Home
ಸುದ್ದಿಜಾಲ

ಆನ್‌ಲೈನ್‌ ಶಾಪಿಂಗ್‌ನಲ್ಲಿ ಹಣವನ್ನು ಮೊದಲೇ ನೀಡಬೇಕಾಗಿಲ್ಲ: ಬಂದಿದೆ UPI 2.0..!

By Srinidhi

ದೇಶದಲ್ಲಿ ನೋಟ ನಿ‍ಷೇಧದ ನಂತರದಲ್ಲಿ ಮೊಬೈಲ್ ಬ್ಯಾಂಕಿಂಗ್ ಹೆಚ್ಚಿನ ಪ್ರಮಾಣದಲ್ಲಿ ಬಳಕೆಯಾಗುತ್ತಿದೆ. ಡಿಜಿಟಲ್ ಇಂಡಿಯಾದಲ್ಲಿ ಸ್ಮಾರ್ಟ್‌ಫೋನ್ ಮೂಲಕವೇ ಬ್ಯಾಂಕ್ ವ್ಯವಹಾರವನ್ನು ನಡೆಸಲಾಗುತ್ತಿದೆ. ಇದೇ ಹಿನ್ನಲೆಯಲ್ಲಿ ನ್ಯಾಷಿನಲ್ ಪೇಮೆಂಟ್ ಕಾರ್ಪೋರೇಷನ್ ಆಫ್ ಇಂಡಿಯಾ UPI (ಯುನಿಫೈಡ್ ಪೇಮೆಂಟ್ ಇಂಟರ್ ಪೇಸ್) ಅನ್ನು ಲಾಂಚ್ ಮಾಡಿತ್ತು. ಇದರ ಬಳಕೆಯ ಸಹಾಯದಿಂದಲೇ ಎಲ್ಲಾ ಮಾದರಿಯ ಪೇಮೆಂಟ್ ಗಳು ಕಾರ್ಯನಿರ್ವಹಿಸುತ್ತಿವೆ ಎನ್ನಲಾಗಿದೆ.

ಆನ್‌ಲೈನ್‌ ಶಾಪಿಂಗ್‌ನಲ್ಲಿ ಹಣವನ್ನು ಮೊದಲೇ ನೀಡಬೇಕಾಗಿಲ್ಲ: ಬಂದಿದೆ UPI 2.0..!

ಈ ಹಿನ್ನಲೆಯಲ್ಲಿ ಬಳಕೆದಾರರಿಗೆ ಹೆಚ್ಚಿನ ಪ್ರಮಾಣದಲ್ಲಿ ಸೆಕ್ಯೂರ್ ಸೇವೆಯನ್ನು ನೀಡಲು ನ್ಯಾಷಿನಲ್ ಪೇಮೆಂಟ್ ಕಾರ್ಪೋರೇಷನ್ ಆಫ್ ಇಂಡಿಯಾ ಯುನಿಫೈಡ್ ಪೇಮೆಂಟ್ ಇಂಟರ್ ಪೇಸ್ (UPI) 2.0 ವನ್ನು ಬಿಡುಗಡೆ ಮಾಡಿದೆ. ಈ ಹಿಂದಿನ ಆವೃತ್ತಿಯಲ್ಲಿ ಇಲ್ಲದಂತಹ ಆಯ್ಕೆಗಳನ್ನು ಇದರಲ್ಲಿ ನೀಡುತ್ತಿದೆ ಎನ್ನಲಾಗಿದೆ. ಬಳಕೆದಾರರಿಗೆ ಅವಶ್ಯವಾಗಿದ್ದ ಆಯ್ಕೆಗಳನ್ನು ನೀಡುತ್ತಿದೆ. ಈ ಹಿನ್ನಲೆಯಲ್ಲಿ UPI 2.0 ಕುರಿತ ಹೆಚ್ಚಿನ ಮಾಹಿತಿ ಮುಂದಿದೆ.

