Home
ಸುದ್ದಿಜಾಲ

'ಯುಪಿಐ 2.0' ರಿಲೀಸ್!...ಈಗ ಮೊಬೈಲ್‌ನಲ್ಲೇ ಏನೆಲ್ಲಾ ಮಾಡಬಹುದು ಗೊತ್ತಾ?!

By Bhaskar N J

ಗ್ರಾಹಕರ ಬೇಡಿಕೆಗಳಿಗೆ ಅನುಗುಣವಾಗಿ ಮತ್ತು ಅವರ ಅನುಕೂಲಕ್ಕೆ ತಕ್ಕಂತಹ ಕೆಲವು ಮಹತ್ವದ ಬದಲಾವಣೆಗಳನ್ನು ಹೊತ್ತು ಸರ್ಕಾರದಿಂದ ಬಿಡುಗಡೆಯಾಗಿರುವ ಯುಪಿಐ 2.0 ಹಣದ ವಹಿವಾಟನ್ನು ಮತ್ತಷ್ಟು ಸರಾಗಗೊಳಿಸಿದೆ. ಬ್ಯಾಂಕ್‌ಗೆ ತೆರಳಿಯೇ ಮಾಡಬೇಕಾಗಿದ್ದ ವಹಿವಾಟುಗಳನ್ನು ಈಗ ಕೇವಲ ಮೊಬೈಲ್ ಮೂಲಕವೇ ನಡೆಯಲು ಇದು ಹೆಚ್ಚು ಬೆಂಬಲ ನೀಡುತ್ತಿದೆ.

ಹೌದು, ಡಿಜಿಟಲ್ ಇಂಡಿಯಾದಲ್ಲಿ ಸ್ಮಾರ್ಟ್‌ಫೋನ್ ಮೂಲಕವೇ ಬ್ಯಾಂಕ್ ವ್ಯವಹಾರವನ್ನು ನಡೆಸಲು UPI (ಯುನಿಫೈಡ್ ಪೇಮೆಂಟ್ ಇಂಟರ್ ಪೇಸ್) ಅನ್ನು ಲಾಂಚ್ ಮಾಡಿದ್ದ ನ್ಯಾಷಿನಲ್ ಪೇಮೆಂಟ್ ಕಾರ್ಪೋರೇಷನ್ ಆಫ್ ಇಂಡಿಯಾ ಈಗ ಯುಪಿಐ 2.0 ಅನ್ನು ಬಿಡುಗಡೆ ಮಾಡಿದೆ. ಇದರ ಬಳಕೆಯ ಸಹಾಯದಿಂದ ಬ್ಯಾಂಕ್ ಈಗ ಮೊಬೈಲ್‌ನಲ್ಲಿಯೇ ಸೇರಿಕೊಂಡಿವೆ.

 'ಯುಪಿಐ 2.0' ರಿಲೀಸ್!...ಈಗ ಮೊಬೈಲ್‌ನಲ್ಲೇ ಏನೆಲ್ಲಾ ಮಾಡಬಹುದು ಗೊತ್ತಾ?!

ದೊಡ್ಡ ವಹಿವಾಟುದಾರರಿಗೆ ಖಂಡಿತ ಯುಪಿಎ 2.0 ಬಹಳ ಸಹಕಾರವನ್ನು ನೀಡುವುದರಲ್ಲಿ ಯಾವುದೇ ಅನುಮಾನವಿಲ್ಲ ಎನ್ನಬಹುದಾಗಿದ್ದು, . ಯುನಿಫೈಡ್ ಪೇಮೆಂಟ್ ಇಂಟರ್ಫೇಸ್ನ ಹೊಸ ಮತ್ತು ಸುಧಾರಿತ ಆವೃತ್ತಿ ಯುಪಿಐ 2.0 ನಿಂದ ಮೊಬೈಲ್ ಬ್ಯಾಂಕಿಂಗ್ ಬಳಕೆದಾರರಿಗೆ ಏನೆಲ್ಲಾ ಲಾಭಗಳಿವೆ? ಇದರ ಹೆಚ್ಚಿನ ಉಪಯೋಗಗಳೇನು ಎಂಬುದನ್ನು ಮುಂದೆ ತಿಳಿಯಿರಿ.

