ಫೋನಿನಲ್ಲಿ ಇಂಟರ್ನೆಟ್‌ ಇಲ್ಲದಿದ್ದರೂ ಹಣ ವರ್ಗಾವಣೆ ಮಾಡುವುದು ಹೇಗೆ ಗೊತ್ತಾ?

By Gizbot Bureau
|

ಫೇಸ್‌ಬುಕ್, ಇನ್‌ಸ್ಟಾಗ್ರಾಮ್ ಮತ್ತು ವಾಟ್ಸಪ್‌ ಆಪ್‌ಗಳು ಜಾಗತಿಕ ಕುಸಿತವು ಬಳಕೆದಾರರನ್ನು ದಿಗ್ಭ್ರಮೆಗೊಳಿಸಿತು. ಜನರು ದಿನಕ್ಕೆ ಹಲವಾರು ಬಾರಿ ಬಳಸುವ ಆಪ್‌ಗಳಿಲ್ಲದೆ ಬದುಕುವ ದುಃಸ್ವಪ್ನದ ಬಗ್ಗೆ ಯೋಚಿಸುವಂತೆ ಮಾಡಿತು. ಸಾಮಾಜಿಕ ಮಾಧ್ಯಮ ಅಪ್ಲಿಕೇಶನ್‌ಗಳ ಹೊರತಾಗಿ, ನಮ್ಮಲ್ಲಿ ಹೆಚ್ಚಿನವರು ಆಗಾಗ್ಗೆ ಪಾವತಿ ಅಪ್ಲಿಕೇಶನ್‌ಗಳನ್ನು ಬಳಸುತ್ತಾರೆ. ಗೂಗಲ್ ಪೇ, ಫೋನ್ ಪೇ, ಪೇಟಿಎಮ್ ಮತ್ತು ಇಂತಹ ಹಲವು ಆಪ್‌ಗಳನ್ನು ನಮ್ಮಲ್ಲಿ ಹೆಚ್ಚಿನವರ ಸ್ಮಾರ್ಟ್‌ಫೋನ್‌ಗಳಲ್ಲಿ ಕಾಣಬಹುದು. ಆದರೆ ಇಂಟರ್ನೆಟ್ ಲಭ್ಯವಿಲ್ಲದಿದ್ದಾಗ ಏನಾಗುತ್ತದೆ?

ಈ ರೀತಿಯ ಪರಿಸ್ಥಿತಿಯಲ್ಲಿ ನೀವು ಯಾವುದೇ ಸಮಸ್ಯೆಗಳನ್ನು ಎದುರಿಸುವುದಿಲ್ಲ ಎಂದು ಖಚಿತಪಡಿಸಿಕೊಳ್ಳಲು, ನೀವು ಭೀಮ್ ಆಪ್‌ನಲ್ಲಿ ಒಂದು ಬಾರಿ ನೋಂದಣಿ ಪ್ರಕ್ರಿಯೆಯನ್ನು ಪೂರ್ಣಗೊಳಿಸಬೇಕಾಗುತ್ತದೆ. ಇದರ ನಂತರ, ನವೆಂಬರ್ 2012 ರಲ್ಲಿ ನ್ಯಾಷನಲ್ ಪೇಮೆಂಟ್ಸ್ ಕಾರ್ಪೊರೇಶನ್ ಆಫ್ ಇಂಡಿಯಾ (NPCI) ಪರಿಚಯಿಸಿದ *99# ಸೇವೆಯ ಮೂಲಕ ನೀವು ಆಫ್‌ಲೈನ್ UPI ವಹಿವಾಟುಗಳನ್ನು ಮಾಡಲು ಸಾಧ್ಯವಾಗುತ್ತದೆ. ಈ ಸೇವೆಯನ್ನು ಸ್ಮಾರ್ಟ್‌ಫೋನ್ ಅಲ್ಲದ ಬಳಕೆದಾರರು ಕೂಡ ಪಡೆಯಬಹುದು. ಈ ಸೇವೆಯನ್ನು ಬಳಸಲು ನೀವು ನಿಮ್ಮ ಫೋನಿನಲ್ಲಿ ನೋಂದಾಯಿತ ಸಂಖ್ಯೆಯ ಸಿಮ್ ಕಾರ್ಡ್ ಮತ್ತು ಸಾಕಷ್ಟು ಬ್ಯಾಂಕ್ ಬ್ಯಾಲೆನ್ಸ್ ಹೊಂದಿರಬೇಕು.

