ಫೋನ್‌ಪೇ, ಗೂಗಲ್‌ಪೇನಲ್ಲಿ ಹಣ ಕಳುಹಿಸುವ ಮುನ್ನ ಎಚ್ಚರ ಎಚ್ಚರ!
ಯುಪಿಐ ಪಾವತಿ ಆಧಾರಿತ ಪಾವತಿ ವ್ಯವಸ್ಥೆ ಇಂದು ಭಾರತದಲ್ಲಿ ಸಾಕಷ್ಟು ಜನಪ್ರಿಯತೆ ಪಡೆದುಕೊಂಡಿದೆ. ಅದರಲ್ಲೂ ಕಳೆದ ಎರಡು ವರ್ಷಗಳಿಂದ ಯುಪಿಐ ಪಾವತಿ ಅಪ್ಲಿಕೇಶನ್ ಬಳಸುವವರ ಸಂಖ್ಯೆ ಹೆಚ್ಚುತ್ತಲೇ ಇದೆ. ಯುಪಿಐ ಪಾವತಿ ವ್ಯವಸ್ಥೆ ಸುರಕ್ಷಿತವಾಗಿದೆ ನಿಜ. ಆದರೆ ವಂಚಕರು ಯುಪಿಐ ಪಾವತಿಗಳಲ್ಲಿಯೂ ಕೂಡ ತಮ್ಮ ಕೈಚಳಕವನ್ನು ತೋರುತ್ತಿದ್ದಾರೆ.
ಹೌದು, ಫೋನ್‌ಪೇ, ಗೂಗಲ್ ಪೇ, ಪೇಟಿಎಂ ಸೇರಿದಂತೆ ಯುಪಿಐ ಪಾವತಿ ಅಪ್ಲಿಕೇಶನ್ ಬಳಸುವವರು ಈ ಸ್ಟೋರಿಯನ್ನು ಓದಲೇಬೇಕು. ಯುಪಿಐ ಪಾವತಿ ಸಾಕಷ್ಟು ಸುರಕ್ಷಿತವಾಗಿದೆ ಅಂತಾ ಹೆಚ್ಚಿನ ಪ್ರಮಾಣದಲ್ಲಿ ವಹಿವಾಟು ನಡೆಸುವ ಮುನ್ನ ಮುಂಬೈನಲ್ಲಿ ನಡೆದಿರುವ ವಂಚನೆಯ ಪ್ರಕರಣಗಳ ಬಗ್ಗೆ ಗಮನಿಸಬೇಕಿದೆ. ಹಾಗಾದ್ರೆ ಮುಂಬೈನಲ್ಲಿ ನಡೆದಿರುವ ಪ್ರಕರಣಗಳ ವಿವರಗಳೇನು ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತೀವಿ ಓದಿರಿ.

ಯುಪಿಐ ಪಾವತಿ ಅಪ್ಲಿಕೇಶನ್‌ಗಳ ಮೂಲಕ ಆನ್‌ಲೈನ್ ಪೇಮೆಂಟ್ ಮಾಡುವವರ ಸಂಖ್ಯೆ ಹೆಚ್ಚುತ್ತಲೇ ಇದೆ. ಅದರಲ್ಲೂ ಆನ್‌ಲೈನ್ ಪಾವತಿ ಅನ್ನೊದು ಭಾರತದಲ್ಲಿ ಹೊಸ ಡಿಜಿಟಲ್ ಕ್ರಾಂತಿಯನ್ನೇ ಮಾಡಿದೆ. ತರಕಾರಿ, ಹಾಲು ತರುವುದರಿಂದ ಹಿಡಿದು ಬ್ಯಾಂಕ್ ಖಾತೆಗಳಿ ಹಣ ವರ್ಗಾವಣೆ ಮಾಡುವ ತನಕ ಯುಪಿಐ ಪಾವತಿಗಳ ಪ್ರಾಬಲ್ಯ ಹೆಚ್ಚಿನ ಪ್ರಮಾಣದಲ್ಲಿದೆ. ಇದಕ್ಕೆ ಅನ್ವಯವಾಗುವಂತೆ ಫೆಬ್ರವರಿ 2022 ರಲ್ಲಿ UPI ಹೋಸ್ಟ್ ಮಾಡುವ ದೈನಂದಿನ ವಹಿವಾಟುಗಳು 24 ಕೋಟಿಯಿಂದ 36 ಕೋಟಿಗೆ ದಾಟಿದೆ.
ಹೀಗೆ ದಿನೇ ದಿನೇ ಯುಪಿಐ ಪಾವತಿ ಜನಪ್ರಿಯತೆ ಪಡೆದುಕೊಂಡಂತೆ ವಂಚನೆ ಪ್ರಕರಣಗಳು ಕೂಡ ಹೆಚ್ಚಾಗುತ್ತಿವೆ. ಇತ್ತೀಚಿಗೆ ಸೈಬರ್ ಸೆಲ್‌ಗಳ ವರದಿ ಪ್ರಕಾರ 2022-23 ರ ನಡುವೆ ಯುಪಿಐ ವಹಿವಾಟಿಗೆ ಸಂಬಂಧಿಸಿದಂತೆ 95,000 ಕ್ಕೂ ಹೆಚ್ಚು ವಂಚನೆ ಪ್ರಕರಣಗಳನ್ನು ದಾಖಲಾಗಿವೆ. ಯುಪಿಐ ಪಾವತಿ ವ್ಯವಸ್ಥೆ ಸುರಕ್ಷಿತವಾಗಿದೆ ನಿಜ, ಆದರೆ ಜನರಲ್ಲಿರುವ ಅರಿವಿನ ಕೊರತೆಯನ್ನೇ ಬಂಡವಾಳ ಮಾಡಿಕೊಂಡಿರುವ ವಂಚಕರು ಜನರ ಅಕೌಂಟ್‌ಗಳಿಂದ ಅಮೌಂಟ್ ಎಗರಿಸುತ್ತಿದ್ದಾರೆ.

