Home
ಸುದ್ದಿಜಾಲ

ಆಧಾರ್‌ನಲ್ಲಿ ಈ ಅಪ್ಡೇಟ್‌ ಮಾಡಿಸೋದು ಕಡ್ಡಾಯವೇ? ಇಲ್ಲಿದೆ ಸಂಪೂರ್ಣ ಮಾಹಿತಿ?

ಬ್ಯಾಂಕ್‌ ಖಾತೆಗೆ ಆಧಾರ್‌ ಲಿಂಕ್‌ ಮಾಡಿಸಿದ್ದೀರಾ? ನಿಮ್ಮ ಪ್ಯಾನ್‌ ನೊಂದಿಗೆ ಆಧಾರ್‌ ಲಿಂಕ್‌ ಮಾಡಿಸುವುದು ಕಡ್ಡಾಯ ಎಂಬ ಸರ್ಕಾರದ ಆದೇಶವಿದೆ. ಮುಂದಿನ ದಿನಗಳಲ್ಲಿ ಎಲ್ಲಾದಕ್ಕೂ ಆಧಾರ್‌ ಒಂದೇ ಪರಿಹಾರ ಎಂಬ ಆದೇಶ ಬಂದರೂ ಬರಬಹುದು. ಆದರಿಂದ ನೀವು ಆಧಾರ್‌ ಕಾರ್ಡ್‌ ಪಡೆದುಕೊಂಡು ಹತ್ತು ವರ್ಷ ಆಗಿದ್ದರೆ ಕೂಡಲೇ ಈ ಕೆಲಸವನ್ನು ಮಾಡಬೇಕಾಗುತ್ತದೆ.

ಹೌದು, ನೀವು ಆಧಾರ್‌ ಪಡೆದು ಹತ್ತು ವರ್ಷ ಆಗಿದ್ದರೆ ಕೂಡಲೇ ಆಧಾರ್‌ ಕಾರ್ಡ್‌ ಅಪ್ಡೇಟ್‌ ಮಾಡಿಸಬೇಕಾಗಿದೆ. ಏಕೆಂದರೆ ಮುಂದಿನ ದಿನಗಳಲ್ಲಿ ಇದು ಕಡ್ಡಾಯವಾಗುವ ಎಲ್ಲಾ ಸಾಧ್ಯತೆಗಳಿವೆ. ಪ್ರತಿಯೊಂದಕ್ಕು ಆಧಾರ್‌ ಕಡ್ಡಾಯವಾಗುತ್ತಿರುವುದರಿಂದ ನಿಮ್ಮ ಆಧಾರ್‌ ಅಪ್ಡೇಟ್‌ ಮಾಡಿಸುವುದು ಉತ್ತಮವಾಗಿದೆ. ಹಾಗಾದ್ರೆ ಆಧಾರ್‌ ಪಡೆದುಕೊಂಡು ಹತ್ತು ವರ್ಷ ಆಗಿದ್ದರೆ ಅಪ್ಡೇಟ್‌ ಮಾಡಿಸುವುದು ಕಡ್ಡಾಯನಾ? ಯಾಕೆ ಅಪ್ಡೇಟ್‌ ಮಾಡಿಸಬೇಕು? ಇದೆಲ್ಲದರ ಪರಿಪೂರ್ಣ ಮಾಹಿತಿಯನ್ನು ಈ ಲೇಖನದಲ್ಲಿ ತಿಳಿಸಿಕೊಡ್ತೀವಿ ಓದಿರಿ.

ಆಧಾರ್‌ನಲ್ಲಿ ಈ ಅಪ್ಡೇಟ್‌ ಮಾಡಿಸೋದು ಕಡ್ಡಾಯವೇ? ಇಲ್ಲಿದೆ ಸಂಪೂರ್ಣ ಮಾಹಿತಿ?

