ಸರ್ಕಾರದ ‘ಯುಪಿಐ’ ಆಪ್ ಬಳಸಿ ಬೀದಿಗೆ ಬಂದರು!..ಆದರೆ, ತಪ್ಪು ಯಾರದ್ದು?!
ಭಾರತೀಯ ರಾಷ್ಟ್ರೀಯ ಪಾವತಿ ನಿಗಮವು ಅಭಿವೃದ್ಧಿಪಡಿಸಿರುವ 'ಯುಪಿ'ಐ ವ್ಯವಸ್ಥೆ ಮೂಲಕ ಆನ್‌ಲೈನ್ ಬ್ಯಾಂಕಿಂಗ್ ಸೇವೆಯನ್ನು ಬಳಸಿಕೊಳ್ಳುತ್ತಿದ್ದರೆ ನೀವು ಎಚ್ಚರವಾಗಿರಿ. ಏಕೆಂದರೆ, ಯುನಿಫೈಡ್ ಪೇಮೆಂಟ್ಸ್ ಇಂಟರ್‌ಫೇಸ್ (ಯುಪಿಐ) ವ್ಯವಸ್ಥೆ ಬಳಸಿಕೊಂಡು ಗ್ರಾಹಕರ ಬ್ಯಾಂಕ್ ಖಾತೆಗಳಿಗೆ ಕನ್ನಹಾಕುತ್ತಿರುವ ಆನ್‌ಲೈನ್ ಖದೀಮರ ಕಾಟ ನಗರದಲ್ಲೀಗ ಹೆಚ್ಚಾಗಿದೆ.
ಹೌದು, ಸ್ಮಾರ್ಟ್‌ಫೋನ್‌ಗಳ ಮೂಲಕ ಹಣ ರವಾನೆ ಮತ್ತು ಸ್ವೀಕೃತಿ ಪ್ರಕ್ರಿಯೆ ಸುಲಭಗೊಳಿಸಲು ಅಭಿವೃದ್ಧಿಪಡಿಸಿರುವ ಯುನಿಫೈಡ್ ಪೇಮೆಂಟ್ಸ್ ಇಂಟರ್‌ಫೇಸ್ (ಯುಪಿಐ) ವ್ಯವಸ್ಥೆಯನ್ನು ಆನ್‌ಲೈನ್ ಖದೀಮರು ದುರುಪಯೋಗಪಡಿಸಿಕೊಂಡಿದ್ದು, ಅವರ ಕೃತ್ಯದಿಂದಾಗಿ ನಗರದ 10 ಮಂದಿ 12 ಲಕ್ಷಕ್ಕೂ ಅಧಿಕ ಹಣವನ್ನು ಕಳೆದುಕೊಂಡಿರುವ ದೂರುಗಳು ನಗರದಲ್ಲಿ ನಡೆದಿವೆ.

ಸಾಮಾನ್ಯವಾಗಿ ಆನ್‌ಲೈನ್ ಬ್ಯಾಂಕಿಂಗ್ ಮೂಲಕ ವಹಿವಾಟು ನಡೆಸಲು ಒನ್ ಟೈಂ ಪಾಸ್‌ವರ್ಡ್ (ಒಟಿಪಿ) ಅಗತ್ಯ ಇರುತ್ತದೆ. ಅಂಥ ಒಟಿಪಿ ಮೂಲಕ ಖಾತೆಗೆ ಕನ್ನ ಹಾಕುತ್ತಿರುವ ಪ್ರಕರಣಗಳು ಹೆಚ್ಚಾಗುತ್ತಿರುವ ಬಗ್ಗೆ ಸೈಬರ್ ಕ್ರೈಂ ಠಾಣೆಗೆ ದೂರು ದಾಖಲಾಗಿವೆ. ಹಾಗಾದರೆ, ಏನಿದು ಶಾಕಿಂಗ್ ಸುದ್ದಿ? ನಿಮ್ಮ ರಕ್ಷಣೆ ಹೇಗಿರಬೇಕು ಎಂಬುದನ್ನು ಮುಂದೆ ಓದಿ ತಿಳಿಯಿರಿ.

