ಭಾರತದಲ್ಲಿ Urbn MagTag ಪವರ್ ಬ್ಯಾಂಕ್ ಅನಾವರಣ! ಬೆಲೆ ಮಾತ್ರ ತುಂಬಾ ಕಡಿಮೆ!
ಜನಪ್ರಿಯ ಪವರ್ ಬ್ಯಾಂಕ್ ತಯಾರಕ ಕಂಪೆನಿಗಳಲ್ಲಿ ಒಂದಾದ Urbn ಹೊಸ ಮ್ಯಾಗ್‌ಟ್ಯಾಗ್ ಅನ್ನು ಬಿಡುಗಡೆ ಮಾಡಿದೆ. ಇದು 10000mAh ಮತ್ತು 5000mAh ಸಾಮರ್ಥ್ಯಗಳಲ್ಲಿ ಲಭ್ಯವಿರುವ ಕಾಂಪ್ಯಾಕ್ಟ್ ಮ್ಯಾಗ್ನೆಟಿಕ್ ವಾಯರ್‌ಲೆಸ್ ಪವರ್ ಬ್ಯಾಂಕ್ ಆಗಿದೆ. ಈ ಪವರ್ ಬ್ಯಾಂಕ್ ಪ್ರೀಮಿಯಂ 'ಬ್ಲ್ಯಾಕ್ ಎಡಿಷನ್' ಶ್ರೇಣಿಯ ಭಾಗವಾಗಿದೆ.
ಹೌದು, Urbn MagTag ಪವರ್ ಬ್ಯಾಂಕ್ ಭಾರತದಲ್ಲಿ ಬಿಡುಗಡೆ ಆಗಿದೆ. ಇದು ವೇಗದ ಚಾರ್ಜಿಂಗ್ ಅನ್ನು ಬೆಂಬಲಿಸಲಿದ್ದು, ಪವರ್ ಡೆಲಿವರಿ ಹೊಂದಾಣಿಕೆಯೊಂದಿಗೆ ಕೇವಲ 30 ನಿಮಿಷಗಳಲ್ಲಿ 50% ಚಾರ್ಜ್ ಮಾಡಲಿದೆ. ಇನ್ನು ಈ ಮ್ಯಾಗ್‌ಟ್ಯಾಗ್ ಐಫೋನ್‌ಗಳು ಮತ್ತು ಆಂಡ್ರಾಯ್ಡ್ ಡಿವೈಸ್‌ಗಳಿಗೆ ವಾಯರ್‌ಲೆಸ್ ಚಾರ್ಜಿಂಗ್‌ಗೆ ಅನುಕೂಲವಾಗುವಂತೆ ಯೂನಿಕ್ ರಿಂಗ್ ಅನ್ನು ಹೊಂದಿದೆ. ಹಾಗಾದ್ರೆ Urbn MagTag ಪವರ್ ಬ್ಯಾಂಕ್‌ನ ವಿಶೇಷತೆ ಏನು ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತೀವಿ ಓದಿರಿ.

Urbn MagTag ಪವರ್ ಬ್ಯಾಂಕ್ 10000mAh ಮತ್ತು 5000mAh ಸಾಮರ್ಥ್ಯದ ಕಾಂಪ್ಯಾಕ್ಟ್ ಮ್ಯಾಗ್ನೆಟಿಕ್ ವಾಯರ್‌ಲೆಸ್ ಪವರ್ ಬ್ಯಾಂಕ್ ಆಗಿದೆ. ಇದು ತ್ವರಿತ ಮತ್ತು ಪರಿಣಾಮಕಾರಿ ಪವರ್-ಅಪ್‌ಗಳಿಗಾಗಿ 15W ವಾಯರ್‌ಲೆಸ್ ಮತ್ತು 20W ವೈರ್ಡ್ ಚಾರ್ಜಿಂಗ್ ಅನ್ನು ನೀಡಲಿದೆ. ಇದು ಸಂಪೂರ್ಣ ಚಾರ್ಜಿಂಗ್‌ಗಾಗಿ 3-4 ಗಂಟೆಗಳ ಚಾರ್ಜಿಂಗ್ ತೆಗೆದುಕೊಳ್ಳುತ್ತದೆ. ಅಲ್ಲದೆ 5000mAh ಮ್ಯಾಗ್‌ಟ್ಯಾಗ್ ಪ್ರೀಮಿಯಂ ಫೀಚರ್ಸ್‌ಗಳನ್ನು 10000mAh ಆವೃತ್ತಿಯಲ್ಲಿಯೂ ಸಹ ಕಾಣಬಹುದು.
ಇದಲ್ಲದೆ ಈ ಪವರ್‌ಬ್ಯಾಂಕ್ ಮ್ಯಾಗ್‌ಟ್ಯಾಗ್ ರಿಂಗ್ ಅನ್ನು ಒಳಗೊಂಡಿದೆ. ಇದರಿಂದ ನಿಮ್ಮ ಡಿವೈಸ್‌ಗಳನ್ನು ವಾಯರ್‌ಲೆಸ್ ಮೂಲಕ ಚಾರ್ಜ್ ಮಾಡುವುದಕ್ಕೆ ಸಾಧ್ಯವಾಗಲಿದೆ. ಇದಲ್ಲದೆ 12W ವೈರ್ಡ್ ಚಾರ್ಜಿಂಗ್ ಅನ್ನು ಕೂಡ ನೀಡಲಾಗಿದೆ. ಇದು ನಿಮ್ಮ ಫೋನ್‌ನ ಬ್ಯಾಟರಿ ಅವಧಿಯನ್ನು ಫೂರ್ತಿ ದಿನಕ್ಕೆ ವಿಸ್ತರಿಸುತ್ತದೆ. ಇದಲ್ಲದೆ ಪವರ್ ಬ್ಯಾಂಕ್, ಉತ್ತಮ ಗುಣಮಟ್ಟಕ್ಕಾಗಿ BIS ಪ್ರಮಾಣೀಕರಣವನ್ನು ಕೂಡ ಹೊಂದಿದೆ.