ಫೋನಿನಲ್ಲಿ ಇಂಟರ್ನೆಟ್‌ ಇಲ್ಲದಿದ್ದರೂ ಹಣ ವರ್ಗಾವಣೆ ಮಾಡುವುದು ಹೇಗೆ ಗೊತ್ತಾ?

ಆಫ್‌ಲೈನ್ ಯುಪಿಐ ವಹಿವಾಟು ನಡೆಸಲು ಈ ಹಂತಗಳನ್ನು ಫಾಲೋ ಮಾಡಿರಿ:

1 ನಿಮ್ಮ ಫೋನಿನ ಡಯಲ್ ಪ್ಯಾಡ್‌ನಲ್ಲಿ (*99#) ಎಂದು ಟೈಪ್ ಮಾಡಿ ಮತ್ತು ಕರೆ ಬಟನ್ ಒತ್ತಿರಿ.

2 ನಿಮ್ಮ ಪರದೆಯಲ್ಲಿ ನೀವು ಏಳು ಆಯ್ಕೆಗಳನ್ನು ನೋಡುತ್ತೀರಿ -ಹಣ ಕಳುಹಿಸಿ, ಹಣವನ್ನು ಸ್ವೀಕರಿಸಿ, ಬ್ಯಾಲೆನ್ಸ್ ಪರಿಶೀಲಿಸಿ. ನನ್ನ ಪ್ರೊಫೈಲ್, ಬಾಕಿ ಇರುವ ವಿನಂತಿಗಳು, ವಹಿವಾಟುಗಳು ಮತ್ತು UPI ಪಿನ್.

3 ಹಣವನ್ನು ಕಳುಹಿಸಲು, ನಿಮ್ಮ ಡಯಲ್ ಪ್ಯಾಡ್ ಮೇಲೆ 1 ಒತ್ತುವ ಮೂಲಕ ನೀವು ಪ್ರತ್ಯುತ್ತರಿಸಬಹುದು. ನಿಮ್ಮ ಮೊಬೈಲ್ ಸಂಖ್ಯೆ, ಯುಪಿಐ ಐಡಿ ಅಥವಾ ಬ್ಯಾಂಕ್ ಖಾತೆ ಸಂಖ್ಯೆ ಮತ್ತು ಐಎಫ್‌ಎಸ್‌ಸಿ ಕೋಡ್ ಬಳಸಿ ಹಣವನ್ನು ವರ್ಗಾಯಿಸಲು ಇದು ನಿಮ್ಮನ್ನು ಅನುಮತಿಸುತ್ತದೆ

4 ಒಮ್ಮೆ ನೀವು ಆಯ್ಕೆಯನ್ನು ಆರಿಸಿದರೆ ನೀವು ಮೊಬೈಲ್ ಸಂಖ್ಯೆ, ಯುಪಿಐ ಐಡಿ ಅಥವಾ ಫಲಾನುಭವಿಯ ಬ್ಯಾಂಕ್ ವಿವರಗಳನ್ನು ನಮೂದಿಸಬೇಕು.

5 ವಿವರಗಳನ್ನು ನಮೂದಿಸಿದ ನಂತರ, ನೀವು ವರ್ಗಾಯಿಸಲು ಬಯಸುವ ಮೊತ್ತವನ್ನು ನೀವು ನಮೂದಿಸಬೇಕಾಗುತ್ತದೆ.

6 ಕೊನೆಗೆ, ನೀವು ನಿಮ್ಮ UPI PIN ಅನ್ನು ನಮೂದಿಸಿ ಮತ್ತು ಕಳುಹಿಸು ಅನ್ನು ಆಯ್ಕೆ ಮಾಡಿ.

Best Mobiles in India

Read more about:
English summary
UPI Money Transfer When Internet Isn't Working: Everything You Need To Know

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X