ಓವರ್ ಡ್ರಾಫ್ಟ್ ಮೂಲಕ ಹಣ ಸಂದಾಯಕ್ಕೆ ಅವಕಾಶ

ಓವರ್ ಡ್ರಾಫ್ಟ್ ಮೂಲಕ ಹಣ ಸಂದಾಯಕ್ಕೆ ಅವಕಾಶ

ಇದುವರೆಗೆ ಯುಪಿಎ ನಲ್ಲಿ ಕೇವಲ ಬ್ಯಾಂಕ್ ನ ಕರೆಂಟ್ ಅಕೌಂಟ್ ಗಳನ್ನು ಮಾತ್ರ ವ್ಯವಹಾರಕ್ಕೆ ಬಳಸುವ ಅವಕಾಶವಿರುತ್ತಿತ್ತು. ಆದರೆ ಓವರ್ ಡ್ರಾಫ್ಟ್ ಅಕೌಂಟ್ ಗಳನ್ನು ಬಳಸಲು ಅನುಮತಿ ಇರಲಿಲ್ಲ. ಯುಪಿಎ 2.0 ಅದಕ್ಕೂ ಅನುಮತಿ ನೀಡಲಿದ್ದು, ಬಳಕೆದಾರರು ತಮ್ಮ ಓಡಿ ಅಕೌಂಟ್ ಮೂಲಕ ಪಾವತಿ ಮಾಡಲು ಅವಕಾಶ ನೀಡಲಾಗಿದೆ.

ನೋಡಬಹುದು

ನೋಡಬಹುದು

ಪೇಮೆಂಟ್ ಮಾಡುವ ಮೊದಲಿಗೆ ನೀವು ಯಾರಿಗೆ ಸೆಂಡ್ ಮಾಡುತ್ತಿದ್ದರಾ ಎಂಬುದನ್ನು ನೋಡುವ ಅವಕಾಶವನ್ನು ಈ ಅಪ್‌ಡೇಟ್ ವರ್ಷನ್ ಯುಪಿಐ 2.0 ಮಾಡಿಕೊಡಲಿದೆ. ಇದು ಪೇಮೆಂಟ್ ಮಾಡುವ ಸಂದರ್ಭದಲ್ಲಿ ಸಹಾಯವನ್ನು ಮಾಡಲಿದೆ. ಆನ್‌ಲೈನ್‌ ಶಾಪಿಂಗ್ ಮಾಡುವವರಿಗೆ ಇದು ಸಹಾಯವಾಗಲಿದೆ. ಇದು ನಿಜಕ್ಕೂ ಸ್ವಾಗತಾರ್ಹ ಅವಕಾಶವಿದ್ದು, ಗ್ರಾಹಕ ಮತ್ತು ವ್ಯವಹಾರಸ್ಥರ ನಡುವಿನ ಹಣಕಾಸು ವಹಿವಾಹಿಗೆ ಹೆಚ್ಚು ಬೆಂಬಲವನ್ನು ನೀಡುತ್ತದೆ.

ವಹಿವಾಟಿನ ಮಿತಿ 2 ಲಕ್ಷಕ್ಕೆ ಏರಿಕೆ

ವಹಿವಾಟಿನ ಮಿತಿ 2 ಲಕ್ಷಕ್ಕೆ ಏರಿಕೆ

ಹಣಕಾಸಿನ ಹಿವಾಟಿನ ಮಿತಿಯನ್ನು ದುಪ್ಪಟ್ಟು ಮಾಡಿ 2 ಲಕ್ಷ ರುಪಾಯಿಗೆ ಹೆಚ್ಚಿಸುವುದು ಮತ್ತು ಯುಪಿಐ ಗೆ ಓಡಿ(ಓವರ್ ಡ್ರಾಫ್ಟ್) ಅಕೌಂಟನ್ನು ಲಿಂಕ್ ಮಾಡುವ ಸಾಮರ್ಥ್ಯವನ್ನು ಯುಪಿಐ 2.0 ವರ್ಷನ್ ನಲ್ಲಿ ಸೇರಿಸಲಾಗಿದೆ.ಬ ಆಧಾರ್ ಆಧಾರಿತ ಪೇಮೆಂಟ್ ವೈಶಿಷ್ಟ್ಯವು ಕೆಲವು ಗೌಪ್ಯತೆಯ ಹಿತದೃಷ್ಟಿಯಿಂದ ಹಿಂತೆಗೆದುಕೊಳ್ಳುವ ಬಗ್ಗೆ ನಿರೀಕ್ಷೆ ನಿಜವಾಗಿದೆ.

ಫಂಡ್ ಬ್ಲಾಕ್ ಮಾಡಬಹುದು

ಫಂಡ್ ಬ್ಲಾಕ್ ಮಾಡಬಹುದು

ಯುಪಿಐ 2.0 ವರ್ಷನ್ ನಲ್ಲಿರುವ ಹೊಸ ಆಯ್ಕೆಯಲ್ಲಿ ಬಳಕೆದಾರರಿಗೆ ತಾವು ಕಳುಹಿಸುವ ಹಣವನ್ನು ಬ್ಲಾಕ್ ಮಾಡುವ ಅವಕಾಶವನ್ನು ಮಾಡಿಕೊಡಲಾಗಿದೆ. ಅಂದರೆ, ನೀವು ಯಾವುದೇ ವಸ್ತುವನ್ನು ಖರೀದಿಸಿದ ಸಂದರ್ಭದಲ್ಲಿ ಹಣವನ್ನು ಪಾವತಿ ಮಾಡಬೇಕು. ಆದರೆ, ಆ ವಸ್ತು ನಿಮಗೆ ಡೆಲಿವರಿ ಅದ ನಂತರ ನೀವು ಹಣವನ್ನು ರಿಲೀಸ್ ಮಾಡುವ ಅವಕಾಶವನ್ನು ಈ ಆಪ್‌ನಲ್ಲಿ ಮಾಡಿಕೊಡಲಾಗಿದೆ.