ಜೊತೆಗೆ ಮಲ್ಟಿಫೇಸ್ ಮ್ಯಾಗ್‌ಸೇಫ್ ಹೊಂದಾಣಿಕೆ ಮತ್ತು ಮ್ಯಾಗ್‌ಟ್ಯಾಗ್ ರಿಂಗ್ ಅನ್ನು ಸಹ ಪಡೆದಿದೆ. ಇದು ಸುರಕ್ಷತಾ ಫೀಚರ್ಸ್‌ಗಳ ಮೂಲಕ ಸುರಕ್ಷಿತ ಚಾರ್ಜಿಂಗ್ ಅನ್ನು ಸಹ ನೀಡಲಿದೆ. Urbn MagTag ಪವರ್ ಬ್ಯಾಂಕ್ 10000mAh ಸಾಮರ್ಥ್ಯದ 3,499ರೂ ಬೆಲೆಯನ್ನು ಹೊಂದಿದೆ. ಸೀಮಿತ ಅವಧಿಗೆ ಇದನ್ನು Amazon.in ಮೂಲಕ 2,999ರೂ ಬೆಲೆಯಲ್ಲಿ ಬರಲಿದೆ. ಇದಲ್ಲದೆ Urbn MagTag ಪವರ್ ಬ್ಯಾಂಕ್ 5000mAh ಸಾಮರ್ಥ್ಯದ ಆಯ್ಕೆಯು 2,499ರೂ ಬೆಲೆಯಲ್ಲಿ ದೊರೆಯಲಿದೆ.
ಇನ್ನು Urbn MagTag ವಾಯರ್‌ಲೆಸ್ ಪವರ್ ಬ್ಯಾಂಕ್ ಅನ್ನು Amazon.in, Flipkart, Croma, Vijay Sales ಮತ್ತು Urbn ನ D2C ಪ್ಲಾಟ್‌ಫಾರ್ಮ್, Urbnworld.com ನಲ್ಲಿ ಇದನ್ನು ಖರೀದಿಸಬಹುದಾಗಿದೆ.
ಇದಲ್ಲದೆ ಇತ್ತೀಚಿಗೆ Urbn ಕಂಪೆನಿ Urbn ನ್ಯಾನೋ ಪವರ್ ಬ್ಯಾಂಕ್ ಅನ್ನು ಪರಿಚಯಿಸಿದೆ. ಇದು ಎರಡು ವಿಭಿನ್ನ ಸಾಮರ್ಥ್ಯದ ಆಯ್ಕೆಗಳಲ್ಲಿ ಪರಿಚಯಿಸಲಾಗಿದೆ. ಇದರಲ್ಲಿ ಮೊದಲನೆಯ ಪವರ್ ಬ್ಯಾಂಕ್ 10,000mAh ಸಾಮರ್ಥ್ಯವನ್ನು ಹೊಂದಿದ್ದು, 20W ಚಾರ್ಜಿಂಗ್ ಅನ್ನು ಬೆಂಬಲಿಸುತ್ತದೆ. ಇದು ಡ್ಯುಯಲ್ ಪೋರ್ಟ್‌ಗಳೊಂದಿಗೆ ಬರುತ್ತದೆ, ಇದರಲ್ಲಿ ಒಂದು USB-A ಮತ್ತು ಮತ್ತೊಂದು USB ಟೈಪ್-C ಆಗಿದೆ. ಇನ್ನು ಈ ಪವರ್ ಬ್ಯಾಂಕ್ ಅನ್ನು ಸಂಪೂರ್ಣವಾಗಿ ಚಾರ್ಜ್ ಮಾಡುವುದಕ್ಕೆ 3.5 ಗಂಟೆಗಳ ಅವಶ್ಯಕತೆಯಿದೆ.
ಇನ್ನು Urbn ನ್ಯಾನೋ 20,000mAh ಪವರ್ ಬ್ಯಾಂಕ್ 22.5W ಚಾರ್ಜಿಂಗ್ ಅನ್ನು ಬೆಂಬಲಿಸುತ್ತದೆ. ಇದು ಒಂದು USB-A ಮತ್ತು ಎರಡು USB ಟೈಪ್-C ಸೇರಿದಂತೆ ಟ್ರಿಪಲ್ ಚಾರ್ಜಿಂಗ್ ಪೋರ್ಟ್‌ಗಳನ್ನು ನೀಡುತ್ತದೆ. ಇದರಿಂದ ಮಲ್ಟಿ ಡಿವೈಸ್‌ಗಳನ್ನು ಏಕಕಾಲಿಕ ಚಾರ್ಜಿಂಗ್ ಅನ್ನು ಸಕ್ರಿಯಗೊಳಿಸಬಹುದು. ಅಲ್ಲದೆ "ಪಾಸ್-ಥ್ರೂ" ಚಾರ್ಜಿಂಗ್ ಅನ್ನು ಒದಗಿಸಲಿದ್ದು, ಫೋನ್ ಚಾರ್ಜ್ ಆಗುತ್ತಿರುವಾಗ ಪವರ್ ಬ್ಯಾಂಕ್ ಚಾರ್ಜ್ ಮಾಡಲು ಅವಕಾಶ ನೀಡಲಿದೆ.


Click it and Unblock the Notifications








