್ಲೇಯನ್ನು ಹೊಂದಿದೆ. ಇದು 1260 x 2800 ಪಿಕ್ಸೆಲ್‌ ಸ್ಕ್ರೀನ್‌ ರೆಸಲ್ಯೂಶನ್‌ ಸಾಮರ್ಥ್ಯದಲ್ಲಿರಲಿದೆ. ಇನ್ನು ಡಿಸ್‌ಪ್ಲೇ 453 ಪಿಪಿಐ ಪಿಕ್ಸೆಲ್‌ ಸಾಂದ್ರತೆಯನ್ನು ಹೊಂದಿದ್ದು, HDR10+ ನೊಂದಿಗೆ ಬರಲಿದೆ. ಇದಲ್ಲದೆ ಡಿಸ್‌ಪ್ಲೇಯು 1400 ನಿಟ್ಸ್‌ ಬ್ರೈಟ್‌ನೆಸ್‌ ಲೆವೆಲ್‌ ಪಡೆದುಕೊಂಡಿರಲಿದೆ. ಜೊತೆಗೆ ಡಿಸ್‌ಪ್ಲೇಯು 144 Hz ರಿಫ್ರೆಶ್ ರೇಟ್‌ ಬೆಂಬಲಿಸಲಿದೆ ಎಂದು ವರದಿಯಾಗಿದೆ..

ಮುಂದಿನ ವಾರ ಟೆಕ್‌ ವಲಯದಲ್ಲಿ ಸಂಚಲನ ಗ್ಯಾರಂಟಿ! ಎಂಟ್ರಿ ಕೊಡಲಿವೆ ಈ ಫೋನ್‌ಗಳು!

ವಿವೋ V40 SE 5G, V30 SE, Y200e

ಈ ಫೋನ್‌ನ ನಂತೆಯೇ ಮುಂದಿನ ದಿನಗಳಲ್ಲಿ ವಿವೋ V40 SE 5G, V30 SE, Y200e ಸ್ಮಾರ್ಟ್‌ಫೋನ್‌ಗಳು ಸಹ ಅನಾವರಣ ಆಗಲಿವೆ. ಈ ಫೋನ್‌ಗಳ ಹೆಸರನ್ನು ಗೂಗಲ್‌ ಪ್ಲೇ ಡಿವೈಸ್‌ ಲಿಸ್ಟ್‌ನಲ್ಲಿ ಉಲ್ಲೇಖ ಮಾಡಲಾಗಿದೆ. ಇದರಿಂದ ಶೀಘ್ರದಲ್ಲೇ ಈ ಫೋನ್‌ಗಳು ಸಹ ಅನಾವರಣ ಆಗಲಿದೆ ಎಂದು ತೋರುತ್ತದೆ. .

ಹಾನರ್‌ X9b ಸ್ಮಾರ್ಟ್‌ಫೋನ್‌

ಹಾನರ್‌ ಫೆಬ್ರವರಿ 15 ರಂದು ಭಾರತದಲ್ಲಿ ಹಾನರ್‌ X9b ಸ್ಮಾರ್ಟ್‌ಫೋನ್ ಅನ್ನು ಬಿಡುಗಡೆ ಮಾಡುವುದನ್ನು ಖಚಿತಪಡಿಸಿದೆ. ಈ ಸ್ಮಾರ್ಟ್‌ಫೋನ್‌ ಕರ್ವ್ಡ್ ಡಿಸ್‌ಪ್ಲೇ ಮಾತ್ರವಲ್ಲದೆ ಭಾರತದ ಮೊದಲ ಅಲ್ಟ್ರಾ ಬೌನ್ಸ್ ಡಿಸ್‌ಪ್ಲೇ ಆಯ್ಕೆ ಪಡೆದಿರಲಿದೆ ಎಂದು ಹೇಳಲಾಗುತ್ತಿದೆ. ಅಷ್ಟೇ ಅಲ್ಲದೆ ಈ ಫೋನ್‌ ಏರ್‌ಬ್ಯಾಗ್‌ ತಂತ್ರಜ್ಞಾನದೊಂದಿಗೆ (Airbag technology) ಬರಲಿದೆ ಎಂದು ಕಂಪೆನಿ ಮಾಹಿತಿ ನೀಡಿದೆ.