ಪಿ2ಎಮ್ ವಹಿವಾಹಿಗೆ ಆದ್ಯತೆ

ಪಿ2ಎಮ್ ವಹಿವಾಹಿಗೆ ಆದ್ಯತೆ

ಒಟ್ಟಾರೆ, ಯುಪಿಐ 2.0 ತನ್ನ ಮೊದಲ ವರ್ಷನ್ ಗಿಂತ ಹೆಚ್ಚು ಗಮನಾರ್ಹ ಬದಲಾವಣೆಗಳನ್ನು ಹೊಂದಿದೆ. ಪಿ2ಎಮ್ ವಹಿವಾಹಿಗೆ ಆದ್ಯತೆ ನೀಡಲಾಗಿದ್ದು, ಪಿ2ಎಮ್ ವಹಿವಾಟು ಅಂದರೆ ವ್ಯಕ್ತಿ ಮತ್ತು ವ್ಯಾಪಾರಿ ವಹಿವಾಹಿನ ಮೇಲೆ ಹೆಚ್ಚು ಗಮನವನ್ನು ಕೇಂದ್ರೀಕರಿಸುವ ನಿರೀಕ್ಷೆ ಇದೆ.

ಸ್ಟ್ಯಾಂಡಿಂಗ್ ಇನ್ಸ್ಟ್ರಕ್ಷನ್ ಗೆ ಗುಡ್ ಬಾಯ್

ಸ್ಟ್ಯಾಂಡಿಂಗ್ ಇನ್ಸ್ಟ್ರಕ್ಷನ್ ಗೆ ಗುಡ್ ಬಾಯ್

ಬಳಕೆದಾರರಿಗೆ ಯುಪಿಐ ಮುಖಾಂತರ ಸ್ವಯಂಚಾಲಿತ ಪಾವತಿ ಆದೇಶಕ್ಕೆ ಅವಕಾಶ ನೀಡುತ್ತದೆ, ಇದು ಮಾಸಿಕ ಚಂದಾದಾರಿಕೆಯ ಸೇವೆಗಳು ಮತ್ತು ಇತರ ಸೇವೆಗಳನ್ನು ಏಕಕಾಲದ ದೃಢೀಕರಣದ ಮೂಲಕ ಮಾಡಬಹುದಾಗಿದೆ. ಆರ್‌ಬಿಐ ಆದೇಶದ ಮೇರೆಗೆ ಈ ಸೇವೆಯನ್ನು ಈ ಬಾರಿ ತೆಗೆದುಹಾಕಲಾಗಿದೆ ಎಂದು ಹೇಳಲಾಗುತ್ತಿದೆ.

QR ಕೋಡ್ ಆಯ್ಕೆ

QR ಕೋಡ್ ಆಯ್ಕೆ

ಇದಲ್ಲದೇ QR ಕೋಡ್‌ಗಳ್ನು ಸ್ಕ್ಯಾನ್ ಮಾಡುವ ಅವಕಾಶವನ್ನು ನ್ಯಾಷಿನಲ್ ಪೇಮೆಂಟ್ ಕಾರ್ಪೋರೇಷನ್ ಆಫ್ ಇಂಡಿಯಾ UPI 2.0 ( ಯುನಿಫೈಡ್ ಪೇಮೆಂಟ್ ಇಂಟರ್ ಪೇಸ್) ನಲ್ಲಿ ಮಾಡಿಕೊಡಲಾಗಿದೆ. ಇದರಿಂದಾಗಿ ನಿಮ್ಮ ಪೇಮೆಂಟ್ ಇನ್ನಷ್ಟು ಸುಲಭವಾಗಲಿದೆ. ಈಗ UPI 2.0 ಖಾಸಾಗಿ ಕಂಪೆನಿಗಳ ಪೇಮೆಂಟ್ ಆಪ್‌ಗಳಿಗಿಂತ ಶಕ್ತಿಶಾಲಿಯಾದ ಮತ್ತು ಉಪಯೋಗಕಾರಿಯಾದ ಆಪ್ ಆಗಿದೆ.

Best Mobiles in India

English summary
A new feature of UPI could be used where money has to be transferred later by providing commitment at present. Customers can pre-authorise a transaction and pay at a later date. to know more visit to kannada.gizbot.com
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+