ಹತ್ತು ವರ್ಷಗಳ ಹಿಂದೆಯೇ ನೀವು ಆಧಾರ್‌ ಕಾರ್ಡ್‌ ಪಡೆದುಕೊಂಡಿದ್ದರೆ, ಅದನ್ನು ನೀವು ಅಪ್ಡೇಟ್‌ ಮಾಡಿಸಬೇಕು ಅಂತಾ ಭಾರತೀಯ ಗುರುತಿನ ಪ್ರಾಧಿಕಾರ (UIDAI) ಹೇಳಿದೆ. ಹಾಗಾದ್ರೆ ನೀವು ಆಧಾರ್‌ ಕಾರ್ಡ್‌ ಅಪ್ಡೇಟ್‌ ಮಾಡಿಸುವುದು ಕಡ್ಡಾಯನಾ? ಹಾಗಂತ ಆದೇಶವಿಲ್ಲ ನಿಜ, ಆದರೆ ಮುಂದಿನ ದಿನಗಳಲ್ಲಿ ಇದು ಕೂಡ ಕಡ್ಡಾಯವಾದರೆ ಅಚ್ಚರಿಯಿಲ್ಲ. ಏಕೆಂದರೆ ನೀವು ಹತ್ತುವರ್ಷಗಳ ಹಿಂದೆ ನೀಡಿದ ಮಾಹಿತಿಗೂ ಪ್ರಸ್ತುತ ಮಾಹಿತಿಗೂ ವ್ಯತ್ಯಾಸವಿದ್ದರೆ ಅದನ್ನು ಅಪ್ಡೇಟ್‌ ಮಾಡಬೇಕಿರುವುದು ಅತ್ಯಗತ್ಯವಾಗಿದೆ.

ಆದರಿಂದ ಭಾರತೀಯ ನಿವಾಸಿಗಳು ಸರ್ಕಾರಿ ಡೇಟಾಬೇಸ್‌ನಲ್ಲಿ ತಮ್ಮ ಮಾಹಿತಿಯ ನಿಖರತೆಯನ್ನು ಮುಂದುವರಿಸಲು ಆಧಾರ್‌ ಅಪ್ಡೇಟ್‌ ಮಾಡಿಸುವುದು ಅತ್ಯಗತ್ಯ ಎಂದು ಕೇಂದ್ರ ಸರ್ಕಾರ ಹೇಳಿದೆ. ಇದಕ್ಕಾಗಿ ಯುಐಡಿಎಐ ಕೂಡ ಆಧಾರ್‌ ಅಪ್ಡೇಟ್‌ಗೆ ಅವಕಾಶ ನೀಡಿದೆ. ಅದರಂತೆ ನೀವು ನಿಮ್ಮ ಆಧಾರ್‌ ಕಾರ್ಡ್‌ ಅಪ್ಡೇಟ್‌ ಮಾಡುವುದಕ್ಕೆ ಸೂಕ್ತ ದಾಖಲೆಗಳನ್ನು ನೀಡಬೇಕಾಗುತ್ತದೆ. ಇನ್ನು ನೀವು ಆಧಾರ್‌ ಅಪ್ಡೇಟ್‌ ಮಾಡುವುದಕ್ಕೆ ಯುಐಡಿಎಐ ನ ಅಧಿಕೃತ ವೆಬ್‌ಸೈಟ್‌ನಲ್ಲಿ ಮೈ ಆಧಾರ್‌ ಪೋರ್ಟಲ್‌ಗೆ ಬೇಟಿ ನೀಡಬೇಕಾಗುತ್ತದೆ. ಅಲ್ಲದೆ ಇದರಲ್ಲಿ ನಿಮ್ಮ ಡಾಕ್ಯುಮೆಂಟ್‌ಗಳನ್ನು ಅಪ್‌ಲೋಡ್‌ ಮಾಡುವ ಮೂಲಕ ಅಪ್ಡೇಟ್‌ ಮಾಡಬಹುದಾಗಿದೆ.

ಆಧಾರ್‌ನಲ್ಲಿ ಈ ಅಪ್ಡೇಟ್‌ ಮಾಡಿಸೋದು ಕಡ್ಡಾಯವೇ? ಇಲ್ಲಿದೆ ಸಂಪೂರ್ಣ ಮಾಹಿತಿ?