ಈ ಫೋನ್‌ 6.78 ಇಂಚಿನ 1.5K ಕರ್ವ್ಡ್ ಅಮೋಲೆಡ್‌ ಡಿಸ್‌ಪ್ಲೇ ಮೂಲಕ ಬಳಕೆದಾರರಿಗೆ ಪ್ರೀಮಿಯಂ ಅನುಭವ ನೀಡಲಿದೆ. ಜೊತೆಗೆ ಸ್ನಾಪ್‌ಡ್ರಾಗನ್ 6 ಜನ್ 1 ಪ್ರೊಸೆಸರ್‌ ಹಾಗೂ 12GB RAM ಈ ಫೋನ್‌ನಲ್ಲಿ ದೊಡ್ಡ ಶಕ್ತಿಯುವ ಕೇಂದ್ರವಾಗಿರಲಿದೆ.

ನಥಿಂಗ್ ಫೋನ್ 2A

ನಥಿಂಗ್ ಫೋನ್ 2A ಸ್ಮಾರ್ಟ್‌ಫೋನ್‌ ಈಗಾಗಲೇ ಸ್ಮಾರ್ಟ್‌ಫೋನ್‌ ಮಾರುಕಟ್ಟೆಯಲ್ಲಿ ಭರ್ಜರಿಯಾಗಿ ಸೌಂಡ್‌ ಮಾಡುತ್ತಿದೆ. ಈ ಮೂಲಕ ಹೆಚ್ಚಿನ ನಿರೀಕ್ಷೆಗಳನ್ನು ಸೃಷ್ಟಿಸಿದೆ. ಯಾಕೆಂದರೆ ಈ ಫೋನ್ 6.7 ಇಂಚಿನ ಪುಲ್‌ ಹೆಚ್‌ಡಿ ಅಮೋಲೆಡ್‌ ಡಿಸ್‌ಪ್ಲೇಯೊಂದಿಗೆ ಕಾಣಿಸಿಕೊಳ್ಳಲಿದೆ ಎನ್ನಲಾಗಿದ್ದು, 120 Hz ರಿಫ್ರೆಶ್ ರೇಟ್ 1000 ನಿಟ್ಸ್‌ ಗರಿಷ್ಠ ಬ್ರೈಟ್‌ನೆಸ್‌ ಆಯ್ಕೆ ಪಡೆದುಕೊಂಡಿರಲಿದೆ.

ಜೊತೆಗೆ 240 Hz ಟಚ್ ಸ್ಯಾಂಪ್ಲಿಂಗ್ ರೇಟ್ ಅನ್ನು ಹೊಂದಿರಲಿದೆ ಎನ್ನಲಾಗಿದೆ. ಈ ಮೂಲಕ ಉತ್ತಮ ವೀಕ್ಷಣೆ ಅನುಭವ ನೀಡಲಿದೆ. ಮೀಡಿಯಾಟೆಕ್‌ ಡೈಮೆನ್ಸಿಟಿ 7200 ಪ್ರೊಸೆಸರ್‌ ಬಲದೊಂದಿಗೆ ಕಾಣಿಸಿಕೊಳ್ಳಲಿದೆ ಎಂದು ತಿಳಿದುಬಂದಿದ್ದು, ಈ ಚಿಪ್‌ಸೆಟ್ ಸುಧಾರಿತ ಕಾರ್ಯಕ್ಷಮತೆಯನ್ನು ನೀಡುತ್ತದೆ. ಇದರೊಂದಿಗೆ ಈ ಸ್ಮಾರ್ಟ್‌ಫೋನ್ ಗೇಮಿಂಗ್ ಪ್ರಿಯರಿಗೆ ಮೆಚ್ಚಿನ ಡಿವೈಸ್‌ ಆಗಿರಲಿದೆ ಎಂದು ಸೂಚಿಸಲಾಗಿದೆ.

Best Mobiles in India

English summary
Upcoming Smartphones In India: Smartphone Launch Dates, Specifications and Price Details in Kannada
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+