Home
ಸುದ್ದಿಜಾಲ

ಭಾರತದಾದ್ಯಂತ ಕೆಲ ಸಮಯ UPI ಸ್ಥಗಿತ: ಅಡಚಣೆಗೆ ಕಾರಣ ಇದು!

ಭಾರತದಾದ್ಯಂತ ಬಳಕೆದಾರರು ಏಕೀಕೃತ ಪಾವತಿ ಇಂಟರ್ಫೇಸ್ (UPI) ವಹಿವಾಟುಗಳಲ್ಲಿ ಎದುರಿಸಿದ ಅಡಚಣೆಗೆ ಕಾರಣ ಏನು ಎಂಬುದು ತಿಳಿದುಬಂದಿದೆ. ಬುಧವಾರದಂದು (ಮಾರ್ಚ್ 26, 2025) ದೇಶದಾದ್ಯಂತ ವ್ಯಾಪಕವಾದ UPI ಸ್ಥಗಿತದಿಂದಾಗಿ ಡಿಜಿಟಲ್ ವಹಿವಾಟುಗಳ ಮೇಲೆ ಭಾರೀ ಪರಿಣಾಮ ಬೀರಿತ್ತು. ಹೆಚ್ಚಿನ ಸಂಖ್ಯೆಯ ಬಳಕೆದಾರರು ತ್ವರಿತ ಪಾವತಿ ಇಂಟರ್ಫೇಸ್‌ನಲ್ಲಿ ಸಮಸ್ಯೆಗಳನ್ನು ವರದಿ ಮಾಡಿದ್ದರು. ಡೌನ್‌ಡೆಕ್ಟರ್‌ನಲ್ಲಿ ಈ ಸ್ಥಗಿತದ ಕುರಿತು ದೂರುಗಳು ಹೆಚ್ಚವಾಗಿದ್ದವು. ಯುಪಿಐ ಸಿಸ್ಟಮ್ ಸುಮಾರು ಒಂದು ಗಂಟೆ ಅಥವಾ ಅದಕ್ಕಿಂತ ಹೆಚ್ಚು ಕಾಲ ಕೆಲಸ ಮಾಡದೇ ಇದ್ದ ಪರಿನಾಮ ಲಕ್ಷಾಂತರ ಭಾರತೀಯರು ಗೂಗಲ್ ಪೇ, ಪೇಟಿಎಂ ಮತ್ತು ಕೆಲವು ಬ್ಯಾಂಕಿಂಗ್ ಅಪ್ಲಿಕೇಶನ್‌ಗಳಲ್ಲಿ ಪಾವತಿ ವೈಫಲ್ಯಗಳು ಕಂಡುಬಂದಿದ್ದರಿಂದ ಯುಪಿಐ ವಹಿವಾಟುಗಳನ್ನು ಬಳಸಲಾಗದೇ ಕಂಗಾಲಾಗಿದ್ದರು.

ಕೆಲವೇ ಸಮಯದಲ್ಲಿ ಈ ಸಮಸ್ಯೆಯು ಬಗೆಹರಿಸಲಾಗಿದೆ. UPI ಸಿಸ್ಟಮ್ ಸುಮಾರು ಒಂದು ಗಂಟೆ ಅಥವಾ ಅದಕ್ಕಿಂತ ಹೆಚ್ಚು ಕಾಲ ತಾತ್ಕಾಲಿಕ ಸಮಸ್ಯೆ ಎದುರಿಸಲು NPCI ಎದುರಿಸಿದ ತಾಂತ್ರಿಕ ಸಮಸ್ಯೆಯೇ ಕಾರಣ ಎಂದು ತಿಳಿದುಬಂದಿದೆ. ಈ ಕುರಿತು "NPCI ಮಧ್ಯಂತರ ತಾಂತ್ರಿಕ ಸಮಸ್ಯೆಗಳನ್ನು ಎದುರಿಸಿತ್ತು, ಇದರಿಂದಾಗಿ UPI ಭಾಗಶಃ ಕುಸಿತ ಕಂಡಿತು. ಅದನ್ನೇ ಈಗ ಪರಿಹರಿಸಲಾಗಿದೆ ಮತ್ತು ವ್ಯವಸ್ಥೆಯು ಸ್ಥಿರವಾಗಿದೆ. ಅನಾನುಕೂಲತೆಗೆ ವಿಷಾದಿಸುತ್ತೇವೆ" ಎಂದು NPCI ತನ್ನ ಅಧಿಕೃತ X ನಲ್ಲಿ ಪೋಸ್ಟ್‌ನಲ್ಲಿ ತಿಳಿಸಿದೆ. ಡೌನ್‌ಡೆಕ್ಟರ್‌ನ ಮಾಹಿತಿಯ ಪ್ರಕಾರ, ಸಂಜೆಯ ವೇಳೆಗೆ ಸ್ಥಗಿತಗಳ ವರದಿಗಳು ಹೆಚ್ಚಾಗಿದ್ದು, ಇದರಿಂದ ವಹಿವಾಟುಗಳು, ಹಣ ವರ್ಗಾವಣೆ ಮತ್ತು ಲಾಗಿನ್ ಪ್ರವೇಶದಲ್ಲಿ ಅಡಚನೆಗಳು ಉಂಟಾಗಿವೆ. Google Pay ಬಳಕೆದಾರರು ಮುಖ್ಯವಾಗಿ ಪಾವತಿಗಳಲ್ಲಿ (72%) ಸಮಸ್ಯೆಗಳನ್ನು ಮತ್ತು ಅಪ್ಲಿಕೇಶನ್-ಸಂಬಂಧಿತ (14%) ಸಮಸ್ಯೆಗಳನ್ನು ವರದಿ ಮಾಡಿದ್ದಾರೆ.