ಒಂದು ವೇಳೆ ನಿಮಗೆ ಆನ್‌ಲೈನ್‌ ಮೂಲಕ ಆಧಾರ್‌ ಅಪ್ಡೇಟ್‌ ಮಾಡಲ ಸಾಧ್ಯವಾಗದಿದ್ದಲ್ಲಿ ಆಧಾರ್‌ ಸೇವಾ ಕೇಂದ್ರಕ್ಕೆ ಬೇಟಿ ನೀಡುವ ಮೂಲಕ ಆಧಾರ್ ಅಪ್ಡೇಟ್‌ ಮಾಡಿಸಬಹುದು. ಇದಕ್ಕಾಗಿ ನೀವು ನಿಮ್ಮ ಆಧಾರ್ ವಿವರಗಳ ಜೊತೆಗೆ ಅಪ್ಡೇಟ್‌ಗೆ ಸಂಬಂಧಪಟ್ಟ ಅತ್ಯಗತ್ಯ ದಾಖಲೆಗಳನ್ನು ನೀಡಬೇಕಾಗುತ್ತದೆ. ನಿಮ್ಮ ಆಧಾರ್‌ ಅನ್ನು ನೀವು ಆನ್‌ಲೈನ್‌ ಪೋರ್ಟಲ್‌ ಮೂಲಕ ಅಪ್ಡೇಟ್‌ ಮಾಡಿದರೆ 25ರೂ.ಶುಲ್ಕ ಪಾವತಿಸಬೇಕಾಗುತ್ತದೆ. ಹಾಗೆಯೇ ಆಫ್‌ಲೈನ್ ಮೂಲಕ ನಿಮ್ಮ ಮಾಹಿತಿಯನ್ನು ಅಪ್‌ಡೇಟ್ ಮಾಡಿಸಿದರೆ 50ರೂ. ಶುಲ್ಕ ಪಾವತಿಸಬೇಕಾಗುತ್ತದೆ.

ಆಧಾರ್‌ನಲ್ಲಿ ಈ ಅಪ್ಡೇಟ್‌ ಮಾಡಿಸೋದು ಕಡ್ಡಾಯವೇ? ಇಲ್ಲಿದೆ ಸಂಪೂರ್ಣ ಮಾಹಿತಿ?

ಹತ್ತು ವರ್ಷ ಹಳೆಯ ಆಧಾರ್‌ನಲ್ಲಿ ಏನೆಲ್ಲಾ ವಿವರಗಳನ್ನು ಅಪ್ಡೇಟ್‌ ಮಾಡಿಸಬೇಕು?

ಇನ್ನು ನೀವು ಆಧಾರ್‌ ಪಡೆದು ಹತ್ತು ವರ್ಷ ಆಗಿದ್ದರೆ ನಿಮ್ಮ ಹೆಸರು, ವಿಳಾಸ, ಜನ್ಮ ದಿನಾಂಕ, ಲಿಂಗ, ಮೊಬೈಲ್ ಸಂಖ್ಯೆ, ಇಮೇಲ್ ವಿವರಗಳನ್ನು ಅಪ್ಡೇಟ್‌ ಮಾಡಬೇಕಾಗುತ್ತದೆ. ಜೊತೆಗೆ ನಿಮ್ಮ ಬಯೋಮೆಟ್ರಿಕ್ಸ್ ಅಂದರೆ ಬೆರಳಚ್ಚುಗಳು, ಐರಿಸ್ ಮತ್ತು ಫೋಟೋಗ್ರಾಫ್ ವಿವರಗಳನ್ನು ಕೂಡ ನೀವು ಅಪ್‌ಡೇಟ್ ಮಾಡಿಸಬೇಕಾಗುತ್ತದೆ.

ಆಧಾರ್‌ನಲ್ಲಿ ಈ ಅಪ್ಡೇಟ್‌ ಮಾಡಿಸೋದು ಕಡ್ಡಾಯವೇ? ಇಲ್ಲಿದೆ ಸಂಪೂರ್ಣ ಮಾಹಿತಿ?

