Home
ಸುದ್ದಿಜಾಲ

UPI Down: ದೇಶಾದ್ಯಂತ ಯುಪಿಐ ಡೌನ್.. Paytm, PhonePe, Google Pay ಕೆಲಸ ಮಾಡ್ತಿಲ್ಲ.. ಅಸಲಿ ಕಾರಣವೇನು?

UPI Server Down: ದೇಶಾದ್ಯಂತ ಯುಪಿಐ ಸರ್ವರ್​ ಡೌನ್..! ಪೇಟಿಎಂ(Paytm), ಫೋನ್‌ಪೇ(PhonePe), ಗೂಗಲ್ ಪೇ (Google Pay) ಕೆಲಸ ಮಾಡುತ್ತಿಲ್ಲ. ಹೌದು, ದೇಶಾದ್ಯಂತ ಇಂದು ಏಕಾಏಕಿ ಯುಪಿಐ (UPI) ಸೇವೆಗಳಲ್ಲಿ ವ್ಯತ್ಯಯ ಉಂಟಾಗಿದೆ. ಇದರಿಂದ ಬಳಕೆದಾರರು ಪರದಾಡುವಂತಾಗಿದೆ. ಡಿಜಿಟಲ್ ಹಣ ವಹಿವಾಟಿಗೆ ಸಮಸ್ಯೆಯಾಗುತ್ತಿದೆ. ಸಾಮಾಜಿಕ ಜಾಲತಾಣದಲ್ಲಿ ಸಾವಿರಾರು ದೂರು ಬರುತ್ತಿದೆ. ನೀವು, ಹೊರಗಡೆ ಹೋಗುವ ಪ್ಲಾನ್ ಮಾಡಿಕೊಂಡಿದ್ರೆ, ನಗದು ಹಣ ಜೇಬಿನಲ್ಲಿಟ್ಟುಕೊಳ್ಳುವುದನ್ನು ಮರೆಯಬೇಡಿ!

ಹೌದು, ಯುಪಿಐ ಸಂಯೋಜಿತ ಆಪ್‌ಗಳಾದ ಗೂಗಲ್‌ಪೇ, ಫೋನ್‌ ಪೇ, ಪೇಟಿಎಂ ಇನ್ನಿತರ ಅಪ್ಲಿಕೇಶನ್‌ಗಳಲ್ಲಿ ಏಕಕಾಲಕ್ಕೆ ಸಮಸ್ಯೆ ಎದುರಾಗಿದೆ. ಇದರಿಂದ ಗ್ರಾಹಕರು ಬೇರೆಯವರಿಗೆ ಹಣ ಕಳುಹಿಸಲು ಸಾಧ್ಯವಾಗುತ್ತಿಲ್ಲ. ಈ ಸಮಸ್ಯೆ ಯಾವ ಕಾರಣಕ್ಕೆ ಉಂಟಾಗಿದೆ ಎನ್ನುವುದು ತಿಳಿದು ಬಂದಿಲ್ಲ. ಇಂದು ಮಧ್ಯಾಹ್ನ 12 ಗಂಟೆಗೆ ಏಕಕಾಲಕ್ಕೆ ದೇಶಾದ್ಯಂತ ಯುಪಿಐ ಸೇವೆಗಳಲ್ಲಿ ಕಂಡುಬಂದಿದೆ. ಈ ಬಗ್ಗೆ ಬಳಕೆದಾರರು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡುತ್ತಿದ್ದಾರೆ.

UPI Down: ಯುಪಿಐ ಡೌನ್.. Paytm, PhonePe, Google Pay ಕೆಲಸ ಮಾಡ್ತಿಲ್ಲ!

ಕ್ಯೂಆರ್‌ ಕೋಡ್‌ (QR Code) ಸ್ಕ್ಯಾನ್‌ ಮಾಡಿದ 5 ನಿಮಿಷದ ಬಳಿಕವೂ ಪಾವತಿ ಪೂರ್ಣವಾಗಿಲ್ಲ. ಇದನ್ನು ಗಮನಿಸಿದಾದ ಸಮ್ಯಸ್ಯೆ ಉಂಟಾಗಿರುವುದು ಬೆಳಕಿಗೆ ಬಂದಿದೆ. ನಂತರ ಬಹಳಷ್ಟು ಮಂದಿ ತಮ್ಮ ಎಕ್ಸ್‌ ಖಾತೆಯಲ್ಲಿ ಪೋಸ್ಟ್‌ ಹಾಕಿದ್ದಾರೆ. #upidown ಎನ್ನುವ ಹ್ಯಾಶ್‌ಟ್ಯಾಗ್‌ನೊಂದಿಗೆ ಸೋಶಿಯಲ್ ಮೀಡಿಯಾದಲ್ಲಿ ಸ್ಕ್ರೀನ್‌ಶಾಟ್‌ ಸಮೇತ ಪೋಸ್ಟ್‌ ಮಾಡಿದ್ದಾರೆ. ಪ್ರಸ್ತುತ, ಎಕ್ಸ್‌ನಲ್ಲಿ ಕೆಲವೇ ನಿಮಿಷಗಳಲ್ಲಿ ಟ್ರೆಂಡಿಂಗ್‌ ಆಗಿದೆ.