ಭಾರತದಾದ್ಯಂತ ಕೆಲ ಸಮಯ UPI ಸ್ಥಗಿತ: ಅಡಚಣೆಗೆ ಕಾರಣ ಇದು!

ಬಳಕೆದಾರರ ವರದಿಗಳ ಆಧಾರದ ಮೇಲೆ ಸೇವಾ ಅಡಚಣೆಗಳನ್ನು ಮೇಲ್ವಿಚಾರಣೆ ಮಾಡುವ ವೇದಿಕೆಯಾದ ಡೌನ್‌ಡೆಕ್ಟರ್‌ನಲ್ಲಿ ಪಾವತಿಗಳಿಗೆ ಸಂಬಂಧಿಸಿದ ದೂರುಗಳಲ್ಲಿ 86% ದಾಖಲಾಗಿದ್ದು, ಲಾಗಿನ್ ಮತ್ತು ಖರೀದಿ ಕಾರ್ಯಗಳಿಗೆ ಸಂಬಂಧಿಸಿದ ದೂರುಗಳು ಕ್ರಮವಾಗಿ 9% ಮತ್ತು 6% ರಷ್ಟಿವೆ. ಈ ಸ್ಥಗಿತವು ಬ್ಯಾಂಕಿಂಗ್ ಸೇವೆಗಳಿಗೂ ವ್ಯಾಪಿಸಿತ್ತು. ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (SBI) ನಲ್ಲಿ ನಿಧಿ ವರ್ಗಾವಣೆಗೆ 47%, ಮೊಬೈಲ್ ಬ್ಯಾಂಕಿಂಗ್‌ಗೆ 37% ಮತ್ತು ಆನ್‌ಲೈನ್ ಬ್ಯಾಂಕಿಂಗ್‌ಗೆ 16% ತೊಂದರೆಗಳು ವರದಿಯಾಗಿವೆ. ಒಟ್ಟಾರೆ, UPI ಗೆ ಸಂಬಂಧಿಸಿದ 84% ದೂರುಗಳು ವಿಫಲ ಪಾವತಿಗಳಿಗೆ ಸಂಬಂಧಿಸಿವೆ. ವಹಿವಾಟುಗಳು, ಹಣ ವರ್ಗಾವಣೆ ಮತ್ತು ಲಾಗಿನ್ ಪ್ರವೇಶದ ಮೇಲೆ ಪರಿಣಾಮ ಬೀರಿದೆ. ಅಪ್ಲಿಕೇಶನ್-ಸಂಬಂಧಿತ ಸಮಸ್ಯೆಗಳ ಜೊತೆಗೆ ಪೇಟಿಎಂ ಕೂಡ ಸಾಕಷ್ಟು ಅಡಚಣೆಗಳನ್ನು ಕಂಡಿದೆ.

ಏಕೀಕೃತ ಪಾವತಿ ಇಂಟರ್ಫೇಸ್ (UPI) RBI-ನ ನಿಯಂತ್ರಣದ ಅಡಿಯಲ್ಲಿ NPCI ಅಭಿವೃದ್ಧಿಪಡಿಸಿದ ಮತ್ತು ನಿರ್ವಹಿಸುವ ತ್ವರಿತ ಪಾವತಿ ವ್ಯವಸ್ಥೆ. UPI IMPS ಮೂಲಸೌಕರ್ಯದ ಮೇಲೆ ನಿರ್ಮಿತವಾಗಿದೆ ಮತ್ತು ಯಾವುದೇ ಎರಡು ಬ್ಯಾಂಕ್ ಖಾತೆಗಳ ನಡುವೆ ಹಣವನ್ನು ತ್ವರಿತವಾಗಿ ವರ್ಗಾಯಿಸಲು ಅನುಕೂಲವಾಗುತ್ತದೆ. UPI ಬಳಕೆದಾರರಿಗೆ ಯಾವುದೇ ಶುಲ್ಕವಿಲ್ಲದೆ ಹಣ ವರ್ಗಾಯಿಸುವ ಸೌಲಭ್ಯವನ್ನು ಒದಗಿಸುತ್ತದೆ. NPCI ಯಾವುದೇ ಹೆಚ್ಚುವರಿ ಶುಲ್ಕವನ್ನು ವಿಧಿಸದೆ, ಬಳಕೆದಾರರು ಯಾವುದೇ ಸಮಯದಲ್ಲಿ, ಯಾವುದೇ ಪ್ರಮಾಣದ ಹಣವನ್ನು ವರ್ಗಾಯಿಸಬಹುದು. ಕನಿಷ್ಠ ವಹಿವಾಟು ಮಿತಿ ಇಲ್ಲದ ಕಾರಣ, ಸ್ಥಳೀಯ ಅಂಗಡಿಗಳಲ್ಲಿ ಸಣ್ಣ ಪಾವತಿಗಳಿಗೆ ಇದನ್ನು ವ್ಯಾಪಕವಾಗಿ ಬಳಸಲಾಗುತ್ತಿದೆ. ಜೊತೆಗೆ, UPI ಸುಲಭ ಆಟೋಪೇ ವೈಶಿಷ್ಟ್ಯವನ್ನು ಒದಗಿಸುತ್ತದೆ, ಇದರಿಂದ ವಹಿವಾಟುಗಳು ಸುಗಮ ಮತ್ತು ತೊಂದರೆ-ಮುಕ್ತವಾಗುತ್ತವೆ.

Best Mobiles in India

English summary
UPI Services Experience Outage in India: The disruption led to a significant increase in complaints on Downdetector.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+