ಆನ್‌ಲೈನ್‌ನಲ್ಲಿ ಆಧಾರ್ ಕಾರ್ಡ್ ಅಪ್‌ಡೇಟ್ ಮಾಡುವುದು ಹೇಗೆ?
* ಮೊದಲಿಗೆ UIDAI ನ ಅಧಿಕೃತ ವೆಬ್‌ಸೈಟ್ uidai.gov.in ಗೆ ಭೇಟಿ ನೀಡಿ
* 'ಮೈ ಆಧಾರ್' ಟ್ಯಾಬ್ ಟ್ಯಾಪ್ ಮಾಡಿ
* ನಂತರ 'ಅಪ್‌ಡೇಟ್ ಡೆಮೊಗ್ರಾಫಿಕ್ಸ್ ಡೇಟಾ ಮತ್ತು ಚೆಕ್ ಸ್ಟೇಟಸ್' ಮೇಲೆ ಕ್ಲಿಕ್ ಮಾಡಿ.
* ಇದೀಗ myaadhaar.uidai.gov.in/ ಗೆ ಮರುನಿರ್ದೇಶಿಸಲು. ನಿಮ್ಮ ಗುರುತಿನ ದಾಖಲೆಗಳನ್ನು ವೆಬ್‌ಸೈಟ್‌ಗೆ ಲಾಗಿನ್ ಮಾಡಿ.
* ನಂತರ ನಿಮ್ಮ ಆಧಾರ್ ಸಂಖ್ಯೆ, ಕ್ಯಾಪ್ಚಾ ಕೋಡ್ ಅನ್ನು ನಮೂದಿಸಿ.
* ಈಗ 'ಸೆಂಡ್ OTP' ಮೇಲೆ ಕ್ಲಿಕ್ ಮಾಡಿ.
* ನಂತರ ಒಟಿಪಿ ವೆಬ್ ಸೈಟ್‌ಗೆ ಲಾಗಿನ್ ಆಗಬೇಕು. ಆಮೇಲೆ 'ಅಪ್‌ಡೇಟ್‌ ಆಧಾರ್ ಆನ್‌ಲೈನ್' ಕ್ಲಿಕ್ ಮಾಡಿ.
* ಇದೀಗ ವೆಬ್‌ಸೈಟ್‌ನಲ್ಲಿ ಬರುವ ಸೂಚನೆಗಳನ್ನು ಅನುಸರಿಸುವ ಮೂಲಕ 'ಪ್ರೊಸಿಡ್' ಟು ಆಧಾರ್ ಅಪ್‌ಡೇಟ್' ಕ್ಲಿಕ್ ಮಾಡಿ.
* ನೀವು ಅಪ್‌ಡೇಟ್ ಮಾಡಲು ಬಯಸುವ ವಿವರಗಳ ಆಯ್ಕೆ ಕ್ಲಿಕ್ ಮಾಡಿ.
* ಇದೀಗ 'ಕಂಟಿನ್ಯೂ ಆಧಾರ್ ಅಪ್ಡೇಟ್‌ ' ಅನ್ನು ಕ್ಲಿಕ್ ಮಾಡಿ.
* ರಿಕ್ವೆಸ್ಟ್ ಸಲ್ಲಿಸಿ.
* ಇದಾದ ನಂತರ ಶುಲ್ಕ ಪಾವತಿ ಮಾಡಿ.
* ಶುಲ್ಕ ಪಾವತಿಸಿರುವುದಕ್ಕೆ ರಶೀದಿಯನ್ನು ತೆಗೆದುಕೊಳ್ಳಿರಿ.
* ನಿಮ್ಮ ಆಧಾರ್‌ ಇದೀಗ ಅಪ್ಡೇಟ್‌ ಆಗಿರಲಿದೆ.

Best Mobiles in India

English summary
Update your Aadhaar card made 10 years Back is it Mandatory.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+