ಯುಪಿಐ ಲೈಟ್‌ ಮೂಲಕ ಇಂಟರ್‌ನೆಟ್‌ ಇಲ್ಲದಿರುವಾಗಲೂ ಕಡಿಮೆ ಮೊತ್ತದ ಹಣ ಸೆಂಡ್‌ ಮಾಡಿ!

|

ಪ್ರಸ್ತುತ ದಿನಗಳಲ್ಲಿ ಡಿಜಿಟಲ್‌ ಪಾವತಿ ವ್ಯವಸ್ಥೆ ಸಾಕಷ್ಟು ಜನಪ್ರಿಯತೆ ಪಡೆದುಕೊಂಡಿದೆ. ಇದೇ ಕಾರಣಕ್ಕೆ ಯುಪಿಐ ಪಾವತಿ ಆಧಾರಿತ ಅಪ್ಲಿಕೇಶನ್‌ಗಳನ್ನು ಪ್ರಸಿದ್ಧಿ ಪಡೆದುಕೊಂಡಿವೆ. ಸದ್ಯ ಇದೀಗ ಆಫಲೈನ್‌ ಮೋಡ್‌ನಲ್ಲಿ ಕಡಿಮೆ ಮೌಲ್ಯದ ವಹಿವಾಟುಗಳನ್ನು ನಡೆಸುವುದಕ್ಕೆ ಅವಕಾಶ ಸಿಗಲಿದೆ. ಇದಕ್ಕಾಗಿ ಯುಪಿಐ ಲೈಟ್‌ ಅನ್ನು ಪರಿಚಯಿಸಲಾಗಿದೆ. UPI ನಲ್ಲಿ ಬಳಕೆದಾರರಿಗೆ ಆನ್-ಡಿವೈಸ್ ವ್ಯಾಲೆಟ್ ಆಯ್ಕೆಯಾಗಿ UPI ಲೈಟ್ ಅನ್ನು ಸೆಟ್‌ ಮಾಡಲಾಗಿದೆ. ಇದರ ಮೂಲಕ ನೀವು ಆಫ್‌ಲೈನ್‌ನಲ್ಲಿ ಇದ್ದಾಗಲೂ ಕಡಿಮೆ ಮೊತ್ತದ ಹಣವನ್ನು ಬೇರೆಯವರಿಗೆ ಕಳುಹಿಸಬಹುದಾಗಿದೆ.

ಆಫ್‌ಲೈನ್‌

ಹೌದು, ನ್ಯಾಷನಲ್ ಪೇಮೆಂಟ್ಸ್ ಕಾರ್ಪೊರೇಷನ್ ಆಫ್ ಇಂಡಿಯಾ (NPCI) ಆಫ್‌ಲೈನ್‌ ಮೋಡ್‌ ನಲ್ಲಿ ಹಣಕಳುಹಿಸುವುದಕ್ಕೆ ಅವಕಾಶ ನೀಡುತ್ತಿದೆ. ಇದಕ್ಕಾಗಿ ಯುಪಿಐ ಲೈಟ್‌ ಪ್ರಾರಂಭಿಸಲು ಮುಂದಾಗಿದೆ. ಇದರ ಬಗ್ಗೆ ಈಗಾಗಲೇ ತನ್ನ ಸದಸ್ಯ ಬ್ಯಾಂಕ್‌ಗಳಿಗೆ ಮಾಹಿತಿ ನೀಡಿದೆ. ಇದು ಪೇಟಿಎಂ ಸೇರಿದಂತೆ ಇತರ ಮೊಬೈಲ್ ವ್ಯಾಲೆಟ್‌ಗಳಿಗೆ ಸಮನಾಗಿ ಕಾರ್ಯನಿರ್ವಹಿಸಲಿದೆ. ಹಾಗಾದ್ರೆ ಯುಪಿಐ ಲೈಟ್‌ ಮೂಲಕ ಹಣಕಳುಹಿಸುವುದು ಹೇಗೆ ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತೀವಿ ಓದಿರಿ.

UPI

UPI ಅಪ್ಲಿಕೇಶನ್‌ಗಳನ್ನು ಬಳಸುವ ಬಳಕೆದಾರರು ಆಫ್‌ಲೈನ್ ಮೋಡ್‌ನಲ್ಲಿ ಸಣ್ಣ-ಮೌಲ್ಯದ ವಹಿವಾಟುಗಳನ್ನು ನಡೆಸಬಹುದು. ಇದಕ್ಕಾಗಿ UPI ಲೈಟ್ ಅನ್ನು ಸಕ್ರಿಯಗೊಳಿಸುವ ಆಯ್ಕೆಯನ್ನು ಹೊಂದಿರುತ್ತಾರೆ ಎಂದು NPCI ತನ್ನ ಸದಸ್ಯ ಬ್ಯಾಂಕ್‌ಗಳಿಗೆ ಕಳುಹಿಸಿರುವ ಸುತ್ತೋಲೆಯಲ್ಲಿ ತಿಳಿಸಿದೆ. ಯುಪಿಐ ಲೈಟ್‌ ಅನ್ನು ಒಮ್ಮೆ ಸಕ್ರಿಯಗೊಳಿಸಿದರೆ, ಬಳಕೆದಾರರು ತಮ್ಮ ಬ್ಯಾಂಕ್ ಖಾತೆಯಿಂದ UPI ಲೈಟ್‌ ವ್ಯಾಲೆಟ್‌ನಲ್ಲಿ ಹಣವನ್ನು ನಿಯೋಜಿಸಲು ಸಾಧ್ಯವಾಗುತ್ತದೆ. ಈ ಹಣವನ್ನು ನೀವು ಆಫ್‌ಲೈನ್‌ನಲ್ಲಿ ವಹಿವಾಟುಗಳನ್ನು ಮಾಡುವುದಕ್ಕೆ ಬಳಸಬಹುದಾಗಿದೆ.