ಓವರ್ ಡ್ರಾಫ್ಟ್ ಮತ್ತು ಡಿಜಿಟಲ್ ಕ್ರೆಡಿಟ್:

ನ್ಯಾಷಿನಲ್ ಪೇಮೆಂಟ್ ಕಾರ್ಪೋರೇಷನ್ ಆಫ್ ಇಂಡಿಯಾ UPI 2.0 ( ಯುನಿಫೈಡ್ ಪೇಮೆಂಟ್ ಇಂಟರ್ ಪೇಸ್) ವನ್ನು ಬಿಡುಗಡೆ ಮಾಡಿದ್ದು, ಇದರಲ್ಲಿ ಬಳಕೆದಾರರಿಗೆ ಓವರ್ ಡ್ರಾಫ್ಟ್ ಆಕೌಂಟ್ ಅನ್ನು ಲಿಂಕ್ ಮಾಡಿಕೊಳ್ಳುವ ಅವಕಾಶವನ್ನು ನೀಡಲಾಗಿದ್ದು, ತುರ್ತು ಸಂದರ್ಭದಲ್ಲಿ ಹಣವನ್ನು ತೆಗೆದುಕೊಳ್ಳಬಹುದಾಗಿದೆ.

ಇನ್‌ವೋಯಿಸ್ ನೋಡಬಹುದು:

ಪೇಮೆಂಟ್ ಮಾಡುವ ಮೊಲಿಗೆ ಯಾರಿಗೆ ಸೆಂಡ್ ಮಾಡುತ್ತಿದ್ದರಾ ಎಂಬುದನ್ನು ನೋಡುವ ಅವಕಾಶವನ್ನು ಮಾಡಿಕೊಡಲಿದೆ. ಇದು ಪೇಮೆಂಟ್ ಮಾಡುವ ಸಂದರ್ಭದಲ್ಲಿ ಸಹಾಯವನ್ನು ಮಾಡಲಿದೆ. ಆನ್‌ಲೈನ್‌ ಶಾಪಿಂಗ್ ಮಾಡುವವರಿಗೆ ಇದು ಸಹಾಯವಾಗಲಿದೆ.

ಫಂಡ್ ಬ್ಲಾಕ್ ಮಾಡಬಹುದು;

ಇದಲ್ಲದೇ ಹೊಸ ಆಯ್ಕೆಯಲ್ಲಿ ಬಳಕೆದಾರರಿಗೆ ತಾವು ಕಳುಹಿಸುವ ಹಣವನ್ನು ಬ್ಲಾಕ್ ಮಾಡುವ ಅವಕಾಶವನ್ನು ಮಾಡಿಕೊಡಲಾಗಿದೆ. ಅಂದ್ರೆ ವಸ್ತುವನ್ನು ಖರೀದಿಸಿದ ಸಂದರ್ಭದಲ್ಲಿ ಹಣವನ್ನು ಪಾವತಿ ಮಾಡಿ, ವಸ್ತು ಡೆಲಿವರಿ ಅದ ನಂತರದಲ್ಲಿ ಹಣವನ್ನು ರಿಲೀಸ್ ಮಾಡುವ ಅವಕಾಶವನ್ನು ಮಾಡಿಕೊಡಲಾಗಿದೆ.

QR ಕೋಡ್:

ಇದಲ್ಲದೇ QR ಕೋಡ್‌ಗಳ್ನು ಸ್ಕ್ಯಾನ್ ಮಾಡುವ ಅವಕಾಶವನ್ನು ನ್ಯಾಷಿನಲ್ ಪೇಮೆಂಟ್ ಕಾರ್ಪೋರೇಷನ್ ಆಫ್ ಇಂಡಿಯಾ UPI 2.0 ( ಯುನಿಫೈಡ್ ಪೇಮೆಂಟ್ ಇಂಟರ್ ಪೇಸ್) ನಲ್ಲಿ ಮಾಡಿಕೊಡಲಾಗಿದೆ. ಇದರಿಂದಾಗಿ ನಿಮ್ಮ ಪೇಮೆಂಟ್ ಇನ್ನಷ್ಟು ಸುಲಭವಾಗಲಿದೆ.

Best Mobiles in India

English summary
UPI 2.0 Has Been Launched By NPCI: Checkout 4 Stunning Features!. to know more visit kannada.gizbot.com
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+