ಮಧ್ಯಾಹ್ನ 12 ಗಂಟೆ ಸುಮಾರಿಗೆ ಯುಪಿಐ ಸಮಸ್ಯೆಗಳ ಬಗ್ಗೆ ಸುಮಾರು 1,168 ದೂರುಗಳು ಬಂದಿವೆ. ಅವುಗಳಲ್ಲಿ, ಗೂಗಲ್ ಪೇ ಬಳಕೆದಾರರು 96 ಸಮಸ್ಯೆಗಳನ್ನು ವರದಿ ಮಾಡಿದ್ದಾರೆ. ಪೇಟಿಎಂ ಬಳಕೆದಾರರು 23 ಸಮಸ್ಯೆಗಳ ಬಗ್ಗೆ ದೂರು ಸಲ್ಲಿಸಿದ್ದಾರೆ. ಇತ್ತ, ಯುಪಿಐ ಈ ಸಮಸ್ಯೆಯನ್ನು ಈವರೆಗೆ ಪರಿಹರಿಸಿಲ್ಲ. ಗಮನಿಸಬೇಕಾದ ವಿಷಯವೆಂದರೆ, ಕಳೆದ ಕೆಲವು ದಿನಗಳಿಂದ ಯುಪಿಐ ಸೇವೆಗಳಲ್ಲಿ ಈ ರೀತಿಯ ಸಮಸ್ಯೆ ಉಂಟಾಗುತ್ತಲೇ ಇದೆ.

ಬ್ಯಾಂಕಿಂಗ್‌ ಸೇವೆಗಳಲ್ಲಿ ಭಾರೀ ವ್ಯತ್ಯಯ

ಯುಪಿಐ ಸರ್ವರ್​ ಡೌನ್ ಯುಪಿಐ ಆಪ್‌ಗಳು ಮತ್ತು ಬ್ಯಾಂಕ್ ಖಾತೆಗಳಲ್ಲಿ ವ್ಯಾಪಿಸಿರುವುದರಿಂದ ಯುಪಿಐ ಸರ್ವರ್‌ಗಳಿಗೆ ಲಿಂಕ್ ಆಗಿರುವಂತೆ ಕಾಣುತ್ತಿದೆ. ಈ ಸಮಸ್ಯೆಯಿಂದ ಎಸ್‌ಬಿಐ (SBI), ಎಚ್‌ಡಿಎಫ್‌ಸಿ (HDFC) ಬ್ಯಾಂಕ್ ಮತ್ತು ಐಸಿಐಸಿಐ (ICICI) ಬ್ಯಾಂಕಿಂಗ್‌ನ ಯುಪಿಐ ಸೇವೆಗಳ ಮೇಲೂ ಪರಿಣಾಮ ಬೀರಿದೆ. ಇನ್ನು ಫೋನ್‌ಪೇ, ಪೇಟಿಎಂ, ಗೂಗಲ್ ಪೇ, ಕ್ರೆಡಿಟ್ ಮತ್ತು ಹೆಚ್ಚಿನವುಗಳನ್ನು ಒಳಗೊಂಡಂತೆ, ಯುಪಿಐ ಆಪ್‌ಗಳ ಮೇಲೆ ಭಾರೀ ಹೊಡೆತ ​ಬಿದ್ದಿದೆ. ಬಹುತೇಕ ಬಳಕೆದಾರರು ತಮ್ಮ ಖಾತೆಯ ಬ್ಯಾಲೆನ್ಸ್ ಅನ್ನು ಪರಿಶೀಲಿಸಲು ಸಾಧ್ಯವಾಗುತ್ತಿಲ್ಲ ಎಂದು ದೂರಿದ್ಧಾರೆ. ಜೊತೆಗೆ, ಪಾವತಿ ಮಾಡಲು ಎಲ್ಲರೂ ಸಮಸ್ಯೆ ಎದುರಿಸುತ್ತಿದ್ದಾರೆ.