ಅದರಂತೆ ಮುಂಬೈನಲ್ಲಿ ಇತ್ತೀಚಿಗೆ 81 ಮಂದಿಯಿಂದ 1 ಕೋಟಿ ರೂ.ಗೂ ಹೆಚ್ಚು ಹಣವನ್ನು ವಂಚಕರು ಲೂಟಿ ಮಾಡಿದ್ದಾರೆ ಎಂದಯ ವರದಿಯಾಗಿದೆ. ಇದರಲ್ಲಿ ಸ್ಕ್ಯಾಮರ್‌ಗಳು ಹೆಚ್ಚಿನ ಪ್ರಮಾಣದಲ್ಲಿ ಗೂಗಲ್ ಪೇ ಅಪ್ಲಿಕೇಶನ್ ಮೂಲಕ ವಂಚಿಸಿದ್ದಾರೆ. ಮೊದಲಿಗೆ ಜನರ ಅಕೌಂಟ್‌ಗೆ ಹಣ ಕಳುಹಿಸುವ ವಂಚಕರು ನಂತರ ಅವರಿಗೆ ಕರೆ ಮಾಡುತ್ತಾರೆ. ನಾವು ನಿಮ್ಮ ಅಕೌಂಟ್‌ಗೆ ತಪ್ಪಾಗಿ ಹಣ ಕಳುಹಿಸಿದ್ದೇವೆ ರಿ ಸೆಂಡ್ ಮಾಡಿ ಎಂದು ಹೇಳುತ್ತಾರೆ. ಇದನ್ನು ನಂಬಿ ಹಣ ಮರುಪಾವತಿ ಮಾಡುವ ಜನರ ಡಿವೈಸ್‌ನಲ್ಲಿ ಮಾಲ್‌ವೇರ್ ಅನ್ನು ಇನ್‌ಸ್ಟಾಲ್ ಮಾಡುತ್ತಾರೆ.
ಹೀಗೆ ವಂಚನೆಗೆ ಬಲಿಯಾಗುವ ಜನರ ಫೋನ್‌ನಲ್ಲಿ ಮಾಲ್‌ವೇರ್ ಅನ್ನು ಇನ್‌ಸ್ಟಾಲ್ ಮಾಡಿ ಅವರ UPI ಖಾತೆಯನ್ನು ಹ್ಯಾಕ್ ಮಾಡುತ್ತಾರೆ. ನಂತರ ಅವರ ಬ್ಯಾಂಕ್ ಖಾತೆಯಿಂದ ನೇರವಾಗಿ ಹಣವನ್ನು ವರ್ಗಾಯಿಸಿಕೊಳ್ಳುತ್ತಿದ್ದಾರೆ. UPI ಸ್ಕ್ಯಾಮ್‌ನಲ್ಲಿ ಮಾಲ್‌ವೇರ್ ಫಿಶಿಂಗ್ ಮತ್ತು ಹ್ಯೂಮನ್ ಇಂಜಿನಿಯರಿಂಗ್‌ನ ಅತ್ಯಾಧುನಿಕ ಮಿಶ್ರಣವಾಗಿದೆ ಇದರಿಂದ ಬಳಕೆದಾರರನ್ನು ರಕ್ಷಿಸುವುದಕ್ಕೆ ಸಾಧ್ಯವಾಗುತ್ತಿಲ್ಲ ಎಂದು ಹೇಳಲಾಗಿದೆ.

UPI ಸ್ಕ್ಯಾಮ್‌ನಿಂದ ಸೆಕ್ಯುರ್ ಆಗುವುದು ಹೇಗೆ?
* ನಂಬಿಕೆಗೆ ಅರ್ಹವಾದ ಯುಪಿಐ ಅಪ್ಲಿಕೇಶನ್‌ಗಳನ್ನು ಮಾತ್ರ ಬಳಕೆಮಾಡಿರಿ.
* ಅಧಿಕೃತ ಪ್ಲೇ ಸ್ಟೋರ್‌ಗಳಿಂದ ಮಾತ್ರ ಅಪ್ಲಿಕೇಶನ್ ಡೌನ್‌ಲೋಡ್ ಮಾಡಿ
* ಸ್ಟ್ರಾಂಗ್ ಯುಪಿಐ ಪಿನ್ ಕ್ರಿಯೆಟ್ ಮಾಡಿರಿ.
* ನಿಮ್ಮ UPI ಪಿನ್ ಅನ್ನು ಯಾರ ಜೊತೆಗೆ ಶೇರ್ ಮಾಡಬೇಡಿ.
* ಹಣ ಪಾವತಿಸುವವರ ವಿವರಗಳನ್ನು ಪರಿಶೀಲಿಸಿರಿ.
* ಅಪರಿಚಿತ ಮೂಲದಿಂದ ಸಂದೇಶಗಳ ಬಗ್ಗೆ ಎಚ್ಚರಿಕೆಯಿಂದಿರಿ.
* ವಹಿವಾಟಿನ ಮಿತಿಗಳನ್ನು ಸಕ್ರಿಯಗೊಳಿಸಿ
* ಆಗಾಗ ನಿಮ್ಮ UPI ಅಪ್ಲಿಕೇಶನ್ ಅನ್ನು ಅಪ್‌ಡೇಟ್ ಮಾಡಿರಿ.


Click it and Unblock the Notifications