ಆಫ್‌ಲೈನ್

ಇನ್ನು ಮೊದಲ ಹಂತದಲ್ಲಿ, UPI ಲೈಟ್ ಹತ್ತಿರದ ಆಫ್‌ಲೈನ್ ಮೋಡ್‌ನಲ್ಲಿ ವಹಿವಾಟುಗಳನ್ನು ಪ್ರಕ್ರಿಯೆಗೊಳಿಸುತ್ತದೆ. ಅಂದರೆ ಇದು ಆಫ್‌ಲೈನ್ ಮೋಡ್‌ನಲ್ಲಿ ಮಾತ್ರ ಪಾವತಿಗಳನ್ನು ಡೆಬಿಟ್ ಮಾಡುತ್ತದೆ. ಆದರೆ ಆನ್‌ಲೈನ್‌ನಲ್ಲಿ ಖಾತೆಯನ್ನು ಕ್ರೆಡಿಟ್ ಮಾಡುತ್ತದೆ. ಆದಾಗ್ಯೂ, NPCI ನಂತರದ ಹಂತದಲ್ಲಿ, UPI ಲೈಟ್ ಕಂಪ್ಲಿಟ್‌ ಆಫ್‌ಲೈನ್ ಮೋಡ್‌ನಲ್ಲಿ ವಹಿವಾಟುಗಳನ್ನು ಪ್ರಕ್ರಿಯೆಗೊಳಿಸುತ್ತದೆ. ಇದರಲ್ಲಿ ಡೆಬಿಟ್ ಮತ್ತು ಕ್ರೆಡಿಟ್ ಎರಡೂ ಕೂಡ ಆಫ್‌ಲೈನ್‌ನಲ್ಲಿ ಲಭ್ಯವಾಗಲಿದೆ. ಇನ್ನು ಈ UPI ಲೈಟ್ ಪಾವತಿ ವಹಿವಾಟಿನ ಮೇಲಿನ ಮಿತಿಯನ್ನು 200ರೂ,ಆಗಿದೆ. ಆದರೆಆನ್-ಡಿವೈಸ್ ವ್ಯಾಲೆಟ್‌ಗೆ ಬ್ಯಾಲೆನ್ಸ್‌ನ ಒಟ್ಟು ಮಿತಿ 2,000ರೂ.ಗಳ ತನಕ ಇದೆ ಎನ್ನಲಾಗಿದೆ.

UPI

ಇದಲ್ಲದೆ ಬಳಕೆದಾರರಿಗೆ ತಮ್ಮ UPI ಅಪ್ಲಿಕೇಶನ್‌ಗಳಿಂದ ಯಾವುದೇ ಸಮಯದಲ್ಲಿ UPI ಲೈಟ್ ಸೇವೆಗಳನ್ನು ನಿಷ್ಕ್ರಿಯಗೊಳಿಸುವ ಸಾಮರ್ಥ್ಯವನ್ನು ನೀಡಲಾಗುತ್ತದೆ. ಈ ವಾಲೆಟ್ ಅನ್ನು ನಿಷ್ಕ್ರಿಯಗೊಳಿಸಿದಾಗ, ಬ್ಯಾಲೆನ್ಸ್ ಫಂಡ್ ಅನ್ನು ಬಳಕೆದಾರರ ಖಾತೆಗೆ ಹಿಂತಿರುಗಿಸಲಾಗುವ ಸೇವೆ ಕೂಡ ಲಭ್ಯವಿದೆ. ಹಾಗೆಯೇ UPI ಲೈಟ್‌ನಲ್ಲಿ ನೀವು ನಡೆಸುವ ವಹಿವಾಟಿನ ವಿವರಗಳು UPI ಅಪ್ಲಿಕೇಶನ್‌ನ ವಹಿವಾಟು ಹಿಸ್ಟರಿ ಪೇಜ್‌ನಲ್ಲಿ ಕಾಣಬಹುದಾಗಿದೆ. NPCI ಪ್ರಕಾರ, ಲಭ್ಯವಿರುವ ಬ್ಯಾಲೆನ್ಸ್ ಅನ್ನು UPI ಅಪ್ಲಿಕೇಶನ್‌ನ ಮೇನ್‌ಪೇಜ್‌ನಲ್ಲಿ ಬಳಕೆದಾರರಿಗೆ ಪ್ರದರ್ಶಿಸಲಾಗುತ್ತದೆ. ಸದ್ಯ UPI ಲೈಟ್ ಯಾವಾಗ ಬಳಕೆಗೆ ಲಭ್ಯವಾಗಲಿದೆ ಎಂಬುದರ ಬಗ್ಗೆ ಯಾವುದೇ ನಿಖರವಾದ ಮಾಹಿತಿ ಲಭ್ಯವಾಗಿಲ್ಲ.

Best Mobiles in India

English summary
UPI Lite to Debut in India to help enable small-value transactions in offline mode

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X