‘ಎನ್‌ಪಿಸಿಐ’ಗೆ ಪತ್ರ
ಯುಪಿಐ'ಆಪ್‌ನಿಂದಾಗಿ ಗ್ರಾಹಕರಿಗೆ ಆಗುತ್ತಿರುವ ವಂಚನೆ ಬಗ್ಗೆ ಸೈಬರ್ ಕ್ರೈಂ ಅಧಿಕಾರಿಗಳು ಎನ್‌ಪಿಸಿಐಗೆ ಪತ್ರ ಬರೆದಿದ್ದಾರೆ.ಆಪ್ ನೋಂದಣಿ ಪ್ರಕ್ರಿಯೆಯಲ್ಲೂ ಕೆಲವು ದೋಷಗಳಿವೆ. ಅದರಿಂದಾಗಿಯೇ ಗ್ರಾಹಕರ ಖಾತೆಗೆ ಖದೀಮರು ಕನ್ನ ಹಾಕುತ್ತಿದ್ದಾರೆ. ಆ ದೋಷಗಳನ್ನು ಪತ್ತೆ ಹಚ್ಚಿ ಸರಿಪಡಿಸಲು ಕ್ರಮ ಕೈಗೊಳ್ಳಿ' ಎಂದು ಪತ್ರದಲ್ಲಿ ಅಧಿಕಾರಿಗಳು ಕೋರಿದ್ದಾರೆ

‘ಯುಪಿಐ’ ವ್ಯವಸ್ಥೆಯಿಂದ ಬೀದಿಗೆ ಬಂದರು!
ದೇಶದ ಬಹುತೇಕ ಎಲ್ಲಾ ಬ್ಯಾಂಕ್‌ಗಳು ‘ಯುಪಿಐ' ವ್ಯವಸ್ಥೆ ಆಧಾರಿತ ಆಪ್ ಮೂಲಕ ಬ್ಯಾಂಕಿಂಗ್ ಸೇವೆ ಒದಗಿಸುತ್ತಿರುವುದರಿಂದ ‘ಯುಪಿಐ ವ್ಯವಸ್ಥೆಯ ಆಪ್ ಮೂಲಕ ಆನ್‌ಲೈನ್ ಬ್ಯಾಂಕಿಂಗ್ ಸೌಲಭ್ಯ ಕೂಡ ಈ ಬ್ಯಾಂಕ್‌ಗಳ ಗ್ರಾಹಕರಿಗೆ ಸಿಕ್ಕಿದೆ. ಆದರೆ, ಗ್ರಾಹಕರಿಗೆ ಈ ಬಗ್ಗೆ ಸರಿಯಾಗಿ ತಿಳಿಯದ ಮಾಹಿತಿಯಿಂದ ಖದೀಮರು ಅವರಿಂದ ಹಣವನ್ನು ದೋಚುತ್ತಿದ್ದಾರೆ.

ಹಣ ದೋಚುತ್ತಿರುವುದು ಹೇಗೆ?
‘ಯುಪಿಐ ವ್ಯವಸ್ಥೆಯ ಆಪ್ ಮೂಲಕ ಆನ್‌ಲೈನ್ ಬ್ಯಾಂಕಿಂಗ್ ಸೌಲಭ್ಯ ಪಡೆಯಲು ಬ್ಯಾಂಕ್ ನೀಡಿರುವ ಮೊಬೈಲ್ ಸಂಖ್ಯೆಗೆ ತಮ್ಮ ಮೊಬೈಲ್‌ನಿಂದ ಸಂದೇಶ ಕಳುಹಿಸಬೇಕು. ಅದನ್ನು ಬ್ಯಾಂಕ್‌ನವರು ಅಂಗೀಕರಿಸಿದಿ ಒಟಿಪಿ ಬಳಸಿ ಅದರ ಸೌಲಭ್ಯ ಪಡೆಯಬಹುದು. ಈ ಪ್ರಕ್ರಿಯೆಯಲ್ಲೇ ಖದೀಮರು, ತಮ್ಮ ಕೈಚಳಕ ತೋರಿಸುತ್ತಿದ್ದಾರೆ ಎಂದು ಸೈಬರ್ ಕ್ರೈಮ್ ಹೇಳುತ್ತಿದೆ.

ಪೊಲೀಸರು ಹೇಳಿದ್ದೇನು?
ಗ್ರಾಹಕರು, ಬ್ಯಾಂಕ್ ನೀಡಿರುವ ಮೊಬೈಲ್ ಸಂಖ್ಯೆಗೆ ತಮ್ಮ ಮೊಬೈಲ್‌ನಿಂದ ಸಂದೇಶ ಕಳುಹಿಸಬೇಕು. ಅದನ್ನು ಬ್ಯಾಂಕ್‌ನವರು ಅಂಗೀಕರಿಸುತ್ತಿದ್ದಂತೆ, ಒಟಿಪಿ ಬಳಸಿಕೊಂಡು ತಮ್ಮ ಮೊಬೈಲ್ ನಂಬರ್ ಜೋಡಣೆ ಮಾಡಿಕೊಂಡು ಸೌಲಭ್ಯ ಪಡೆಯಬಹುದು. ಈ ಪ್ರಕ್ರಿಯೆಯಲ್ಲೇ ಖದೀಮರು, ತಮ್ಮ ಕೈಚಳಕ ತೋರಿಸುತ್ತಿದ್ದಾರೆ ಎಂದು ಪೊಲೀಸರು ಹೇಳಿದ್ದಾರೆ.