ಎನ್‌ಪಿಸಿಐ ಹೇಳಿದ್ದೇನು ಗೊತ್ತಾ?

ಯುಪಿಐ ಸೇವೆಗಳಲ್ಲಿನ ವ್ಯತ್ಯಯದ ಬಗ್ಗೆ ಎನ್‌ಪಿಸಿಐ (NPCI) ಪ್ರತಿಕ್ರಿಯೆ ನೀಡಿದೆ. ಈ ಕುರಿತು ತನ್ನ ಎಕ್ಸ್ ಖಾತೆಯಲ್ಲಿ ಎನ್‌ಪಿಸಿಐ ಸಂಸ್ಥೆ ಪೋಸ್ಟ್ ಮಾಡಿದೆ. ಪ್ರಸ್ತುತ ಎನ್‌ಪಿಸಿಐ ಮಧ್ಯಂತರ ತಾಂತ್ರಿಕ ಸಮಸ್ಯೆಗಳನ್ನು ಎದುರಿಸುತ್ತಿದೆ. ಇದರಿಂದಾಗಿ ಭಾಗಶಃ ಯುಪಿಐ ವಹಿವಾಟು ಸಾಧ್ಯವಾಗುತ್ತಿಲ್ಲ. ಈ ಸಮಸ್ಯೆಯನ್ನು ಪರಿಹರಿಸಲು ನಾವು ಕೆಲಸ ಮಾಡುತ್ತಿದ್ದೇವೆ. ಮತ್ತು ಶೀಘ್ರದಲ್ಲೇ ನಿಮಗೆ ಈ ಬಗ್ಗೆ ತಿಳಿಸುತ್ತೇವೆ. ಯುಪಿಐ ಸೇವೆಗಳಲ್ಲಿ ಉಂಟಾದ ಅನಾನುಕೂಲತೆಗೆ ನಾವು ವಿಷಾದಿಸುತ್ತೇವೆ ಎಂದು ಪೋಸ್ಟ್ ಎನ್‌ಪಿಸಿಐ ಮಾಡಿದೆ.

ಒಟ್ಟಾರೆ, ಭಾರತದಲ್ಲಿ ಯುಪಿಐ ಜನಪ್ರಿಯ ಸೇವೆಯಾಗಿದೆ. ಇದರ ಸಹಾಯದಿಂದ ಬಳಕೆದಾರರು ಟೀ ಅಂಗಡಿಗಳಿಂದಿಡಿದು ರೈಲು ಟಿಕೆಟ್ ಬುಕಿಂಗ್‌ ಮಾಡುವವರೆಗೂ ಪಾವತಿ ಮಾಡುತ್ತಿದ್ದಾರೆ. ಹೀಗಿರುವಾಗ ಯುಪಿಐ ಸೇವೆ ಏಕಕಾಲಕ್ಕೆ ಸ್ಥಗಿತಗೊಂಡಿದ್ದು, ಬಳಕೆದಾರರು ಭಾರೀ ಸಮಸ್ಯೆ ಎದುರಿಸುತ್ತಿದ್ದಾರೆ. ಎರಡು ವಾರಗಳ ಹಿಂದೆ ಸಹ ಯುಪಿಐ (UPI) ಸೇವೆಗಳು ಸ್ಥಗಿತಗೊಂಡಿದ್ದವು. ಇದಕ್ಕೂ ಮೊದಲು, ಎನ್‌ಪಿಸಿಐ (NPCI) ತನ್ನ ಎಕ್ಸ್ ಖಾತೆಯಲ್ಲಿ ಈ ಸಮಸ್ಯೆಯನ್ನು ಒಪ್ಪಿಕೊಂಡಿತ್ತು. ಜೊತೆಗೆ ಕೆಲವೇ ಗಂಟೆಗಳಲ್ಲಿ ಪರಿಹರಿಸಿತ್ತು. ಇದೀಗ, ಮತ್ತೆ ಯುಪಿಐ ಸೇವೆಗಳಲ್ಲಿ ದೋಷ ಎದುರಾಗಿರುವುದು ದುರದೃಷ್ಟಕರ.

Best Mobiles in India

English summary
UPI Server Down: PhonePe, Google Pay, Paytm Not Working Today, Users Report Massive Outage
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+