ಕೈಚಳಕ ತೋರಿಸುತ್ತಿದ್ದಾರೆ ಖದೀಮರು!
ನ್‌ಲೈನ್ ಬ್ಯಾಂಕಿಂಗ್ ಮೂಲಕ ವಹಿವಾಟು ನಡೆಸಲು ಯಾವಾಗಲೂ ಒನ್ ಟೈಂ ಪಾಸ್‌ವರ್ಡ್ (ಒಟಿಪಿ) ಅಗತ್ಯ ಇರುತ್ತದೆ. ಅಂಥ ಒಟಿಪಿ ಮೂಲಕ ಖಾತೆಗೆ ಕನ್ನ ಹಾಕುತ್ತಿರುವ ಪ್ರಕರಣಗಳು ಹೆಚ್ಚಾದ ನಂತರ ಈ ಬಗ್ಗೆ ಜನರು ಜಾಗೃತಗೊಂಡಿದ್ದಾರೆ. ಇದರಿಂದ ಖದೀಮರು ಬೇರೆ ದಾರಿ ಹುಡುಕಿದ್ದು, ಒಂದು ಲಿಂಕ್ ಕಳುಹಿಸುವ ಮೂಲಕ ವಂಚಿಸುವ ದಾರಿ ಕಂಡುಕೊಂಡಿದ್ದಾರಂತೆ.

ಹಣ ಕಳೆದುಕೊಂಡ ಗ್ರಾಹಕರು!
ನಿಮ್ಮ ಖಾತೆ ವಿವರ ಅಪ್‌ಡೇಟ್ ಮಾಡಬೇಕಿದೆ. ನಿಮಗೆ ಕಳುಹಿಸಿರುವ ಸಂದೇಶದಲ್ಲಿರುವ ಲಿಂಕ್ ಅನ್ನು 9223040040 ಮೊಬೈಲ್ ನಂಬರ್‌ಗೆ ಫಾರ್ವರ್ಡ್ ಮಾಡಿ ಎಂದು ವಂಚಕರು ಹೇಳಿದ್ದರು. ಅದನ್ನು ನಂಬಿದ ಎಸ್‌ಬಿಐ ಗ್ರಾಹಕ ವೆಂಕಟೇಶ್ ಸಂದೇಶವನ್ನು ಫಾರ್ವರ್ಡ್ ಮಾಡಿದ ತಕ್ಷಣ ಅವರ ಖಾತೆಯಲ್ಲಿದ್ದ ಲಕ್ಷಾಂತರ ರೂ. ಹಣವನ್ನು ಕದಿಯಲಾಗಿದೆ.

ಪೊಲೀಸರಿಂದ ಎಚ್ಚರಿಕೆ!
ಯಾವುದೇ ಬ್ಯಾಂಕ್‌ನವರು, ಮೊಬೈಲ್‌ಗೆ ಕರೆ ಮಾಡಿ ಒಟಿಪಿ ಅಥವಾ ಲಿಂಕ್ ಕಳುಹಿಸುವಂತೆ ಹೇಳುವುದಿಲ್ಲ. ಅಂಥ ಕರೆಗಳ ಬಗ್ಗೆ ಸಾರ್ವಜನಿಕರು ಎಚ್ಚರಿಕೆ ವಹಿಸಬೇಕು. ನಿಮಗೆ ಅನುಮಾನಾಸ್ಪದ ಕರೆಗಳು ಬಂದರೆ ಅವುಗಳಿಗೆ ಉತ್ತರಿಸಬೇಡಿ. ಯಾವುದೇ ಕಾರಣಕ್ಕೂ, ಯಾವುದೇ ಮಾಹಿತಿಯನ್ನು, ಯಾರಿಗೂ ನೀಡಬೇಡಿ ಎಂದು ಪೊಲೀಸರು ಸಲಹೆ ನೀಡಿದರು.


Click it and Unblock the Notifications